Shani Vakra 2025: ಶನಿ ವಕ್ರ ಸಂಚಾರ- ಈ ರಾಶಿಗಳಿಗೆ ಅದೃಷ್ಟದ ಬಾಗಿಲು ಓಪನ್
ಗ್ರಹಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ರಾಶಿಯನ್ನು ಬದಲಾಯಿಸುತ್ತವೆ. ನವಗ್ರಹಗಳಲ್ಲಿ ಶನಿಗೆ ವಿಶೇಷ ಸ್ಥಾನವಿದೆ. ಆದ್ದರಿಂದ ಶನಿಯ ಚಲನೆಯಲ್ಲಿನ ಬದಲಾವಣೆ, ನೇರ ಸಂಚಾರ ಅಥವಾ ಹಿಮ್ಮುಖವಾಗುವುದು ಮುಖ್ಯವೆಂದು ಪರಿಗಣಿಸಲಾಗುತ್ತದೆ.
ಶನಿ ಒಂದು ಗ್ರಹ. ಅದರ ಸ್ಥಾನ ಬದಲಾವಣೆ ಜನರ ಜೀವನವನ್ನು ಹಾಳುಮಾಡುತ್ತದೆ. ಅಲ್ಲದೆ ಶನಿಯ ನಿಧಾನಗತಿಯ ಚಲನೆಯ ಶುಭ ಮತ್ತು ಅಶುಭ ಪರಿಣಾಮಗಳು ಜನರ ಜೀವನದ ಮೇಲೆ ದೀರ್ಘಕಾಲ ಉಳಿಯುತ್ತವೆ. ಶನಿ ಮಾರ್ಚ್ 29 ರಂದು ಮೀನ ರಾಶಿಗೆ ಸಾಗಿದೆ. ಶೀಘ್ರದಲ್ಲೇ ಅದೇ ರಾಶಿಯಲ್ಲಿ ಹಿಮ್ಮುಖವಾಗಲಿದೆ. ಶನಿಯು ಹಿಮ್ಮುಖವಾಗುವುದು ಎಂದರೆ ಹಿಮ್ಮುಖ ದಿಕ್ಕಿನಲ್ಲಿ ಚಲಿಸುವುದು ಎಂದರ್ಥ.
ಜುಲೈ 13ರ ಭಾನುವಾರ ಬೆಳಿಗ್ಗೆ 09:36 ರಿಂದ ಶನಿಗ್ರಹ ಹಿಮ್ಮುಖವಾಗಿ ಚಲಿಸಲಿದ್ದು, ನವೆಂಬರ್ 28, 2025 ರಂದು ನೇರ ಚಲನೆಗೆ ತಿರುಗಲಿದೆ. ಶನಿಯು ಸಂಪೂರ್ಣ 138 ದಿನಗಳವರೆಗೆ ಹಿಮ್ಮುಖ ಚಲನೆಯಲ್ಲಿ ಚಲಿಸುವ ಮೂಲಕ ಅನೇಕ ರಾಶಿಗಳ ಮೇಲೆ ಹಾನಿಯನ್ನುಂಟುಮಾಡುತ್ತಾನೆ. ಆದರೆ ಶನಿಯ ಈ ಹಿಮ್ಮುಖ ಸಂಚಾರ ಕೆಲ ರಾಶಿಯವರಿಗೆ ಉತ್ತಮ ಫಲಗಳನ್ನು ನೀಡಲಿದೆ. ಹಾಗಾದರೆ ಆ ರಾಶಿಗಳು ಯಾವುವು ಎಂದು ಈಗ ತಿಳಿಯೋಣ.
ಶನಿ ವಕ್ರ ಸಂಚಾರ ಪರಿಣಾಮ:-

ಮಿಥುನ ರಾಶಿ:
ಶನಿಯು ನಿಮ್ಮ ರಾಶಿಯಿಂದ 10ನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸುತ್ತದೆ. ಅದು ಕರ್ಮ ಸ್ಥಾನವಾಗಿದೆ. ಹಿಮ್ಮುಖ ಶನಿಯು ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಅನಿರೀಕ್ಷಿತ ಪ್ರಯೋಜನಗಳನ್ನು ನೀಡುತ್ತದೆ. ಆರ್ಥಿಕ ಲಾಭ ದೊರೆಯಲಿದ್ದು ಪ್ರಗತಿಯ ಅವಕಾಶಗಳು ಸೃಷ್ಟಿಯಾಗುತ್ತವೆ.
ಶನಿ ದೇವನ ಕೃಪೆಯಿಂದಾಗಿ ನಿಮ್ಮ ಶತ್ರುಗಳು ನಾಶವಾಗುತ್ತಾರೆ. ಕೆಲಸದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಶಕ್ತಿ ನಿಮಗೆ ಕರುಣಿಸಲಿದ್ದಾನೆ ಶನಿ ದೇವ. ಮನೆಯಲ್ಲಿ ಹಿಂದೆ ಇದ್ದ ಸಮಸ್ಯೆಗಳು ಬಗೆಹರಿಯುತ್ತವೆ. ದಾಂಪತ್ಯದಲ್ಲಿ ನೀವು ಅದ್ಭುತವಾಗಿರುತ್ತೀರಿ.

ಕರ್ಕಾಟಕ ರಾಶಿ:
ಶನಿಯ ಹಿಮ್ಮುಖ ಚಲನೆ ಕರ್ಕ ರಾಶಿಯವರಿಗೆ ಶುಭವೆಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ಶನಿಯು ನಿಮ್ಮ ಒಂಬತ್ತನೇ ಮನೆಯಲ್ಲಿ ಅಂದರೆ ಅದೃಷ್ಟ ಮನೆಯಲ್ಲಿ ಹಿಮ್ಮುಖವಾಗಿ ಚಲಿಸುತ್ತಾನೆ. ಇದರಿಂದಾಗಿ ನೀವು ಪ್ರತಿಯೊಂದು ಕೆಲಸದಲ್ಲೂ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಧಾರ್ಮಿಕ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ.
ನಿಮ್ಮ ಕೆಲಸದ ಸ್ಥಳದಲ್ಲಿ ಒತ್ತಡ ಕಡಿಮೆಯಾಗಲಿದೆ. ಎಲ್ಲಾ ಸಮಸ್ಯೆಗಳು ನಿಮ್ಮಿಂದ ದೂರ ಆಗಲಿದೆ. ಅದೃಷ್ಟದ ಬಾಗಿಲನ್ನು ಶನಿ ದೇವ ತೆರೆಯಲಿದ್ದಾನೆ. ಇದರಿಂದಾಗಿ ಧನಾಗಮನವಾಗಲಿದೆ. ಸಂಪತ್ತು ಹೆಚ್ಚಾಗುವ ಸಮಯ ಇದಾಗಿರುತ್ತದೆ. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದು.

ಕುಂಭ ರಾಶಿ:
ಕುಂಭ ರಾಶಿಯ ಎರಡನೇ ಮನೆಯಲ್ಲಿ ಶನಿಯು ಹಿಮ್ಮುಖವಾಗಿ ಚಲಿಸುತ್ತಾನೆ. ಜ್ಯೋತಿಷ್ಯದಲ್ಲಿ ಇದನ್ನು ಸಂಪತ್ತು ಮತ್ತು ಮಾತಿನ ಮನೆ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಭೌತಿಕ ಸೌಕರ್ಯಗಳು ಹೆಚ್ಚಾಗುತ್ತವೆ. ಖ್ಯಾತಿ ಮತ್ತು ಗೌರವವೂ ಹೆಚ್ಚಾಗುತ್ತದೆ. ಆದರೆ ನೀವು ನಿಮ್ಮ ಮಾತನ್ನು ನಿಯಂತ್ರಿಸಬೇಕಾಗುತ್ತದೆ.
ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಶತ್ರುಗಳು ನಿಮ್ಮ ಮುಂದೆ ತಲೆ ಬಾಗುತ್ತಾರೆ. ಇದರಿಂದಾಗಿ ನಿಮ್ಮ ಸ್ನೇಹ ಸಂಬಂಧ ಹೆಚ್ಚಾಗುತ್ತದೆ. ಎಲ್ಲಾ ಸಂದರ್ಭದಲ್ಲಿ ಸ್ನೇಹಿತರ ಸಹಕಾರ ಸಿಗಲಿದೆ. ಮೇಲಾಧಿಕಾರಿಗಳ ಸಹಕಾರದಿಂದ ಬಡ್ತಿ ಕೂಡ ಸಿಗಬಹುದು. ಎಲ್ಲಾ ಹೊಸ ಕಾರ್ಯಗಳು ಪ್ರಾರಂಭಿಸುವ ಮುನ್ನ ಶನಿ ದೇವನ ಪೂಜೆ ಮಾಡಿ ಕೆಲಸ ಆರಂಭಿಸುವುದು ಉತ್ತಮ.












Click it and Unblock the Notifications