Shani Vakri: ಈ ತಿಂಗಳು 3 ರಾಶಿಯವರಿಗೆ ಸವಾಲಿನ ಸಮಯ; ಹಣ–ಆರೋಗ್ಯದ ವಿಚಾರದಲ್ಲಿ ಹುಷಾರಾಗಿರಿ!

Shani vakri 2026: ಶನಿ ಎಂದರೆ ಕರ್ಮಕ್ಕೆ ತಕ್ಕ ಫಲ ಕೊಡುವವ. ಶನಿಯ ಸಂಚಾರದಲ್ಲಿ ಯಾವಾಗ ಬದಲಾವಣೆಯಾದರೂ ಅದು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಶನಿ ಈಗ ಮೀನ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಾ ಇದ್ದಾನೆ. ಅಕ್ಟೋಬರ್ ತಿಂಗಳು ಪೂರ್ತಿ ಶನಿಯ ಸಂಚಾರ ಇದೇ ಸ್ಥಿತಿಯಲ್ಲಿ ಇರುವುದು. ಈ ಸಮಯದಲ್ಲಿ, ಕೆಲವು ರಾಶಿಯವರು ತುಂಬಾ ಜಾಗರೂಕರಾಗಿರಬೇಕು. ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ಹಣ, ಕೆಲಸ ಕುಟುಂಬದ ವಿಷಯ ಬಂದಾಗ ಮೈಯೆಲ್ಲಾ ಕಣ್ಣಾಗಿರಬೇಕು.

Shani Vakri: ಶನಿಯ ಹಿಮ್ಮುಖ ಚಲನೆ

ಜುಲೈ 26ಕ್ಕೆ ಶನಿಯ ಹಿಮ್ಮುಖ ಚಲನೆ ಶುರುವಾಗಿದೆ. ಮುಂದಿನ ಡಿಸೆಂಬರ್ 11ರವರೆಗೆ ಇದೇ ಸ್ಥಿತಿ. ಶನಿಯು ಹಿಮ್ಮುಖವಾಗಿ ಚಲಿಸುವಾಗ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಕಾಗುವುದಿಲ್ಲ. ಒಂದೊಂದಾಗಿಯೇ ಕಷ್ಟಗಳು ಬೆನ್ನು ಹತ್ತುವುದು. ಆಗಿಯೇ ಬಿಡುತ್ತದೆ ಎನ್ನುವ ಕೆಲಸ ಕೂಡಾ ಕೆಟ್ಟು ಹೋಗುವುದು. ತೆಗೆದುಕೊಂಡ ನಿರ್ಧಾರವನ್ನು ಸರಿಯಾಗಿ ಪರಿಶೀಲಿಸಿ ನೋಡಬೇಕು. ಅಕ್ಟೋಬರ್ ತಿಂಗಳಲ್ಲಿ, ಮೂರು ರಾಶಿಯವರು ಕೆಲವು ವಿಷಯಗಳ ಬಗ್ಗೆ ಹುಷಾರಾಗಿರಬೇಕು.

Shani Vakri Saturn Retrograde 2026 Tough Time For 4 Zodiac Sign Financial Loss Remedies For Problems

ಸಿಂಹ ರಾಶಿ (Leo)

ಸಿಂಹ ರಾಶಿಯ ಅಧಿಪತಿ ಸೂರ್ಯ. ಸೂರ್ಯ ಶನಿಯ ತಂದೆ. ಆದರೆ ಇವೆರಡೂ ಪರಸ್ಪರ ವಿರುದ್ಧ ಗ್ರಹಗಳು. ಸಿಂಹ ರಾಶಿಯವರು ಶನಿ ಸಂಚಾರದ ಸಮಯದಲ್ಲಿ ಆರೋಗ್ಯ, ಉದ್ಯೋಗ ಮತ್ತು ಕೌಟುಂಬಿಕ ವಿಷಯಗಳ ಬಗ್ಗೆ ಹುಷಾರಾಗಿರಬೇಕು. ವ್ಯವಹಾರದಲ್ಲಿ ಹಿನ್ನೆಡೆಯಾಗುವುದು. ಸಾಧ್ಯವಾದರೆ ಪ್ರಮುಖ ಹಣಕಾಸಿನ ನಿರ್ಧಾರ ಮುಂದೂಡುವುದು ಒಳ್ಳೆಯದು. ನಿರ್ಧಾರ ತೆಗೆದುಕೊಳ್ಳುವಾಗ ಆತುರ ಪಡಬೇಡಿ. ಸಣ್ಣ ಸಣ್ಣ ವಿಷಯಗಳಿಗೆ ವಾದಕ್ಕೆ ಇಳಿಯಬೇಡಿ. ನೀವೇ ಸೋಲಬೇಕಾಗುವುದು. ತಾಳ್ಮೆಯಿಂದ ವರ್ತಿಸಬೇಕು. ಹೊಸ ಕೆಲಸಕ್ಕೆ ಟ್ರೈ ಮಾಡದಿರುವುದು ಒಳ್ಳೆಯದು.

ಮಕರ ರಾಶಿ (Capricorn)

ಮಕರ ರಾಶಿಯವರು ಹಣದ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಮಕರ ರಾಶಿಯ ಅಧಿಪತಿ ಶನಿ. ಶನಿಯ ವಕ್ರ ಅಥವಾ ಹಿಮ್ಮುಖ ಚಲನೆಯಿಂದ ಹಣದ ಸಮಸ್ಯೆ ಎದುರಾಗುವುದು. ಹಳೆಯ ಸಾಲದಿಂದ ಸಮಸ್ಯೆ ಹೆಚ್ಚಾಗುವುದು. ಹೊಸ ಆರ್ಥಿಕ ನಿರ್ಧಾರದ ಬಗ್ಗೆ ಎರಡು ಬಾರಿ ಯೋಚನೆ ಮಾಡಿ. ಹೊಸ ಕೆಲಸ, ವ್ಯವಹಾರಕ್ಕೆ ಕೈ ಹಾಕದಿರುವುದೇ ಬುದ್ದಿವಂತಿಕೆ. ಖರ್ಚು, ವೆಚ್ಚಗಳ ಬಗ್ಗೆ ಹುಷಾರಾಗಿರಿ. ಎಲ್ಲಾ ಕೆಲಸ ನಿಧಾನವಾಗುವುದು. ಮಾನಸಿಕ ಒತ್ತಡ ಹೆಚ್ಚಾಗುವುದು. ಈ ಸಮಯದಲ್ಲಿ ತಾಳ್ಮೆಯಿಂದ ಇರುವುದು ಮುಖ್ಯ. ಯಾರೋ ಮಾಡಿದ ತಪ್ಪಿನ ಹೊರ ನೀವು ಹೊರಬೇಕಾಗಬಹುದು.

ಕರ್ಕಾಟಕ ರಾಶಿ (Cancer)

ಅಕ್ಟೋಬರ್‌ನಲ್ಲಿ ಕರ್ಕಾಟಕ ರಾಶಿಯವರು ಕುಟುಂಬ, ಉದ್ಯೋಗ ಮತ್ತು ಹಣದ ವಿಷಯದಲ್ಲಿ ಏರಿಳಿತವಾಗುವುದು. ಇದ್ದಕ್ಕಿದ್ದಂತೆ ಹಣದ ಸಮಸ್ಯೆ ಎದುರಾಗುವುದು. ಆರ್ಥಿಕ ನಿರ್ಧಾರ ತೆಗೆದುಕೊಳ್ಳಲು ಹೋಗಬೇಡಿ. ಎಲ್ಲೂ ಹೂಡಿಕೆ ಮಾಡಬೇಡಿ. ಯಾರೊಂದಿಗೂ ಜಗಳ ಮಾಡಲು ಹೋಗಬೇಡಿ. ಕೋಪ ಮಾಡಿಕೊಳ್ಳುವುದರಿಂದ ನಿಮಗೇ ನಷ್ಟವಾಗುವುದು. ಕೆಲವೊಮ್ಮೆ ಆತ್ಮವಿಶ್ವಾಸ ಕಡಿಮೆಯಾಗುವುದು. ನಿರ್ಧಾರ ತೆಗೆದುಕೊಳ್ಳುವಾಗ ಆತುರ ಪಡದೇ ತಾಳ್ಮೆಯಿಂದ ಇರುವುದು ಒಳ್ಳೆಯದು. ಆತಂಕ ಹೆಚ್ಚಾಗುವುದು.

ನಕಾರಾತ್ಮಕ ಪರಿಣಾಮದಿಂದ ಮುಕ್ತಿ ಪಡೆಯುವುದು ಹೇಗೆ?

ಶನಿ ಸಂಚಾರದ ಸಮಯದಲ್ಲಿ ಎದುರಾಗುವ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ಕೆಲವು ಪರಿಹಾರವನ್ನು ಅನುಸರಿಸಬೇಕು. ಮಂಗಳವಾರ ಮತ್ತು ಶನಿವಾರ ಹನುಮಾನ್ ಚಾಲೀಸಾ ಪಠಿಸಬೇಕು. ಓಂ ಶಂ ಶನಿಶ್ಚರಾಯ ನಮಃ ಮಂತ್ರವನ್ನು ಪಠಿಸಬೇಕು. ಶನಿವಾರ ಕಪ್ಪು ಎಳ್ಳು, ಉದ್ದಿನ ಬೇಳೆ, ಸಾಸಿವೆ ಎಣ್ಣೆ ಅಥವಾ ಕಪ್ಪು ಬಟ್ಟೆಗಳನ್ನು ದಾನ ಮಾಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+