Get Updates
Get notified of breaking news, exclusive insights, and must-see stories!

September Horoscope 2023: ಸೆಪ್ಟಂಬರ್ ಮಾಸದಲ್ಲಿ ದ್ವಾದಶಿ ರಾಶಿಗಳ ಗ್ರಹಚಾರ ಫಲ ಹೇಗಿದೆ ನೋಡಿ...

ಸೆಪ್ಟಂಬರ್ ಮಾಸದಲ್ಲಿ ಗ್ರಹಗಳ ಸ್ಥಾನ ಪಲ್ಲಟನೆಯಿಂದ ಯಾವ ರಾಶಿಗಳಿಗೆ ಮಂಗಳಕರವಾಗಲಿದೆ ಮತ್ತು ಯಾವ ರಾಶಿಯ ಜನರು ಸಂಕಷ್ಟವನ್ನು ಎದುರಿಸಲಿದ್ದಾರೆ ಎಂಬ ಮಾಹಿತಿ ತಿಳಿದುಕೊಳ್ಳಿ. ಸೆಪ್ಟಂಬರ್‌ನಲ್ಲಿ ಈ ಯಾವ ರಾಶಿಗಳಿಗೆ ಆರ್ಥಿಕವಾಗಿ, ವೃತ್ತಿ ಜೀವನದಲ್ಲಿ, ಕೌಟುಂಬಿಕ ಹಾಗೂ ಪ್ರೀತಿಯ ಜೀವನದಲ್ಲಿ ಅದೃಷ್ಟದ ಯೋಗವಿದೆ, ಯಾರಿಗೆ ಅಲ್ಪ ಅದೃಷ್ಟ, ಯಾರಿಗೆ ನಷ್ಟವಾಗಲಿದೆ ತಿಳಿದುಕೊಳ್ಳುವ ಬನ್ನಿ.

01.09.23: ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ.

06.09.23 ಶ್ರೀಕೃಷ್ಣ ಜನ್ಮಾಷ್ಟಮಿ.

18.09.23 ಶ್ರೀ ಸ್ವರ್ಣಗೌರಿ ಮತ್ತು ಶ್ರೀ ವರಸಿದ್ಧಿ ವಿನಾಯಕ ವ್ರತ.

28.09.23 ಅನಂತ ಪದ್ಮನಾಭ ವ್ರತ.

September 2023 monthly horoscope for 12 zodiac signs in kannada

ಮೇಷ ರಾಶಿ

ನಿಮಗೆ ಹನ್ನೊಂದರ ಶನಿ ಅಧಿಕ ಧನ ಲಾಭ, ಕಾರ್ಯ ಸಫಲತೆಯನ್ನು ಕೊಡುತ್ತಾನೆ. ಶತ್ರುಗಳನ್ನು ದೂರ ಮಾಡುತ್ತಾನೆ. ನಾಲ್ಕನೇ ಮನೆಯ ಶುಕ್ರ ವಾಹನದಿಂದ ಲಾಭ ಮಾಡಿಸುತ್ತಾನೆ. ಗೃಹಾಲಂಕಾರಕ್ಕೆ ವಸ್ತುಗಳನ್ನು ಖರೀದಿಸುವಿರಿ. ವಜ್ರಗಳ ವ್ಯಾಪಾರಿಗಳಿಗೆ ಉತ್ತಮ ಕಾಲ. ರೇಷ್ಮೆ, ಅಲಂಕಾರ ವಸ್ತುಗಳು ಹಾಲು ಪದಾರ್ಥಗಳ ವ್ಯಾಪಾರಿಗಳಿಗೆ ಲಾಭ ಇದೆ. ಹೊಸ ವಾಹನ ಖರೀದಿಸುವ ಯೋಗವಿದೆ. ಐದನೇ ಮನೆಯಲ್ಲಿ ಬುಧ ವಿದ್ಯಾರ್ಥಿಗಳಿಗೆ ಶುಭವನ್ನು ಕೊಡುತ್ತಾನೆ. ಯೋಚಿಸಿ ಕೆಲಸ ಮಾಡುವಂತೆ ಮಾಡುತ್ತಾನೆ. ಬಂಧುವರ್ಗದಿಂದ ಸಹಕಾರ ಸಿಗುತ್ತದೆ. ನಿಮ್ಮ ರಾಶಿಯಲ್ಲೇ ಇರುವ ಗುರು-ರಾಹುವಿನಿಂದ ಖರ್ಚು ಹೆಚ್ಚಾಗುತ್ತದೆ. ಆದರೆ ಶನಿಯ ಪ್ರಭಾವದಿಂದ ಹಣದ ಒಳಹರಿವೂ ಉತ್ತಮವಾಗಿ ಇದೆ. ಆರನೇ ಮನೆಯಲ್ಲಿ ಕುಜ ಕೂಡ ನಿಮಗೆ ಧನ ಲಾಭ ಕೊಡುತ್ತಾನೆ. ಮನೆ ಖರೀದಿ ಯೋಗ ಇದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಲಾಭ ಇದೆ. ವಿದ್ಯುತ್ ಸಂಬಂಧವಾಗಿ ಕೆಲಸ ಮಾಡುವವರಿಗೂ ಲಾಭ ಇದೆ. ವ್ಯವಸಾಯಗಾರರಿಗೆ ತಮ್ಮ ಬೆಳೆಗೆ ತೃಪ್ತಿಕರವಾಗಿ ಲಾಭ ಸಿಗುತ್ತದೆ. ಭೂಮಿಗೆ ಸಂಬಂಧಿಸಿದ ವ್ಯವಹಾರಗಳು ಕೈ ಹಿಡಿಯುತ್ತದೆ. ವೃತ್ತಿಯಲ್ಲಿ ಯಶಸ್ಸು ಇದೆ. 19ರ ನಂತರ ಸೂರ್ಯನು ಕನ್ಯಾರಾಶಿಗೆ ಪ್ರವೇಶವಾದ ನಂತರ ನಿಮಗೆ ಇನ್ನೂ ಹೆಚ್ಚಿನ ಲಾಭವಿದೆ.

September 2023 monthly horoscope for 12 zodiac signs in kannada

ವೃಷಭ ರಾಶಿ

ನಿಮಗೆ ಮೂರನೇ ಮನೆಯಲ್ಲಿ ಶುಕ್ರ ನಾಲ್ಕನೇ ಮನೆಯಲ್ಲಿ ಬುಧ ಸೂರ್ಯ ಇದ್ದಾರೆ. ಮೂರನೇ ಮನೆಯ ಶುಕ್ರ ನಿಮ್ಮ ಸೌಖ್ಯವನ್ನು ವೃದ್ಧಿಸುತ್ತಾನೆ. ನಿಮಗೆ ಬೇಕಾದ ಅನುಕೂಲಗಳನ್ನು ಮಾಡಿಕೊಡುತ್ತಾನೆ. ವೃತ್ತಿಯಲ್ಲಿ ಯಶಸ್ಸು ಇದೆ. ನೀವು ಅಂದುಕೊಂಡ ಕೆಲಸಗಳು ಸುಲಲಿತವಾಗಿ ನಡೆಯುತ್ತದೆ. ನಾಲ್ಕನೇ ಮನೆಯ ಬುಧ ವಿದ್ಯಾರ್ಥಿಗಳಿಗೆ ಶುಭವನ್ನುಂಟು ಮಾಡುತ್ತಾನೆ. ಜ್ಞಾನವೃದ್ಧಿ ಮಾಡುತ್ತಾನೆ. ಸಜ್ಜನರ ವಿದ್ವಾಂಸರ ಸಂಗ ಮಾಡಿಸುತ್ತಾನೆ. ವಿದ್ವತ್ ಸಭೆಗಳಿಗೆ ಹೋಗುವ ಅವಕಾಶ ಸಿಗುತ್ತದೆ. ಅನೇಕ ಸಜ್ಜನರ ಪರಿಚಯವಾಗುತ್ತದೆ. ಇದರಿಂದ ನಿಮಗೆ ಮನಸ್ಸಿಗೆ ಸಂತೋಷ ಸಿಗುತ್ತದೆ. ಆರನೇ ಮನೆಯಲ್ಲಿ ಕೇತು ಕೂಡ ನಿಮಗೆ ಸೌಖ್ಯ, ಧೈರ್ಯವನ್ನು ಕೊಡುತ್ತಾನೆ. ಮುನ್ನುಗ್ಗಿ ಕೆಲಸ ಸಾಧಿಸುವ ಪರಾಕ್ರಮ ಕೊಡುತ್ತಾನೆ. ನಿಮಗೆ ಈಗ ವ್ಯಯ ಸ್ಥಾನದಲ್ಲಿ ರಾಹು-ಗುರು ಇದ್ದಾರೆ ಧರ್ಮ ಕಾರ್ಯಗಳಿಗೆ ಹಣ ಖರ್ಚುಮಾಡುತ್ತೀರಿ. ಹಾಗೆಯೇ ರಾಹು ಇರುವುದರಿಂದ ಅನಗತ್ಯವಾಗಿ ಹಣವೂ ಖರ್ಚಾಗುತ್ತದೆ. ಅನಗತ್ಯ ಯೋಚನೆಗಳು ನಿಮ್ಮನ್ನು ಕಾಡಿಸುತ್ತವೆ. ಭಯ ಬೇಡ ಮುಂದಿನ ತಿಂಗಳಲ್ಲಿ ರಾಹು ನಿಮಗೆ ಹನ್ನೊಂದನೇ ಮನೆಗೆ ಪ್ರವೇಶವಾದಾಗ ನಿಮಗೆ ಇನ್ನುಷ್ಟು ಶುಭಫಲಗಳು ದೊರೆಯುತ್ತದೆ.

September 2023 monthly horoscope for 12 zodiac signs in kannada

ಮಿಥುನ ರಾಶಿ

ಈಗ ನಿಮಗೆ ಹನ್ನೊಂದರಲ್ಲಿ ಗುರು-ರಾಹು ಇದ್ದು ಬಹಳ ಉತ್ತಮ ಮಟ್ಟದ ಧನ ಲಾಭ ಕೊಡಿಸುತ್ತಿದ್ದಾರೆ. ನಿಮಗೆ ಎರಡನೇ ಮನೆಯಲ್ಲಿ ಶುಕ್ರಕೂಡ ನಿಮಗೆ ಅನಂತ ಸೌಭಾಗ್ಯಗಳನ್ನು ಕೊಡುತಾನೆ. ಶುಕ್ರ ಕೂಡ ಧನಲಾಭ ಮಾಡಿಸುತ್ತಾನೆ. ಕುಟುಂಬದ ಸೌಖ್ಯವನ್ನು ವೃದ್ಧಿಸುತ್ತಾನೆ. ವಸ್ತ್ರಾಭರಣ ಕೊಳ್ಳುವ ಯೋಗವಿದೆ. ಶುಕ್ರ ವಾಹನಕ್ಕೆ ಅಧಿಪತಿ. ಹಾಗಾಗಿ ವಾಹನ ಉದ್ದಿಮೆದಾರರಿಗೆ ಒಳ್ಳೆಯ ವ್ಯಾಪಾರ ಅಭಿವೃದ್ಧಿ ಇದೆ. ವಾಹನ ಕೊಳ್ಳುವವರು ಕೂಡ ಈಗ ಕೊಳ್ಳುವ ಯೋಚನೆ ಮಾಡಬಹುದು. ಮೂರನೇ ಮನೆಯಲ್ಲಿ ಸೂರ್ಯ-ಬುಧ ಇದ್ದಾರೆ. ಸೂರ್ಯ ಸಿಂಹರಾಶಿಯಲ್ಲಿ 19ರ ವರೆಗೂ ಇರುತ್ತಾನೆ. ಇದು ನಿಮಗೆ ಬಹಳ ಶೌರ್ಯ ಸಾಹಸಗಳನ್ನು ಕೊಡುತ್ತದೆ. ಸರ್ಕಾರಿ ಉದ್ಯೋಗದವರಿಗೆ ತುಂಬಾ ಒಳ್ಳೆಯ ಫಲ ಸಿಗುತ್ತದೆ. ಯಾರಾದರೂ ಸರ್ಕಾರದ ಹೊರಗುತ್ತಿಗೆ ಅಥವಾ ಅದಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಮಾಡುತ್ತಿದ್ದರೆ ಅಂಥವರಿಗೆ ಬೇಗ ಬಿಲ್ ಪಾಸ್ ಆಗಿ ಹಣ ದೊರೆಯುತ್ತದೆ. ಸರ್ಕಾರಿ ಕೆಲಸಗಳಿಗೆ ಪ್ರಯತ್ನ ಮಾಡುತ್ತಿದ್ದರೆ ಈಗ ಸಿಗುವ ಸಾಧ್ಯತೆ ಇದೆ. ಯುಪಿಎಸ್ ಪರೀಕ್ಷೆಗಳನ್ನು ಬರೆದವರಿಗೆ ಒಳ್ಳೆಯ ಫಲಿತಾಂಶ ನಿರೀಕ್ಷಿಸಬಹುದು. ನಿಮಗೆ ಜೀವಕಾರಕ ಗುರು ಹನ್ನೊಂದನೇ ಮನೆಯಲ್ಲಿ ಇದ್ದು ಬಹಳಷ್ಟು ಶುಭ ಫಲಗಳನ್ನು ಕೊಡುತ್ತಾನೆ. ಅವಿವಾಹಿತರಿಗೆ ವಿವಾಹ ಯೋಗ ಇದೆ.

September 2023 monthly horoscope for 12 zodiac signs in kannada

ಕಟಕ ರಾಶಿ

ಹನ್ನೊಂದನೇ ಮನೆ ಹಾಗೂ ನಾಲ್ಕನೇ ಮನೆಯ ಅಧಿಪತಿ ಶುಕ್ರ ನಿಮ್ಮ ರಾಶಿಯಲ್ಲೇ ಇದ್ದಾನೆ. ಇದು ನಿಮಗೆ ಕೊಂಚ ನೆಮ್ಮದಿ ತಂದು ಕೊಡುತ್ತದೆ. ಈಗ ಅಷ್ಠಮ ಶನಿ ಪ್ರಭಾವದಿಂದ ಬಳುತ್ತಿದ್ದೀರಿ. ಶುಕ್ರ ನಿಮ್ಮ ರಾಶಿಯಲ್ಲಿ ಇರುವವವರೆಗೂ ನಿಮಗೆ ತಂಪು ನೀಡುತ್ತಾನೆ. ಶನಿಯ ಪ್ರಭಾವದಿಂದ ನೊಂದ ಮನಸ್ಸಿಗೆ ಸಾಂತ್ವನ ನೀಡುವ ಕೆಲಸಗಳನ್ನು ಮಾಡುತ್ತಾನೆ. ಹಣದ ಹರಿವನ್ನು ವೃದ್ಧಿಸುತ್ತಾನೆ. ಕೆಲ ದಿನಗಳಿಂದ ಅನುಭವಿಸುತ್ತಿರುವ ಅನಾರೋಗ್ಯಕ್ಕೆ ಪರಿಹಾರ ಸಿಗುತ್ತದೆ. ಎರಡನೇ ಮನೆಯಲ್ಲಿ ಬುಧ ಮತ್ತು ಸೂರ್ಯ ಇದ್ದಾರೆ. ಎರಡನೇ ಮನೆಯ ಬುಧ ಕೂಡ ಶುಭ ಫಲಗಳನ್ನು ಕೊಡುತಾನೆ. 19ರ ನಂತರ ಸೂರ್ಯ ಕನ್ಯಾರಾಶಿಗೆ ಪ್ರವೇಶವಾದಾಗ ನಿಮಗೆ ಮೂರನೇ ಮನೆಯಲ್ಲಿ ಸೂರ್ಯ-ಕುಜ ಇರುತ್ತಾರೆ ಇದಂತೂ ನಿಮಗೆ ಎಷ್ಟೋ ಸಮಾಧಾನಕರ ಅಂಶಗಳನ್ನು ನೀಡುತ್ತದೆ. ಸರ್ಕಾರಿ ಕೆಲಸಗಳು ಯಾವುದಾದರೂ ಬಾಕಿಯಿದ್ದರೆ 19ರ ನಂತರ ಪೂರೈಸುತ್ತದೆ. ನೀವು ಬ್ಯಾಂಕ್ ಲೋನ್ ಪ್ರಯತ್ನ ಪಡುತ್ತಿದ್ದರೆ 19ರ ನಂತರ ಶುಭಫಲಗಳು ಇವೆ. ಮನೆ ಆಸ್ತಿ ಕೊಳ್ಳುವ ಅಥವಾ ಮಾರಾಟ ಮಾಡುವ ಸಂದರ್ಭ ಇದ್ದರೆ ಕುಜ ಮೂರನೇ ಮನೆಯಲ್ಲಿ ಇರುವುದರಿಂದ ಪ್ರಯತ್ನ ಪಡಬಹುದು. ಈ ತಿಂಗಳು ಪೂರ್ತಿ ಕುಜ ಮೂರನೇ ಮನೆಯಲ್ಲಿ ಇದ್ದು ನಿಮಗೆ ಶಕ್ತಿಯನ್ನು ಕೊಡುತ್ತಾನೆ. ಆಸ್ತಿ ವಿವಾದಗಳಿದ್ದರೆ ಬಗೆಹರಿಯುತ್ತದೆ. ಕುಜ ಧನಲಾಭವನ್ನೂ ಮಾಡಿಸುತ್ತಾನೆ.

September 2023 monthly horoscope for 12 zodiac signs in kannada

ಸಿಂಹರಾಶಿ

ನಿಮ್ಮ ರಾಶಿಯ ಅಧಿಪತಿ ಸೂರ್ಯ ಈ ತಿಂಗಳ 19 ರ ವರೆಗೂ ನಿಮ್ಮ ರಾಶಿಯಲ್ಲೇ ಮಿತ್ರನಾದ ಬುಧನ ಜೊತೆ ಇರುತ್ತಾನೆ. ನಿಮ್ಮ ಮಾತುಗಳಿಗೆ ಮಹತ್ವ ನೀಡಲಾಗುತ್ತದೆ. ನಿಮ್ಮ ಮಾತಿನಿಂದ ಧನಲಾಭವೂ ಇದೆ. 19ರ ನಂತರ ಸೂರ್ಯ ನಿಮ್ಮ ರಾಶಿಯಿಂದ ಎರಡನೇ ಮನೆಗೆ ಪ್ರವೇಶವಾಗಿ ತಿಂಗಳು ಪೂರ್ತಿ ಮಿತ್ರನಾದ ಕುಜನೊಂದಿಗೆ ಇರುತ್ತಾನೆ. ಸೂರ್ಯ ಕುಜ ಯುತಿಯೋಗ ನಿಮಗೆ ಪರಾಕ್ರಮವನ್ನು ತಂದುಕೊಡುತ್ತದೆ. ಪೊಲೀಸ್, ಮಿಲಿಟರಿ, ಆಟಗಾರರು, ಸಾಹಸದ ಕೆಲಸ ಮಾಡುವವರಿಗೆ ಶುಭ ಫಲಗಳು ದೊರೆಯುತ್ತವೆ. ಒಂಬತ್ತರ ಗುರು ನಿಮಗೆ ಸಹಕಾರಿ ಆಗಿದ್ದಾನೆ. 12ನೇ ಮನೆಯಲ್ಲಿರುವ ಶುಕ್ರ ಸಹ ನಿಮಗೆ ಖುಷಿ ಉಲ್ಲಾಸ ತರುವ ಸಂದರ್ಭಗಳನ್ನು ಒದಗಿಸಿ ಕೊಡುತ್ತಾರೆ. ಈ ತಿಂಗಳು ನಿಮಗೆ ಶುಕ್ರ, ಸೂರ್ಯ, ಬುಧ, ಕೇತು ಹಾಗೂ ಗುರು ಒಳ್ಳೆಯ ಸ್ಥಾನಗಳಲ್ಲಿ ಇದ್ದು ಶುಭಫಲಗಳನ್ನು ಕೊಡುತ್ತಾರೆ. 19ರ ನಂತರ ಸೂರ್ಯ ಕುಜ ಕನ್ಯಾರಾಶಿಯಲ್ಲಿ ಒಟ್ಟಿಗೆ ಇರುವಾಗ ನಿಮಗೆ ಧನಲಾಭ ಹಾಗೂ ಇತರೆ ಅನುಕೂಲಗಳು ಒದಗಿ ಬಂದರೂ ಕುಟುಂಬದಲ್ಲಿ ಕೊಂಚ ಅಶಾಂತಿ ನೆಲೆಸುತ್ತದೆ. ನಿಮಗೆ ಕುಟುಂಬ ಸದಸ್ಯರಲ್ಲಿ ವಿರೋಧಗಳು ಎದುರಾಗಬಹುದು. ಎಚ್ಚರಿಕೆಯಿಂದ ವ್ಯವಹರಿಸಿ. ವೃತ್ತಿ ವ್ಯಾಪಾರದಲ್ಲಿ ಯಶಸ್ಸು ಇದೆ.

September 2023 monthly horoscope for 12 zodiac signs in kannada

ಕನ್ಯಾ ರಾಶಿ

ನಿಮಗೆ ಈ ತಿಂಗಳು ಹನ್ನೊಂದರಲ್ಲಿ ಶುಕ್ರ, 12ರಲ್ಲಿ ಸೂರ್ಯ ಬುಧ, ಎರಡನೇ ಮನೆಯಲ್ಲಿ ಕೇತು, ಆರರಲ್ಲಿ ಶನಿ, ಎಂಟರಲ್ಲಿ ಗುರು-ರಾಹು ಇರುತ್ತಾರೆ. ನಿಮಗೆ ಒದಗಿಬರುವ ಗ್ರಹಗಳೆಂದರೆ ಶನಿ ಹಾಗೂ ಶುಕ್ರ: ಶುಕ್ರ ನಿಮಗೆ ಒಂಬತ್ತನೇ ಹಾಗೂ ಎರಡನೇ ಮನೆಯ ಅಧಿಪತಿ. ಶುಕ್ರ ಈ ತಿಂಗಳ ಪೂರ್ತಿ ಹನ್ನೊಂದನೇ ಮನೆಯಾದ ಕಟಕ ರಾಶಿಯಲ್ಲಿ ಇರುತ್ತಾನೆ. ಸುಖಭೋಜನ, ಒಡವೆ ವಸ್ತ್ರ ಖರೀದಿ, ವಿಹಾರ ತಾಣಗಳಿಗೆ ಭೇಟಿ, ಸಂಗಾತಿಯಿಂದ ಉಡುಗೊರೆ ಇಂಥ ಮನಸ್ಸಿಗೆ ಖುಷಿ ಕೊಡುವಂಥ ಸಂಗತಿಗಳು ನಡೆಯುತ್ತದೆ. ಆರನೇ ಮನೆಯ ಶನಿ ನಿಮಗೆ ಧನಲಾಭ ಹಾಗೂ ಕೆಲಸಗಳಲ್ಲಿ ಮುನ್ನಡೆಯನ್ನು ಕೊಡುತ್ತಾನೆ. ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಇರುವ ಅಡ್ಡಿ ಆತಂಕಗಳನ್ನು ದೂರ ಮಾಡುತ್ತಾನೆ. ಶತ್ರುಗಳನ್ನು ದೂರ ಮಾಡುತ್ತಾನೆ. 19ನೇ ತಾರೀಖಿನ ವರೆಗೂ ಸೂರ್ಯ 12ನೇ ಮನೆಯಲ್ಲಿ ಇದ್ದು ಸರ್ಕಾರದ ಕೆಲಸಗಳನ್ನು ಕುಂಠಿತಗೊಳಿಸುತ್ತಾನೆ. ಬುಧ ಸಹ 12 ಮನೆಯಲ್ಲಿ ಇದ್ದು ಬಂಧುಗಳ ವಿರೋಧ ಆಗುವಂತೆ ಮಾಡುತ್ತಾನೆ. ಬಂಧುಗಳೊಡನೆ ವ್ಯವಹರಿಸುವಾಗ ಜಾಗ್ರತೆ ಇರಲಿ. ಸಾಲವಾಗಿ ಹಣ ಕೊಡಬೇಡಿ ನಷ್ಟವಾಗುತ್ತದೆ. ಎಂಟನೇ ಮನೆಯಲ್ಲಿ ಗುರು ರಾಹು ಇರುವುದು ಆರೋಗಕ್ಕೆ ತೊಂದರೆ. ಆರೋಗ್ಯದಲ್ಲಿ ಕಾಳಜಿ ಇರಲಿ. ನಿಮ್ಮ ರಾಶಿಯಲ್ಲೇ ಇರುವ ಕುಜ ಕೂಡ ನಿಮಗೆ ಅನುಕೂಲಕರವಾಗಿಲ್ಲ. ಅಪಾಯಗಳನ್ನು ತಂದೊಡ್ಡಬಹುದು. ಸುಬ್ರಹ್ಮಣ್ಯನ ಅಷ್ಟೋತ್ತರ ಜಪಿಸಿ.

September 2023 monthly horoscope for 12 zodiac signs in kannada

ತುಲಾ ರಾಶಿ

ಈ ತಿಂಗಳು ನಿಮಗೆ ಬಹಳಷ್ಟು ಗ್ರಹಗಳು ಶುಭಸ್ಥಾನಗಳಲ್ಲಿ ಇದ್ದು ನಿಮಗೆ ಅನುಕೂಲಗಳನ್ನು ಕೊಡುತ್ತಾರೆ. ಶುಕ್ರ ಹತ್ತನೇ ಮನೆಯಲ್ಲಿ, 11ನೇ ಮನೆಯಲ್ಲಿ ಸೂರ್ಯ 19 ರ ವರೆಗೂ ಮತ್ತು ಬುಧ ತಿಂಗಳು ಪೂರ್ತಿ ಇರುತ್ತಾರೆ, ಗುರು 7ನೇ ಮನೆಯಲ್ಲಿ ಇದ್ದು ನಿಮಗೆ ರಕ್ಷಕನಾಗಿ ಕಾಪಾಡುತ್ತಾನೆ. ಕೇತು ನಿಮ್ಮ ರಾಶಿಯಲ್ಲೇ ಇರುವುದು ರಾಹು ಏಳನೇ ಮನೆಯಲ್ಲಿ ಇರುವುದು ಕೊಂಚ ದೋಷಕರ. ರಾಹು ಕೇತು ಇಬ್ಬರೂ ನಿಮ್ಮ ರಾಶಿಗೆ ಮಿತ್ರರು ಹಾಗಾಗಿ ಅವರು ದುಷ್ಟಸ್ಥಾನದಲ್ಲಿ ಇದ್ದರೂ ನಿಮಗೆ ದುಷ್ಟಫಲ ಕಡಿಮೆ ಇರುತ್ತದೆ. ಹತ್ತನೇ ಮನೆಯ ಶುಕ್ರ ವೃತ್ತಿಯಲ್ಲಿ ಉನ್ನತಿಯನ್ನು ಕೊಡುತ್ತಾನೆ. ಮೇಲಧಿಕಾರಿಗಳ ವಿಶ್ವಾಸಕ್ಕೆ ಪಾತ್ರರಾಗುತ್ತೀರಿ. ಹನ್ನೊಂದರಲ್ಲಿ ಬುಧ ಮನಸ್ಸಿಗೆ ಸಂತೋಷವನ್ನುಂಟು ಮಾಡುವ ಘಟನೆಗಳು ನಡೆಯುತ್ತವೆ. ಸೂರ್ಯ ಧನ ಲಾಭವನ್ನು ಕೊಟ್ಟು ಶುಭಫಲಗಳನ್ನು ವೃದ್ಧಿ ಮಾಡುತ್ತಾನೆ. ಏಳರ ಗುರು ನಿಮಗೆ ಎಲ್ಲ ವಿಧದಲ್ಲೂ ಸಹಾಯಕನಾಗಿ ಬೆಂಬಲವಾಗಿ ನಿಲ್ಲುತ್ತಾನೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಸಿಗುವ ಅವಕಾಶ ಇದೆ. ಮನೆಯಲ್ಲಿ ಶುಭ ಸಮಾರಂಭಗಳು ನಡೆಯುತ್ತದೆ. ದೇವರ ಕಾರ್ಯಗಳನ್ನು ಮಾಡುತ್ತೀರಿ. ಪಂಚಮ ಶನಿಯಿಂದ ಆಗಾಗ ಅಡಚಣೆಗಳು ಎದುರಾದರೂ ಗುರುಬಲ ಇರುವುದರಿಂದ ಅಡಚಣೆಗಳೆಲ್ಲವೂ ನಿವಾರಣೆಯಾಗುತ್ತವೆ.

September 2023 monthly horoscope for 12 zodiac signs in kannada

ವೃಶ್ಚಿಕ ರಾಶಿ

ಈ ತಿಂಗಳು ಪೂರ್ತಿ ನಿಮಗೆ ಶುಕ್ರ, ಸೂರ್ಯ, ಬುಧ ಹಾಗೂ ರಾಹುವಿನ ಬಲ ಇದೆ. ರಾಹು ಆರನೇ ಮನೆಯಲ್ಲಿ ಪರಾಕ್ರಮವನ್ನು ಕೊಡುತ್ತಾನೆ. ನಿಮ್ಮ ಕೆಲಸಗಳಿಗೆ ಇರುವ ಅಡ್ಡಿ ಆತಂಕಗಳನ್ನು ದೂರ ಮಾಡುತ್ತಾನೆ. ಶತ್ರುಗಳನ್ನು ದೂರ ಸರಿಸುತಾನೆ. ಒಂಬತ್ತರ ಶುಕ್ರ ನಾನಾ ವಿಧದಲ್ಲಿ ಲಾಭ ಸಿಗುವಂತೆ ಮಾಡುತ್ತಾನೆ. ಹೊಸ ವಾಹನ ಖರೀದಿ ಯೋಗ ಇದೆ. ವಾಹನ ಉದ್ದಿಮೆದಾರರಿಗೆ ಲಾಭ ಇದೆ. ಆಭರಣ ಅಥವಾ ಐಷಾರಾಮಿ ವಸ್ತುಗಳು ಉಡುಗೊರೆ ಸಿಗುವ ಸಾಧ್ಯತೆ ಇದೆ. ಗೃಹಾಲಂಕಾರಕ್ಕೆ ವಸ್ತುಗಳನ್ನು ಖರೀದಿ ಮಾಡುತ್ತೀರಿ. ಹತ್ತನೇ ಮನೆಯಲ್ಲಿ 19ರ ವರೆಗೂ ಸೂರ್ಯ ಬುಧನೊಂದಗೆ ಇರುತಾನೆ. ಹತ್ತನೇ ಮನೆ ವೃತ್ತಿ ಸ್ಥಾನ. ಹೀಗಾಗಿ ನಿಮಗೆ ವೃತ್ತಿಯಲ್ಲಿ ಬಹಳಷ್ಟು ಅನುಕೂಲಗಳು ಇವೆ. 19ರ ನಂತರ ಸೂರ್ಯ ನಿಮಗೆ ಹನ್ನೊಂದನೇ ಮನೆಯಾದ ಕನ್ಯಾರಾಶಿಗೆ ಪ್ರವೇಶ ಮಾಡುತ್ತಾನೆ. ಕನ್ಯಾರಾಶಿಯಲ್ಲಿ ಸೂರ್ಯನೊಂದಿಗೆ ನಿಮ್ಮ ರಾಶಿಯ ಅಧಿಪತಿ ಕುಜನೂ ಇರುವುದರಿಂದ ನಿಮಗೆ ಅಧಿಕ ಲಾಭ, ಯಶಸ್ಸು ಈ ತಿಂಗಳ ಪೂರ್ತಿ ಮುಂದುವರೆಯುತ್ತದೆ. ಹಣದ ಹರಿವು ಬಹಳ ಉತ್ತಮವಾಗಿದೆ. ನಾಲ್ಕರಲ್ಲಿ ಶನಿ ಇರುವುದು ಕೊಂಚ ಕಿರಿಕಿರಿ ಆದರೂ ಶನಿ ಸ್ವಂತ ಮನೆಯಲ್ಲಿ ಇರುವುದರಿಂದ ಅಷ್ಟೊಂದು ಭಾದಿಸುವುದಿಲ್ಲ.

September 2023 monthly horoscope for 12 zodiac signs in kannada

ಧನಸ್ಸು ರಾಶಿ

ಈಗ ನಿಮಗೆ ಗುರು ಬಲ, ಶನಿ ಬಲ ಎರಡೂ ಇದ್ದು ಬೇರೆ ಗ್ರಹಗಳ ಬಲ ಇಲ್ಲದಿದ್ದರೂ ನಡೆಯುತ್ತದೆ. ಆದರೆ ಈ ಮಾಸದಲ್ಲಿ ಸೂರ್ಯ ಮತ್ತು ಬುಧನ ಅನುಗ್ರಹ ನಿಮಗೆ ಇದೆ. ಸೂರ್ಯ-ಬುಧ ಒಂಬತ್ತನೇ ಮನೆಯಲ್ಲಿ 19 ರ ವರೆಗೂ ಇದ್ದು ನಿಮಗೆ ವೃತ್ತಿಯಲ್ಲಿ ಯಶಸ್ಸು ಸಿಗುವಂತೆ ಮಾಡುತ್ತಾರೆ. ಹಾಗೂ ಸೂರ್ಯ 19ರ ನಂತರ ಹತ್ತನೇ ಮನೆಗೆ ಪ್ರವೇಶವಾಗಿ ಕುಜನೊಂದಿಗೆ ಈ ತಿಂಗಳ ಪೂರ್ತಿ ಇರುತ್ತಾನೆ. ಸೂರ್ಯ ಕುಜ ಹತ್ತನೇ ಮನೆಯಲ್ಲಿ ನಿಮಗೆ ಯಶಸ್ಸನ್ನು ಕೊಡುತ್ತಾರೆ. ವೃತ್ತಿಯಲ್ಲಿ ನಾನಾ ರೀತಿಯ ಬದಲಾವಣೆಗಳು ನಡೆಯುತ್ತದೆ. ಗಾಬರಿ ಬೇಡ. ಬದಲಾವಣೆಗಳು ನಿಮಗೆ ಅನುಕೂಲವಾಗಿ ಇರುತ್ತದೆ. ಮೂರನೇ ಮನೆಯ ಶನಿ ಅಧಿಕ ಲಾಭವನ್ನು ಕೊಡುತ್ತಾನೆ. ಐದನೇ ಮನೆಯಲ್ಲಿ ಗುರು ಇದ್ದು ನಿಮಗೆ ಸಕಲ ಕಾರ್ಯಗಳಲ್ಲಿ ಜಯ ಸಿಗುವಂತೆ ಮಾಡುತ್ತಾನೆ. ವಸೂಲಾಗದೆ ಬಾಕಿ ಇರುವ ಹಣ ಈಗ ವಸೂಲಾಗಬಹುದು. ಸಾಲಕ್ಕಾಗಿ ಯಾವುದಾದರೂ ಸಂಸ್ಥೆಗಳಲ್ಲಿ ಪ್ರಯತ್ನ ಪಡುತ್ತಿದ್ದರೆ ಈಗ ಸುಲಭವಾಗಿ ದೊರೆಯುತ್ತದೆ. ಎಂಟನೇ ಮನೆಯ ಶುಕ್ರ ನಿಮಗೆ ಪ್ರಿಯ ವಾರ್ತೆ ಕೇಳುವಂತೆ ಮಾಡುತ್ತಾನೆ. ನೀವು ಯಾವುದಾದರೂ ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿದ್ದರೆ ಈಗ ಶುಭ ಸುದ್ದಿ ಸಿಗುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ.

September 2023 monthly horoscope for 12 zodiac signs in kannada

ಮಕರ ರಾಶಿ

ಈ ತಿಂಗಳಲ್ಲಿ ನಿಮಗೆ ಏಳನೇ ಮನೆಯಲ್ಲಿ ಶುಕ್ರ, ಎಂಟರಲ್ಲಿ ಸೂರ್ಯ ಮತ್ತು ಬುಧ 17ರ ವರೆಗೆ ವಾಸಿಸಲಿದ್ದಾರೆ. 17ರ ನಂತರ ಸೂರ್ಯ-ಕುಜ ಒಂಬತ್ತನೇ ಮನೆಯಲ್ಲಿ, ಗುರು-ರಾಹು ನಾಲ್ಕನೇ ಮನೆಯಲ್ಲಿ, ಶನಿ ಎರಡನೇ ಮನೆಯಲ್ಲಿ ಇದ್ದಾರೆ. ಸಾಡೆಸಾತಿ ಪ್ರಭಾವ ಇದ್ದರೂ ಶನಿ ಎರಡನೇ ಮನೆಯಲ್ಲಿ ಸ್ವಂತ ಮನೆಯಲ್ಲಿರುವುದರಿಂದ ತೊಂದರೆ ಕಡಿಮೆ. ಸಾಡೆಸಾತಿಯ ಪ್ರಭಾವ ಮುಗುಯುತ್ತ ಬಂದಿದೆ. ರಾಹು ಕೂಡ ಇನ್ನು ಕೆಲವೇ ದಿನಗಳಲ್ಲಿ ಮೂರನೇ ಮನೆಗೆ ಪ್ರವೇಶಿಸುತ್ತಾನೆ. ಇದರಿಂದ ನಿಮಗೆ ಹಣದ ಹರಿವು ಉತ್ತಮವಾಗುತ್ತದೆ. ಯಾವುದಾದರೂ ಮುಖ್ಯ ಕಾರ್ಯಗಳಿಗೆ ಪ್ರಯತ್ನ ಮಾಡುತ್ತಿದ್ದರೆ ಜಯ ಲಭಿಸುತ್ತದೆ. ಕೊಂಚ ಆರೋಗ್ಯ ತೊಂದರೆ ಇರಬಹುದು. ಚಿಂತೆ ಬೇಡ ತೊಂದರೆ ನಿವಾರಣೆ ಆಗುತ್ತದೆ. ಒಂಬತ್ತನೇ ಮನೆಯಲ್ಲಿ ಕುಜ ಇದ್ದು ನಿಮಗೆ ಆಸ್ತಿಪಾಸ್ತಿ ವಿವಾದಗಳನ್ನು ಬಗೆಹರಿಸುತ್ತಾನೆ. ಭೂಮಿಗೆ ಸಂಬಂಧ ಪಟ್ಟ ತೊಂದರೆಗಳು ನಿವಾರಣೆಯಾಗುತ್ತವೆ. ಗುರು ನಾಲ್ಕನೇ ಮನೆಯಲ್ಲಿ ಇರುವುದು ಕೊಂಚ ದೋಷಕರ, ಹೀಗಾಗಿ ದತ್ತಾತ್ರೇಯ ಸ್ತೋತ್ರ ಅಥವಾ ಯಾವುದಾದರೂ ಗುರುಸ್ತೋತ್ರ ಜಪಿಸಿ. ನಿಮ್ಮ ಮನೆತನದ ಗುರುಗಳ ದರ್ಶನ ಮಾಡಿ. ಮಕ್ಕಳಿಂದ ಶುಭ ಸುದ್ದಿ ಕೇಳುತ್ತೀರಿ. 19ರ ನಂತರ ಮೂರನೇ ಮನೆಗೆ ಸೂರ್ಯ ಕುಜನ ದೃಷ್ಟಿ ಬೀಳುತ್ತದೆ. ಇದು ನಿಮಗೆ ಧನ ಲಾಭ ಕೊಡುವುದರೆ ಜೊತೆಗೆ ಬದುಕಿನಲ್ಲಿ ಒಂದು ಮಹತ್ತರ ಕಾರ್ಯ ಸಾಧನೆಗೆ ಬುನಾದಿ ಹಾಕುತ್ತದೆ. ಮುಂದೆ ಒಳ್ಳೆಯ ದಿನಗಳು ಖಂಡಿತಾ ಇವೆ. ಕೊಂಚ ತಾಳ್ಮೆಯಿಂದ ವ್ಯವಹರಿಸಿ.

September 2023 monthly horoscope for 12 zodiac signs in kannada

ಕುಂಭ ರಾಶಿ

ನಿಮಗೆ ಈಗ ಮೂರನೇ ಮನೆಯಲ್ಲಿ ಗುರು-ರಾಹು, ನಿಮ್ಮ ರಾಶಿಯಲ್ಲೇ ಶನಿ, ಏಳನೇ ಮನೆಯಲ್ಲಿ ಸೂರ್ಯ-ಬುಧ, ಎಂಟರಲ್ಲಿ ಕುಜ, ಆರನೇ ಮನೆಯಲ್ಲಿ ಶುಕ್ರ, ಒಂಬತ್ತನೇ ಮನೆಯಲ್ಲಿ ಕೇತು ಇದ್ದಾರೆ. ಕಾಲಿಗೆ ತೊಂದರೆ ಆಗಬಹುದು. ಮಂಡಿನೋವು ಮುಂತಾದ ಮೂಳೆ ಸಂಬಂಧಿತ ತೊಂದರೆಗಳು ಬರಬಹುದು. ಜಾಗ್ರತೆಯಿಂದ ವ್ಯವಹರಿಸಿ. ಹಣಕಾಸಿನ ನಷ್ಟ ಇದೆ. ಅಂದರೆ ಅನಗತ್ಯವಾಗಿ ಖರ್ಚುಗಳು ತಲೆದೋರುತ್ತದೆ. ನೀವು ಖರ್ಚು ಮಾಡದೆ ವಿಧಿಯಿಲ್ಲ ಎಂಬಂತೆ ಆಗುತ್ತದೆ. ವೃತ್ತಿಯಲ್ಲಿ ಕೂಡ ಒತ್ತಡ ಹೆಚ್ಚು. ನೀವು ಒಳ್ಳೆಯ ಕೆಲಸವನ್ನೇ ಮಾಡಿದರೂ ಅದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಯಾವುದೇ ಗ್ರಹಬಲ ಈ ತಿಂಗಳಲ್ಲಿ ಇಲ್ಲ. ಹಾಗಾಗಿ ನೀವು ದೇವರ ಜಪ ಹೆಚ್ಚು ಮಾಡಬೇಕು. ನಳ ಚರಿತ್ರೆ ಓದಿ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. ವಾಹನದಿಂದಲೂ ತೊಂದರೆ ಆಗುವ ಸಂಭವ ಇದೆ. ವಾಹನದಿಂದ ನಷ್ಟವೂ ಆಗುತ್ತದೆ. ಕೋರ್ಟ್ ಕೇಸುಗಳಿದ್ದರೆ ಸ್ವಲ್ಪ ವಿವೇಚನೆ ಉಪಯೋಗಿಸಿ ಬಗೆಹರಿಸಿಕೊಳ್ಳಿ. ಯಾರದೋ ತಪ್ಪಿಗೆ ನೀವು ದಂಡ ತೆರಬೇಕಾಗುತ್ತದೆ. ಸಹೋದರರಿಂದ ಸಹಾಯ ಇದೆ. ಸಾಧುಸಂತರಿಗೆ ದಾನ ಮಾಡಿ. ಎಂಟರಲ್ಲಿ ಕುಜ ಆರೋಗ್ಯಕ್ಕೆ ತೊಂದರೆ ಮಾಡುತ್ತಾನೆ. ಮೂರರಲ್ಲಿ ಇರುವ ರಾಹು ಮಾತ್ರ ನಿಮಗೆ ಆದಷ್ಟು ತೊಂದರೆಗಳಾಗದಂತೆ ರಕ್ಷಿಸುತ್ತಾನೆ. ಅಡೆತಡೆ ನಿವಾರಣೆ ಮಾಡುತ್ತಾನೆ. ಒಳ್ಳೆಯ ಸಮಯಕ್ಕೆ ನೀವು ಕಾಯಬೇಕಿದೆ.

September 2023 monthly horoscope for 12 zodiac signs in kannada

ಮೀನ ರಾಶಿ

ಈಗ ನಿಮಗೆ ಸಂಪೂರ್ಣ ಗುರುಬಲ ಇದೆ. ಸಾಡೆಸಾತಿ ಶನಿಯ ಪ್ರಾರಂಭದ ಹಂತದಲ್ಲಿರುವುದರಿಂದ ಖರ್ಚುಗಳು ಅಧಿಕವಾಗುತ್ತವೆ. ಐದನೇ ಮನೆಯಲ್ಲಿರುವ ಶುಕ್ರ ಹಣದ ಹರಿವನ್ನು ವೃದ್ಧಿಸುತ್ತಾನೆ. ಸುಖ ಭೋಜನ ಲಭಿಸುವಂತೆ ಮಾಡುತ್ತಾನೆ. ನಿಮ್ಮ ಮನಸ್ಸಿಗೆ ಮುದ ನೀಡುವ ಅನೇಕ ಸಂಗತಿಗಳು ನಡೆಯುತ್ತದೆ. ವಾಹನದಿಂದ ಲಾಭ ಇದೆ. ಆರನೇ ಮನೆಯಲ್ಲಿ ಸೆ.19ರ ವರೆಗೂ ಸೂರ್ಯ ಮತ್ತು ಬುಧ ಇರುತ್ತಾರೆ. ಸೂರ್ಯ ಪ್ರಚಂಡ ಶಕ್ತಿಯನ್ನು ಕೊಡುತ್ತಾನೆ. ಸರ್ಕಾರದಿಂದ ಲಾಭ ಕೊಡಿಸುತ್ತಾನೆ. ನಿಮ್ಮ ಕೆಲಸಗಳಿಗೆ ಅಡೆತಡೆ ನಿವಾರಣೆ ಮಾಡುತ್ತಾನೆ. ಬುಧ ಸಹ ಸೂರ್ಯನಿಗೆ ಬೆಂಬಲವಾಗಿದ್ದು ಲಾಭವನ್ನೇ ಕೊಡುತ್ತಾನೆ. ಬಂಧುಗಳ ಸಹಕಾರ ಸಹಾಯ ಸಿಗುತ್ತದೆ. ಸೆ.19ರ ನಂತರ ಸೂರ್ಯ ಏಳನೇ ಮನೆಗೆ ಬಂದು ಕುಜನ ಜೊತೆ ಈ ಮಾಸಾಂತ್ಯದ ವರೆಗೂ ಇರುತ್ತಾನೆ. ಏಳನೇ ಮನೆ ಸೂರ್ಯ ಕುಜ ಕೊಂಚ ದೋಷಕರ. ಸಂಗಾತಿಯ ಆರೋಗ್ಯ ವ್ಯತ್ಯಾಸ ಆಗಬಹುದು. ಎರಡನೇ ಮನೆಯ ರಾಹು ಕೂಡ ಕುಟುಂಬದಲ್ಲಿ ಬೇಡದ ಕಾರಣಗಳಿಗೆ ಅಶಾಂತಿ ಮೂಡಿಸುತ್ತಾನೆ. ಆದರೆ ಗುರುಬಲ ಇರುವುದರಿಂದ ಹೆದರಬೇಡಿ. ಗುರು ಎಲ್ಲವನ್ನೂ ಸಮತೂಗಿಸಿಕೊಂಡು ಹೋಗುತ್ತಾನೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ವಿದೇಶ ಪ್ರವಾಸ ಯೋಗ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+