ವರ್ಷಾಂತ್ಯದಲ್ಲಿ ಈ ರಾಶಿಗಳಿಗೆ ಶನಿ ಕೃಪೆ; ಕಷ್ಟಗಳಿಗೆ ಗುಡ್‌ಬೈ, ಕೈ ಹಿಡಿಯಲಿದೆ ಅದೃಷ್ಟ!

Saturn Direct: ಜ್ಯೋತಿಷ್ಯದ ಪ್ರಕಾರ, ಒಂಭತ್ತು ಗ್ರಹಗಳ ಪೈಕಿ ನಿಧಾನವಾಗಿ ಚಲಿಸುವ ಗ್ರಹ ಶನಿ. ಶನಿ ಒಂದು ರಾಶಿ ಬಿಟ್ಟು ಇನ್ನೊಂದು ರಾಶಿ ಪ್ರವೇಶಿಸಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತಾನೆ. ಇನ್ನು ಶನಿ ಅಂದ್ರೆ ಕರ್ಮ ಮತ್ತು ನ್ಯಾಯಕ್ಕೆ ದೇವರು. ನಾವು ಯಾವ ರೀತಿ ಕರ್ಮ ಮಾಡುತ್ತೇವೆಯೋ ಅದೇ ರೀತಿ ಫಲ ಸಿಗುತ್ತದೆ ಎನ್ನುವುದು ನಂಬಿಕೆ.

ಶನಿ ಯಾವಾಗ ರಾಶಿ ಅಥವಾ ನಕ್ಷತ್ರ ಬದಲಾಯಿಸುತ್ತಾನೋ ಅದರ ಪ್ರಭಾವ ಎಲ್ಲಾ ರಾಶಿಯವರ ಮೇಲೆ ಆಗುತ್ತದೆ. ಇನ್ನು ಶನಿಯ ಹಿಮ್ಮುಖ ಚಲನೆ, ನೇರ ನಡೆ, ಅಸ್ತ, ಉದಯ ಎಲ್ಲವೂ ಬಹಳ ಮುಖ್ಯವೇ. ಇದೇ ಕಾರಣ ಜನ ಶನಿ ಸಂಚಾರದ ಬಗ್ಗೆ ಭಯ ಇಟ್ಟುಕೊಂಡಿರುವುದಕ್ಕೆ. ಶನಿಯ ಆಶೀರ್ವಾದ ಶಾಶ್ವತವಂತೆ. ಅಂದರೆ ಅವರ ಸಂಚಾರದ ಪ್ರಭಾವ ನಮ್ಮ ಮೇಲೆ ಶುಭವಾಗಿದ್ದರೆ ಭರ್ಜರಿ ಜಾಕ್​ಪಾಟ್ ಸಿಕ್ಕಿದ ಹಾಗೆ. ಇನ್ನು ಅವ ತೊಂದರೆ ಕೊಡುವುದಕ್ಕೆ ಶುರು ಮಾಡಿದರೆ ಉಳಿಗಾಲವಿಲ್ಲ.

Saturn Direct 2026 Shani Deva Blessings On Five Zodiac Sign Huge Financial Benefits And Career Growth

Saturn Direct: ಹಿಮ್ಮುಖ ಚಲನೆಯಿಂದ ನೇರ ನಡೆಗೆ

ಜುಲೈ 27ಕ್ಕೆ ಶನಿ ಮೀನ ರಾಶಿಯಲ್ಲಿ ಹಿಮ್ಮುಖ ಚಲನೆ ಶುರು ಮಾಡಿದ್ದಾನೆ. 138 ದಿನ ಶನಿ ಹಿಮ್ಮುಖ ಚಲನೆಯಲ್ಲಿಯೇ ಇರುವುದು. ಅಂದರೆ ಡಿಸೆಂಬರ್ 11ಕ್ಕೆ ಮತ್ತೆ ನೇರ ನಡೆ ಶುರುವಾಗುತ್ತದೆ. ಶನಿಯ ನೇರ ಚಲನೆ ಯವಾಗ ಶುರುವಾಗುತ್ತದೆಯೋ ಅಲ್ಲಿಂದ ನಿಂತು ಹೋಗಿದ್ದ ಕೆಲಸಗಳು ಕೂಡಾ ವೇಗ ಪಡೆಯುವುದು. ಕೆಲವು ರಾಶಿಯವರ ಪಾಲಿಗಂತೂ ಈ ಸಮಯ ಸುವರ್ಣ ಯುಗ ಅಂದ್ರೆ ತಪ್ಪಾಗಲಿಕ್ಕಿಲ್ಲ.

Saturn Direct: ಶನಿಯ ನೇರ ಚಲನೆಯ ಅದೃಷ್ಟ ಪಡೆಯುವ ರಾಶಿಗಳು

ವೃಷಭ ರಾಶಿ (Taurus): ಶನಿಯ ನೇರ ನಡೆ ನಿಮಗೆ ತುಂಬಾ ಪ್ರಯೋಜನಕಾರಿಯಾಗಿ ಇರುವುದು. ಎದುರಾಗಿದ್ದ ಕಷ್ಟ ಕೊನೆಯಾಗುವುದು. ಹಣಕಾಸಿನ ಸಮಸ್ಯೆಗೂ ಪರಿಹಾರ ಸಿಗುವುದು. ಸರ್ಕಾರಿ ಕೆಲಸ ಸಿಗುವ ಸಾಧ್ಯತೆ ಇದೆ. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಅನಿರೀಕ್ಷಿತವಾಗಿ ಹಣದ ಹರಿವು ಹೆಚ್ಚಾಗುವುದು. ಆರ್ಥಿಕ ಲಾಭವಾಗುವುದು. ಭೂಮಿ ಅಥವಾ ಆಸ್ತಿ ಖರೀದಿಸುವ ಸಾಧ್ಯತೆ ಇದೆ. ಸಂತೋಷ ಹೆಚ್ಚಾಗುವುದು. ಶುಭ ಕಾರ್ಯ ನಡೆಯುವ ಸಾಧ್ಯತೆ ಇದೆ. ಬಡ್ತಿ ಸಿಗುವ ಮೂಲಕ ಉನ್ನತ ಸ್ಥಾನಕ್ಕೆ ಏರುವಿರಿ.

ಮಕರ ರಾಶಿ (Capricorn): ಮಕರ ರಾಶಿಯ ಅಧಿಪತಿ ಶನಿ. ಶನಿಯ ನೇರ ಚಲನೆ ಆರ್ಥಿಕವಾಗಿ, ವೃತ್ತಿಪರವಾಗಿ ದೊಡ್ಡ ಟ್ವಿಸ್ಟ್ ಕೊಡುತ್ತದೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ಇಲ್ಲಿಯವರೆಗೆ ಇದ್ದ ಅಡೆತಡೆ ದೂರವಾಗುವುದು. ಎಲ್ಲವೂ ನೀವು ಅಂದುಕೊಂಡಂತೆ ನಡೆಯುವುದು. ಸಮಯ, ಅದೃಷ್ಟ ನಿಮ್ಮ ಪರವಾಗಿ ಇರುವುದು. ಹಿಂದೆ ಮಾಡಿರುವ ಕಠಿಣ ಪರಿಶ್ರಮದ ಫಲ ಈ ಹೊತ್ತಿನಲ್ಲಿ ಸಿಗುವುದು. ವ್ಯವಹಾರ ವಿಸ್ತರಿಸುವ ಯೋಚನೆ ಇದ್ದರೆ ಮುಂದುವರಿಯಬಹುದು. ಆದಾಯದ ಹೊಸ ಮೂಲ ಹುಟ್ಟಿಕೊಳ್ಳುವುದು. ವ್ಯವಹಾರದಲ್ಲಿ ಬಳಸುವ ಹೊಸ ತಂತ್ರ ಕೂಡಾ ಫಲ ನೀಡುವುದು. ಕಾಡುತ್ತಿದ್ದ ಆರೋಗ್ಯ ಸಮಸ್ಯೆ ನಿವಾರಣೆಯಾಗುವುದು.

ತುಲಾ ರಾಶಿ (Libra): ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ಸಮಯ ಹೆಚ್ಚು ಅನುಕೂಲಕರವಾಗಿದೆ. ಕೆಲಸದಲ್ಲಿ ಎದುರಾಗಿರುವ ಸಮಸ್ಯೆ ನಿವಾರಣೆಯಾಗುವುದು. ಸಾಲದಿಂದ ಮುಕ್ತಿ ಸಿಗುವುದು. ಶತ್ರುಬಾಧೆ ನಿವಾರಣೆಯಾಗುವುದು. ಹೊಸ ಹೊಸ ಅವಕಾಶ ಸಿಗುವುದು. ಉನ್ನತ ಸ್ಥಾನಕ್ಕೆ ಏರುವ ಯೋಗವಿದೆ. ಮಾನಸಿಕ ಒತ್ತಡ ಕಡಿಮೆಯಾಗುವುದು.

ಕುಂಭ ರಾಶಿ (Aquarius): ಶನಿ ಕುಂಭ ರಾಶಿಯ ಅಧಿಪತಿಯೂ ಹೌದು. ಹಾಗಾಗಿ ನಿಮ್ಮ ಪಾಲಿಗೂ ಈ ಸಮಯ ಅದೃಷ್ಟ ತರುವುದು. ಸಮಯ ಮತ್ತು ಅದೃಷ್ಟದ ಬೆಂಬಲ ಇರುವುದು. ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚಾಗುವುದು. ವ್ಯವಹಾರ ಒಪ್ಪಂದಗಳ ಮೂಲಕ ಉತ್ತಮ ಲಾಭವಾಗುವುದು. ಹೊಸ ಕೆಲಸ ಹುಡುಕುವವರ ಹುಡಕಾಟ ಕೊನೆಯಾಗುವುದು.ಈಗಾಗಲೇ ಕೆಲಸದಲ್ಲಿ ಇರುವವರಿಗೆ ಉತ್ತಮ ಅವಕಾಶ ಸಿಗುವುದು. ಆರ್ಥಿಕ ಸ್ಥಿತಿ ಸ್ಥಿರವಾಗಿರುವುದು. ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುವಿರಿ. ತಮ್ಮ ವ್ಯವಹಾರವನ್ನು ವಿಸ್ತರಿಸುವ ಬಗ್ಗೆ ಯೋಚಿಸುತ್ತಿರುವವರಿಗೆ ಇದು ಸರಿಯಾದ ಸಮಯ.

ಮಿಥುನ ರಾಶಿ (Gemini): ಉದ್ಯೋಗ, ವ್ಯವಹಾರಕ್ಕೆ ಸಂಬಂಧಿಸಿದಂತೆ ಹೆಚ್ಚು ಲಾಭವಾಗುವುದು. ಬಡ್ತಿ ಸಿಗುವುದು. ಹೊಸ ಜವಾಬ್ದಾರಿ ಸಿಗುವುದು. ಕೆಲಸ ಬದಲಾಯಿಸುವ ಯೋಚನೆ ಇದ್ದರೆ ಇದು ಸಕಾಲ. ಹಣಕಾಸಿನ ಲಾಭವಾಗುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+