Varsha Bhavishya 2025: 2025 ವರ್ಷ ಭವಿಷ್ಯ: ಈ ಮೂರು ರಾಶಿಯವರು ಮುಟ್ಟಿದ್ದೆಲ್ಲವೂ ಚಿನ್ನ!

2025ನೇ ವರ್ಷ ಸಕಲರಿಗೂ ಸನ್ಮಂಗಳವನ್ನು ತಂದು ಸುಖ, ನೆಮ್ಮದಿಯ ಜೀವನ ನೀಡಲಿ ಎನ್ನುವ ಹಾರೈಕೆಯೊಂದಿಗೆ ಮುಂದಿನ ವರ್ಷ ಯಾವ ರಾಶಿಯವರಿಗೆ ಯಾವೆಲ್ಲಾ ಶುಭಫಲವನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ ಎಂದು ತಿಳಿಯೋಣ. 2025ರ ರಾಶಿಫಲವನ್ನು ತಿಳಿದುಕೊಳ್ಳುವ ಮೊದಲು ಗ್ರಹಗಳ ಚಲನವಲನಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ವರ್ಷದ ಆರಂಭದಲ್ಲಿ ನಿಧಾನವಾಗಿ ಚಲಿಸುವ ಗ್ರಹಗಳಾದ ಶನಿ ಹಾಗೂ ಗುರು ಗ್ರಹಗಳು ಮೂರು ರಾಶಿಗಳಿಗೆ ಶುಭ ಫಲವನ್ನು ನೀಡಲಿವೆ. ಇದರಿಂದಾಗಿ ಮುಂದಿನ ವರ್ಷ ಮೂರು ರಾಶಿಗಳಿಗೆ ರಾಜಯೋಗವಿದೆ. ಹಾಗಾದರೆ ಆ ರಾಶಿಗಳು ಯಾವುವು? ಆ ರಾಶಿಯವರ ಜೀವನದಲ್ಲಿ ಯಾವ ಶುಭ ಕಾರ್ಯಗಳು ನಡೆಯುತ್ತವೆ? ಶುಭ ಯೋಗವನ್ನು ಅನುಭವಿಸುವಂತಹ ಮೂರು ರಾಶಿಗಳು ಯಾವುವು? ಎಂದು ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರಿಂದ ತಿಳಿಯೋಣ.

Varsha Bhavishya 2025 Rajayoga for Three Zodiac Signs - Vidya Shankarananda Saraswati s Prediction

ವೃಷಭ ರಾಶಿ:

ಈ ವರ್ಷ ವೃಷಭ ರಾಶಿಯವರು ತುಂಬಾ ಕಠಿಣ ಪರಿಸ್ಥಿತಿಯನ್ನು ಅನುಭವಿಸಿದ್ದರು. ಆದರೆ 2025ರಲ್ಲಿ ವೃಷಭ ರಾಶಿಯವರಿಗೆ ಇದಕ್ಕೆ ತದ್ವಿರುದ್ದವಾದ ಫಲಗಳು ಇವೆ. ಮುಂದಿನ ವರ್ಷ ವೃಷಭ ರಾಶಿಯವರಿಗೆ ಗುರುವಿನೊಂದಿಗೆ ಶನಿ ಬಲವೂ ಇದೆ. ಇವೆರೆಡನ್ನೂ ಸಹ ನೀವು ಅನುಭವಿಸುವಂತಹ ಸುಸಂದರ್ಭ ಇದಾಗಿದೆ.

ನಿಮ್ಮ 11ನೇ ಮನೆಯಲ್ಲಿರುವ ಶನಿ ಪ್ರಭಾವ ದ್ವಿತೀಯ ಸ್ಥಾನದಲ್ಲಿ ಇರುವ ಗುರುವಿನ ಪ್ರಭಾವ ಎರಡನ್ನೂ ನೀವು ಅನುಭವಿಸುವಿರಿ. ಅದೇ ರೀತಿಯಾಗಿ ಆಯಾಯಾ ಸಮಯಕ್ಕೆ ಈ ಗ್ರಹಗಳು ಶುಭ ಫಲಗಳನ್ನು ನೀಡುತ್ತವೆ. ಹೀಗಾಗಿ ಮುಂಬರುವ ವರ್ಷ ವೃಷಭ ರಾಶಿಯವರಿಗೆ ತುಂಬಾ ಮಂಗಳಕರವಾಗಿದೆ. ರಾಜಯೋಗದ ಸುಸಂದರ್ಭವೂ ಇದೆ.

ಈ ಸಮಯದಲ್ಲಿ ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತವೆ. ಹಲವು ನಷ್ಟಗಳಿಗೆ ಈ ಬಾರಿ ಲಾಭ ಸಿಗಲಿದೆ. ಹಣಕಾಸಿನ ಉನ್ನತಮಟ್ಟದ ಜೀವನವನ್ನು ನೀವು ನೋಡಬಹುದು. ವೈವಾಹಿಕ ಜೀವನಕ್ಕೆ ಕಾಲಿಡುವಂತಹ ಸಾಧ್ಯತೆಗಳು ಹೆಚ್ಚಾಗಿವೆ. ವೃತ್ತಿ, ವ್ಯಾಪಾರ, ವ್ಯವಹಾರಗಳಲ್ಲಿ ತುಂಬಾ ತುಂಬಾ ದೊಡ್ಡ ಮಟ್ಟದ ಯೋಗವನ್ನು ನೀವು ಪಡೆಯುತ್ತೀರಿ.

Varsha Bhavishya 2025 Rajayoga for Three Zodiac Signs - Vidya Shankarananda Saraswati s Prediction

ತುಲಾ ರಾಶಿ:

ಇನ್ನೂ ಮುಂದಿನ ವರ್ಷ ಶನಿ ಹಾಗೂ ಗುರುವಿನ ಸಂಪೂರ್ಣ ಶುಭ ಲಾಭವನ್ನು ಪಡೆಯುವ ರಾಶಿಯವರು ತುಲಾ ರಾಶಿಯವರು. ಮುಂಬರುವ ವರ್ಷ ತುಲಾ ರಾಶಿಯವರಿಗೆ ಅಲ್ಲಲ್ಲಿ ಕೆಟ್ಟ ತಿಂಗಳುಗಳು ಇದ್ದರೂ ಕೂಡ ತುಂಬಾ ಸಮಸ್ಯೆಗಳನ್ನುಂಟು ಮಾಡುವುದಿಲ್ಲ. 2025ರಲ್ಲಿ ತುಲಾ ರಾಶಿಯವರಿಗೆ ಸಾಕಷ್ಟು ಮಂಗಳಕರ ಫಲವನ್ನು ಶನಿ ಹಾಗೂ ಗುರು ಗ್ರಹಗಳು ನೀಡಲಿವೆ.

ಹೌದು... ಭಾಗ್ಯ ಸ್ಥಾನದಲ್ಲಿ ಇರುವ ಗುರು, ತುಲಾ ರಾಶಿಯ ಮೇಲೆ ದೃಷ್ಟಿ ಬೀರುತ್ತಾ, ಜೊತೆಗೆ ತೃತೀಯ ಸ್ಥಾನದ ಮೇಲೂ ದೃಷ್ಟಿಯನ್ನು ಬೀರುತ್ತಾನೆ. ಗುರು ತುಲಾ ರಾಶಿಯವರಿಗೆ ಒಳ್ಳೆಯ ಅನುಕೂಲಕರ ರಾಜಯೋಗವನ್ನು ನೀಡುತ್ತಾನೆ. ಹೀಗಾಗಿ ಇದು ನಿಮ್ಮ ಕಷ್ಟಗಳು ಕಳೆದು ಹೋಗುವ ಸಂದರ್ಭವಾಗಿದೆ. ಆರ್ಥಿಕವಾಗಿ ನೀವು ಸದೃಢರಾಗುವಿರಿ.

Varsha Bhavishya 2025 Rajayoga for Three Zodiac Signs - Vidya Shankarananda Saraswati s Prediction

ಕುಂಭ ರಾಶಿ:

ಇನ್ನೂ ಮುಂದಿನ ವರ್ಷ ಹೆಚ್ಚು ಶುಭ ಫಲವನ್ನು ಪಡೆಯುವ ರಾಶಿಯೆಂದರೆ ಅದು ಕುಂಭ ರಾಶಿ. ಕುಂಭ ರಾಶಿಯವರಿಗೆ ಸದ್ಯ ಸಾಡೇ ಸಾತ್ ನಡೆಯುತ್ತಿದೆ. ಆದರೆ ಇದು ಕೊನೆಯ ಹಂತದ ಸಾಡೇಸಾತ್ ಆಗಿದೆ. ಕೊನೆಯ ಹಂತದ ಸಾಡೇಸಾತ್ ನಿಮ್ಮ ಬದುಕಿನಲ್ಲಿ ಒಂದು ನಿರ್ಧಿಷ್ಟ ಪಾಠವನ್ನು ಕಲಿಸಿಕೊಡುತ್ತದೆ. ಯಾವುದು ಒಳ್ಳೆಯದು-ಕೆಟ್ಟದ್ದು, ಯಾವುದು ಅನುಕೂಲ-ಅನಾನುಕೂಲ, ಏನು ಮಾಡಬೇಕು-ಮಾಡಬಾರದು ಎಲ್ಲಾ ಪಾಠವನ್ನು ಕಲಿಸಿಕೊಟ್ಟು ಹೋಗುತ್ತದೆ. ಇದೂ ಕೂಡ ನಿಮಗೆ ಒಂದು ರಾಜಯೋಗವೇ ಆಗಲಿದೆ.

ಇದರೊಂದಿಗೆ ಗುರು ಅನುಗ್ರಹವೂ ಕುಂಭ ರಾಶಿಯ ಮೇಲಿದೆ. ಕುಂಭ ರಾಶಿಯ ಐದನೇ ಮನೆಗೆ ಗುರು ಸಂಚಾರವಾಗಲಿದೆ. ಹೀಗಾಗಿ ನಿಮ್ಮ ಮೇಲೆ ಗುರು ಬಲ ಬರುತ್ತದೆ. ಹೀಗಾಗಿ ಕುಂಭ ರಾಶಿಯವರು ರಾಜಯೋಗವನ್ನು ಅನುಭವಿಸಲಿದ್ದಾರೆ. ಹೀಗೆ 2025ರಲ್ಲಿ ಈ ಮೂರು ರಾಶಿಗಳು ತುಂಬಾ ಅದೃಷ್ಟವಂತರಾಗಿದ್ದಾರೆ. ಈ ರಾಶಿಯವರ ಆರ್ಥಿಕ ಜೀವನ ತುಂಬಾ ಸುಧಾರಿಸಲಿದ್ದು ಸಾಕಷ್ಟು ಸುಖ ಜೀವನವನ್ನು ನಡೆಸಲಿದ್ದಾರೆ. ಇದನ್ನು ಹೊರತುಪಡಿಸಿದರೆ 2025ರಲ್ಲಿ ಇನ್ನೂ ಎರಡು ರಾಶಿಗಳಿಗೆ ಸರಿಸುಮಾರು ಶೇ.80ಕ್ಕಿಂತಲೂ ಹೆಚ್ಚು ಮತ್ತು 90ಕ್ಕಿಂತ ಕಡಿಮೆ ಶುಭ ಫಲಗಳು ಇವೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ.

ಧನು ರಾಶಿ
ಧನು ರಾಶಿಗೆ ಸಂಪೂರ್ಣವಾಗಿ ಗುರು ಯೋಗದ ಪ್ರಭಾವ ಇದೆ. ಇದರಿಂದಾಗಿ ಧನು ರಾಶಿಯವರ ಜೀವನದಲ್ಲಿ ಬೇರೆ ಬೇರೆ ಧಾರ್ಮಿಕ ಕಾರ್ಯಗಳು ಶುಭ ಕಾರ್ಯಗಳು ನಡೆಯುತ್ತವೆ. ಅಲ್ಲದೆ ಕುಟುಂಬದಲ್ಲಿ ಇರುವ ತೊಂದರೆ ಸಮಸ್ಯೆಗಳು ದೂರವಾಗುತ್ತವೆ. ಶನಿ ಅರ್ಧಾಷ್ಟಮಕ್ಕೆ ಹೋಗುವುದರಿಂದಾಗಿ ಕೊಂಚ ಮಟ್ಟಗಿನ ಸಮಸ್ಯೆಗಳನ್ನು ಮುಂದಿನ ವರ್ಷ 2025ರಲ್ಲಿ ಧನು ರಾಶಿಯವರು ಎದುರಿಸಬೇಕಾಗುತ್ತದೆ. ಹೀಗಾಗಿ ಧನು ರಾಶಿಯವರಿಗೆ ಅದೃಷ್ಟ ಸ್ವಲ್ಪ ಕಡಿಮೆಯಾಗಿರುತ್ತದೆ.

ಸಿಂಹ ರಾಶಿ
ಇನ್ನೂ ಅದೃಷ್ಟದಿಂದ ಸ್ವಲ್ಪ ಮಟ್ಟಿಗೆ ಹಿನ್ನಡೆಯನ್ನು ಅನುಭವಿಸುವಂತಹ ರಾಶಿ ಸಿಂಹ ರಾಶಿಯಾಗಿದೆ. ಆದರೂ ಸಹ ಬೇರೆ ರಾಶಿಗಳಿಗೆ ಹೋಲಿಸಿದರೆ ಸಿಂಹ ರಾಶಿ 2025ರಲ್ಲಿ ಅದೃಷ್ಟ ರಾಶಿ ಅಂತಲೇ ಹೇಳಬಹುದು. ಸಿಂಹ ರಾಶಿಯವರ 11 ಮನೆಯಲ್ಲಿ ಗುರು ಆಗಮನವಾಗಲಿದೆ. ಇದರಿಂದ ಸಾಕಷ್ಟು ಅನುಕೂಲತೆಗಳು ಇವೆ. ಆದರೆ ಶನಿಯಿಂದ ಸ್ವಲ್ಪ ಮಟ್ಟದ ತೊಂದರೆ ಇದೆ. ಅಷ್ಟಮ ಶನಿ ಸಿಂಹ ರಾಶಿಯವರಿಗೆ ಕೊಂಚ ಮಟ್ಟಿಗೆ ಸಮಸ್ಯೆಗಳನ್ನು ತರಬಹುದು. ಗುರುವಿನ ಅನುಗ್ರಹ ಇರುವುದರಿಂದ ಶನಿಯಿಂದ ಆಗುವ ಸಮಸ್ಯೆಗಳು ಅಷ್ಟಾಗಿ ಇರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+