• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Shani Margi 2022: ಅಕ್ಟೋಬರ್ 23 ರಿಂದ ಶನಿಯ ನೇರ ನಡೆ ಆರಂಭ, ಈ ರಾಶಿಗಳಿಗೆ ಶನಿ ಕಾಟದಿಂದ ಮುಕ್ತಿ

|
Google Oneindia Kannada News

ಮಕರ ರಾಶಿಯಲ್ಲಿ ಶನಿ ನೇರ ಸಂಚಾರ 23 ಅಕ್ಟೋಬರ್ 2022 ರಂದು ನಡೆಯಲಿದೆ. ಮಕರ ರಾಶಿಯಲ್ಲಿ ಶನಿ ನೇರ ಸಂಚಾರ 12 ರಾಶಿಚಕ್ರ ಚಿಹ್ನೆಗಳ ಮೇಲೆ ಪ್ರಭಾವ ಬೀರಲಿದೆ. ಮಕರ ರಾಶಿಯಲ್ಲಿ ಶನಿಯು ನಿಮ್ಮ ರಾಶಿಗೆ ಅನುಕೂಲಕರವಾಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯಿರಿ.

ಶನಿಯು ಮಕರ ಮತ್ತು ಕುಂಭ ಎಂಬ ಎರಡು ರಾಶಿಗಳ ಅಧಿಪತಿಯಾಗಿದ್ದಾನೆ. ಶನಿ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಇದು ಎರಡೂವರೆ ವರ್ಷಗಳ ಕಾಲ ಒಂದೇ ರಾಶಿಯಲ್ಲಿ ಇರುತ್ತದೆ. ಶನಿಗ್ರಹವನ್ನು ದುಷ್ಟ ಗ್ರಹವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಶನಿಯು ತರ್ಕ, ವಿಳಂಬ, ಕಠಿಣ ಪರಿಶ್ರಮವನ್ನು ಸೂಚಿಸುತ್ತದೆ. ಇದು 'ಕರ್ಮ ಕಾರಕ' ಕ್ರಿಯೆ ಆಧಾರಿತ ಗ್ರಹ. ಆದ್ದರಿಂದ ಶನಿಗ್ರಹವನ್ನು ಒಪ್ಪಿಕೊಳ್ಳಲು ನಮಗೆ ಕಷ್ಟವಾಗುತ್ತದೆ.

 Shukra Rashi Parivartan 2022 : ಮಕರ ರಾಶಿಗೆ ಶುಕ್ರನ ಪ್ರವೇಶ, ದ್ವಾದಶ ರಾಶಿಗಳ ಮೇಲೆ ಹೇಗಿರಲಿದೆ ಶುಕ್ರನ ಪ್ರಭಾವ? Shukra Rashi Parivartan 2022 : ಮಕರ ರಾಶಿಗೆ ಶುಕ್ರನ ಪ್ರವೇಶ, ದ್ವಾದಶ ರಾಶಿಗಳ ಮೇಲೆ ಹೇಗಿರಲಿದೆ ಶುಕ್ರನ ಪ್ರಭಾವ?

ಸತ್ಯವೇನೆಂದರೆ ವಾಸ್ತವಿಕ ಪ್ರಪಂಚದ ವಾಸ್ತವವನ್ನು ಒಪ್ಪಿಕೊಳ್ಳದೆ ನಾವು ನಮಗೇ ಮಾಡಿಕೊಳ್ಳಬಹುದಾದ ಹಾನಿಯಿಂದ ಶನಿಯು ನಮ್ಮನ್ನು ರಕ್ಷಿಸುತ್ತದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ಶನಿಯು ಸಮಾಜದ ನಿರ್ಗತಿಕ ಜನರ ಕಡೆಗೆ ನಮ್ಮನ್ನು ಹೆಚ್ಚು ವಿನಮ್ರಗೊಳಿಸುತ್ತದೆ. ಶನಿಯು ಗುರುವಿನಂತೆ ವರ್ತಿಸುತ್ತಾನೆ ಎಂದರೆ ಅದು ತಪ್ಪಾಗುವುದಿಲ್ಲ. ಅವನ/ಅವಳ ಕಾರ್ಯಗಳ ಸ್ವರೂಪದ ಆಧಾರದ ಮೇಲೆ ಶನಿ ನಮ್ಮನ್ನು ಶಿಕ್ಷಿಸುವುದು.

ಮಕರ ರಾಶಿಯಲ್ಲಿ ಶನಿ ನೇರ: ಸಮಯ

ಅಕ್ಟೋಬರ್ 23, 2022 ರಂದು, ಭಾನುವಾರ ಬೆಳಗ್ಗೆ 04:19ಕ್ಕೆ ಮಕರ ರಾಶಿಯಲ್ಲಿ ಶನಿಯು ನೇರವಾಗಿ ಸಂಚರಿಸುತ್ತದೆ. ಮಕರ ರಾಶಿ ಖ್ಯಾತಿ ಮತ್ತು ಶಕ್ತಿಯ ಸಂಕೇತವಾಗಿದೆ. ಮಕರ ರಾಶಿಯಲ್ಲಿ ಶನಿಯ ನೇರ ಸಂಚಾರ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಲಿದೆ.

ಮೇಷ: ಸಹಕಾರದ ಗುಣ ಮೆಚ್ಚುಗೆ

ಮೇಷ: ಸಹಕಾರದ ಗುಣ ಮೆಚ್ಚುಗೆ

ಇದು ನಿಮಗೆ ಲಾಭದಾಯಕ ಸಮಯವಾಗಿರಲಿದೆ. ಕೆಲಸದ ಸ್ಥಳದಲ್ಲಿ ಬರುವ ಸಮಸ್ಯೆಗಳಿಂದ ಹೊರಬರುವ ಮಾರ್ಗವನ್ನು ಕಂಡುಕೊಳ್ಳುವಿರಿ. ನಿಮ್ಮ ಶಕ್ತಿಯನ್ನು ಒಳ್ಳೆಯ ಕೆಲಸಗಳಲ್ಲಿ ಬಳಸುತ್ತೀರಿ. ನೀವು ಕೆಲವು ಸಾಮಾಜಿಕ ಕಾರ್ಯಗಳಲ್ಲಿ ಪರರಿಗೆ ಸಹಕರಿಸುತ್ತೀರಿ. ನಿಮ್ಮ ಸಹಕಾರದ ಗುಣ ಎಲ್ಲರಿಗೂ ಇಷ್ಟವಾಗಲಿದೆ. ಕೆಲವು ಕೆಲಸಗಳಲ್ಲಿ ಮಾಡಿದ ಕಠಿಣ ಪರಿಶ್ರಮ ಯಶಸ್ವಿಯಾಗುತ್ತದೆ. ಹೊಸ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಡಿದ ಪ್ರಯಾಣಗಳು ಈ ಸಮಯದಲ್ಲಿ ಪ್ರಯೋಜನ ನೀಡಲಿವೆ. ನಿಮ್ಮ ಜೀವನ ಸಂಗಾತಿಯ ಬೆಂಬಲದಿಂದ ನಿಮ್ಮ ಮನಸ್ಸು ಉತ್ಸಾಹದಿಂದ ತುಂಬಿರುತ್ತದೆ.

ಮಕರ ರಾಶಿಯಲ್ಲಿ ಶನಿಯ ನೇರ ಸಂಚಾರ ಜೀವನದಲ್ಲಿ ಪ್ರಯೋಜನಕಾರಿ ಫಲಿತಾಂಶವನ್ನು ತರುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಬೆಳವಣಿಗೆಯನ್ನು ಸಾಧಿಸುವಿರಿ. ನಿಮ್ಮ ಸಾಮಾಜಿಕ ಚಿತ್ರಣ ಮತ್ತು ಖ್ಯಾತಿಯು ಸುಧಾರಿಸುತ್ತದೆ. ನೀವು ವಿದೇಶಿ ಭೂಮಿಯಿಂದ ಲಾಭ ಪಡೆಯುತ್ತೀರಿ. ಕೆಲವು ವ್ಯಾಪಾರ ಪಾಲುದಾರಿಕೆಗಾಗಿ ಯೋಜಿಸುತ್ತಿದ್ದರೆ ಇದು ಉತ್ತಮ ಸಮಯ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿರಬೇಕು. ನೀವು ಅನಾರೋಗ್ಯದ ಕಾರಣದಿಂದ ಕೆಲವು ಖರ್ಚುಗಳನ್ನು ಎದುರಿಸಬಹುದು. ಜವಾಬ್ದಾರಿಯ ನಿರ್ಲಕ್ಷ್ಯದಿಂದ ಜೀವನದಲ್ಲಿ ಅಡಚಣೆಯನ್ನು ಎದುರಿಸಬಹುದು. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ನಿಮಗೆ ಸಲಹೆ ನೀಡಲಾಗುತ್ತದೆ.

ವೃಷಭ: ಅದೃಷ್ಟದ ಬೆಂಬಲ

ವೃಷಭ: ಅದೃಷ್ಟದ ಬೆಂಬಲ

ನಿಮ್ಮ ಗುರಿಗಳನ್ನು ಸಾಧಿಸಲು ನಿಮ್ಮ ಅದೃಷ್ಟ ನಿಮ್ಮನ್ನು ಬೆಂಬಲಿಸುತ್ತದೆ. ಆದರೆ ಅದಕ್ಕಾಗಿ ನೀವು ತುಂಬಾ ಶ್ರಮಿಸಬೇಕು. ಈ ಸಮಯ ನಿಮಗೆ ಸಂತೋಷದ ಹೊಸ ಉಡುಗೊರೆಯನ್ನು ನೀಡಲಿದೆ. ಯಾವುದೋ ವಿಷಯದ ಬಗ್ಗೆ ಸ್ನೇಹಿತರೊಂದಿಗೆ ಕೆಲವು ಚರ್ಚೆಯ ಸಾಧ್ಯತೆ ಇದೆ. ಆದರೆ ನಿಮ್ಮ ಕೋಪದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಇಟ್ಟುಕೊಳ್ಳಬೇಕು. ಅಲ್ಲದೆ, ನೀವು ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಸ್ವಲ್ಪ ಯೋಚಿಸುವುದು ಒಳ್ಳೆಯದು.

ನಿಮ್ಮ ತಂದೆ ಮತ್ತು ಗುರುಗಳೊಂದಿಗಿನ ನಿಮ್ಮ ಸಂಬಂಧವು ಈ ಸಮಯದಲ್ಲಿ ಉತ್ತಮವಾಗಿರುತ್ತದೆ. ಅವರಿಂದ ಹೊಸ ವಿಚಾರಗಳನ್ನು ಕಲಿಯುವಿರಿ. ನೀವು ಕೆಲಸದ ಸ್ಥಳವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದರೆ ಅದನ್ನು ಮಾಡಲು ಇದು ಉತ್ತಮ ಸಮಯ. ಹೂಡಿಕೆಯನ್ನು ಬಹಳ ಬುದ್ಧಿವಂತಿಕೆಯಿಂದ ಮಾಡಲು ನಿಮಗೆ ಸಲಹೆ ನೀಡಲಾಗುತ್ತದೆ. ಇಲ್ಲದಿದ್ದರೆ ನೀವು ದೀರ್ಘಾವಧಿಯ ನಷ್ಟವನ್ನು ಎದುರಿಸಬೇಕಾಗುತ್ತದೆ. ನೀವು ಈ ಸಮಯದಲ್ಲಿ ಧಾರ್ಮಿಕ ಮಾರ್ಗದ ಕಡೆಗೆ ಒಲವು ತೋರುತ್ತೀರಿ. ನಿಮ್ಮ ಉತ್ತಮ ಕರ್ಮವನ್ನು ಹೆಚ್ಚಿಸಲು ಪ್ರಯತ್ನಿಸುತ್ತೀರಿ.

ಮಿಥುನ: ಕುಟುಂಬದಲ್ಲಿ ಮಂಗಳ ಕಾರ್ಯ

ಮಿಥುನ: ಕುಟುಂಬದಲ್ಲಿ ಮಂಗಳ ಕಾರ್ಯ

ಇದು ನಿಮಗೆ ತುಂಬಾ ಒಳ್ಳೆಯ ಸಮಯವಾಗಿರುತ್ತದೆ. ಇಂದು ಯಾವುದೇ ಮಂಗಳಕರ ಕಾರ್ಯಕ್ರಮಗಳನ್ನು ಕುಟುಂಬದಲ್ಲಿ ಮಾಡಬಹುದು. ಕಲಾ ವಿದ್ಯಾರ್ಥಿಗಳಿಗೆ ದಿನವು ಅನುಕೂಲಕರವಾಗಿರುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಅಧ್ಯಯನಕ್ಕಾಗಿ ಕಳೆಯಲಾಗುತ್ತದೆ. ಬೆಳಗ್ಗೆ ವ್ಯಾಯಾಮವನ್ನು ಪ್ರಾರಂಭಿಸುವುದರಿಂದ ನೀವು ಫಿಟ್ ಆಗಿರುತ್ತೀರಿ. ಸಾಮಾಜಿಕ ಮಟ್ಟದಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚಾಗುತ್ತದೆ. ನೀವು ಕೆಲವು ದೊಡ್ಡ ಜವಾಬ್ದಾರಿಗಳನ್ನು ಪಡೆಯಬಹುದು. ಉದ್ಯೋಗಸ್ಥರು ಕೆಲಸದಲ್ಲಿ ಲಾಭವನ್ನು ಪಡೆಯುತ್ತಾರೆ.

ಈ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಏಕೆಂದರೆ ಈ ವೇಳೆ ಕೆಲವು ಹಠಾತ್ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ನಿಮ್ಮ ಸೋಮಾರಿತನವನ್ನು ಬದಿಗಿಟ್ಟು ವಾಕಿಂಗ್‌ಗೆ ಹೋಗಿ ಅಥವಾ ನಿಮ್ಮ ಮನಸ್ಸು, ದೇಹ ಮತ್ತು ಆತ್ಮವನ್ನು ಗುಣಪಡಿಸಲು ನೈಸರ್ಗಿಕ ವಾತಾವರಣದಲ್ಲಿ ಸ್ವಲ್ಪ ಸಮಯವನ್ನು ಕಳೆಯಲು ಸಲಹೆ ನೀಡಲಾಗುತ್ತದೆ.

ಹಣಕಾಸಿನ ವಿಷಯದಲ್ಲಿ ನೀವು ಪಿತ್ರಾರ್ಜಿತ ರೂಪದಲ್ಲಿ ವಿತ್ತೀಯ ಲಾಭಗಳನ್ನು ಅಥವಾ ಹಿಂದೆ ಮಾಡಿದ ಹೂಡಿಕೆಗಳಿಂದ ಹಠಾತ್ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಅತ್ತೆಯೊಂದಿಗಿನ ನಿಮ್ಮ ಸಂಬಂಧವು ಕೆಲವು ತಪ್ಪು ಸಂವಹನಗಳಿಂದಾಗಿ ಈ ಅವಧಿಯಲ್ಲಿ ತೊಂದರೆಗೊಳಗಾಗಬಹುದು. ಆದ್ದರಿಂದ ಅದಕ್ಕಾಗಿ ಎಚ್ಚರದಿಂದಿರಿ ಮತ್ತು ಮಕರ ರಾಶಿಯಲ್ಲಿ ಶನಿ ನೇರವಾದ ಸಮಯದಲ್ಲಿ ಯಾವುದೇ ವಾದ ಮತ್ತು ಸಂಬಂಧಿತ ಚರ್ಚೆಯನ್ನು ತಪ್ಪಿಸಿ.

ಕರ್ಕಾಟಕ: ದಣಿವಿಲ್ಲದೆ ಮುನ್ನಡೆ

ಕರ್ಕಾಟಕ: ದಣಿವಿಲ್ಲದೆ ಮುನ್ನಡೆ

ಈ ದಿನ ನಿಮ್ಮ ಹೊಸ ಭರವಸೆಗಳೊಂದಿಗೆ ಪ್ರಾರಂಭವಾಗುತ್ತದೆ. ನಿಮ್ಮ ಹತ್ತಿರದ ಸಂಬಂಧಿಕರಿಂದ ಆರ್ಥಿಕ ಸಹಾಯವನ್ನು ಪಡೆಯುತ್ತೀರಿ. ಅಲ್ಲದೆ ನೀವು ವ್ಯವಹಾರದ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ನಿಮ್ಮ ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಗುರುವಿನ ಬೆಂಬಲವನ್ನು ಸಹ ನೀವು ಪಡೆಯುತ್ತೀರಿ. ನೀವು ಜೀವನದಲ್ಲಿ ದಣಿವಿಲ್ಲದೇ ಮುನ್ನಡೆಯುತ್ತೀರಿ. ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು, ನೀವು ಬೆಳಿಗ್ಗೆ ವ್ಯಾಯಾಮ ಮಾಡಬೇಕು. ಹಾಗೆಯೇ ನೀವು ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ. ನೀವು ಆಧ್ಯಾತ್ಮಿಕ ಪುಸ್ತಕಗಳನ್ನು ಓದುವುದರ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಬಹುದು.

ಮದುವೆಯಾಗಲು ಬಯಸುವ ಜನರಿಗೆ ಈ ಸಮಯ ಅನುಕೂಲಕರವಾಗಿದೆ. ಶನಿಯು ಅವರಿಗೆ ಶುಭ ಕಾರ್ಯಗಳ ಸಂದರ್ಭವನ್ನು ತಂದೊಡ್ಡುತ್ತಾನೆ. ನೀವು ವಿವಾಹಿತರಾಗಿದ್ದರೆ ಈ ಸಮಯದಲ್ಲಿ ನಿಮ್ಮ ಸಂಗಾತಿ ನಿಮ್ಮ ನಿಷ್ಠೆಯ ಪರೀಕ್ಷೆ ಮಾಡಬಹುದು.

ನಿಮ್ಮ ಸಂಬಂಧದಲ್ಲಿ ನೀವು ಕೆಲವು ಏರಿಳಿತಗಳನ್ನು ನೋಡಬಹುದು. ಆದರೆ ನಿಮ್ಮ ಸಂಗಾತಿಯ ಪರವಾಗಿ ನೀವು ಬಲವಾಗಿ ನಿಲ್ಲಬೇಕು. ನಿಮ್ಮ ಪಾಲುದಾರರೊಂದಿಗಿನ ಹಣಕಾಸಿನ ವ್ಯವಹಾರಗಳು ಕೆಲವು ನಷ್ಟಗಳನ್ನು ಕಾಣಬಹುದು. ಆದರೆ ಇದನ್ನು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರಲು ನೀವು ಬಿಡಬಾರದು. ನಿಮ್ಮ ಆರೋಗ್ಯ ಮತ್ತು ಫಿಟ್ನೆಸ್ ಬಗ್ಗೆ ನೀವು ಕಾಳಜಿ ವಹಿಸಬೇಕಾದ ಸಮಯ ಇದು. ಆರೋಗ್ಯಕರ ಆಹಾರವನ್ನು ಸೇವಿಸಿ. ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ನಿಮಗೆ ಸಲಹೆ ನೀಡಲಾಗುತ್ತದೆ. ಸೋಮಾರಿತನವು ನಿಮ್ಮನ್ನು ಮೀರಿಸಲು ಬಿಡಬೇಡಿ.

ಸಿಂಹ: ವಿದ್ಯಾರ್ಥಿಗಳಿಗೆ ಅಂದುಕೊಂಡ ಫಲಿತಾಂಶ

ಸಿಂಹ: ವಿದ್ಯಾರ್ಥಿಗಳಿಗೆ ಅಂದುಕೊಂಡ ಫಲಿತಾಂಶ

ನಿಮಗೆ ಇದು ಒಳ್ಳೆಯ ದಿನವಾಗಿರುತ್ತದೆ. ಸ್ನೇಹಿತರೊಂದಿಗೆ ಎಲ್ಲೋ ಹೋಗುವ ಕಾರ್ಯಕ್ರಮ ಯಶಸ್ವಿಯಾಗಲಿದೆ. ನೀವು ಮನೆಯ ಹಿರಿಯರ ಸೇವೆಯಿಂದ ಒಳ್ಳೆಯದನ್ನು ಅನುಭವಿಸುವಿರಿ. ಬಂಧುಗಳಲ್ಲಿ ಪ್ರಶಂಸೆಗೆ ಪಾತ್ರರಾಗುವಿರಿ. ನೀವು ನಿಮ್ಮ ನೆಚ್ಚಿನ ವಸ್ತುವನ್ನು ಖರೀದಿ ಮಾಡಬಹುದು. ನಿಮ್ಮ ಆರೋಗ್ಯವನ್ನು ಉತ್ತಮವಾಗಿಡಲು, ಇಂದು ನೀವು ಕರಿದ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಕಾಲೋಚಿತ ತರಕಾರಿಗಳ ಬಳಕೆಯು ನಿಮ್ಮನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ನೀವು ಯಾವುದೇ ನ್ಯಾಯಾಲಯದ ಮೊಕದ್ದಮೆಗಳ ವಿರುದ್ಧ ಹೋರಾಡುತ್ತಿದ್ದರೆ ಇದು ಉತ್ತಮ ಸಮಯವಾಗಿದೆ. ನಿಮ್ಮ ಪರವಾಗಿ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ. ನಿಮ್ಮ ಕೆಲಸದಲ್ಲಿ ನೀವು ಕ್ರಿಯಾತ್ಮಕವಾಗಿರುತ್ತೀರಿ. ಎಲ್ಲಾ ಶತ್ರುಗಳನ್ನು ಎದುರಿಸುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ನೀವು ಎಲ್ಲಾ ಸವಾಲುಗಳನ್ನು ಸೋಲಿಸಲು ಸಾಧ್ಯವಾಗುತ್ತದೆ. ಆದರೆ ನಿಮ್ಮ ಸಂಗಾತಿಯೊಂದಿಗೆ ನೀವು ಘರ್ಷಣೆಗಳು ಅಥವಾ ವಿವಾದಗಳನ್ನು ಎದುರಿಸಬಹುದು. ವಿವಾಹಿತರಿಗೆ ಈ ಸಮಯ ಕೊಂಚ ಸಮಸ್ಯೆಗಳನ್ನು ತಂದೊಡ್ಡಬಹುದು. ಈ ಸಮಯದಲ್ಲಿ ನಿಮ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಲಹೆ ನೀಡಲಾಗುತ್ತದೆ.

ಕನ್ಯಾ: ಸವಾಲುಗಳನ್ನು ಎದುರಿಸುವ ಶಕ್ತಿ

ಕನ್ಯಾ: ಸವಾಲುಗಳನ್ನು ಎದುರಿಸುವ ಶಕ್ತಿ

ಈ ದಿನವು ಸರಿಯಾದ ಯೋಜನೆಯಡಿಯಲ್ಲಿ ಉತ್ತಮವಾಗಿ ಪ್ರಾರಂಭವಾಗಲಿದೆ. ನಿಮ್ಮ ವೃತ್ತಿ ಜೀವನದಲ್ಲಿ ಬದಲಾವಣೆ ತರಲು ನಿಮಗೆ ಸಾಧ್ಯವಾಗುತ್ತದೆ. ಕೆಲಸದ ಸ್ಥಳದಲ್ಲಿ ನೀವು ಸವಾಲುಗಳನ್ನು ಎದುರಿಸಲು ಸಹ ಸಾಧ್ಯವಾಗುತ್ತದೆ. ನಿಮ್ಮ ಕೆಲಸ ಮತ್ತು ಜೀವನದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುತ್ತೀರಿ. ಸಾಮಾಜಿಕ ಮಟ್ಟದಲ್ಲಿ ಜನರಿಗೆ ಸಹಾಯ ಮಾಡಲು ನೀವು ಮುಂದೆ ಹೋಗುತ್ತೀರಿ. ಈ ರಾಶಿಯ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಉತ್ತಮ ದಿನವನ್ನು ಹೊಂದಿರುತ್ತಾರೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ತಮ್ಮ ಅಧ್ಯಯನದ ಸುಧಾರಣೆಗಾಗಿ ಈ ಸಮಯವನ್ನು ಬಳಸಿಕೊಳ್ಳಬಹುದು.

ವಿವಾಹಿತರಿಗೆ ಮಕ್ಕಳ ಭಾಗ್ಯ ಸಿಗಲಿದೆ. ಕೆಸಲದಲ್ಲಿ ಕೊಂಚ ಒತ್ತಡಗಳಿರಬಹುದು. ಆದರೆ ಅದನ್ನು ಎದುರಿಸುವ ಶಕ್ತಿ ದೀಪಾವಳಿಯ ಸಮಯದಲ್ಲಿ ಸಿಗಲಿದೆ. ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಗಳು ನಿಮ್ಮ ಜೀವನವನ್ನು ಸುಧಾರಿಸಲಿವೆ. ಆದರೆ ನಿಮ್ಮ ಸತತ ಪ್ರಯತ್ನ ನಿಮ್ಮನ್ನು ಕೈ ಬಿಡುವುದಿಲ್ಲ. ಉದ್ಯೋಗಸ್ಥ ಮಹಿಳೆಯರಿಗೆ ಈ ಸಮಯ ಉತ್ತಮವಾಗಿದೆ. ಅವರ ಶ್ರಮದ ಫಲ ಸಿಗಲಿದೆ. ಅಂದುಕೊಮಡಂತೆ ಹಬ್ಬವನ್ನು ಆಚರಿಸುತ್ತಾರೆ. ಸಮಾಜದಲ್ಲಿ ಮೆಚ್ಚುಗೆ ಪಡೆಯುತ್ತಾರೆ.

ತುಲಾ: ಹೊಸ ಖಾದ್ಯ ಸವಿಯುವ ದಿನ

ತುಲಾ: ಹೊಸ ಖಾದ್ಯ ಸವಿಯುವ ದಿನ

ಮಕರ ರಾಶಿಯಲ್ಲಿ ಶನಿ ನೇರ ಸಂಚಾರದ ಸಮಯದಲ್ಲಿ ನೀವು ಸ್ವಲ್ಪ ಕಾರ್ಯನಿರತವಾಗಿರಬಹುದು. ನೀವು ಹಿಂದಿನ ಕಾರ್ಯಗಳನ್ನು ಪೂರ್ಣಗೊಳಿಸುವುದರಲ್ಲಿ ನಿರತರಾಗಿರುತ್ತೀರಿ. ನೀವು ಯಾವುದೇ ಅಪರಿಚಿತ ವ್ಯಕ್ತಿಯನ್ನು ನಂಬುವುದನ್ನು ತಪ್ಪಿಸಬೇಕು. ಅಲ್ಲದೆ, ಯಾವುದೇ ರೀತಿಯ ದೊಡ್ಡ ಹೂಡಿಕೆ ಮಾಡುವ ಮೊದಲು ತಜ್ಞರ ಸಲಹೆಯನ್ನು ಪಡೆಯುವುದು ಉತ್ತಮ. ತಾಯಂದಿರು ತಮ್ಮ ಮಕ್ಕಳಿಗೆ ಹೊಸ ಖಾದ್ಯವನ್ನು ತಯಾರಿಸಬಹುದು ಮತ್ತು ತಿನ್ನಿಸಬಹುದು. ಇದರಿಂದಾಗಿ ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಪಿತ್ರಾರ್ಜಿತ ಆಸ್ತಿ ಅಥವಾ ವಿವಾದಿತ ಆಸ್ತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಶನಿಯ ಈ ನೇರ ಚಲನೆ ನಿಮಗೆ ಉತ್ತಮವಾಗಿದೆ.

ನೀವು ವಾಣಿಜ್ಯ ಉದ್ದೇಶಗಳಿಗಾಗಿ ಸ್ವಲ್ಪ ಭೂಮಿ ಅಥವಾ ವಾಹನವನ್ನು ಸಹ ಖರೀದಿಸಬಹುದು. ನೀವು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಥವಾ ನಿಮ್ಮ ತಾಯಿಯೊಂದಿಗೆ ಭಿನ್ನಾಭಿಪ್ರಾಯವನ್ನು ಎದುರಿಸುತ್ತಿದ್ದರೆ ಸಮಸ್ಯೆಯನ್ನು ಪರಿಹರಿಸಲು ಇದು ಉತ್ತಮ ಸಮಯ. ನೀವು ಸಂತೋಷದ ಕೊರತೆಯನ್ನು ಎದುರಿಸಬಹುದು.

ವೃಶ್ಚಿಕ: ಧಾರ್ಮಿಕ ಸ್ಥಳಕ್ಕೆ ಪ್ರವಾಸ

ವೃಶ್ಚಿಕ: ಧಾರ್ಮಿಕ ಸ್ಥಳಕ್ಕೆ ಪ್ರವಾಸ

ಮಕರ ರಾಶಿಯಲ್ಲಿ ಶನಿ ನೇರ ಸಂಚಾರ ನಿಮಗೆ ಹೊಸ ಸಂತೋಷವನ್ನು ತರಲಿದೆ. ನೀವು ನಿಮ್ಮ ಹೆತ್ತವರೊಂದಿಗೆ ಧಾರ್ಮಿಕ ಸ್ಥಳಕ್ಕೆ ಹೋಗುತ್ತೀರಿ. ಮನೆಗೆ ಹೊಸ ಅತಿಥಿಗಳ ಆಗಮನದ ಸಾಧ್ಯತೆಯಿದೆ. ಇದರಿಂದಾಗಿ ಕುಟುಂಬದ ವಾತಾವರಣವು ಆಹ್ಲಾದಕರವಾಗಿರುತ್ತದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಾಮರಸ್ಯ ಇರುತ್ತದೆ. ಮಕ್ಕಳಿಗೆ ಇಂದು ಉತ್ತಮ ದಿನ. ಕೆಲವು ವಿಶೇಷ ಕೆಲಸಗಳಿಗಾಗಿ ಕುಟುಂಬ ಸದಸ್ಯರು ನಿಮ್ಮಿಂದ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು. ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಿ. ಹೊರಗೆ ಎಣ್ಣೆಯುಕ್ತ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ.

ಈ ಸಮಯದಲ್ಲಿ ನಿಮ್ಮ ಕಿರಿಯ ಸಹೋದರನೊಂದಿಗೆ ನಿಮ್ಮ ಸಂಬಂಧವನ್ನು ಸಮತೋಲನಗೊಳಿಸಲು ಪ್ರಯತ್ನಿಸಿ. ಮಾತು ಜಗಳವಾಗಿ ಬದಲಾಗಬಹುದು. ವಾದಗಳನ್ನು ತಪ್ಪಿಸಲು ಪ್ರಯತ್ನಿಸಿ. ವ್ಯಾಪಾರದಲ್ಲಿರುವವರು ಬೆಳವಣಿಗೆ ಮತ್ತು ಸ್ಥಾಪನೆಗಾಗಿ ಹೆಚ್ಚು ಶ್ರಮಿಸಬೇಕಾಗುತ್ತದೆ. ಕೆಲಸದ ವಿಸ್ತರಣೆ ಮತ್ತು ಗ್ರಾಹಕರೊಂದಿಗೆ ಸಂವಹನಕ್ಕಾಗಿ ನೀವು ಸ್ವಲ್ಪ ದೂರ ಪ್ರಯಾಣಿಸಬೇಕಾಗಬಹುದು.

ಧನು: ಆಧ್ಯಾತ್ಮಿಕತೆಯ ಕಡೆಗೆ ಒಲವು

ಧನು: ಆಧ್ಯಾತ್ಮಿಕತೆಯ ಕಡೆಗೆ ಒಲವು

ಈ ದಿನ ಪ್ರತಿದಿನಕ್ಕಿಂತ ಉತ್ತಮವಾಗಿರುತ್ತದೆ. ವ್ಯಾಪಾರ ಕ್ಷೇತ್ರದಲ್ಲಿ ಕೆಲವು ತೊಂದರೆಗಳು ದೂರವಾಗಲಿವೆ. ಲಾಭದ ಹೆಚ್ಚಾಗಲಿದೆ. ಅನಗತ್ಯ ಓಟವನ್ನು ತಪ್ಪಿಸಿ. ನೀವು ಆಧ್ಯಾತ್ಮಿಕತೆಯ ಕಡೆಗೆ ಒಲವು ತೋರುತ್ತೀರಿ. ನಿಮ್ಮ ವೃತ್ತಿಜೀವನದಲ್ಲಿ ಕೆಲವು ದೊಡ್ಡ ಯಶಸ್ಸುಗಳು ಸಿಗಲಿವೆ. ಮಹಿಳೆಯರು ತಮ್ಮ ಮಕ್ಕಳೊಂದಿಗೆ ಉತ್ತಮ ಸಮಯವನ್ನು ಕಳೆಯುವರು. ಇಬ್ಬರ ನಡುವಿನ ಸಂಬಂಧ ಗಟ್ಟಿಯಾಗಲಿದೆ.

ಶನಿಯು ನಿಮ್ಮ ಹಣಕಾಸಿನ ಸೋರಿಕೆಗೆ ದೊಡ್ಡ ಪರಿಹಾರವನ್ನು ನೀಡುತ್ತದೆ. ಇದರಿಂದ ನೀವು ಹೆಚ್ಚು ಗಳಿಸಲು ಸಾಧ್ಯವಾಗುತ್ತದೆ ಮತ್ತು ನಿಮ್ಮ ಹಣವನ್ನು ಉಳಿಸಲು ಸಾಧ್ಯವಾಗುತ್ತದೆ.

ನಿಮ್ಮ ನೇರ ಸಂವಹನ ಮತ್ತು ಶಾಂತ ಮನೋಭಾವದಿಂದಾಗಿ ನಿಮ್ಮ ಕುಟುಂಬ ಜೀವನವು ಕೆಲವು ಏರಿಳಿತಗಳನ್ನು ಕಾಣಬಹುದು. ಹಠಾತ್ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆಯೂ ನೀವು ಚಿಂತಿತರಾಗಬಹುದು. ಸುಳ್ಳು ಹೇಳಬೇಡಿ ಮತ್ತು ಸಸ್ಯಾಹಾರಿ ಆಹಾರವನ್ನು ಅನುಸರಿಸಿ. ಕರಿದ ಪದಾರ್ಥಗಳಿಂದ ದೂರವಿರಿ. ಆಲ್ಕೋಹಾಲ್ ಮತ್ತು ಇತರ ನಿದ್ರಾಜನಕ ವಸ್ತುಗಳಿಂದ ದೂರವಿರಿ.

ಮಕರ: ಕಠಿಣ ಶ್ರಮವೇ ಯಶಸ್ಸಿನ ಮೂಲ

ಮಕರ: ಕಠಿಣ ಶ್ರಮವೇ ಯಶಸ್ಸಿನ ಮೂಲ

ಮಕರ ರಾಶಿಯಲ್ಲಿ ಶನಿ ನೇರ ಸಂಚಾರದ ಸಮಯದಲ್ಲಿ ನಿಮ್ಮ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಬೇಕು. ಸೋಮಾರಿತನವನ್ನು ಬದಿಗಿಟ್ಟುಬಿಡಿ. ನಿಯಮಿತವಾಗಿ ಯೋಗ ಮತ್ತು ಧ್ಯಾನವನ್ನು ರೂಢಿಸಿಕೊಳ್ಳಿ. ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ. ಅಂದುಕೊಂಡ ಕಾರ್ಯಗಳು ತಡವಾಗಲಿದೆ. ಆದರೆ ನಿರಾಶೆಗೊಳ್ಳದಿರುವುದು ಉತ್ತಮ. ನಿಮ್ಮ ಪ್ರಯತ್ನಗಳು ನಿಮಗೆ ಯಶಸ್ಸನ್ನು ತಂದು ಕೊಡುತ್ತವೆ. ಕಾಲ ಕಳೆದಂತೆ ಮನೆ ಬಾಗಿಲಿಗೆ ಅದೃಷ್ಟ ಕಾವಲಿರಲಿದೆ. ಅದು ನಿಮ್ಮ ಒಳ್ಳೆತನದಿಂದ ಸಾಧ್ಯವಾಗುತ್ತದೆ. ಹೀಗಾಗಿ ನೀವು ಕೈಗೊಳ್ಳುವ ಕಾರ್ಯಗಳು, ನಡೆ, ನುಡಿ ಬಗ್ಗೆ ಜಾಗರೂಕರಾಗಿರಲು ಸೂಚಿಸಲಾಗುತ್ತದೆ.

ಸಾಧ್ಯವಾದಷ್ಟು ಶಿಸ್ತುಬದ್ಧವಾಗಿರಲು ಪ್ರಯತ್ನಿಸಿ. ಅದು ನಿಮಗೆ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ಜೀವನಶೈಲಿ ಮತ್ತು ನಿಮ್ಮ ಕೆಲಸದ ಪ್ರೊಫೈಲ್‌ನಲ್ಲಿ ಕೆಲವು ಪರಿವರ್ತನೆಗಳಿಗೆ ನೀವು ಸಾಕ್ಷಿಯಾಗುತ್ತೀರಿ. ನಿಮ್ಮ ಕಿರಿಯ ಸಹೋದರರ ಆರೋಗ್ಯದ ಬಗ್ಗೆ ನೀವು ಸ್ವಲ್ಪ ಚಿಂತಿಸಬೇಕಾಗುತ್ತದೆ. ಏಕೆಂದರೆ ಅವರು ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು.

ಕುಂಭ: ಉದ್ಯೋಗಸ್ಥರಿಗೆ ಲಾಭದಾಯಕ ದಿನ

ಕುಂಭ: ಉದ್ಯೋಗಸ್ಥರಿಗೆ ಲಾಭದಾಯಕ ದಿನ

ಈ ದಿನವು ಆತ್ಮವಿಶ್ವಾಸದಿಂದ ತುಂಬಿರುತ್ತದೆ. ಉದ್ಯೋಗಸ್ಥರಿಗೆ ಲಾಭದಾಯಕ ದಿನವಾಗಿದೆ. ಅವರು ಕೆಲಸಕ್ಕೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುತ್ತಾರೆ. ಸರಿಯಾದ ಯೋಜನೆಯೊಂದಿಗೆ, ನಿಮ್ಮ ವೃತ್ತಿಜೀವನದಲ್ಲಿ ಬದಲಾವಣೆಯನ್ನು ಮಾಡಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಆಹ್ಲಾದಕರ ನಡವಳಿಕೆಯು ಎಲ್ಲರನ್ನೂ ಮೆಚ್ಚಿಸುತ್ತದೆ. ನೀವು ಸಾಮಾಜಿಕ ಮಟ್ಟದಲ್ಲಿ ಜನರಿಗೆ ಸಹಾಯ ಮಾಡುವ ಅವಕಾಶವನ್ನು ಪಡೆಯಬಹುದು. ವಿದೇಶಿ ನೆಲದಲ್ಲಿ ನೆಲೆಸಲು ಬಹಳ ದಿನಗಳಿಂದ ಯೋಜಿಸುತ್ತಿರುವ ಸ್ಥಳೀಯರಿಗೆ ಇದು ಅತ್ಯಂತ ಅನುಕೂಲಕರ ಸಮಯ.

ನೀವು ದೀರ್ಘವಾದ ಸಾಗರೋತ್ತರ ಪ್ರಯಾಣವನ್ನು ಮಾಡಲು ಬಯಸಿದ್ದರೂ ಸಹ ಇದು ಉತ್ತಮ ಸಮಯ. ಆರೋಗ್ಯದ ಬಗ್ಗೆ ಅಜ್ಞಾನವು ನಿಮ್ಮ ವೈದ್ಯಕೀಯ ವೆಚ್ಚವನ್ನು ಹೆಚ್ಚಿಸಬಹುದಾದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ನೀವು ಸ್ವಲ್ಪ ಜಾಗರೂಕರಾಗಿರಬೇಕು. ನಿಮ್ಮ ವೃತ್ತಿಪರ ಸವಾಲುಗಳು ಮತ್ತು ಅಡೆತಡೆಗಳು ಕೊನೆಗೊಳ್ಳುತ್ತವೆ. ನೀವು ಸುಗಮವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.

ಕುಟುಂಬಸ್ಥರು ನಿಮ್ಮ ಪರವಾಗಿರುತ್ತಾರೆ. ನಿಮ್ಮ ಯೋಜನೆಗಳಿಗೆ ಸ್ಪಂದಿಸುತ್ತಾರೆ. ಅನಾಥ ಆಶ್ರಮಗಳಿಗೆ ನೀವು ಸಹಾಯ ಹಸ್ತ ಚಾಚುವಿರಿ. ದಾನ ಧರ್ಮದಲ್ಲಿ ನಿಮ್ಮದು ದೊಡ್ಡ ಮನಸ್ಸು. ಹೀಗಾಗಿ ನೀವು ಸಮಾಜದಲ್ಲಿ ಗುರುತಿಸಲ್ಪಡುವಿರಿ.

ಮೀನ: ವಿಹಾರಕ್ಕೆ ಹೋಗುವ ಅವಕಾಶ

ಮೀನ: ವಿಹಾರಕ್ಕೆ ಹೋಗುವ ಅವಕಾಶ

ಈ ದಿನವು ನಿಮಗೆ ಅನುಕೂಲಕರವಾಗಿರುತ್ತದೆ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗಾವಕಾಶಗಳು ದೊರೆಯಲಿವೆ. ಇಂದು ನೀವು ಸ್ನೇಹಿತರೊಂದಿಗೆ ವಿಹಾರಕ್ಕೆ ಹೋಗುವ ಮೂಲಕ ಸಂತೋಷವನ್ನು ಪಡೆಯುತ್ತೀರಿ. ಇದರೊಂದಿಗೆ, ಹಣಕ್ಕೆ ಸಂಬಂಧಿಸಿದ ಚಿಂತೆಗಳು ದೂರವಾಗುತ್ತವೆ ಮತ್ತು ನಿಮ್ಮ ಹಣ ಎಲ್ಲೋ ಸಿಲುಕಿಸಬಹುದು. ಅದು ಕಾಲ ಕಳೆದಂತೆ ನಿಮ್ಮ ಕೈಗೆ ಸಿಗಲಿದೆ. ದಕ್ಷತೆಯ ಬಲದ ಮೇಲೆ ನೀವು ಮುಂದುವರಿಯಲು ಅನೇಕ ಅವಕಾಶಗಳನ್ನು ಪಡೆಯುತ್ತೀರಿ.

ನೀವು ಮಾಡಿದ ಎಲ್ಲಾ ಶ್ರಮದ ಫಲ ನಿಮಗೆ ಸಿಗಲಿದೆ. ಈ ಸಮಯದಲ್ಲಿ ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸುತ್ತದೆ. ನೀವು ಹಿರಿಯರಿಂದ ಸಂಬಂಧದಿಂದ ಆಶೀರ್ವದಿಸಲ್ಪಡುತ್ತೀರಿ. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ಕುಟುಂಬದಲ್ಲಿ ಅಡೆತಡೆಗಳನ್ನು ಎದುರಿಸುತ್ತಿರುವವರಿಗೆ ಸ್ವಲ್ಪ ಮುಕ್ತಿ ಸಿಗುತ್ತದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಪ್ರತಿಫಲ ದೊರೆಯುತ್ತದೆ. ಈ ಸಮಯದಲ್ಲಿ ಆರ್ಥಿಕ ಸ್ಥಿತಿ ಕೊಂಚ ಹದಗೆಡಬಹುದು. ಅದರ ಬಗ್ಗೆ ಜಾಗರೂಕರಾಗಿರಿ. ಅನಾವಶ್ಯಕ ಖರ್ಚನ್ನು ತಪ್ಪಿಸಿ. ವಾಹನ ಖರೀದಿ ಬಗ್ಗೆ ಮುಂದಿನ ವರ್ಷ ಯೋಜನೆ ಮಾಡಬಹುದು.

English summary
Saturn Direct In Capricorn will take place on October 23, 2022. Let us now know in detail the astrological impact and remedies of Shani Margi In Makara rashi on all the zodiac signs in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X