Venus Transit: ಶುಕ್ರ ಸಂಚಾರದಿಂದ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ! ಮುಟ್ಟಿದೆಲ್ಲ ಚಿನ್ನ, ಕನಸು ನೆರವೇರುವ ಕಾಲ

ಎಲ್ಲಾ ಗ್ರಹಗಳು ತಮ್ಮ ರಾಶಿ ಮತ್ತು ನಕ್ಷತ್ರವನ್ನು ಒಂದು ನಿರ್ದಿಷ್ಟ ಕಾಲದಲ್ಲಿ ಬದಲಾಯಿಸುತ್ತದೆ. ಇದನ್ನು ಗ್ರಹ ಸಂಚಾರ ಅಥವಾ ಗ್ರಹ ಸಂಕ್ರಮಣ ಅತ ಕರೀತಾರೆ. ಈಗ ಸಿಂಹ ರಾಶಿಯಲ್ಲಿ ಸಂಚಾರ ಮಾಡುತ್ತಿರುವ ಶುಕ್ರ ಆಗಸ್ಟ್ 1 ಅಂದರೆ ನಾಳೆ ಬುಧನ ಅಧಿಪತ್ಯದ ರಾಶಿಯಾದ ಕನ್ಯಾ ರಾಶಿಗೆ ಕಾಲಿಡುತ್ತಿದ್ದಾನೆ. ಶುಕ್ರನು ಬುಧನ ರಾಶಿಗೆ ಪ್ರವೇಶ ಮಾಡುತ್ತಿರುವದರಿಂದ ಅದರ ಪ್ರಭಾವವು ಎಲ್ಲಾ ರಾಶಿಯವರ ಮೇಲೆ ಆಗುತ್ತದೆ. ಇದರಲ್ಲೂ ವೃತ್ತಿ, ಹಣ ಮತ್ತು ಕುಟುಂಬ ಜೀವನದಲ್ಲಿ 4 ರಾಶಿಯವರ ಸುವರ್ಣ ಯುಗ ಪ್ರಾರಂಭವಾಗಲಿದೆ.

ಜ್ಯೋತಿಷ್ಯದಲ್ಲಿ ಹೇಳುವಂತೆ ಶುಕ್ರನು ರಾಕ್ಷಸರ ಗುರು. ಸೌಂದರ್ಯ, ಐಷಾರಾಮಿ ಜೀವನ, ಪ್ರೀತಿ, ಸಂಪತ್ತು ಮತ್ತು ಸಮೃದ್ಧಿಗೆ ಇವನೇ ಕಾರಣ. ಶುಕ್ರನ ಸ್ಥಾನ ಚೆನ್ನಾಗಿದ್ದರೆ ಅಥವಾ ಜಾತಕದಲ್ಲಿ ಶುಕ್ರ ದೆಸೆ ನಡೆಯುತ್ತಿದ್ದರೆ ಅವರನ್ನು ಯಾರೂ ತಡೆಯೋದಕ್ಕೆ ಆಗೋದಿಲ್ಲ. ಶುಕ್ರ ವೃಷಭ ಮತ್ತು ತುಲಾ ರಾಶಿಯ ಅಧಿಪತಿ.

Venus Transit

ಶುಕ್ರನ ಈ ಸಂಚಾರವು ಕೆಲವರು ರಾಶಿಯವರಿಗೆ ಅದೃಷ್ಟದ ಸಮಸಯವಾಗಿರುವುದು. ಹಣದ ಸಮಸ್ಯೆ ಸುಧಾರಿಸಿಕೊಳ್ಳುವ ಅವಕಾಶ ಸಿಗುವುದು. ಹೊಸ ವೃತ್ತಿ ಅವಕಾಶಗಳು ಎದುರಾಗುವುದು.

ಶುಕ್ರ ಸಂಚಾರದಿಂದ ಯಾವೆಲ್ಲ ರಾಶಿಗಳಿಗೆ ಅದೃಷ್ಟ!

ವೃಷಭ ರಾಶಿ (Taurus):

ಶುಕ್ರನು ವೃಷಭ ರಾಶಿಯ ಅಧಿಪತಿಯೂ ಹೌದು. ಶುಕ್ರ ಸಂಚಾರ ನಿಮಗೆ ತುಂಬಾ ಅನುಕೂಲಕರವಾಗಿರುತ್ತದೆ. ಬಹಳ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳು ಮತ್ತೆ ಚುರುಕು ಪಡೆಯುವುದು. ಕಠಿಣ ಪರಿಶ್ರಮಕ್ಕೆ ಬೆಲೆ ಸಿಗುತ್ತದೆ. ಕೆಲಸದಲ್ಲಿರುವವರಿಗೆ ಹೊಸ ಜವಾಬ್ದಾರಿ ಅಥವಾ ಬಡ್ತಿ ಸಿಗುವ ಸಾಧ್ಯತೆ ಇದೆ. ಕೆಲಸದಲ್ಲಿ ನಿಮ್ಮ ಕೌಶಲ್ಯ ಹೆಚ್ಚುವುದು. ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳು ನಿಮ್ಮನ್ನು ನೋಡಿ ಆಶ್ಚರ್ಯಪಡುವಂತೆ ಆಗುವುದು. ಹೊಸ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉತ್ತಮ ಅವಕಾಶಗಳು ಸಿಗುತ್ತವೆ.

ಮಿಥುನ ರಾಶಿ (Gemini):

ಶುಕ್ರನು ಮಿಥುನ ರಾಶಿಯ 4ನೇ ಮನೆಗೆ ಸಾಗುತ್ತಿದ್ದಾನೆ. ಉದ್ಯಮಿಗಳಿಗೆ ಹೊಸ ಮತ್ತು ಲಾಭದಾಯಕ ಡೀಲ್‌ಗಳು ಸಿಗುವ ಸಾಧ್ಯತೆ ಇದೆ. ನೀವು ಆಸೆ ಪಡುವಂತೆ ನಿಮಗೆ ಬೇಕಾದ ಸ್ಥಳಕ್ಕೆ ವರ್ಗಾವಣೆಯಾಗುವುದು. ಮಾಡುವ ಕೆಲಸಗಳಿಗೆ ಉನ್ನತ ಅಧಿಕಾರಿಗಳಿಂದ ಬೆಂಬಲ ಸಿಗುವುದು. ಹೊಸ ಮನೆ ಕಟ್ಟುವ ಅಥವಾ ಕೊಳ್ಳುವ ಕನಸು ನನಸಾಗುವುದು. ಹೊಸ ವಾಹನ ಖರೀದಿ ಯೋಗವೂ ಇದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ.

ಸಿಂಹ ರಾಶಿ (Leo):

ಸಿಂಹ ರಾಶಿಯ ಎರಡನೇ ಮನೆಗೆ ಶುಕ್ರನ ಪ್ರವೇಶ ಆಗುತ್ತಿದೆ. ಸಾಲ ತೀರಿಸುವುದು ಸಾಧ್ಯವಾಗುವುದು. ಹಣದ ಸಮಸ್ಯೆ ಕಡಿಮೆಯಾಗಿ ಮನಸ್ಸಿನ ನೆಮ್ಮದಿ ಹೆಚ್ಚುವುದು. ಪಿತ್ರಾರ್ಜಿತ ಆಸ್ತಿಗಳ ಮೂಲಕ ದೊಡ್ಡ ಮಟ್ಟದ ಆರ್ಥಿಕ ಲಾಭವಾಗುವುದು. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವೃತ್ತಿಜೀವನದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಬಹುದು. ಅದನ್ನು ನೀವು ಸರಿಯಾಗಿಯೇ ನಿಭಾಯಿಸುವಿರಿ. ಕುಟುಂಬ ಸಂಬಂಧಗಳು ಬಲಗೊಳ್ಳುತ್ತವೆ.

ಮಕರ ರಾಶಿ (Capricorn):

ಮಕರ ರಾಶಿಯ 9ನೇ ಮನೆಗೆ ಶುಕ್ರ ಪ್ರವೇಶಿಸುತ್ತಿದ್ದಾನೆ. ಅದೃಷ್ಟ ನಿಮ್ಮ ಬೆನ್ನ ಹಿಂದೆಯೇ ಇರುವುದು. ಮಾಡುವ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ಸರಿಯಾದ ಸಮಯ. ಈಗಾಗಲೇ ಬ್ಯುಸಿನೆಸ್‌ ಮಾಡುತ್ತಿದ್ದರೆ ಅದನ್ನು ವಿಸ್ತರಿಸುವುದಕ್ಕೂ ಇದೇ ಸೂಕ್ತ ಕಾಲ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಚುರುಕಾಗಿರುತ್ತಾರೆ. ಆರೋಗ್ಯ ಉತ್ತಮವಾಗಿರುತ್ತದೆ. ಹೊಸ ಅವಕಾಶಗಳನ್ನು ತರಬಹುದು. ಬಾಕಿ ಇರುವ ಸರ್ಕಾರಿ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಉದ್ಯೋಗ ಬದಲಾವಣೆ ಅಥವಾ ಹೊಸ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಬಹುದು.

ತುಲಾ ರಾಶಿ (Libra):

ಶುಕ್ರ ತುಲಾ ರಾಶಿಯ ಅಧಿಪತಿಯಾದ ಶುಕ್ರ ಸಂಚಾರದಿಂದ ನಿಮಗೆ ಹೆಚ್ಚಿನ ಲಾಭವಾಗಲಿದೆ. ಜೀವವನದಲ್ಲಿ ವಿವಿಧ ಹಂತಗಳಲ್ಲಿ ನಿಮ್ಮ ಪ್ರಗತಿ ಸಾಧ್ಯವಾಗುತ್ತದೆ. ಹಣಕಾಸಿನ ಸಮಸ್ಯೆ ನಿವಾರಣೆಯಾಗಿ ಒತ್ತಡ ಕ್ರಮೇಣ ಕಡಿಮೆಯಾಗುತ್ತದೆ. ಆದಾಯದ ಹೊಸ ಮಾರ್ಗಗಳು ಹುಟ್ಟಿಕೊಳ್ಳುವುದು. ಕೆಲಸದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಹೊಸ ವ್ಯವಹಾರ ಆರಂಭಿಸಬೇಕು ಎಂದಿದ್ದರೆ ಈಗ ಮುಂದುವರೆಯಬಹುದು. ಅದೃಷ್ಟ ನಿಮ್ಮ ಕೈ ಹಿಡಿಯುವುದು.

ವೃಶ್ಚಿಕ ರಾಶಿ (Scorpio):

ಇನ್ನೂ ವೃಶ್ಚಿಕ ರಾಶಿಯವರಿಗೆ ಶುಕ್ರ ಸಂಚಾರದಿಂದ ಆರ್ಥಿಕವಾಗಿ ಸಕಾರಾತ್ಮಕ ಬದಲಾವಣೆಗಳು ಆಗಲಿವೆ. ಹೊಸ ಜನರ ಪರಿಚಯದಿಂದ ಬಾಕಿ ಕೆಲಸಗಳನ್ನು ನೀವು ಪೂರ್ಣಗೊಳ್ಳಿಸುತ್ತೀರಿ. ತಂಡವಾಗಿ ಕೆಲಸ ಮಾಡುವುದರಿಂದ ಉತ್ತಮ ಯಶಸ್ಸು ಸಿಗುತ್ತದೆ. ದೂರದ ಊರಿಗೆ ಪ್ರಯಾಣ ಹೋಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+