ಪರ್ಸ್‌ನಲ್ಲಿ ಇದೊಂದು ವಸ್ತುವನ್ನು ಇಟ್ಟರೆ ಸದಾ ಹಣದಿಂದ ತುಂಬಿರುವುದು ನಿಮ್ಮ ಜೇಬು
ಕೆಲವೊಮ್ಮೆ ನಾವು ಎಷ್ಟೇ ದುಡಿದರೂ, ಎಷ್ಟೇ ಪ್ರಯತ್ನಪಟ್ಟರೂ ಕಠಿಣ ಪರಿಶ್ರಮದ ಹೊರತಾಗಿಯೂ ಕೈಯ್ಯಲ್ಲಿ ಹಣ ಉಳಿಯುವುದಿಲ್ಲ. ಪರ್ಸ್ ಯಾವಾಗಲೂ ಖಾಲಿಯಾಗಿರುತ್ತದೆ. ಒಂದರ ಹಿಂದೆ ಒಂದರಂತೆ ಆರ್ಥಿಕ ಸಮಸ್ಯೆಗಳು ಎದುರಾಗುತ್ತಲೇ ಇರುತ್ತದೆ. ಹೀಗಾಗುವಾಗ ಎಲ್ಲಿ ತಪ್ಪಾಗಿದೆ, ಏನು ಮಾಡಬೇಕು ಎನ್ನುವುದೇ ತಿಳಿಯುವುದಿಲ್ಲ. ಆದರೆ ಪರ್ಸ್‌ಗೆ ಸಂಬಂಧಿಸಿದಂತೆ ಕೆಲವು ಖಚಿತವಾದ ಕ್ರಮಗಳನ್ನು ಅನುಸರಿಸುವ ಮೂಲಕ ಹಾಣಕಾಸಿನ ಸಮಸ್ಯೆಯನ್ನು ನಿವಾರಿಸಬಹುದು ಎಂದು ಹೇಳಲಾಗುತ್ತದೆ. ಲಕ್ಷ್ಮೀ ಮುನಿಸಿಕೊಂಡ ಕಾರಣದಿಂದ ಹಣಕಾಸಿನ ತಾಪತ್ರಯ ಎದುರಾದಾಗ ಈ ಒಂದು ನಿಯಮವನ್ನು ಪಾಲಿಸುವ ಮೂಲಕ ಮತ್ತೆ ಮಹಾಲಕ್ಷ್ಮೀಯ ಕೃಪೆಗೆ ಪಾತ್ರರಾಗಬಹುದು. ಜೀವನದಲ್ಲಿ ಎದುರಾಗಿರುವ ಹಣದ ಅಭಾವವನ್ನು ನೀಗಿಸಬಹುದು ಎನ್ನಲಾಗಿದೆ.
ನಿಮ್ಮ ಪರ್ಸ್‌ನಲ್ಲಿ ಸದಾ ಹಣ ಉಳಿಯಬೇಕು ಎಂದಾದರೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕು.
ಪರ್ಸ್ ನಲ್ಲಿ ಬೆಳ್ಳಿ ನಾಣ್ಯ ಇಟ್ಟುಕೊಳ್ಳಿ:
ಲಕ್ಷ್ಮೀ ಅಥವಾ ಗಣೇಶನ ಚಿತ್ರವಿರುವ ಬೆಳ್ಳಿ ನಾಣ್ಯವನ್ನು ನಿಮ್ಮ ಪರ್ಸ್‌ನಲ್ಲಿ ಇರಿಸಿಕೊಳ್ಳಿ. ಈ ಸಣ್ಣ ಬೆಳ್ಳಿ ನಾಣ್ಯವು ನಿಮ್ಮ ಅದೃಷ್ಟವನ್ನೇ ಬದಲಾಯಿಸಬಹುದು. ಈ ಬೆಳ್ಳಿ ನಾಣ್ಯವು ಅದೃಷ್ಟವನ್ನು ಹೊತ್ತು ತರುವ ಮೂಲಕ ಸಂಪತ್ತನ್ನು ಆಯಸ್ಕಾಂತದಂತೆ ಆಕರ್ಷಿಸುತ್ತದೆ.

ಪರ್ಸ್‌ನಲ್ಲಿ ಅಶ್ವಥ ಮರದ ಒಂದಿಡೀ ಎಲೆಯನ್ನು ಇಟ್ಟುಕೊಳ್ಳಿ:
ಯಾವುದೇ ರಂಧ್ರಗಳಿಲ್ಲದ ಅಶ್ವಥ ಎಲೆಯನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳಿ.ಈ ಎಲೆಯನ್ನು ಪರ್ಸ್‌ನಲ್ಲಿ ಇರಿಸಿದ ತಕ್ಷಣ, ಹಣವು ಅದರತ್ತ ಆಕರ್ಷಿತವಾಗಲು ಪ್ರಾರಂಭಿಸುತ್ತದೆ.ಅಶ್ವಥ ಎಲೆಯನ್ನು ಪರ್ಸ್‌ನಲ್ಲಿ ಇಡುವ ಮೊದಲು, ಅದರ ಮೇಲೆ ನೀರನ್ನು ಸಿಂಪಡಿಸಿ ಆ ಎಲೆಯನ್ನು ಶುದ್ಧೀಕರಿಸಿಕೊಳ್ಳಿ. ನಂತರ ಅದರ ಮೇಲೆ ಅರಶಿನದಿಂದ "ಶ್ರೀ" ಎಂದು ಬರೆಯಿರಿ. ಹೀಗೆ ಶ್ರೀ ಎಂದು ಬರೆದ ಎಲೆಯನ್ನು ಪರ್ಸ್‌ನಲ್ಲಿ ಇರಿಸಿದರೆ ಆರ್ಥಿಕ ತೊಂದರೆಗಳು ಒಂದೊಂದಾಗಿಯೇ ನಿವಾರಣೆಯಾಗುತ್ತದೆ.
ಪರ್ಸ್‌ನಲ್ಲಿ 21 ಅಕ್ಕಿ ಕಾಳುಗಳನ್ನು ಇಟ್ಟುಕೊಳ್ಳಿ:
ಒಂದು ಸ್ವಚ್ಛವಾದ ಕೆಂಪು ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ 21 ಅಕ್ಕಿ ಕಾಳುಗಳನ್ನು ಇರಿಸಿ. ನೆನಪಿರಲಿ ಈ ಅಕ್ಕಿ ಕಾಳುಗಳು ಮುರಿದಿರಬಾರದು. ಈ ಕಾಳುಗಳನ್ನು ನಿಮ್ಮ ಪರ್ಸ್‌ನಲ್ಲಿ ಇರಿಸಬೇಕು. ಒಮ್ಮೆ ಅಕ್ಕಿ ಕಾಳುಗಳನ್ನು ಪರ್ಸ್‌ನಲ್ಲಿ ಇರಿಸಿದ ನಂತರ ನಿಮ್ಮ ಪರ್ಸ್ ಯಾವಾಗಲೂ ಸ್ವಚ್ಛವಾಗಿ ಮತ್ತು ವ್ಯವಸ್ಥಿತವಾಗಿ ಇರಬೇಕು. ಈ ಪರಿಹಾರ ಕಕಾರ್ಯವನ್ನು ಅನುಸರಿಸುವುದರಿಂದ, ನಿಮ್ಮ ಕೈಯ್ಯಲ್ಲಿ ಯಾವತ್ತೂ ಹಣದ ಅಭಾವ ಎದುರಾಗುವುದಿಲ್ಲ.ಸಂಪತ್ತು ಹೆಚ್ಚುತ್ತಲೇ ಹೋಗುತ್ತದೆ ಎಂದು ಹೇಳಲಾಗುತ್ತದೆ.
ಬಿಳಿ ಗೋಮತಿ ಚಕ್ರ ಇರಿಸಿ:
ನಿಮ್ಮ ಪರ್ಸ್ ನಲ್ಲಿ ಯಾವಾಗಲೂ 3 ಅಥವಾ 7 ಬಿಳಿ ಗೋಮತಿ ಚಕ್ರಗಳನ್ನು ಇಟ್ಟುಕೊಳ್ಳಿ .ಇದು ನಿಮ್ಮ ಜೀವನದಲ್ಲಿ ಸಂಪತ್ತಿನ ಆಗಮನಕ್ಕೆ ಬಾಗಿಲು ತೆರೆಯುತ್ತದೆಯಂತೆ. ವ್ಯಾಪಾರ, ವ್ಯವಹಾರವಾಗಲಿ, ವೃತ್ತಿಯಲ್ಲಾಗಲೀ ಯಾವುದೇ ರೀತಿಯ ನಷ್ಟ ಅಡೆತಡೆಯಾಗದಂತೆ ಹಣದ ಕೊರತೆಯಾಗದಂತೆ ಮುಂದುವರಿಯಬಹುದು.














Click it and Unblock the Notifications