Samsaptak Yoga 2024: ಶನಿ ಶುಕ್ರನಿಂದ ಸಂಸಪ್ತಕ ಯೋಗ: ಆಗಸ್ಟ್ನಲ್ಲಿ ಈ 3 ರಾಶಿಗಳಿಗೆ ಹಣದ ಮಳೆ
ಸೌರವ್ಯೂಹದಲ್ಲಿ ಕಾಲ ಕಾಲಕ್ಕೆ ಗ್ರಹಗಳು ಸಂಚಾರದ ವೇಳೆ ತಮ್ಮ ಸ್ಥಾನವನ್ನು ಬದಲಾಯಿಸುತ್ತಲೇ ಇರುತ್ತವೆ. ಗ್ರಹಗಳು ಸಂಚಾರ ಮಾಡುವಾಗ ಕೆಲವೊಮ್ಮೆ ಒಂದೇ ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಸಂಚಾರ ಮಾಡುತ್ತವೆ. ಹೀಗೆ ಒಂದೇ ರಾಶಿಯಲ್ಲಿ ಅನೇಕ ಗ್ರಹಗಳು ಒಟ್ಟಿಗೆ ಸಂಚಾರ ಮಾಡಿದಾಗ ಅದರಿಂದ ಶುಭ ಹಾಗೂ ಅಶುಭ ಯೋಗಗಳು ರೂಪಗೊಳ್ಳುತ್ತವೆ.
ಜ್ಯೋತಿಷ್ಯದಲ್ಲಿ ಈ ಯೋಗಗಳು ಮಾನವ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ಅಂದಹಾಗೆ ನಾವು ಆಗಸ್ಟ್ 2024ಕ್ಕೆ ಪ್ರವೇಶಿಸುತ್ತೇವೆ. ಈ ಮಾಸದಲ್ಲಿ ಶುಕ್ರ ಮತ್ತು ಶನಿ ಎರಡು ಗ್ರಹಗಳು ಸಂಸಪ್ತಕ ಯೋಗವನ್ನು ರೂಪಿಸುತ್ತವೆ. ಈ ಯೋಗ ಶನಿ ಮತ್ತು ಶುಕ್ರರ ಪರಸ್ಪರ ದೃಷ್ಟಿಗೋಚರವಾಗಿ ರೂಪುಗೊಳ್ಳುತ್ತದೆ. ಅದೂ ಅಲ್ಲದೆ ಇದೇ ಸಮಯದಲ್ಲಿ ಸಿಂಹರಾಶಿಯಲ್ಲಿ ಸೂರ್ಯ, ಶುಕ್ರ, ಬುಧರಿಂದ ತ್ರಿಗ್ರಹ ಯೋಗ ಉಂಟಾಗುತ್ತದೆ.
ಹೀಗೆ ರೂಪುಗೊಂಡ ಯೋಗಗಳ ಪ್ರಭಾವ ಎಲ್ಲಾ ರಾಶಿಗಳಲ್ಲಿ ಕಂಡುಬಂದರೂ ಅವುಗಳಲ್ಲಿ ಕೆಲವರು ಅದೃಷ್ಟಶಾಲಿಯಾಗಿರುತ್ತಾರೆ. ಮುಖ್ಯವಾಗಿ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿ ಇರುತ್ತದೆ. ಈಗ ಶನಿ ಶುಕ್ರನಿಂದ ರೂಪುಗೊಂಡ ಸಂಸಪ್ತಕ ಯೋಗದಿಂದ ಅದೃಷ್ಟಶಾಲಿಯಾಗಲಿರುವ ರಾಶಿಚಕ್ರದವರು ಯಾರೆಂದು ತಿಳಿಯೋಣ.

ವೃಷಭ ರಾಶಿ
ಸಂಸಪ್ತಕ ಯೋಗ ವೃಷಭ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿರುತ್ತದೆ. ವೃಷಭ ರಾಶಿಯವರು ಅನಿರೀಕ್ಷಿತ ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತಾರೆ. ಬಹಳಷ್ಟು ಹಣವನ್ನು ಉಳಿಸಬಹುದು. ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ.
ಈ ಯೋಗದ ಅವಧಿಯಲ್ಲಿ ಆಸ್ತಿಯನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಅವಕಾಶಗಳಿವೆ. ಉದ್ಯಮಿಗಳು ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುತ್ತಾರೆ. ಅದು ದೊಡ್ಡ ಆರ್ಥಿಕ ಲಾಭವನ್ನು ನೀಡುತ್ತದೆ. ವಿವಾಹಿತರ ಜೀವನ ಸುಖಮಯವಾಗಿರುತ್ತದೆ. ದುಡಿಯುವ ಜನರ ಆದಾಯದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಸಂಸಪ್ತಕ ಯೋಗ ಮಂಗಳಕರವಾಗಿರುತ್ತದೆ. ಈ ಸಮಯದಲ್ಲಿ ಅದೃಷ್ಟ ಅನುಕೂಲಕರವಾಗಿರುತ್ತದೆ. ನಿಮ್ಮ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಕಚೇರಿಯಲ್ಲಿ ತಮ್ಮ ಸಹೋದ್ಯೋಗಿಗಳ ಬೆಂಬಲದೊಂದಿಗೆ ಉದ್ಯೋಗಿಗಳು ತಮ್ಮ ಗುರಿಗಳನ್ನು ಸುಲಭವಾಗಿ ಸಾಧಿಸಬಹುದು.
ವಿವಾಹಿತರ ಜೀವನ ಶಾಂತಿ ಮತ್ತು ಸಂತೋಷದಿಂದ ಕೂಡಿರುತ್ತದೆ. ಸಂಗಾತಿಯ ಬೆಂಬಲ ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಹಣಕಾಸು ಸಾಮಾನ್ಯ ದಿನಕ್ಕಿಂತ ಉತ್ತಮವಾಗಿರುತ್ತದೆ.

ತುಲಾ ರಾಶಿ
ತುಲಾ ರಾಶಿಯವರಿಗೆ ಸಂಸಪ್ತಕ ಯೋಗ ಅದ್ಬುತ ಫಲಿತಾಂಶವನ್ನು ನೀಡುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ವಾಹನ ಅಥವಾ ಆಸ್ತಿ ಖರೀದಿಸಲು ಅವಕಾಶವಿರುತ್ತದೆ. ಈ ಯೋಗದ ಅವಧಿಯಲ್ಲಿ ನೀವು ಒಂದಕ್ಕಿಂತ ಹೆಚ್ಚು ಆದಾಯದ ಮೂಲಗಳನ್ನು ಪಡೆಯುತ್ತೀರಿ.
ಬಹಳ ದಿನಗಳಿಂದ ಈಡೇರದೇ ಇದ್ದ ಆಸೆಗಳು ಈಡೇರುತ್ತವೆ. ಸಮಾಜದಲ್ಲಿ ಸ್ಥಾನಮಾನ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಉದ್ಯಮಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಈ ಅವಧಿಯಲ್ಲಿ ಧೈರ್ಯ ಹೆಚ್ಚಾದಂತೆ ನಿರ್ಭೀತಿಯಿಂದ ಧೈರ್ಯದಿಂದ ಕೆಲಸ ಮಾಡುವಿರಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿಸಿದ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications