ಶುಕ್ರ ಉದಯದಿಂದ ಬೆಳಗುವುದು ಈ ರಾಶಿಯವರ ಅದೃಷ್ಟ : ಪ್ರತೀ ಹಂತದಲ್ಲೂ ಸಕ್ಸಸ್, ದುಡ್ಡು ಕೈ ಸೇರುತ್ತೆ
Shukra Udaya 2026 : ಜ್ಯೋತಿಷ್ಯದ ಪ್ರಕಾರ ಶುಕ್ರ ಗ್ರಹವನ್ನು ಸಂಪತ್ತು, ವೈಭವ, ಸೌಕರ್ಯ, ಪ್ರೀತಿ ಮತ್ತು ಐಷಾರಾಮಿಗೆ ಕಾರಣ. ಅಸ್ತವಾಗಿರುವ ಶುಕ್ರ ಅಕ್ಟೋಬರ್ 28ಕ್ಕೆ ಮತ್ತೆ ಉದಯಿಸುತ್ತಾನೆ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಯಾವುದೇ ಗ್ರಹದ ಅಸ್ತ ಶುಭ ಫಲ ನೀಡುವುದಿಲ್ಲ. ಇದೀಗ ಶುಕ್ರನ ಉದಯ ಸೌಕರ್ಯ, ಆರ್ಥಿಕ ಸ್ಥಿತಿ ಮತ್ತು ಪ್ರೇಮ ಸಂಬಂಧದ ವಿಷಯದಲ್ಲಿ ಸಕಾರಾತ್ಮಕ ಬದಲಾವಣೆ ತರಬಹುದು.
Shukra Udaya 2026 ಶುಭ ಫಲ:
ಈ ಅವಧಿಯಲ್ಲಿ ಕೆಲವು ರಾಶಿಯವರು ವೃತ್ತಿಪರ ಪ್ರಗತಿಯಾಗುವುದು. ಹೊಸ ಅವಕಾಶ ಮತ್ತು ಆರ್ಥಿಕ ಲಾಭದ ದೃಷ್ಟಿಯಿಂದ ಮೂರು ನಿರ್ದಿಷ್ಟ ರಾಶಿಯವರಿಗೆ ತುಂಬಾ ಶುಭಕರವಾಗಿರುವುದು. ಉದ್ಯೋಗಿಗಳಿಗೆ ಹೊಸ ಜವಾಬ್ದಾರಿ ಸಿಗುವುದು. ಉದ್ಯಮಿಗಳಿಗೆ ವ್ಯವಹಾರದಲ್ಲಿ ಲಾಭವಾಗುವದು. ಹೊಸ ಹೊಸ ಅವಕಾಶ ಸಿಗುವುದು. ಶುಕ್ರನ ಉದಯ ಯಾವ ರಾಶಿಯವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ನೋಡೋಣ.

ಮೇಷ ರಾಶಿ (Aries):
ಮೇಷ ರಾಶಿಯಲ್ಲಿ ಜನಿಸಿದವರ ಮೇಲೆ ಶುಕ್ರ ಉದಯದ ಪ್ರಭಾವ ಹೆಚ್ಚಾಗಿರುವುದು. ವೃತ್ತಿಪರ ಪ್ರಗತಿಗೆ ಹೊಸ ಅವಕಾಶ ಸಿಗುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಮನ್ನಣೆ ಸಿಗುವುದು. ಮೇಲಧಿಕಾರಿಗಳ ಬೆಂಬಲ ಇರುವುದು. ಹೊಸ ವ್ಯವಹಾರ ಶುರು ಮಾಡಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಾಗುವುದು. ಆದಾಯ ಹೆಚ್ಚಾಗುವುದು. ಬಡ್ತಿ ( promotion) ಕೂಡಾ ಸಿಗುವ ಅವಕಾಶ ಇರುವುದು. ವ್ಯವಹಾರ ಇರಲಿ, ವೃತ್ತಿ ಇರಲಿ ಸಕ್ಸಸ್ ಸಿಗುವುದು. ಹೊಸ ಕೆಲಸ ಸಿಗುವ ಸಾಧ್ಯತೆ ಇದೆ. ಹಣದ ಸಮಸ್ಯೆ ನಿವಾರಣೆಯಾಗುವುದು. ಅವಿವಾಹಿತರಿಗೆ ಮದುವೆ ಯೋಗ ಕೂಡಿ ಬರುವುದು. ಕಚೇರಿ ಇರಲಿ, ಮನೆ ಇರಲಿ ನಿಮ್ಮ ಮಾತಿಗೆ ಮನ್ನಣೆ ಇರುವುದು. ಹಣದ ಹರಿವು ಹೆಚ್ಚಾಗುವುದು.
ತುಲಾ ರಾಶಿ (Libra):
ತುಲಾ ರಾಶಿಯ ಅಧಿಪತಿ ಶುಕ್ರ. ಹಾಗಾಗಿ ಶುಕ್ರನ ಉದಯ ಈ ರಾಶಿಯವರಿಗೆ ಹೆಚ್ಚು ಫಲಪ್ರದಯವಾಗಿರುವುದು. ಸಾಲದಿಂದ ಮುಕ್ತಿ ಸಿಗುವುದು. ಉದ್ಯೋಗದಲ್ಲಿ ಬಡ್ತಿ ಸಿಗುವುದು. ಹೊಸ ಜವಾಬ್ದಾರಿ ಹೆಗಲೇರುವುದು. ಇದರಿಂದ ಹೆಚ್ಚು ಲಾಭವಾಗುವುದು. ಉತ್ತಮ ವೃತ್ತಿ ಅವಕಾಶ ಪಡೆಯುವ ಸಾಧ್ಯತೆಯಿದೆ. ಉದ್ಯಮಿಗಳಿಗೆ ಹೊಸ ಗ್ರಾಹಕರು ಸಿಗುವರು. ಹೆಚ್ಚು ಲಾಭ ಸಿಗುವ ಡೀಲಿಗೆ ಸಹಿ ಹಾಕುವ ಸಾಧ್ಯತೆ ಇದೆ. ಹಣಕಾಸಿನ (finance) ವಿಷಯದಲ್ಲಿ ತೆಗೆದುಕೊಳ್ಳುವ ಸರಿಯಾದ ನಿರ್ಧಾರ ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಬಹುದು. ಆದಾಯದ ಹೊಸ ಮೂಲ ಹುಟ್ಟಿಕೊಳ್ಳುವುದು. ಸಾಲ ನೀಡಿದ ಹಣ ವಾಪಸ್ ಬರುವುದು. ಬಹಳ ಸಮಯದಿಂದ ನಿರೀಕ್ಷೆ ಮಾಡುತ್ತಿದ್ದ ಗುಡ್ ನ್ಯೂಸ್ ಸಿಗುವುದು. ಸ್ವಂತ ಮನೆ ನಿರ್ಮಾಣಕ್ಕೆ ಇಳಿಯಬಹುದು. ಹೊಸ ವಾಹನ ಖರೀದಿ ಯೋಗವೂ ಇದೆ. ಈ ಅವಧಿ ನಿಮ್ಮ ಜೀವನದ ಬೆಸ್ಟ್ ಟೈಂ ಆಗಿರುವುದು.
ಕುಂಭ ರಾಶಿ (Aquarius):
ಕುಂಭ ರಾಶಿಯಲ್ಲಿ ಜನಿಸಿದವರು ವೃತ್ತಿ ಮತ್ತು ಹಣಕಾಸಿನ ದೃಷ್ಟಿಯಿಂದ ಸಕಾರಾತ್ಮಕ ಅವಕಾಶ ಪಡೆಯಬಹುದು. ಉದ್ಯೋಗದಲ್ಲಿರುವವರಿಗೆ ಹೊಸ ಜವಾಬ್ದಾರಿ, ಬಡ್ತಿ ಸಿಗುವುದು. ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ. ಹೊಸ ಸಂಪರ್ಕಗಳಿಂದ ಉದ್ಯಮಿಗಳಿಗೆ ಲಾಭವಾಗುವುದು. ಹೊಸ ವ್ಯವಹಾರ ಶುರು ಮಾಡಬಹುದು. ಈ ಅವಧಿಯಲ್ಲಿ ಮಾಡುವ ಎಲ್ಲಾ ಕೆಲಸ ಯಶಸ್ಸಿನತ್ತಲೇ ಸಾಗುವುದು. ಸೃಜನಶೀಲ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಸಿಗುವುದು. ಖರ್ಚು ಮತ್ತು ಹೂಡಿಕೆ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ. ವಿದ್ಯಾರ್ಥಿಗಳಿಗೆ ಈ ಸಮಯ ಅನುಕೂಲಕರವಾಗಿರುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ಲಾಭವಾಗುವುದು.


Click it and Unblock the Notifications
