ಕಾರ್ತಿಕದಲ್ಲಿ ಕಾದಿದೆ ಗಂಡಾಂತರ: ಕೋಡಿಶ್ರೀಗಳ ಭವಿಷ್ಯ
ತಾವು ಹಿಂದೆ ನುಡಿದಿದ್ದ ಭವಿಷ್ಯವನ್ನು ಕೋಡಿಮಠದ ಶ್ರೀಗಳು ಮತ್ತೆ ಹುಬ್ಬಳ್ಳಿಯಲ್ಲಿ ಪುನರುಚ್ಚಿಸಿದ್ದಾರೆ. ಜಲಪ್ರಳಯವಾಗಲಿದೆ ಎಂದು ಏಪ್ರಿಲ್ ತಿಂಗಳಲ್ಲೇ ಕೋಡಿಶ್ರೀಗಳು ಹೇಳಿದ್ದರು, ಅದು ಬಹುತೇಕ ನಿಜವಾಗಿದೆ. ಅದಕ್ಕೆ ಬೆಂಗಳೂರಿನ ಮಳೆಯೇ ಸಾಕ್ಷಿ.
ಎರಡು ವಾರಗಳ ಕೆಳಗೆ ಶಿವಮೊಗ್ಗ ಜಿಲ್ಲೆಯಲ್ಲಿ ಭವಿಷ್ಯ ನುಡಿದಿದ್ದ ಕೋಡಿಶ್ರೀಗಳು ಮುಂದೆ ನಡೆಯಬಹುದಾದ ರಾಜಕೀಯ ವಿದ್ಯಮಾನ ಮತ್ತು ಪ್ರಾಕೃತಿಕ ವಿಕೋಪದ ಬಗ್ಗೆ ಕಳವಳವನ್ನು ವ್ಯಕ್ತ ಪಡಿಸಿದ್ದರು.
ಕಾರ್ತಿಕದಲ್ಲಿ ಇನ್ನೂ ತೊಂದರೆಯಾಗಲಿದೆ ಎಂದು ಕೋಡಿಶ್ರೀಗಳು ಪುನರುಚ್ಚಿಸಿದ್ದಾರೆ ಮತ್ತು ದೇವರ ಸ್ಮರಣೆಯೇ ಇದಕ್ಕೆಲ್ಲಾ ಪರಿಹಾರ ಎನ್ನುವ ಮಾತನ್ನು ಹೇಳಿದ್ದಾರೆ. ಆಸ್ತಿಕ ವಲಯ ಕೋಡಿಶ್ರೀಗಳ ಭವಿಷ್ಯದಿಂದ ಚಿಂತೆ ಪಡುವಂತಾಗಿದೆ.
ದೇಶದಲ್ಲಿ ಮತೀಯ ಗಲಭೆ ಸಂಭವಿಸಲಿದೆ ಎಂದು ಕೋಡಿಶ್ರೀಗಳು ಜೂನ್ ತಿಂಗಳಲ್ಲಿ ಬಳ್ಳಾರಿಯಲ್ಲಿ ನುಡಿದಿದ್ದರು. ಅದರಂತೆಯೇ, ಬಿಜೆಪಿ ನಾಯಕಿ ನೂಪರ್ ಶರ್ಮಾ ಹೇಳಿಕೆಯಿಂದ ದೇಶದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು
ಹುಬ್ಬಳ್ಳಿಯಲ್ಲಿ ಮಾತನಾಡುತ್ತಿದ್ದ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು, "ದೈವಕೃಪೆಯಿಂದ ಈ ನಾಡಿನಲ್ಲಿ ವಿಪರೀತ ಮಳೆಯಾಗಿದೆ. ನಾಡಿಗೆ ಈ ನೀರು, ಕೆರೆಯಿಂದ, ಗುರುಗಳು ಸ್ಥಾಪಿಸಿರುವಂತಹ ಕೆರೆಯಿಂದ ಎಲ್ಲೂ ತೊಂದರೆಯಾಗುವುದಿಲ್ಲ. ಬೆಂಕಿ ಅವಗಢದ ಮುನ್ಸೂಚನೆ ನಮಗೆ ಸಿಕ್ಕಿದೆ"ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಅಗ್ನಿಭಂಗ, ಭೂಕಂಪ ಹೆಚ್ಚಾಗುವ ಲಕ್ಷಣಗಳಿವೆ
"ಇಂದಿನಿಂದ ಮುಂದಕ್ಕೆ ಚೆನ್ನಾಗಿ ನಡೆದುಕೊಂಡು ಹೋಗುತ್ತದೆ, ಜನತೆಗೆ ಸುಖಶಾಂತಿ ಸಿಗುತ್ತದೆ. ಜಲದ ಸಮಸ್ಯೆ ಮುಂದೆಯೂ ಹೆಚ್ಚಾಗುವ ಲಕ್ಷಣಗಳು ಕಾಣಿಸುತ್ತಿವೆ. ಜಲಬಾಧೆ, ಭೂಮಿ ನಡುಗುವಂತಹ ಘಟನೆಗಳು ಹೆಚ್ಚಾಗಿ ನಡೆಯಲಿವೆ. ಅಗ್ನಿಭಂಗ, ಭೂಕಂಪ ಹೆಚ್ಚಾಗುವ ಲಕ್ಷಣಗಳಿವೆ, ಕಾರ್ತಿಕ ಮಾಸದಲ್ಲಿ ತೊಂದರೆಯಾಗುವ ಲಕ್ಷಣಗಳಿವೆ"ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಮಲೆನಾಡು ಬಯಲು ಸೀಮೆಯಾದೀತು
"ಈ ಸಂವತ್ಸರದಲ್ಲಿ ಅಶುಭಗಳೇ ಹೆಚ್ಚಾಗುತ್ತದೆ ಎಂದು ಹೇಳಿದ್ದೆ, ಅದನ್ನು ಮತ್ತೆ ಪುನರುಚ್ಚಿಸುತ್ತಿದ್ದೇನೆ. ಗಾಳಿ ಮಳೆ ಹೆಚ್ಚಾಗಲಿದೆ, ವಿಪರೀತ ಮಿಂಚು ಬರಲಿದೆ, ಸಾವುನೋವು ಹೆಚ್ಚಾಗಲಿದೆ, ಜಲಾಶಯಗಳು ತುಂಬಿ ಹರಿಯುತ್ತವೆ. ಮಲೆನಾಡು ಬಯಲು ಸೀಮೆಯಾದೀತು"ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ. ಹಾಸನದಲ್ಲಿ ಈ ಹಿಂದೆಯೇ ಭವಿಷ್ಯವನ್ನು ಶ್ರೀಗಳು ನುಡಿದಿದ್ದರು.

ಜನರು ದೇವರನ್ನು ನಂಬಿ, ಭಕ್ತಿಯಲ್ಲಿ ಹೋದರೆ ಎಲ್ಲದೂ ಒಳ್ಳೆಯದು
"ಜನರು ದೇವರನ್ನು ನಂಬಿ, ಭಕ್ತಿ ಮಾರ್ಗದಲ್ಲಿ ಹೋದರೆ ಎಲ್ಲದೂ ಒಳ್ಳೆಯದಾಗುತ್ತದೆ"ಎಂದು ಶ್ರೀಗಳು ಹುಬ್ಬಳ್ಳಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ. ಅಪಮೃತ್ಯು, ಕೊಲೆಗಳು, ಮತೀಯ ಗಲಭೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಕೋಪಕ್ಕೆ ತುತ್ತಾಗಲಿದೆ. ರಾಜಕೀಯದಲ್ಲಿ ತಲ್ಲಣ, ಗುಂಪುಗಳು ಆಗಲಿವೆ. ಮಳೆ ಬಂದರೆ ಬೆಳೆ ಸಿಗುವುದಿಲ್ಲ, ಈ ಸಂವತ್ಸರದ ಫಲ ಅಶುಭ ಎಂದು ಶ್ರೀಗಳು ಭವಿಷ್ಯವನ್ನು ನುಡಿದಿದ್ದರು.
-
ಕರ್ನಾಟಕ ದ್ವಿತೀಯ PUC ಫಲಿತಾಂಶಕ್ಕೆ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ: ಏಪ್ರಿಲ್ 8ಕ್ಕೂ ರಿಸಲ್ಟ್ ಬರೋದು ಡೌಟ್? -
Viral: ಕಚೇರಿಗೆ ಬಂದ ಪೋಷಕರು, ಮ್ಯಾನೇಜರ್ ಬಳಿ ಮಗಳ ವರ್ತನೆ ಬಗ್ಗೆ ವಿಚಾರಣೆ: ಶಾಲಾ ದಿನಗಳನ್ನು ನೆನಪಿಸಿದ ವಿಡಿಯೋ -
Divorce Celebration: ಡಿವೋರ್ಸ್ ಪಡೆದ ಮಗಳಿಗೆ ಸಿಹಿ ತಿನ್ನಿಸಿ ಅದ್ದೂರಿ ಸ್ವಾಗತ: ತಂದೆಯ ಸಂಭ್ರಮಾಚರಣೆ ವಿಡಿಯೋ ವೈರಲ್ -
Gold Rate April 7: ಚಿನ್ನ - ಬೆಳ್ಳಿ ಬೆಲೆ ಸತತ 3ನೇ ದಿನವೂ ಇಳಿಕೆ; ಚಿನ್ನ ಪ್ರಿಯರಿಗೆ ಗುಡ್ನ್ಯೂಸ್ -
Viral Video: ಆರ್ಸಿಬಿ Vs ಸಿಎಸ್ಕೆ ಪಂದ್ಯ; ಕರ್ನಾಟಕ Vs ತಮಿಳುನಾಡು ಮಾಡಬೇಡಿ ಎಂದ ಸಿಎಸ್ಕೆ ಫ್ಯಾನ್ -
Viral Video: ನಾಳೆಯೇ ನಿಮ್ಮ ಕೆಲಸ ಹೋದರೆ ಏನು ಮಾಡುವಿರಿ? ಮಾಜಿ ಗೂಗಲ್ ಉದ್ಯೋಗಿಯ ಪ್ರಶ್ನೆಗೆ ದಂಗಾದ ನೆಟ್ಟಿಗರು -
Karnataka Rain Updates: ಚಂಡಮಾರುತ ಪ್ರಸರಣ ಪ್ರಭಾವ: ಬೆಂಗಳೂರು ಸೇರಿ ಕರ್ನಾಟಕದ 8 ಜಿಲ್ಲೆಗಳಲ್ಲಿ 3ದಿನ ಮಳೆ -
Horoscope April 8: ಕೆಲವರಿಗೆ ಯಶಸ್ಸು, ಕೆಲವರಿಗೆ ಜಾಗ್ರತೆ ಸೂಚಿಸುವ ದಿನ ಭವಿಷ್ಯ -
April 7 Horoscope: ಸ್ಪರ್ಧೆಯಲ್ಲಿ ಜಯ ಮತ್ತು ಹೊಸ ಉದ್ಯೋಗ ಅವಕಾಶಗಳು -
Job Resignation: ಇರೋ ಕೆಲಸಕ್ಕೆ ರಾಜೀನಾಮೆ ಕೊಡುವ ಮೊದಲು ಕೇಳಿಕೊಳ್ಳಬೇಕಾದ 17 ಪ್ರಶ್ನೆಗಳಿವು -
KSRTC: ಕನಕಪುರ-ಬೆಂಗಳೂರು ಬಸ್ ಪ್ರಯಾಣಿಕರಿಗೆ ಶುಭ ಸುದ್ದಿ, 20 ವರ್ಷದ ಬಳಿಕ 4 ಬಸ್ ಸಂಚಾರ -
ಪತಿ ವಿಜಯ್ ದೇವರಕೊಂಡ ಜೊತೆ ಮೊದಲ ಬಾರಿಗೆ ತವರಿಗೆ ಬಂದ ರಶ್ಮಿಕಾ: ತಂದೆಯಿಂದ ಐಷಾರಾಮಿ ಬಂಗಲೆ ಉಡುಗೊರೆ












Click it and Unblock the Notifications