Weekly Horoscope: ಸೆಪ್ಟೆಂಬರ್ 7ರಿಂದ 13ರವರೆಗೆ ಈ 6 ರಾಶಿಯವರಿಗೆ ಜಾಕ್‌ಪಾಟ್: ಸಿರಿ ಸಂಪತ್ತು, ಬಡ್ತಿ ಭಾಗ್ಯ!

Weekly Horoscope September 7- 13 : ಜ್ಯೋತಿಷ್ಯದ ಪ್ರಕಾರ ಸೆಪ್ಟೆಂಬರ್ ಎರಡನೇ ವಾರ ಬಹಳ ವಿಶೇಷವಾಗಿರುವುದು. ಇದು ಅನೇಕ ರಾಶಿಯವರ ಜೀವನದಲ್ಲಿ ಮಹತ್ವದ ತಿರುವನ್ನು ಪಡೆಯುವುದು. ಈ ವಾರ ಅಪರೂಪದ ಗ್ರಹಗಳ ಸಂಯೋಗ ಇರುವುದು. ಈ ವಾರ ಕೆಲವು ರಾಶಿಯವರಿಗೆ ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ಆದರೆ ಇನ್ನು ಕೆಲವರು ಜಾಗರೂಕರಾಗಿರಬೇಕು.

Weekly Horoscope:ಮೇಷ ರಾಶಿ (Aries)

ಜ್ಯೋತಿಷ್ಯದ ಪ್ರಕಾರ, ಈ ವಾರ ಮೇಷ ರಾಶಿಯವರ ಜವಾಬ್ದಾರಿಗಳು ಹೆಚ್ಚಾಗುವುದು. ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಲು ಯೋಜನೆ ಮತ್ತು ಏಕಾಗ್ರತೆಯ ಅಗತ್ಯವಿದೆ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ಅನಗತ್ಯ ಖರ್ಚುಗಳನ್ನು ತಪ್ಪಿಸುವುದರಿಂದ ಪ್ರಯೋಜನಕಾರಿಯಾಗುವುದು. ಮಾಡುವ ಕೆಲಸಗಳಲ್ಲಿ ಕುಟುಂಬ ಸದಸ್ಯರ ಬೆಂಬಲ ಸಿಗುವುದು. ಹೊಸ ಅವಕಾಶಗಳು ಸಿಗುವುದು.

Weekly Horoscope September 7- 13 weekly horoscope Zodiac Predictions Lucky Number Colour of all signs

ವೃಷಭ ರಾಶಿ (Taurus)

ಈ ವಾರ ವೃಷಭ ರಾಶಿಯವರಿಗೆ ವೃತ್ತಿ ಮತ್ತು ವ್ಯವಹಾರದ ವಿಷಯದಲ್ಲಿ ಸಕಾರಾತ್ಮಕವಾಗಿರುವುದು. ಬೇರೆಯವರೊಂದಿಗೆ ಮಾತುಕತೆ ನಡೆಸುವಾಗ ಎಚ್ಚರಿಕೆಯಿಂದ ಇರಬೇಕು. ಮಾತನಾಡುವಾಗ ನಿಮ್ಮ ಶಬ್ದಗಳು ಸ್ಪಷ್ಟವಾಗಿರಲಿ. ಆರ್ಥಿಕ ಸ್ಥಿತಿ ಸುಧಾರಿಸುವುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನದತ್ತ ಗಮನಹರಿಸಲು ಸಾಧ್ಯವಾಗುವುದು. ಪ್ರೇಮ ಸಂಬಂಧಗಳಲ್ಲಿ ಉಂಟಾಗಿರುವ ತಪ್ಪು ಗ್ರಹಿಕೆ ಮರೆಯಾಗುವುದು.

ಮಿಥುನ ರಾಶಿ (Gemini)

ಈ ವಾರ ಮಿಥುನ ರಾಶಿಯವರಿಗೆ ವಿಶೇಷವಾಗಿರುವುದು. ಪ್ರಮುಖ ಕೆಲಸವನ್ನು ಪ್ರಾರಂಭಿಸಲು ಉತ್ತಮ ಅವಕಾಶ ಸಿಗುವುದು. ವ್ಯವಹಾರದಲ್ಲಿ ಹೊಸ ಸಂಪರ್ಕಗಳಿಂದ ಲಾಭವಾಗುವುದು. ಹಣಕಾಸಿನ ವಹಿವಾಟುಗಳನ್ನು ಮಾಡುವಾಗ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಕುಟುಂಬದ ವಿಷಯದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ.

ಕರ್ಕಾಟಕ ರಾಶಿ (Cancer)

ಕಚೇರಿಯಲ್ಲಿ ಕೆಲಸದ ಹೊರ ಹೆಚ್ಚಾಗುವುದು. ಹೊಸ ಜವಾಬ್ದಾರಿ ಸಿಗುವುದು. ಹೊಸ ಕೆಲಸವನ್ನು ಸರಿಯಾಗಿ ನಿರ್ವಹಿಸಲು ಸರಿಯಾದ ಅವಕಾಶ ಸಿಗುವುದು. ಹಣದ ವಿಷಯದಲ್ಲಿ ಪರಿಸ್ಥಿತಿ ಸುಧಾರಿಸಬಹುದು. ಹೂಡಿಕೆ ವಿಚಾರದಲ್ಲಿ ಆತುರ ಬೇಡ. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು.

ಸಿಂಹ ರಾಶಿ (Leo)

ಆರ್ಥಿಕ ಮತ್ತು ವೃತ್ತಿಪರ ವಿಷಯಗಳತ್ತ ಹೆಚ್ಚಿನ ಗಮನ ಕೊಡಬೇಕಾಗುವುದು. ಆದಾಯವನ್ನು ಹೆಚ್ಚಿಸಲು ಹೊಸ ಮಾರ್ಗಗಳು ತೆರೆದುಕೊಳ್ಳುವುದು. ಕೆಲಸದಲ್ಲಿ ಮೇಲಧಿಕಾರಿಗಳ ಬೆಂಬಲ ಸಿಗುವುದು. ಮಾತಿನ ಮೇಲೆ ನಿಯಂತ್ರಣವಿದ್ದರೆ ಒಳ್ಳೆಯದು. ಸಂಬಂಧವು ಬಲಗೊಳ್ಳುವುದು.

ಕನ್ಯಾ ರಾಶಿ (Virgo)

ಈ ವಾರ ಕನ್ಯಾ ರಾಶಿಯವರಿಗೆ ಹೆಚ್ಚು ಮಹತ್ವದ್ದಾಗಿರುವುದು. ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಾಗುವುದು. ಉದ್ಯೋಗ ಅಥವಾ ವ್ಯವಹಾರದಲ್ಲಿ ಹೊಸ ಅವಕಾಶಗಳು ಹುಟ್ಟಿಕೊಳ್ಳಬಹುದು. ಹಣಕಾಸಿನ ವಿಷಯಗಳಲ್ಲಿಯೂ ಸಕಾರಾತ್ಮಕ ಬದಲಾವಣೆಗಳಾಗುವ ಸಾಧ್ಯತೆ ಇದೆ. ಪ್ರತಿಯೊಂದು ನಿರ್ಧಾರವನ್ನು ಚಿಂತನಶೀಲವಾಗಿ ತೆಗೆದುಕೊಳ್ಳುವುದು ಒಳ್ಳೆಯದು.

ತುಲಾ ರಾಶಿ (Libra)

ವಾರದ ಆರಂಭದಲ್ಲಿ ಕೆಲಸದಲ್ಲಿ ಒತ್ತಡ ಇರುವುದು. ಕೆಲವು ಕೆಲಸಗಳು ನಿಮ್ಮ ನಿರೀಕ್ಷೆಯಂತೆ ನಡೆಯದಿರಬಹುದು. ಆದರೆ ಪರಿಸ್ಥಿತಿ ನಿಧಾನವಾಗಿ ಸುಧಾರಿಸುವುದು. ಪಾಲುದಾರಿಕೆ ವ್ಯವಹಾರದಲ್ಲಿ ನಿಮ್ಮ ಆಲೋಚನೆಯನ್ನು ಸ್ಪಷ್ವವಾಗಿ ಹೇಳಿ. ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿರುವುದು. ಕುಟುಂಬ ಸದಸ್ಯರ ಬೆಂಬಲ ಇರುವುದು.

ವೃಶ್ಚಿಕ ರಾಶಿ (Scorpio)

ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಉತ್ತಮ ವಾರ. ಉದ್ಯೋಗದಲ್ಲಿ ಪ್ರಗತಿಗೆ ಅವಕಾಶಗಳು ಸಿಗುವುದು. ವ್ಯಾಪಾರಸ್ಥರಿಗೆ ಹೊಸ ಒಪ್ಪಂದಗಳು ಸಿಗುವ ಸಾಧ್ಯತೆಯಿದೆ. ಆರ್ಥಿಕ ಲಾಭಗಳು ಹೆಚ್ಚಾಗುವುದು. ಅಪಾಯಕಾರಿ ಹೂಡಿಕೆಗಳಿಂದ ದೂರವಿರಿ. ಕೋಪವನ್ನು ನಿಯಂತ್ರಿಸಿಕೊಳ್ಳುವುದು ಅವಶ್ಯಕ.

ಧನು ರಾಶಿ (Sagittarius)

ಕೆಲಸದ ನಿಮಿತ್ತ ಬೇರೆ ಊರಿಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ಹೊಸ ಜನರ ಸಂಪರ್ಕ ಹೆಚ್ಚಾಗುವುದು. ಭವಿಷ್ಯದಲ್ಲಿ ಪ್ರಯೋಜನಕಾರಿಯಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಖರ್ಚುಗಳನ್ನು ನಿಯಂತ್ರಣದಲ್ಲಿಡಿ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ವಿದ್ಯಾರ್ಥಿಗಳಿಗೆ ಈ ವಾರ ಅನುಕೂಲಕರವಾಗಿರುವುದು.

ಮಕರ ರಾಶಿ (Capricorn)

ಕಠಿಣ ಪರಿಶ್ರಮ ಮತ್ತು ತಾಳ್ಮೆಯಿಂದ ಮಕರ ರಾಶಿಯವರು ನಿರೀಕ್ಷಿತ ಯಶಸ್ಸು ಪಡೆಯುವರು. ನಿಮಗೆ ಪ್ರಮುಖ ಜವಾಬ್ದಾರಿ ಸಿಗಬಹುದು. ಹಳೆಯ ವ್ಯವಹಾರಗಳನ್ನು ಮತ್ತೆ ಪ್ರಾರಂಭಿಸುವ ಸಾಧ್ಯತೆಯಿದೆ. ಹಣದ ವಿಷಯದಲ್ಲಿ ಸ್ಥಿರತೆ ಇರುತ್ತದೆ. ಆರೋಗ್ಯದ ಬಗ್ಗೆ ಗಮನ ಇರಲಿ.

ಕುಂಭ ರಾಶಿ (Aquarius)

ಸೆಪ್ಟೆಂಬರ್ ಎರಡನೇ ವಾರದಲ್ಲಿ ಹೊಸ ಕೆಲಸ ಅಥವಾ ಯೋಜನೆಯನ್ನು ಪ್ರಾರಂಭಿಸಲು ಅವಕಾಶ ಸಿಗುವುದು. ಆಲೋಚನೆಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುವುದು. ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ಸ್ನೇಹಿತರಿಂದ ಸಹಾಯ ಸಿಗುವುದು. ವೈಯಕ್ತಿಕ ಸಂಬಂಧಗಳಲ್ಲಿನ ತಪ್ಪು ತಿಳುವಳಿಕೆಗಳು ನಿವಾರಣೆಯಾಗುವುದು. ಮಾನಸಿಕ ವಿಶ್ರಾಂತಿಯ ಅಗತ್ಯವಿದೆ.

ಮೀನ ರಾಶಿ (Pisces)

ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುವುದು. ಉದ್ಯೋಗದಲ್ಲಿ ಪ್ರಗತಿಯ ಸಾಧ್ಯತೆ ಇದೆ. ವ್ಯವಹಾರದಲ್ಲಿ ಹೊಸ ಅವಕಾಶಗಳು ಸಿಗುವುದು. ಆರ್ಥಿಕ ಲಾಭವಾಗುವುದು. ಕುಟುಂಬದಲ್ಲಿ ಶುಭಕಾರ್ಯಗಳು ನಡೆಯುವುದು. ಮನೆಯಲ್ಲಿ ಸಂತೋಷದ ವಾತಾವರಣವಿರುವುದು. ಈ ವಾರವು ವಿದ್ಯಾರ್ಥಿಗಳಿಗೆ ವಿಶೇಷವಾಗಿ ಉತ್ತಮವಾಗಿರುವುದು. ಉತ್ತಮ ಫಲಿತಾಂಶ ಸಿಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+