Solar Eclipse: ಕಂಕಣ ಸೂರ್ಯಗ್ರಹಣಕ್ಕೆ ಕ್ಷಣಗಣನೆ, ಇಲ್ಲಿದೆ ಸಮಯ ಹಾಗೂ ಪರಿಹಾರ
ಸೂರ್ಯಗ್ರಹಣ ಸಂಭವಿಸಲು ಕ್ಷಣಗಣನೆ ಶುರುವಾಗಿದ್ದು, ಖಗೋಳ ಲೋಕದ ಮತ್ತೊಂದು ಅದ್ಭುತ ಘಟನೆಗೆ ಮನುಕುಲವು ಇಂದು ಸಾಕ್ಷಿಯಾಗಲಿದೆ. ಫೆಬ್ರವರಿ ತಿಂಗಳಲ್ಲೇ ಈ ಬಾರಿ ವರ್ಷದ ಮೊದಲ ಸೂರ್ಯಗ್ರಹಣ ಬಂದಿದ್ದು, ಇಡೀ ಜಗತ್ತು ಬಾಹ್ಯಾಕಾಶ ಲೋಕದ ವಿಸ್ಮಯ ಕಣ್ತುಂಬಿಕೊಳ್ಳಲು ಈಗ ಕಾಯುತ್ತಿದೆ. ಈ ವಾತಾವರಣದಲ್ಲಿ ಕಂಕಣ ಸೂರ್ಯಗ್ರಹಣದ ಬಗ್ಗೆ ನೀವು ತಿಳಿಯಬೇಕಾದ ಹಲವು ಸಂಗತಿಗಳು ಇಲ್ಲಿವೆ ಹಾಗೂ ಕಂಕಣ ಸೂರ್ಯಗ್ರಹಣದ ಸಮಯ ಮತ್ತು ಪರಿಹಾರದ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.
ಭೂಮಿ ಎಂಬ ನಮ್ಮ ಗ್ರಹವು, ಸೂರ್ಯ ಎಂಬ ನಮ್ಮದೇ ಸೌರವ್ಯೂಹದ ನಕ್ಷತ್ರದ ಸುತ್ತಲೂ ಸುತ್ತುತ್ತದೆ. ಹೀಗಿದ್ದಾಗ ಚಂದ್ರ ಎಂಬ ಭೂಮಿಯ ಉಪಗ್ರಹ ಭೂಮಿಯ ಸುತ್ತಲೂ ಸುತ್ತುತ್ತದೆ. ಈ ನಡುವೆ ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿ ಸುತ್ತಲೂ ಸುತ್ತು ಹಾಕುತ್ತಾ ಹಾಕುತ್ತಾ ಸೂರ್ಯ ಮತ್ತು ಭೂಮಿಯ ನಡುವೆ ಬಂದ ಸಮಯದಲ್ಲೇ ಈ ಖಗೋಳ ವಿಸ್ಮಯ ಸೂರ್ಯಗ್ರಹಣ ಸಂಭವಿಸುತ್ತದೆ.

ಭೂಮಿ & ಸೂರ್ಯನ ನಡುವೆ ಬರುವ ಚಂದ್ರ ತನ್ನ ನೆರಳನ್ನು ಭೂಮಿ ಮೇಲೆ ಬೀಳುವಂತೆ ಮಾಡಿ, ಸೂರ್ಯನಿಗೆ ಅಡ್ಡಲಾಗಿ ನಿಲ್ಲುತ್ತಾನೆ. ಈ ಸಮಯದಲ್ಲೇ ಸೂರ್ಯ ನಾಪತ್ತೆ ಆಗುವುದು & ಆಕಾಶದಲ್ಲಿ ಕತ್ತಲು & ಬೆಳಕಿನ ಆಟ ನಡೆಯುವುದು ಗಮನ ಸೆಳೆಯುತ್ತದೆ. ಆದರೆ ಗ್ರಹಣದಿಂದ ಮನುಷ್ಯರ ಮೇಲೆ ಕೂಡ ಹಲವು ರೀತಿಯ ಪ್ರಭಾವ ಉಂಟಾಗುತ್ತದೆ ಎಂದು ಜೋತಿಷ್ಯ ಹೇಳುತ್ತದೆ, ಹಾಗೇ ಇದಕ್ಕೆ ಪರಿಹಾರ ಕೂಡ ಸೂಚಿಸಲಾಗಿದೆ.
ಕಂಕಣ ಸೂರ್ಯಗ್ರಹಣಕ್ಕೆ ಕ್ಷಣಗಣನೆ ಆರಂಭ
ಭಾರತೀಯ ಭಾಷೆಯಲ್ಲಿ ಕಂಕಣ ಸೂರ್ಯಗ್ರಹಣ ಎಂದು ಕರೆಯಲಾಗುವ ಇಂದಿನ ವಿದ್ಯಾಮಾನವು, 2026 ಫೆಬ್ರವರಿ 17 ಮಂಗಳವಾರ ಅಂದರೆ ಇಂದು ಮಧ್ಯಾಹ್ನ 3 ಗಂಟೆ 26 ನಿಮಿಷಕ್ಕೆ ಸರಿಯಾಗಿ ಆರಂಭ ಆಗಲಿದೆ. ಸೂರ್ಯಗ್ರಹಣ ಪರಿಣಾಮ ಸಂಜೆ 7 ಗಂಟೆ 58 ನಿಮಿಷದ ತನಕವೂ ಮುಂದುವರಿಯಲಿದ್ದು, ಆ ನಂತರ ಗ್ರಹಣ ಮುಕ್ತವಾಗಲಿದೆ ಭೂಮಿ. ಈ ಮೂಲಕ 2026ರ ಮೊದಲ ಸೂರ್ಯಗ್ರಹಣ ಒಟ್ಟು 4 ಗಂಟೆ 32 ನಿಮಿಷಗಳ ಕಾಲ ಸಂಭವಿಸಲಿದ್ದು, ಇಡೀ ಜಗತ್ತಿನ ಗಮನ ಇದೀಗ ಸೂರ್ಯನತ್ತ ನೆಟ್ಟಿದೆ. ಹಾಗೇ, ಇಂದು ಸಂಭವಿಸುವ ಕಂಕಣ ಸೂರ್ಯಗ್ರಹಣಕ್ಕೆ ಹಲವು ಪರಿಹಾರ ಕ್ರಮಗಳು ಕೂಡ ಇವೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ ಆಗಿದೆ.
ಸೂರ್ಯಗ್ರಹಣದ ಪರಿಹಾರ ಕ್ರಮಗಳು
ಕಂಕಣ ಸೂರ್ಯಗ್ರಹಣ ಇಂದು ಫಾಲ್ಗುಣ ಮಾಸದ ಅಮಾವಾಸ್ಯೆ ತಿಥಿಯಲ್ಲಿ ಸಂಭವಿಸುತ್ತಿದ್ದು, ಈ ಹಿನ್ನೆಲೆ ನೀವು ಈ ಮಂತ್ರಗಳನ್ನ ಜಪಿಸಬಹುದು. ಓಂ ಸೂರ್ಯಾಯ ನಮಃ & ಓಂ ಘ್ರಾಣಿ ಸೂರ್ಯಾಯ ನಮಃ ಮಂತ್ರ ಜಪಿಸಬಹುದು. ಹಾಗೂ ಇದರ ಜೊತೆಗೆ ಇಂದಿನ ಕಂಕಣ ಸೂರ್ಯಗ್ರಹಣ ಭಾರತದ ನೆಲದಲ್ಲಿ ಕಾಣಿಸಿಕೊಳ್ಳದೇ ಇದ್ದರೂ, ಕೆಲವರು ಶಾಂತಿ & ಶುಭಕ್ಕಾಗಿ ಹಲವು ಪರಿಹಾರ ಕ್ರಮಗಳನ್ನು ಅನುಸರಿಸುತ್ತಾರೆ. ಪ್ರಮುಖವಾಗಿ, ಸೂರ್ಯ ದೇವರಿಗೆ ನೀರು ಅರ್ಪಿಸಬೇಕು. ಇದರ ಜೊತೆ ಸೂರ್ಯ ಮಂತ್ರ ಜಪಿಸುವುದು, ಸೂರ್ಯನ ಪ್ರಭಾವದಲ್ಲಿರುವವರು ನೀರಿಗೆ ಬೆಲ್ಲವನ್ನ ಸೇರಿಸಿ ಅರ್ಪಿಸಬಹುದು. ಇಷ್ಟು ಕ್ರಮಗಳನ್ನು ಕಂಕಣ ಸೂರ್ಯಗ್ರಹಣ ಹಿನ್ನೆಲೆ ಅನುಸರಿಸಬಹುದು. ಹಾಗೇ ಸೂರ್ಯಗ್ರಹಣ ವೀಕ್ಷಣೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು, ಏಕೆಂದರೆ ನೇರವಾಗಿ ಬರಿಗಣ್ಣಲ್ಲಿ ಸೂರ್ಯಗ್ರಹಣ ವೀಕ್ಷಣೆ ಅಪಾಯಕಾರಿ ಆಗಿದ್ದು, ಸೂಕ್ತ ರಕ್ಷಣಾ ಉಪಕರಣ ಬಳಸಿ ಮಾತ್ರ ವೀಕ್ಷಿಸಬೇಕು.
ಯಾವ ಯಾವ ದೇಶದಲ್ಲಿ ಗ್ರಹಣ?
2026 ಫೆಬ್ರವರಿ 17 ಮಂಗಳವಾರ ಸಂಭವಿಸುತ್ತಿರುವ ಕಂಕಣ ಸೂರ್ಯಗ್ರಹಣ, ದಕ್ಷಿಣ ಆಫ್ರಿಕಾ ಸೇರಿ ಜಿಂಬಾಬ್ವೆ, ಬೋತ್ಸ್‌ವಾನಾ, ನಮೀಬಿಯಾ, ಮಾರಿಷಸ್, ತಾಂಜೇನಿಯಾ ಭಾಗದಲ್ಲಿ ಕಾಣಸಿಗಲಿದೆ. ಆಫ್ರಿಕಾದ ದೇಶಗಳ ಜೊತೆಗೆ ದಕ್ಷಿಣ ಅಮೆರಿಕದ ಹಲವು ಭಾಗದಲ್ಲಿ ಇಂದಿನ ಕಂಕಣ ಸೂರ್ಯಗ್ರಹಣ ಗೋಚರಿಸಲಿದ್ದು, ಅರ್ಜೆಂಟಿನಾ, ಅಂಟಾರ್ಟಿಕಾ ಭಾಗವೂ ಸೇರಿದಂತೆ ಸುತ್ತಮುತ್ತ ಇರುವ ಹಲವು ಪ್ರದೇಶದಲ್ಲಿ ಕಾಣಲಿದೆ. ಆದರೆ ಭಾರತದಲ್ಲಿ ಇಂದಿನ ಕಂಕಣ ಸೂರ್ಯಗ್ರಹಣ ಗೋಚರಿಸುವುದಿಲ್ಲ, ಹೀಗಾಗಿ ಜೋತಿಷ್ಯದ ಪ್ರಕಾರ ಯಾವುದೇ ಪ್ರಭಾವ ಇರುವುದಿಲ್ಲ ಎನ್ನಲಾಗಿದೆ. ಮತ್ತೊಂದು ಕಡೆಯಲ್ಲಿ ವಿಜ್ಞಾನಿಗಳು ಹಾಗೂ ಖಗೋಳ ವಿಜ್ಞಾನ ಪ್ರಿಯರು ದೂರದರ್ಶಕ ಹಿಡಿದು ಆಕಾಶದತ್ತ ಮುಖಮಾಡಿ ಕೂತಿದ್ದಾರೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications