• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Shukra Gochar August 2022: ಸಿಂಹ ರಾಶಿಯಲ್ಲಿ ಶುಕ್ರ ಸಂಕ್ರಮಣ: ಯಾರಿಗೆ ಶುಭ? ಯಾರಿಗೆ ಅಶುಭ?

|
Google Oneindia Kannada News

ಸಿಂಹ ರಾಶಿಯಲ್ಲಿ ಶುಕ್ರ ಸಂಕ್ರಮಣ ಆಗಸ್ಟ್ 31, 2022ರಂದು ನಡೆಯಲಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ ಈ ಸಂಕ್ರಮಣ ದ್ವಾದಶಿ ರಾಶಿಗಳ ಮೇಲೆ ಹಲವಾರು ಬದಲಾವಣೆಯನ್ನು ತರುತ್ತದೆ. ಜ್ಯೋತಿಷ್ಯದಲ್ಲಿ ಶುಕ್ರನನ್ನು ಜೀವನದಲ್ಲಿ ಸಂತೋಷ ತರುವ ಗ್ರಹ ಎಂದು ಕರೆಯಲಾಗುತ್ತದೆ. ಇದರೊಂದಿಗೆ ಇದನ್ನು ಬೆಳಗಿನ ನಕ್ಷತ್ರ ಎಂದೂ ಕರೆಯುತ್ತಾರೆ. ಶುಕ್ರ ಗ್ರಹದ ಸಂಚಾರದಿಂದ ವ್ಯಕ್ತಿಯು ಜೀವನದಲ್ಲಿ ಸಾಂಸಾರಿಕ ಸುಖ, ದಾಂಪತ್ಯ ಸುಖ, ಭೋಗ, ಕೀರ್ತಿ ಇತ್ಯಾದಿಗಳನ್ನು ಪಡೆಯುತ್ತಾನೆ. ವೈದಿಕ ಜ್ಯೋತಿಷ್ಯದಲ್ಲಿ ಶುಕ್ರನ ಸಂಕ್ರಮಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅದು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮೇಲೆ ಮಂಗಳಕರ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ.

ಈ ಗ್ರಹ ವೃಷಭ ಮತ್ತು ತುಲಾ ಎಂಬ ಎರಡು ರಾಶಿಚಕ್ರದ ಅಧಿಪತಿಯಾಗಿದೆ. ಸಾಮಾನ್ಯವಾಗಿ ಶುಕ್ರ ಗ್ರಹ ಸಂಪತ್ತು, ಸಮೃದ್ಧಿ, ಸಂತೋಷ, ಸಂಪತ್ತಿನ ಆನಂದ, ಆಕರ್ಷಣೆ, ಸೌಂದರ್ಯ, ಯೌವನ, ಪ್ರೀತಿಯ ಸಂಬಂಧ, ನಮ್ಮ ಜೀವನದಲ್ಲಿ ಪ್ರೀತಿಯ ತೃಪ್ತಿಯನ್ನು ಪ್ರತಿನಿಧಿಸುತ್ತದೆ. ಇದು ಸೃಜನಶೀಲತೆ, ಕಲೆ, ಸಂಗೀತ, ಕವನ, ವಿನ್ಯಾಸ, ಮನೋರಂಜನೆ, ಪ್ರದರ್ಶನಗಳು, ಗ್ಲಾಮರ್, ಫ್ಯಾಷನ್, ಆಭರಣಗಳು, ಅಮೂಲ್ಯ ವಸ್ತುಗಳು, ಮೇಕ್ಅಪ್, ಐಷಾರಾಮಿ ಪ್ರಯಾಣ, ಐಷಾರಾಮಿ ವಾಹನಗಳು ಮತ್ತು ಇತರವುಗಳ ಸಂಕೇತವಾಗಿದೆ. ಇನ್ನೂ ಸಿಂಹವು ಸರ್ಕಾರ, ಆಡಳಿತ, ಸ್ವಾಭಿಮಾನ, ಮಹತ್ವಾಕಾಂಕ್ಷೆ, ನಾಯಕತ್ವದ ಗುಣಮಟ್ಟ, ಪ್ರದರ್ಶನ, ಗ್ಲಾಮರ್, ಸೃಜನಶೀಲತೆ, ಕಲೆ ಐಷಾರಾಮಿಗಳನ್ನು ಪ್ರತಿನಿಧಿಸುತ್ತದೆ.

Budh Gochar August 2022: ಕನ್ಯಾರಾಶಿಯಲ್ಲಿ ಬುಧ ಸಂಕ್ರಮಣ: ಯಾರಿಗೆ ಶುಭ? ಅಶುಭ?Budh Gochar August 2022: ಕನ್ಯಾರಾಶಿಯಲ್ಲಿ ಬುಧ ಸಂಕ್ರಮಣ: ಯಾರಿಗೆ ಶುಭ? ಅಶುಭ?

31/ಆಗಸ್ಟ್/2022 ರಂದು ಬುಧವಾರ ಸಂಜೆ 04:29ಕ್ಕೆ ಶುಕ್ರವು ಕರ್ಕ ರಾಶಿಯಿಂದ ಸಿಂಹ ರಾಶಿಯಲ್ಲಿ ಸಾಗುತ್ತದೆ. ಇದು ಶುಕ್ರನಿಗೆ ತುಂಬಾ ಅನುಕೂಲಕರ ಸ್ಥಾನವಲ್ಲ. ಶುಕ್ರ ದುರ್ಬಲವಾದಾಗ ದ್ವಾದಶಿ ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಶುಕ್ರ ಗ್ರಹ ಸಂಚಾರದ ವೇಳೆ ದುರ್ಬಲವಾಗಿಲ್ಲದಿದ್ದರೆ ಕೆಲ ದ್ವಾದಶಿ ರಾಶಿಗಳ ಮೇಲೆ ಉತ್ತಮ ಪರಿಣಾಮ ಬೀರಲಿದೆ.

ಮೇಷ: ವಿವಾಹಿತರಿಗೆ ಮಕ್ಕಳ ಭಾಗ್ಯ

ಮೇಷ: ವಿವಾಹಿತರಿಗೆ ಮಕ್ಕಳ ಭಾಗ್ಯ

ಮೇಷ ರಾಶಿಯ ವಿದ್ಯಾರ್ಥಿಗಳಿಗೆ ಈ ಸಂಕ್ರಮಣವು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಪ್ರೀತಿಯಲ್ಲಿರುವವರು ಕೆಲವು ಸಮಸ್ಯೆಗಳನ್ನು ಅಥವಾ ಘರ್ಷಣೆಗಳನ್ನು ಎದುರಿಸಬಹುದು. ಆದರೆ ಕಾಲ ಕಳೆದಂತೆ ಈ ಸಮಸ್ಯೆಗಳು ದೂರವಾಗಲಿವೆ. ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ನಿಮ್ಮ ಸಂಗಾತಿಯೊಂದಿಗೆ ಹೊಂದಾಣಿಕೆ ಜೀವನವನ್ನು ನಡೆಸುವಿರಿ. ಪ್ರೇಯಸಿಯೊಂದಿಗೆ ಮದುವೆಯಾಗುವ ಭಾಗ್ಯ ದೊರೆಯಲಿದೆ. ಈ ರಾಶಿಗೆ ಸೇರಿದ ಒಂಟಿ ಜನರು ಸಹ ತಮ್ಮ ಸಂಗಾತಿಗಳನ್ನು ಹುಡುಕಬಹುದು. ವಿವಾಹಿತರು ಮಕ್ಕಳನ್ನು ಹೊಂದಲು ಯೋಜಿಸುತ್ತಿದ್ದರೆ ಇದು ಉತ್ತಮ ಸಮಯವಾಗಿದೆ. ಗರ್ಭಧರಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಒಟ್ಟಾರೆಯಾಗಿ ಮೇಷ ರಾಶಿಯವರಿಗೆ ಇದು ಉತ್ತಮ ಸಮಯ.

ಭವಿಷ್ಯದಲ್ಲಿ ನೀವು ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತೀರಿ. ಮನೆಯಲ್ಲಿ ಹಿರಿಯರ ಆಶೀರ್ವಾದ ಸಿಗಲಿದೆ. ನಿಮ್ಮ ಚಟುವಟಿಕೆಗಳು ಮತ್ತು ಯೋಜನೆಗಳನ್ನು ಯಾರೊಂದಿಗೂ ಚರ್ಚಿಸಬೇಡಿ. ನಿಮ್ಮ ಆರೋಗ್ಯವನ್ನು ಸಮತೋಲನದಲ್ಲಿಡಲು, ಆಹಾರವು ಸಮತೋಲಿತವಾಗಿರಬೇಕು. ಪೋಷಕರ ಆಶೀರ್ವಾದ ಪಡೆಯಿರಿ.

ವೃಷಭ: ಐಷಾರಾಮಿ ಜೀವನ

ವೃಷಭ: ಐಷಾರಾಮಿ ಜೀವನ

ಸಿಂಹ ರಾಶಿಯಲ್ಲಿ ಶುಕ್ರ ಸಂಕ್ರಮಣದ ಅವಧಿಯಲ್ಲಿ ವೃಷಭ ರಾಶಿಯವರು ಐಷಾರಾಮಿ ಜೀವನವನ್ನು ಹೊಂದಿರುತ್ತಾರೆ. ಈ ಅವಧಿಯಲ್ಲಿ ನಿಮ್ಮ ಮನೆಗೆ ನೀವು ಐಷಾರಾಮಿ ವಾಹನ ಅಥವಾ ಇತರ ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು. ನಿಮ್ಮ ಕುಟುಂಬದ ವಾತಾವರಣ ಉತ್ತಮವಾಗಿರುತ್ತದೆ. ಖಾಸಗಿ ಉದ್ಯೋಗ ಮಾಡುವವರಿಗೆ ಅನುಕೂಲಕರ ಸಮಯವಾಗಿದೆ. ವಿಶೇಷ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಯಾವುದೇ ಪ್ರಮುಖ ಕೆಲಸದಲ್ಲಿ ಸಂಗಾತಿಯ ಸಲಹೆಯನ್ನು ಪಡೆಯುವುದು ಪ್ರಯೋಜನಕಾರಿ. ಎಲ್ಲಾ ಯೋಜಿತ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳುತ್ತವೆ.

ನಿಮ್ಮ ತಾಯಿಯೊಂದಿಗಿನ ನಿಮ್ಮ ಸಂಬಂಧವು ಪ್ರೀತಿ ಮತ್ತು ವಾತ್ಸಲ್ಯದಿಂದ ತುಂಬಿರುತ್ತದೆ. ಆದರೆ, ನೀವು ಅವಳ ಆರೋಗ್ಯದ ಬಗ್ಗೆ ಎಚ್ಚರದಿಂದಿರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯವಿದೆ. ಯಾವುದೇ ಸಾಲ ನೀಡಲು ಕಾಯುತ್ತಿದ್ದರೆ, ಈ ಸಮಯವು ಸರಿಯಾಗಿದೆ. ನಿಮ್ಮ ಆಸ್ತಿ ಮತ್ತು ಗೃಹ ಸಾಲ ಪಡೆಯಲು ಅಥವಾ ನೀಡಲು ಈ ಸಮಯ ಉತ್ತಮವಾಗಿದೆ. ಇದು ಅಗತ್ಯವಿರುವ ಕ್ರೆಡಿಟ್ ಪಡೆಯಲು ನಿಮಗೆ ಸಹಾಯ ಮಾಡುತ್ತದೆ.

ಮಿಥುನ: ಸಂವಹನ ಕೌಶಲ್ಯಗಳು ವೃದ್ಧಿ

ಮಿಥುನ: ಸಂವಹನ ಕೌಶಲ್ಯಗಳು ವೃದ್ಧಿ

ಸಿಂಹ ರಾಶಿಯಲ್ಲಿ ಶುಕ್ರ ಸಂಕ್ರಮಣ ನಿಮ್ಮ ಬರವಣಿಗೆ ಕೌಶಲ್ಯ, ಸಂವಹನ ಕೌಶಲ್ಯಗಳು ವೃದ್ಧಿಯಾಗಲಿವೆ. ಆದ್ದರಿಂದ ಬರವಣಿಗೆ, ಲಲಿತಕಲೆ ಮತ್ತು ಸಾಹಿತ್ಯದಲ್ಲಿ ತೊಡಗಿರುವ ಜನರಿಗೆ ಈ ಸಮಯದಲ್ಲಿ ಹೆಚ್ಚು ಸೃಜನಶೀಲವಾಗಿರುತ್ತದೆ. ಇದು ನಿಮ್ಮ ಕೆಲಸವನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಈ ಸಮಯದಲ್ಲಿ ನಿಮ್ಮ ಕುಟುಂಬದೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ. ನೀವು ಅವರೊಂದಿಗೆ ಪ್ರವಾಸವನ್ನು ಸಹ ಯೋಜಿಸಬಹುದು. ಜೊತೆಗೆ ಅವರೊಂದಿಗೆ ಪ್ರೀತಿಯ ಕ್ಷಣಗಳನ್ನು ಕಳೆಯಬಹುದು. ಶುಕ್ರನು ಒಂಬತ್ತನೇ ಮನೆಯನ್ನು ನೋಡುತ್ತಿರುವುದರಿಂದ, ನಿಮ್ಮ ತಂದೆಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ಅವರು ನಿಮ್ಮ ಒಳ್ಳೆಯ ಕೆಲಸವನ್ನು ಮೆಚ್ಚುತ್ತಾರೆ. ಈ ಸಮಯದಲ್ಲಿ ನೀವು ಹೆಚ್ಚು ಆಧ್ಯಾತ್ಮದತ್ತ ಒಲವನ್ನು ಹೊಂದಿರುತ್ತೀರಿ.

ಪ್ರಯಾಣ ಮಾಡುವಾಗ ಜಾಗರೂಕರಾಗಿರಿ. ಮಹಿಳೆಯರಿಗೆ ಸಮಸ್ಯೆಗಳು ಹೆಚ್ಚಾಗಲಿವೆ. ಆದರೂ ಅವರ ಆತ್ಮವಿಶ್ವಾಸ ಎಲ್ಲಾ ಸಮಸ್ಯೆಗಳನ್ನು ದೂರ ಮಾಡುತ್ತದೆ. ಅದೃಷ್ಟು ಕೈ ಹಿಡಿಯಲಿದೆ. ಅಂದುಕೊಂಡ ಕಾರ್ಯಗಳು ಸುಗಮಗೊಳ್ಳಲಿವೆ. ವಿದ್ಯಾರ್ಥಿಗಳ ಶ್ರಮ ಈ ಸಮಯದಲ್ಲಿ ಅತ್ಯಾವಶ್ಯಕ. ಶ್ರಮದ ಫಲ ನೀವು ಪಡೆಯುತ್ತೀರಿ.

ಕರ್ಕ: ಆದಾಯದ ಮೂಲಗಳಲ್ಲಿ ಹೆಚ್ಚಳ

ಕರ್ಕ: ಆದಾಯದ ಮೂಲಗಳಲ್ಲಿ ಹೆಚ್ಚಳ

ಹಣಕಾಸಿನ ವಿಷಯದಲ್ಲಿ ಇದು ಅತ್ಯಂತ ಅನುಕೂಲಕರ ಸಮಯವಾಗಿದೆ. ನಿಮ್ಮ ಹಣಕಾಸಿನಲ್ಲಿ ನೀವು ಸಮೃದ್ಧಿಯನ್ನು ಕಾಣುವಿರಿ. ನಿಮ್ಮ ಆದಾಯದ ಮೂಲಗಳಲ್ಲಿ ಹೆಚ್ಚಳ ಆಗುವುದು. ಯಾವುದೇ ದೀರ್ಘಾವಧಿಯ ಹೂಡಿಕೆಗಳನ್ನು ಮಾಡಲು ಯೋಜಿಸುತ್ತಿದ್ದರೆ, ಸಮಯವು ನಿಮಗೆ ಅನುಕೂಲಕರವಾಗಿರುತ್ತದೆ.

ಸಂಶೋಧನಾ ಕಾರ್ಯದಲ್ಲಿ ತೊಡಗಿರುವ ವಿದ್ಯಾರ್ಥಿಗಳು ಈ ಸಾಗಣೆಯಿಂದ ಪ್ರಯೋಜನ ಪಡೆಯುತ್ತಾರೆ, ಪಾಲುದಾರರೊಂದಿಗಿನ ವ್ಯಾಪಾರದಲ್ಲಿ ಅಭಿವೃದ್ಧಿ ಕಾಣಲಿದ್ದೀರಿ. ಈ ಸಾಗಣೆಯು ಭಾವನಾತ್ಮಕ ಬೆಳವಣಿಗೆ ಮತ್ತು ಯೋಗಕ್ಷೇಮ ಹಾಗೂ ಮನೆಯ ಸಂತೋಷಕ್ಕೆ ಒಳ್ಳೆಯದು.

ನೀವು ಎಷ್ಟು ಶ್ರಮಿಸುತ್ತೀರೋ, ಭವಿಷ್ಯದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಕಾನೂನಿಗೆ ಸಂಬಂಧಿಸಿದ ಯಾವುದೇ ವಿಷಯಗಳು ನಿಮ್ಮ ಪರವಾಗಿರುತ್ತವೆ. ಅಗತ್ಯವಿರುವ ವ್ಯಕ್ತಿಗೆ ಸಹಾಯ ಮಾಡುವ ಮೂಲಕ ನೀವು ತುಂಬಾ ಒಳ್ಳೆಯ ಸಮಯವನ್ನು ಅನುಭವಿಸುವಿರಿ.

ಸಿಂಹ: ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ಸಮಯ

ಸಿಂಹ: ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ಸಮಯ

ಸಿಂಹದಲ್ಲಿ ಶುಕ್ರನ ಸಂಕ್ರಮಣ ಅತ್ಯುತ್ತಮ ಫಲಿತಾಂಶಗಳನ್ನು ನೀಡುವ ಸಾಧ್ಯತೆಯಿದೆ. ನಿಮ್ಮ ಜೀವನವನ್ನು ನೀವು ಪೂರ್ಣವಾಗಿ ಆನಂದಿಸುವ ಸಾಧ್ಯತೆಯಿದೆ. ಸಿಂಹ ರಾಶಿಯಲ್ಲಿ ಶುಕ್ರ ಸಂಚಾರವು ಪ್ರಭಾವಿ ವ್ಯಕ್ತಿಗಳ ಸಹವಾಸವನ್ನು ಆನಂದಿಸುವಂತೆ ಮಾಡುತ್ತದೆ. ನಿಮ್ಮ ಆಕರ್ಷಕ ಮಾತು ಎಲ್ಲರನ್ನು ಸೆಳೆಯುತ್ತದೆ.

ಈ ಸಮಯದಲ್ಲಿ ಪ್ರೀತಿ ಮತ್ತು ಮದುವೆಗೆ ಸಂಬಂಧಿಸಿದ ವಿಷಯಗಳನ್ನು ಸಂಪೂರ್ಣ ನಿಯಂತ್ರಣದಲ್ಲಿಡುತ್ತೀರಿ. ಹಣಕ್ಕೆ ಸಂಬಂಧಿಸಿದ ವಿಷಯಗಳು ಸುಗಮವಾಗಿರುತ್ತವೆ. ಈ ಸಾಗಣೆಯು ರಂಗ ಕಲಾವಿದರು ಮತ್ತು ಸಂವಹನಕಾರರಿಗೆ ವೃತ್ತಿಪರ ಬೆಳವಣಿಗೆಯ ದೃಷ್ಟಿಯಿಂದ ಉತ್ತಮ ಅವಕಾಶಗಳನ್ನು ತರುತ್ತದೆ. ಸಿಂಹ ರಾಶಿಯವರಿಗೆ ವ್ಯಕ್ತಿತ್ವ ವಿಕಸನಕ್ಕೆ ಇದು ಉತ್ತಮ ಸಮಯ.

ಈ ರಾಶಿಯವರು ಪ್ರಯಾಣ ಮಾಡುವಾಗ ಜಾಗರೂಕರಾಗಿರಬೇಕು. ಒಳ್ಳೆಯದನ್ನು ಬಯಸುವುದರಿಂದ ಒಳ್ಳೆಯದನ್ನೇ ಪಡೆಯುತ್ತೀರಿ. ಆತ್ಮೀಯರೊಂದಿಗೆ ತಾಳ್ಮೆಯಿಂದ ವರ್ತಿಸುವ ಗುಣ ನಿಮ್ಮಲ್ಲಿರುತ್ತದೆ. ಸಹೋದ್ಯೋಗಿಗಳು ನಿಮ್ಮ ಗುಣಗಾನ ಮಾಡುತ್ತಾರೆ. ಆದರೆ ನಿಮ್ಮ ಎಲ್ಲಾ ಗುಟ್ಟುಗಳನ್ನು ಹಂಚಿಕೊಳ್ಳುವುದು ಸೂಕ್ತವಲ್ಲ.

ಕನ್ಯಾ: ರಫ್ತು-ಆಮದು ವ್ಯವಹಾರದಲ್ಲಿ ಲಾಭ

ಕನ್ಯಾ: ರಫ್ತು-ಆಮದು ವ್ಯವಹಾರದಲ್ಲಿ ಲಾಭ

ಈ ಸಮಯದಲ್ಲಿ ದೂರದ ಪ್ರಯಾಣವನ್ನು ಯೋಜಿಸಬಹುದು. ನೀವು ರಫ್ತು-ಆಮದು ವ್ಯವಹಾರದಲ್ಲಿದ್ದರೆ ಅಥವಾ ಯಾವುದೇ MNC ಯಲ್ಲಿ ಕೆಲಸ ಮಾಡುತ್ತಿದ್ದರೆ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಹಾಡುಗಾರಿಕೆ, ನೃತ್ಯ ಅಥವಾ ನಟನೆಯಂತಹ ಸೃಜನಶೀಲ ವಿಷಯಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಅದಕ್ಕಾಗಿ ನೀವು ಸೃಜನಶೀಲ ಆಲೋಚನೆಗಳನ್ನು ಪಡೆಯುತ್ತೀರಿ.

ನಿಮ್ಮ ಜೀವನ ಸುಧಾರಿಸುತ್ತದೆ. ನಿಮಗಂಟಿಕೊಂಡ ಕಷ್ಟಗಳು ದೂರವಾಗಲಿವೆ. ಕೆಲಸದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಬಹುದು. ಕೆಲವು ಮನೆಯ ಕೆಲಸದ ಬಗ್ಗೆ ನೀವು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಮಕ್ಕಳಿಂದ ಒಳ್ಳೆಯ ಸುದ್ದಿ ಪಡೆಯಬಹುದು. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಕಚೇರಿಯಲ್ಲಿನ ಸಮಸ್ಯೆಗಳು ಅಂತ್ಯಗೊಳ್ಳುತ್ತವೆ. ಹೊಸ ವ್ಯಾಪಾರಸ್ಥರನ್ನು ಭೇಟಿಯಾಗುವ ಅವಕಾಶವನ್ನು ನೀವು ಪಡೆಯಬಹುದು. ನಿಮ್ಮ ಕಠಿಣ ಪರಿಶ್ರಮವು ನಿಮಗೆ ಯಶಸ್ಸನ್ನು ನೀಡುತ್ತದೆ. ಅದು ನಿಮಗೆ ನಿರಾಳತೆಯನ್ನು ನೀಡುತ್ತದೆ.

ತುಲಾ: ಕೆಲಸದಲ್ಲಿ ಹೊಸ ಮಾರ್ಗ

ತುಲಾ: ಕೆಲಸದಲ್ಲಿ ಹೊಸ ಮಾರ್ಗ

ಸಾಮಾನ್ಯವಾಗಿ ಶುಕ್ರವು ಸಂಪತ್ತು, ಐಷಾರಾಮಿಗಳನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಹಣಕಾಸಿನ ಲಾಭದ ವಿಷಯದಲ್ಲಿ ಇದು ತುಂಬಾ ಒಳ್ಳೆಯ ಸಮಯ. ಈ ಸಮಯದಲ್ಲಿ ನಿಮ್ಮ ಆಸೆಗಳು ಈಡೇರುತ್ತವೆ. ಈ ಸಂತೋಷದ ವಿಷಯಗಳು ಇದ್ದಕ್ಕಿದ್ದಂತೆ ಸಂಭವಿಸಬಹುದು. ಸಮಾಜದಲ್ಲಿ ಉತ್ತಮ ಹೆಸರು ಪಡೆಯುತ್ತೀರಿ. ನೀವು ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ನಿಮ್ಮ ಮಕ್ಕಳಿಂದ ನೀವು ಸಂತೋಷವನ್ನು ಪಡೆಯುತ್ತೀರಿ. ಸೃಜನಶೀಲ ಅಥವಾ ವಿನ್ಯಾಸ ಕ್ಷೇತ್ರದಲ್ಲಿ ಇರುವ ವಿದ್ಯಾರ್ಥಿಗಳು ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದು.

ಕೆಲಸದಲ್ಲಿ ಹೊಸ ಮಾರ್ಗಗಳನ್ನು ಅಳವಡಿಸಿಕೊಳ್ಳಬಹುದು. ಈ ವೇಳೆ ಕೆಲಸ ಮಾಡಲು ನಿಮಗೆ ಶ್ರಮವಾಗುವುದಿಲ್ಲ. ಅತ್ಯಂತ ಉತ್ಸಾಹದಿಂದ ಕೆಲಸ ಮಾಡುವಿರಿ. ಯಾವುದೇ ಕೆಲಸವನ್ನು ಮಾಡುವ ಮೊದಲು, ಅದರ ರೂಪರೇಷೆಯನ್ನು ತಯಾರಿಸಿ. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ. ಸಂಜೆ ಮಕ್ಕಳೊಂದಿಗೆ ಸಮಯ ಕಳೆಯುವ ಮೂಲಕ ನೆಮ್ಮದಿಯನ್ನು ಅನುಭವಿಸುವಿರಿ. ನೀವು ವ್ಯವಹಾರವನ್ನು ಪಡೆಯಬಹುದು. ಕ್ರೆಡಿಟ್ ವಹಿವಾಟುಗಳನ್ನು ತಪ್ಪಿಸಿ. ನೀವು ಪೋಷಕರೊಂದಿಗೆ ಭವಿಷ್ಯದ ಬಗ್ಗೆ ಚರ್ಚಿಸಬಹುದು. ಸಭೆಯಲ್ಲಿ ನಿಮ್ಮ ಉಪಸ್ಥಿತಿಯು ಜನರಿಗೆ ಪ್ರಯೋಜನಕಾರಿಯಾಗಿದೆ.

ವೃಶ್ಚಿಕ: ವಿದೇಶಿ ಪ್ರಯಾಣದ ಅವಕಾಶ

ವೃಶ್ಚಿಕ: ವಿದೇಶಿ ಪ್ರಯಾಣದ ಅವಕಾಶ

ವ್ಯಾಪಾರದಲ್ಲಿರುವ ವೃಶ್ಚಿಕ ರಾಶಿಯ ಸ್ಥಳೀಯರಿಗೆ ಸಿಂಹ ರಾಶಿಯ ಶುಕ್ರ ಸಂಚಾರವು ಬಹಳ ಫಲಪ್ರದವಾಗಿದೆ. ವ್ಯಾಪಾರ ಪಾಲುದಾರಿಕೆಗೆ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಅದು ಏಳಿಗೆಯಾಗುವ ಸಾಧ್ಯತೆಯಿದೆ. ನೀವು ರಫ್ತು-ಆಮದು ವ್ಯವಹಾರದಲ್ಲಿದ್ದರೆ, ನಿಮಗೆ ಲಾಭವಾಗುತ್ತದೆ. ಹೊಸ ಹೂಡಿಕೆಗಳೊಂದಿಗೆ ನೀವು ಜಾಗೃತರಾಗಿರಬೇಕು. MNC ಯಲ್ಲಿ ಕೆಲಸ ಮಾಡುತ್ತಿದ್ದರೆ, ನೀವು ವಿದೇಶಿ ಪ್ರಯಾಣದ ಅವಕಾಶವನ್ನು ಸಹ ಪಡೆಯಬಹುದು. ಮನೆಗೆ ಹೊಸ ವಾಹನ ಅಥವಾ ಯಾವುದೇ ಐಷಾರಾಮಿ ವಸ್ತುಗಳನ್ನು ಖರೀದಿಸಲು ಇದು ಉತ್ತಮ ಸಮಯವಾಗಿದೆ. ನಿಮ್ಮ ಮನೆಯ ನವೀಕರಣಕ್ಕಾಗಿ ನೀವು ಸ್ವಲ್ಪ ಹಣವನ್ನು ಖರ್ಚು ಮಾಡಬಹುದು.

ಈ ಸಂಚಾರದ ವೇಳೆ ಕೊಂಚ ಕೆಲಸದ ಒತ್ತಡ ಹೆಚ್ಚಾಗಬಹುದು. ಇದರಿಂದ ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗದೇ ಇರಬಹುದು. ಆದರೆ ಎಲ್ಲಾ ಸಮಸ್ಯೆಗಳು ನಿಮ್ಮ ದೂರವಾಗಲಿವೆ. ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ಹೆಚ್ಚು ಖರ್ಚನ್ನು ತಪ್ಪಿಸಿ. ಮುಂದಿನ ಜೀವನವನ್ನು ಯೋಚಿಸಿ ಹಣವನ್ನು ಖರ್ಚು ಮಾಡಿ.

ಧನು: ಆಧ್ಯಾತ್ಮಿಕತೆಯ ಕಡೆಗೆ ಹೆಚ್ಚು ಒಲವು

ಧನು: ಆಧ್ಯಾತ್ಮಿಕತೆಯ ಕಡೆಗೆ ಹೆಚ್ಚು ಒಲವು

ನಿಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಅದೃಷ್ಟ ಮೇಲುಗೈ ಸಾಧಿಸುತ್ತದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಉತ್ತಮ ಸಮಯ. ಧನು ರಾಶಿಯವರು ತಮ್ಮ ತಂದೆ, ಗುರು ಅಥವಾ ಮಾರ್ಗದರ್ಶಕರ ಬೆಂಬಲವನ್ನು ಪಡೆಯುತ್ತಾರೆ. ದೂರದ ಪ್ರಯಾಣ ಮತ್ತು ತೀರ್ಥಯಾತ್ರೆಗೆ ಇದು ಉತ್ತಮ ಸಮಯ. ನೀವು ಆಧ್ಯಾತ್ಮಿಕತೆಯ ಕಡೆಗೆ ಹೆಚ್ಚು ಒಲವು ತೋರುತ್ತೀರಿ. ದಾನ ಮಾಡುವ ಮೂಲಕ ಆಶೀರ್ವದಿಸಲ್ಪಡುತ್ತೀರಿ. ನೀವು ಕೆಲವು ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಸಾಧ್ಯತೆಗಳಿವೆ.

ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಕೆಲಸದ ವಿಷಯದಲ್ಲಿ ಪರಿಸ್ಥಿತಿ ಉತ್ತಮವಾಗಿರುತ್ತದೆ. ನೀವು ಆರೋಗ್ಯವಾಗಿರುತ್ತೀರಿ. ನೀವು ನಿಮ್ಮ ಸಂಗಾತಿಯೊಂದಿಗೆ ಧಾರ್ಮಿಕ ಸ್ಥಳಕ್ಕೆ ತೀರ್ಥಯಾತ್ರೆಗೆ ಹೋಗಬಹುದು, ಇದು ನಿಮ್ಮ ಸಂಬಂಧದ ಬಲವನ್ನು ಉಳಿಸಿಕೊಳ್ಳುತ್ತದೆ. ನಿಮ್ಮ ಕಠಿಣ ಪರಿಶ್ರಮದಿಂದ ಪೋಷಕರು ಸಂತೋಷಪಡುತ್ತಾರೆ. ನೀವು ಎಲ್ಲಾ ಕೆಲಸಗಳಲ್ಲಿ ಅವರ ಬೆಂಬಲವನ್ನು ಸಹ ಪಡೆಯುತ್ತೀರಿ. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶ ಪಡೆಯಲು ಶಿಕ್ಷಕರು ಸಂಪೂರ್ಣ ಸಹಕಾರ ನೀಡಲಿದ್ದಾರೆ. ವ್ಯಾಪಾರವನ್ನು ಹೆಚ್ಚಿಸಲು ನಿಮ್ಮ ಕಠಿಣ ಪರಿಶ್ರಮ ಯಶಸ್ವಿಯಾಗುತ್ತದೆ.

ಮಕರ: ಆರೋಗ್ಯದ ಬಗ್ಗೆ ಜಾಗರೂಕತೆ

ಮಕರ: ಆರೋಗ್ಯದ ಬಗ್ಗೆ ಜಾಗರೂಕತೆ

ಮಕರ ರಾಶಿಯವರಿಗೆ ಶುಕ್ರ ಯೋಗಕಾರಕ ಗ್ರಹ. ಈ ಸಂಚಾರವು ಮಕರ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಿರಿ ಮತ್ತು ಆರೋಗ್ಯ ಕಾಪಾಡಿಕೊಳ್ಳಿ. ಸಂಪತ್ತಿನ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಿ. ಯಾವುದೇ ಹೂಡಿಕೆಯನ್ನು ತಪ್ಪಿಸುವುದು ಒಳ್ಳೆಯದು. ಕೆಲವು ಪೂರ್ವಜರ ಆಸ್ತಿಯನ್ನು ನೀವು ಪಡೆಯಬಹುದು. ಕೆಲವು ಸಂಶೋಧನೆ ಅಥವಾ ಆಳವಾದ ಚಿಂತನೆ ಮಾಡುವ ವಿದ್ಯಾರ್ಥಿಗಳಿಗೆ, ಇದು ಉತ್ತಮ ಸಮಯ.

ನೀವು ವ್ಯಾಪಾರಕ್ಕೆ ಸಂಬಂಧಿಸಿದಂತೆ ಪ್ರಯಾಣಿಸಬೇಕಾಗಬಹುದು. ಯಾರೊಂದಿಗಾದರೂ ಮಾತನಾಡುವಾಗ ನಿಮ್ಮ ಸಭ್ಯ ಸ್ವಭಾವವನ್ನು ಮೆಚ್ಚಲಾಗುತ್ತದೆ. ಇದು ಜನರ ಮೇಲೆ ಸಕಾರಾತ್ಮಕ ಪರಿಣಾಮವನ್ನು ನೀಡುತ್ತದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಹಿರಿಯರ ಅಥವ ಪರಿಣಿತರ ಸಹಾಯವನ್ನು ಪಡೆಯಿರಿ. ಇದು ಕೆಲಸದಲ್ಲಿ ನಿಮಗೆ ಪ್ರಯೋಜನವನ್ನು ನೀಡುತ್ತದೆ. ನೀವು ಉತ್ತಮ ಆರೋಗ್ಯವನ್ನು ಹೊಂದಿರುತ್ತೀರಿ. ನಿಮ್ಮ ಜೀವನಶೈಲಿಯಲ್ಲಿ ನೀವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು.

ಕುಂಭ: ಆರ್ಥಿಕ ಸ್ಥಿತಿಯಲ್ಲಿ ಬಲ

ಕುಂಭ: ಆರ್ಥಿಕ ಸ್ಥಿತಿಯಲ್ಲಿ ಬಲ

ಕುಂಭ ರಾಶಿಯವರಿಗೂ ಕೂಡ ಶುಕ್ರ ಯೋಗಕಾರಕ ಗ್ರಹ. ಏಕಾಂಗಿಯಾಗಿರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಅದೃಷ್ಟವು ನಿಮ್ಮ ಪರವಾಗಿರುತ್ತದೆ ಮತ್ತು ನಿಮ್ಮ ಎಲ್ಲಾ ವ್ಯವಹಾರಗಳಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಸ್ವಂತ ಪರಿಶ್ರಮದಿಂದ, ನೀವು ಕುಟುಂಬದ ನಿರೀಕ್ಷೆಗಳನ್ನು ಪೂರೈಸುವಿರಿ. ನಿಮ್ಮ ಕುಟುಂಬದ ಸದಸ್ಯರಲ್ಲಿ ನಿಮ್ಮ ಮೇಲಿನ ನಂಬಿಕೆ ಹೆಚ್ಚಾಗುತ್ತದೆ. ಈ ರಾಶಿಚಕ್ರದ ಜನರಿಗೆ ಇಂದು ಉತ್ತಮ ದಿನವಾಗಿರುತ್ತದೆ. ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮನ್ನು ಹೊಗಳಬಹುದು. ನಿಮ್ಮ ಕುಟುಂಬದೊಂದಿಗೆ ಹೊರಗೆ ಹೋಗಲು ನೀವು ಯೋಜಿಸಬಹುದು. ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ನೀವು ಆನ್‌ಲೈನ್ ತರಗತಿಗಳಿಗೆ ಸೇರಬಹುದು.

ಆಪ್ತ ಸ್ನೇಹಿತ ಆರ್ಥಿಕವಾಗಿ ಸಹಾಯ ಮಾಡಬಹುದು. ವಿದೇಶದಲ್ಲಿ ನೆಲೆಸಿರುವ ನಿಮ್ಮ ಸ್ನೇಹಿತರೊಬ್ಬರು ಇದ್ದಕ್ಕಿದ್ದಂತೆ ನಿಮ್ಮನ್ನು ಭೇಟಿಯಾಗಲು ಬರಬಹುದು. ಪೋಷಕರ ಬೆಂಬಲದಿಂದ ವ್ಯಾಪಾರ ಕ್ಷೇತ್ರದಲ್ಲಿ ಉನ್ನತಿ ಕಂಡುಬರುವುದು. ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಕಾಣುವಿರಿ. ಜನರು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ಕೆಲಸದಲ್ಲಿ ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ.

ಮೀನ: ಅಧ್ಯಯನದಲ್ಲಿ ಆಸಕ್ತಿ ಹೆಚ್ಚಳ

ಮೀನ: ಅಧ್ಯಯನದಲ್ಲಿ ಆಸಕ್ತಿ ಹೆಚ್ಚಳ

ಮೀನವು ಶುಕ್ರನ ಉತ್ಕೃಷ್ಟ ಚಿಹ್ನೆ. ಅದು ಸಿಂಹ ರಾಶಿಯಲ್ಲಿ ಸಾಗುವುದು ಮೀನ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ತರುತ್ತದೆ. ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಕೆಲವು ಆರೋಪಗಳು ನಿಮ್ಮ ಇಮೇಜ್‌ಗೆ ಅಡ್ಡಿಪಡಿಸಬಹುದು. ಆದ್ದರಿಂದ ರಹಸ್ಯ ವ್ಯವಹಾರಗಳನ್ನು ತಪ್ಪಿಸಿ. ಇಲ್ಲದಿದ್ದರೆ, ಗಂಭೀರ ಪರಿಣಾಮಗಳು ಉಂಟಾಗುತ್ತವೆ.

ನಿಮ್ಮ ವೈಯಕ್ತಿಕ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದನ್ನು ತಪ್ಪಿಸಬೇಕು. ನೀವು ಕಚೇರಿಯಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಸರಿಯಾದ ದಿಕ್ಕಿನಲ್ಲಿ ಶ್ರಮಿಸಿದರೆ ಯಶಸ್ಸನ್ನು ಪಡೆಯುತ್ತೀರಿ. ಈ ರಾಶಿಚಕ್ರದ ವಿದ್ಯಾರ್ಥಿಗಳು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಅಧ್ಯಯನದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಆರ್ಥಿಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ನಿಮ್ಮ ಪೋಷಕರ ಸಲಹೆಯನ್ನು ಪಡೆಯುವುದನ್ನು ಮರೆಯಬೇಡಿ.

ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಅಲ್ಲದೆ, ನೀವು ವ್ಯವಹಾರದಲ್ಲಿ ಹಣವನ್ನು ಗಳಿಸುವಿರಿ. ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಭವಿಷ್ಯದಲ್ಲಿ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗುವ ವ್ಯಕ್ತಿಯನ್ನು ನೀವು ಭೇಟಿಯಾಗಬಹುದು. ನಿಮ್ಮ ಸೃಜನಶೀಲತೆಯಿಂದ ಜನರು ಪ್ರಭಾವಿತರಾಗುತ್ತಾರೆ. ನಿಮ್ಮ ಸಂಬಂಧಿಕರು ನಿಮಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಾರೆ. ವೈವಾಹಿಕ ಜೀವನ ಅನುಕೂಲಕರವಾಗಿರುತ್ತದೆ.

English summary
Shukra Rashi Parivartan 2022 In Simha Rashi ; Venus Transit in Leo Effects on Zodiac Signs : The Venus Transit in Leo will take place on 31 August 2022. Learn about remedies to perform in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X