ವಾಸ್ತು ಟಿಪ್ಸ್: ಹೊಸ ಮನೆ ಕಟ್ಟಿಸುವಾಗ ಅಪ್ಪಿತಪ್ಪಿಯೂ ಈ ತಪ್ಪು ಕೆಲಸಗಳನ್ನು ಮಾಡ್ಬೇಡಿ

ಸ್ವಂತ ಮನೆ ಕಟ್ಟುವ ಕನಸು ಪ್ರತಿಯೊಬ್ಬರಿಗೂ ಇರುತ್ತದೆ. ಅದಕ್ಕೂ ಮೊದಲು ಪೂರ್ವ ದಿಕ್ಕಿನ ಸೈಟು ಹುಡುಕುತ್ತಾರೆ, ಪೂರ್ವ ದಿಕ್ಕು ಅಂದರೆ ಸೂರ್ಯ ಉದಯದ ಸ್ಥಾನವಾದ್ದರಿಂದ ಇದು ಅತ್ಯಂತ ಮಂಗಳಕರವಾದ ದಿಕ್ಕು ಎಂಬುದು ನಮ್ಮೆಲ್ಲರ ಭಾವನೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಕೇವಲ ಪೂರ್ವ ದಿಕ್ಕಿನಲ್ಲಿ ಮನೆ ಇದ್ದರೆ ಸಾಲದು, ಮನೆ ಒಳಗಿನ ವಿನ್ಯಾಸವು ಹೇಗಿದೆ ಎಂಬುದು ಅಷ್ಟೇ ಮುಖ್ಯವಾಗಿರುತ್ತದೆ. ಮನೆ ಪೂರ್ವ ದಿಕ್ಕಿನಲ್ಲಿದ್ದರೂ ಕೆಲವೂಮ್ಮೆ ಅನೇಕರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅಂತವರಿಗಾಗಿ ಮತ್ತು ಹೊಸ ಮನೆ ಕಟ್ಟುವವರಿಗಾಗಿ ಕೆಲವು ಪ್ರಮುಖ ವಾಸ್ತು ಸಲಹೆಗಳು ಇಲ್ಲಿವೆ.

ಪೂರ್ವ ದಿಕ್ಕಿನ ಮಹತ್ವ ಮತ್ತು ಅದರ ಲಾಭಗಳು

ವಾಸ್ತು ಶಾಸ್ತ್ರದ ಪ್ರಕಾರ ಪೂರ್ವ ದಿಕ್ಕನ್ನು ದೇವರ ದೇವ ಇಂದ್ರ ಆಳುತ್ತಾನೆ. ಈ ದಿಕ್ಕು ಸರಿಯಾಗಿದ್ದರೆ ಮನೆಯಲ್ಲಿ ಈ ಕೆಳಗಿನ ಬದಲಾವಣೆಗಳನ್ನು ನೀವು ಕಾಣಬಹುದು.

ಕೀರ್ತಿ ಮತ್ತು ಪ್ರತಿಷ್ಠೆ: ಸಮಾಜದಲ್ಲಿ ನಿಮಗೆ ಗೌರವ ಹೆಚ್ಚಾಗುತ್ತದೆ.

ಶಾಂತ ಮನಸ್ಸು: ಮನೆಯ ವಾತಾವರಣದಲ್ಲಿ ನೆಮ್ಮದಿ ಮತ್ತು ಶಾಂತಿಯಿಂದ ಕೂಡಿರುತ್ತದೆ.

ಮಹಿಳೆಯರ ಆರೋಗ್ಯ: ಈ ದಿಕ್ಕಿನಲ್ಲಿ ಮನೆಯಿರುವುದರಿಂದ ಮನೆಯಲ್ಲಿರುವ ಮಹಿಳೆಯರ ಆರೋಗ್ಯವು ಸುಧಾರಿಸುತ್ತದೆ.

ವಿದ್ಯಾರ್ಥಿಗಳಿಗೆ ವರದಾನ: ಈ ದಿಕ್ಕಿನಲ್ಲಿ ವಿದ್ಯಾರ್ಥಿಗಳಿಗೆ ಓದುವ ಕಡೆ ಗಮನ ಮತ್ತು ಏಕಾಗ್ರತೆಯು ಹೆಚ್ಚಿಸುತ್ತೆ.

Vastu Tips

ಮನೆಯ ವಿನ್ಯಾಸ ಹೇಗಿರಬೇಕು?

ಕೇವಲ ದಿಕ್ಕು ಮಾತ್ರವಲ್ಲ ಮನೆಯೊಳಗಿನ ಕೋಣೆಗಳ ಸ್ಥಾನವೂ ವಾಸ್ತುವಿಗೆ ಅನುಗುಣವಾಗಿರಬೇಕಾಗುತ್ತದೆ.

ಮಾಸ್ಟರ್ ಬೆಡ್ ರೂಮ್: ಇದು ಯಾವಗಲೂ ಮನೆಯ ನೈಋತ್ಯ ಭಾಗದಲ್ಲಿರಬೇಕು.

ಅಡುಗೆಮನೆ: ಅಡುಗೆಮನೆಯು ಅಗ್ನಿ ಮೂಲೆಯಾದ ಆಗ್ನೇಯ ದಿಕ್ಕಿನಲ್ಲಿರುವುದು ಕಡ್ಡಾಯ.

ಬೆಳಕು ಮತ್ತು ಗಾಳಿ: ಪೂರ್ವದಿಂದ ಬರುವ ಸೂರ್ಯನ ಬೆಳಕು ಮನೆಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಆದ್ದರಿಂದ ಹೆಚ್ಚಿಗೆ ಕಿಟಕಿಗಳಿಡುವುದು ಒಳ್ಳೆಯದು.

ಈ ತಪ್ಪುಗಳನ್ನು ಮಾಡಬೇಡಿ ಎಚ್ಚರ!

ಪೂರ್ವ ದಿಕ್ಕಿನ ಮನೆಯಲ್ಲೂ ಕೆಲವು ತಪ್ಪುಗಳಾದರೆ ಅದು ನಕಾರಾತ್ಮಕ ಶಕ್ತಿಯ ಪರಿಣಾಮ ಬೀರುತ್ತದೆ.

ಮುಖ್ಯದ್ವಾರದ ಸ್ಥಾನ: ಸಿಂಹದ್ವಾರವು ಈಶಾನ್ಯ ಮೂಲೆಯಲ್ಲಿದ್ದರೆ ಶೇಯಸ್ಸು. ಒಂದು ವೇಳೆ ಇದು ಆಗ್ನೇಯ ದಿಕ್ಕಿನೆಡೆಗೆ ಸರಿದರೆ ಕುಟುಂಬದಲ್ಲಿ ನಿರಂತರ ಜಗಳ, ಕಲಹ, ಮತ್ತು ಅನಾರೋಗ್ಯ ಕಾಡುವ ಸಾದ್ಯತೆ ಹೆಚ್ಚು.

ಮನೆಯ ಮುಂದೆ ತಡೆಗೋಡೆಗಳು: ಮುಖ್ಯ ದ್ವಾರದ ಎದುರು ದೊಡ್ಡ ಮರಗಳು, ಕಂಬಗಳು ಅಥವಾ ಎತ್ತರದ ಗೋಡೆಗಳು ಇರಬಾರದು. ಇದು ಆರ್ಥಿಕ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ.

ಮನೆಯ ಎತ್ತರದ ವ್ಯತ್ಯಾಸ: ಮನೆಯ ಪೊರ್ವ ಭಾಗವು ಪಶ್ಚಿಮ ಭಾಗಕ್ಕಿಂತ ಯಾವಾಗಲೂ ಸ್ವಲ್ಪ ತಳಮಟ್ಟದಲ್ಲಿರಬೇಕು, ಪೂರ್ವದಲ್ಲಿ ಅತಿಯಾದ ಭಾರವಾದ ವಸ್ತುಗಳನ್ನುಇಡುವುದರಿಂದ ಅಭಿವೃದ್ದಿಗೆ ಅಡ್ಡಿಪಡಿಸುತ್ತದೆ.

ಮನೆಯ ಶಚಿತ್ವದ ಕಡೆ ಗಮನ: ಪೂರ್ವದ್ವಾರದ ಮುಂದೆ ಕಸದ ರಾಶಿ ಅಥವಾ ಕೊಳಕು ನೀರು ನಿಲ್ಲುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಹೆಚ್ಚಾಗಿ ಅಶಾಂತಿ ಉಂಟಾಗುತ್ತದೆ.

ಅದೃಷ್ಟ ಬದಲಿಸುವ ಸರಳ ಕ್ರಮ

ಸಿಂಹದ್ವಾರದ ವಿನ್ಯಾಸ: ಮನೆಯ ಮುಖ್ಯದ್ವಾರ ಇತರ ಬಾಗಿಲುಗಳಿಗಿಂತ ದೊಡ್ಡದಾಗಿ ಹಾಗು ಹೆಚ್ಚು ಆಕರ್ಷಕವಾಗಿ ಇರಬೇಕು.

ಶುಭ ಚಿಹ್ನೆಗಳು: ಬಾಗಿಲಿಗೆ ಹಸಿರು ಮಾವಿನ ಎಲೆಯ ತೋರಣ, ಓಂ, ಅಥವಾ ಸ್ವಸ್ತಿಕ ಚಿಹ್ನೆಗಳನ್ನು ಅಳವಡಿಸುವುದು ಶುಭಕರ.

ದೀಪಾರಾಧನೆ: ಸಂಜೆ ಸಮಯದಲ್ಲಿ ಮುಖ್ಯ ದ್ವಾರದಲ್ಲಿ ಕತ್ತಲೆಯು ಇರಬಾರದು. ಬೆಳಕಿನ ವ್ಯವಸ್ಥೆ ಇರುವುದಂತೂ ಕಡ್ಡಾಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+