ಇನ್ನೊಂದು ವಾರದಲ್ಲಿ ಈ ರಾಶಿಯವರಿಗೆ ಶುಭಕಾಲ ಆರಂಭ: ಕಷ್ಟಕ್ಕೆ ತೆರೆ, ಕೈ ಹಿಡಿಯುವುದು ಅದೃಷ್ಟ
ಸೆಪ್ಟೆಂಬರ್ ತಿಂಗಳು ವಿಶೇಷ ಗ್ರಹ ಸಂಚಾರದೊಂದಿಗೆ ಆರಂಭವಾಗಲಿದೆ. ಪಂಚಾಂಗದ ಪ್ರಕಾರ, ಸೆಪ್ಟೆಂಬರ್ 1 ರಂದು ಗುರು ಮತ್ತು ಶನಿ ನವ ಪಂಚಮ ಯೋಗವನ್ನು ರೂಪಿಸುತ್ತಿದೆ. ಪಂಚಾಂಗದ ಪ್ರಕಾರ ಸೆಪ್ಟೆಂಬರ್ 1 ರ ಮಂಗಳವಾರ ಬೆಳಿಗ್ಗೆ 3:39 ಕ್ಕೆ ಗುರು ಮತ್ತು ಶನಿ 120 ಡಿಗ್ರಿ ಅಂತರದಲ್ಲಿ ಬರುತ್ತಾರೆ. ಜ್ಯೋತಿಷ್ಯದ ಪ್ರಕಾರ, ಎರಡು ಗ್ರಹಗಳು ಪರಸ್ಪರ 5 ಮತ್ತು 9 ನೇ ಮನೆಗಳಲ್ಲಿದ್ದಾಗ ಈ ನವ ಪಂಚಮ ಯೋಗ ನಿರ್ಮಾಣವಾಗುವುದು.
ಈ ಸ್ಥಾನದಲ್ಲಿ ಗುರು ಮತ್ತು ಶನಿಯ ಉಪಸ್ಥಿತಿಯು ಉದ್ಯೋಗ, ಆರ್ಥಿಕ ಪರಿಸ್ಥಿತಿ ಮತ್ತು ಶಿಕ್ಷಣದಂತಹ ವಿಷಯಗಳಲ್ಲಿ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ. ಬಹಳ ದಿನಗಳಿಂದ ಮಾಡಬೇಕು ಅಂದುಕೊಂಡಿದ್ದ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸುವುದು ಸಾಧ್ಯವಾಗುವುದು.

ಉದ್ಯೋಗ ಮತ್ತು ವ್ಯವಹಾರ ಎರಡರಲ್ಲೂ ಹೊಸ ಜವಾಬ್ದಾರಿ, ಸ್ಥಿರತೆ ಮತ್ತು ಅಭಿವೃದ್ಧಿಗೆ ಅವಕಾಶಗಳಿರುವುದು. ಆರ್ಥಿಕ ಪರಿಸ್ಥಿತಿ ಮತ್ತು ಸಮಾಜದಲ್ಲಿ ಗೌರವದಂತಹ ವಿಷಯಗಳಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು. ಈ ಯೋಗವು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೆ ವಿಶೇಷವಾಗಿ ಐದು ರಾಶಿಯವರಿಗೆ ಸೆಪ್ಟೆಂಬರ್ ತಿಂಗಳು ಹೆಚ್ಚು ಅದೃಷ್ಟದಾಯಕವಾಗಿರುವುದು.
ವೃಷಭ ರಾಶಿ (Taurus) : ಸೆಪ್ಟೆಂಬರ್ ತಿಂಗಳು ವೃಷಭ ರಾಶಿಯವರಿಗೆ ಉದ್ಯೋಗ ಮತ್ತು ಆರ್ಥಿಕ ವಿಷಯಗಳಲ್ಲಿ ಹೊಸ ಅವಕಾಶಗಳನ್ನು ತರಬಹುದು. ಕೆಲಸದಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು. ಹೊಸ ಕೆಲಸದ ಆಫರ್ ಸಿಗಬಹುದು. ವ್ಯವಹಾರದಲ್ಲಿಯೂ ಉತ್ತಮ ಲಾಭವಾಗುವುದು. ಆದಾಯವನ್ನು ಹೆಚ್ಚಿಸುವ ಪ್ರಯತ್ನಗಳು ಫಲ ನೀಡಬಹುದು. ಆರ್ಥಿಕ ಒತ್ತಡ ಕಡಿಮೆಯಾಗುವುದು. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಸಿಗುವುದು.
ಕರ್ಕಾಟಕ ರಾಶಿ (Cancer): ಕರ್ಕಾಟಕ ರಾಶಿಯವರಿಗೆ ನವಪಂಚಮ ಯೋಗವು ವಿಶೇಷವಾಗಿ ಅನುಕೂಲಕರವಾಗಿರುವುದು. ಬಾಕಿ ಉಳಿದಿರುವ ಎಲ್ಲಾ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಹೊಸ ಜವಾಬ್ದಾರಿ ನಿಮ್ಮ ಹೆಗಲೇರುವುದು. ವ್ಯವಹಾರ ಅಭಿವೃದ್ದಿಗೆ ಹೊಸ ಅವಕಾಶಗಳು ಸಿಗುವುದು. ಆದಾಯವನ್ನು ಹೆಚ್ಚಿಸಲು ಹೊಸ ಮಾರ್ಗಗಳು ತೆರೆದುಕೊಳ್ಳುವ ಸಾಧ್ಯತೆಯಿದೆ. ಹೊರಗೆ ಉಳಿದಿರುವ ಹಣ ವಾಪಸ್ ಬರುವುದು. ವಿದ್ಯಾರ್ಥಿಗಳಿಗೆ ಈ ಅವಧಿ ಅನುಕೂಲಕರವಾಗಿರುವುದು. ಸರಿಯಾದ ಮಾರ್ಗದರ್ಶನ ಸಿಗಬಹುದು. ಪರೀಕ್ಷೆಗಳು ಮತ್ತು ಸಂದರ್ಶನಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು. ಸಂಗಾತಿಯ ಬೆಂಬಲ ಸಿಗುವುದು. ಕುಟುಂಬದಲ್ಲಿ ನಿಮ್ಮ ಮಾತಿಗೆ ಮಹತ್ವ ಇರುವುದು. ಈ ತಿಂಗಳು ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ.
ವೃಶ್ಚಿಕ ರಾಶಿ (Scorpio) : ಈ ನವಪಂಚಮ ಯೋಗವು ವೃಶ್ಚಿಕ ರಾಶಿಯವರಿಗೆ ಶ್ರಮಕ್ಕೆ ತಕ್ಕ ಫಲಿತಾಂಶ ಸಿಗುವುದು. ನಿಂತು ಹೋಗಿದ್ದ ವೃತ್ತಿಪರ ಯೋಜನೆಗಳನ್ನು ಮತ್ತೆ ಆರಂಭಿಸಲು ಅವಕಾಶ ಸಿಗುವುದು. ಕೆಲಸದ ಒತ್ತಡದ ಹೊರತಾಗಿಯೂ, ನಿಮ್ಮ ಸಾಮರ್ಥ್ಯವು ಎಲ್ಲರಿಗೂ ಗೋಚರಿಸುವ ಸಾಧ್ಯತೆಯಿದೆ. ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು. ಆದಾಯದ ಜೊತೆಗೆ, ಉಳಿತಾಯವೂ ಹೆಚ್ಚಾಗುವ ಸಾಧ್ಯತೆಯಿದೆ. ಹಿಂದೆ ಮಾಡಿದ ಹೂಡಿಕೆಗಳಿಂದ ನಿರೀಕ್ಷೆಗಿಂತ ಹೆಚ್ಚು ಹಣ ಸಿಗುವುದು. ಭವಿಷ್ಯಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಫಲ ಸಿಗುವುದು.
ಧನು ರಾಶಿ (Sagitarius): ಉದ್ಯೋಗದಲ್ಲಿ ಪ್ರಗತಿಗೆ ಅವಕಾಶವಿರುವುದು. ಉದ್ಯೋಗದಲ್ಲಿ ಬಡ್ತಿ ಸಿಗುವುದು. ಹೊಸ ಜವಾಬ್ದಾರಿ ಬರುವುದು. ವ್ಯವಹಾರವನ್ನು ವಿಸ್ತರಿಸಲು ಅವಕಾಶಗಳು ಒದಗಿ ಬರುವುದು. ಹೊಸ ಗ್ರಾಹಕರು ಸಿಗಬಹುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ವೃತ್ತಿಜೀವನದ ಮೇಲೆ ಹೆಚ್ಚು ಗಮನಹರಿಸಬಹುದು. ಸಂಗಾತಿಯೊಂದಿಗೆ ಸೇರಿ ಭವಿಷ್ಯದ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವಿರಿ. ಸಾಮಾಜಿಕ ಸಂಪರ್ಕಗಳು ಹೆಚ್ಚಾಗುವ ಸಾಧ್ಯತೆಯಿದೆ. ಉತ್ತಮ ಮನ್ನಣೆ ಸಿಗುವುದು.
ಮೀನ ರಾಶಿ (Pisces): ಉದ್ಯೋಗದಲ್ಲಿ ಸ್ಥಿರತೆ ಇರುವುದು. ಹೊಸ ಜವಾಬ್ದಾರಿ ಸಿಗುವುದು. ದೀರ್ಘಕಾಲದ ಯೋಜನೆಗಳು ಪೂರ್ಣಗೊಳ್ಳುವ ಸಮಯ ಹತ್ತಿರ ಬಂದಿದೆ. ವ್ಯವಹಾರದಲ್ಲಿ ಚಿಂತನಶೀಲ ನಿರ್ಧಾರಗಳು ಉತ್ತಮ ಫಲಿತಾಂಶ ನೀಡಬಹುದು. ಸ್ಥಿರವಾದ ಆದಾಯದ ಹಾದಿ ಗಟ್ಟಿಯಾಗುವುದು. ಇಲ್ಲಿಯವರೆಗೆ ಕಾಡುತ್ತಿದ್ದ ಆರ್ಥಿಕ ಸಮಸ್ಯೆಗಳು ಬಗೆಹರಿಯುವುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಪ್ರಗತಿ ಸಾಧಿಸುವರು. ಒಂಟಿಯಾಗಿರುವವರ ಬಾಳಲ್ಲಿ ಸಂಗಾತಿಯ ಪ್ರವೇಶವಾಗುವುದು. ಕುಟುಂಬದಲ್ಲಿ ಶಾಂತಿ ಹೆಚ್ಚಾಗುವುದು.ಜೀವನದಲ್ಲಿ ಶಿಸ್ತು ಹೆಚ್ಚಾಗುವುದು.


Click it and Unblock the Notifications
