ಸಾಡೇಸಾತಿ : ಮೀನ ರಾಶಿಗೆ ಅಷ್ಟಮಶನಿ ಕಾಟ
ರೇವತಿ, ಉತ್ತರಭಾದ್ರ, ಪೂರ್ವಭಾದ್ರ ನಕ್ಷತ್ರದ 4ನೇ ಚರಣಗಳಲ್ಲಿ ಜನಿಸಿದವರು ಮೀನ ರಾಶಿಯವರಾಗುತ್ತಾರೆ. ಶನಿಮಹಾತ್ಮನು ಈ ರಾಶಿಯಿಂದ 8ನೇ ಸ್ಥಾನದಲ್ಲಿದ್ದಾನೆ. ಈ ಸ್ಥಾನದಲ್ಲಿದ್ದಾಗ ದೇವನು ಕೇವಲ ಕೆಟ್ಟದ್ದನ್ನೇ ಮಾಡುತ್ತಾನೆ (ಕೇವಲ ಕೆಟ್ಟವರಿಗೆ ಮಾತ್ರ). ಕೆಟ್ಟವರಿಗೆ ಒಂದಿನಿತೂ ಕೂಡ ಒಳ್ಳೆಯತನ ತೋರಿಸುವ ಮನಸ್ಸು ಮಾಡಲ್ಲ. ಇಂಥವರಿಗೆ ಈ ಸಮಯದಲ್ಲಿ ಅನಾರೋಗ್ಯದಿಂದ ವೈದ್ಯರ ನಿರಂತರ ಭೇಟಿ ಅನಿವಾರ್ಯವಾಗಿರುತ್ತದೆ. ಕೆಲವರಿಗಂತೂ ಚಿಕ್ಕಪುಟ್ಟ ಅಪಘಾತಗಳು ಮಾಮೂಲಿಯಾಗಿರುತ್ತವೆ. ದೊಡ್ಡ ಅಪಘಾತಗಳು ಆಗುತ್ತಲೇ ತಪ್ಪುತ್ತಿರುತ್ತವೆ. (ಮುಂದಿನ ದಿನಗಳಲ್ಲಿ ಮೇಷ ರಾಶಿಯವರಿಗೆ ಶನಿದೇವನು ಅಷ್ಟಮನಾಗಲಿದ್ದಾನೆ.)
ಮುಂದೆ 9ನೇ ಸ್ಥಾನಕ್ಕೆ ಬಂದು ಈ ರಾಶಿಯವರಿಗೆ ಬ್ರೇಕ್ ನೀಡಲಿದ್ದಾನೆ ಮಹಾತ್ಮನು. ಆದ್ದರಿಂದ ಈ ಸಮಯದಲ್ಲಿ ಒಳ್ಳೆಯವರು ಚಿಂತೆ ಮಾಡಬೇಕಾದುದೇನೂ ಇಲ್ಲ. ಆದರೆ ಕೆಟ್ಟತನದಿಂದಿರುವವರಿಗೆ ಹೆಲ್ತ್ ಕೆಟ್ಟು ಹೋಗುವುದು ಗ್ಯಾರಂಟಿ. ಇನ್ನು ಮೀನ ರಾಶಿಯಲ್ಲಿನ ಅತೀ ಹೆಚ್ಚಿನ ಪಾಪ ಮಾಡಿದ ಪಾಪಿಗಳನ್ನು ಶನಿದೇವನು ಜಗದಿಂದ ರೈಟ್ ಹೇಳಿಸಿ ಕಳಿಸಿಬಿಡುತ್ತಾನೆ. ಕಮ್ಮಿ ಪಾಪ ಮಾಡಿದ್ದರೆ ದೇಹದ ಅಂಗಗಳಲ್ಲಿ ಒಂದೆರಡು ಕಾಣೆಯಾಗುತ್ತವೆ.
ಜೀವದ ಮೇಲಿನ ಆಸೆ ಎಲ್ಲರಿಗೂ ಇರುತ್ತದೆ. ಜೀವಕ್ಕೇನೆ ತೊಂದರೆ ಮಾಡಿಕೊಳ್ಳುವಂತೆ ಕೆಲವರು ಮಾನವೀಯತೆ ಇಲ್ಲದೇ ಟಾರ್ಚ್‌ರ್ ಕೊಡುತ್ತಿರುತ್ತಾರೆ. ಈ ರೀತಿ ಯಾರಾದರೂ ಮೀನ ರಾಶಿಯವರು ಮಾಡಿದ್ದರೆ ಅವರು ತಮ್ಮ ಜೀವಕ್ಕೆ ತೊಂದರೆ ಬಂದಿದೆ ಎಂದುಕೊಳ್ಳಬೇಕು ಈ ಅಷ್ಟಮಶನಿ ಪ್ರಭಾವದಲ್ಲಿ. ಹರಿಬ್ರಹ್ಮ ಬಂದರೂ ಶನಿದೇವನ ಮುಂದೆ ಅವರಾಟ ನಡೆಯುವುದಿಲ್ಲ. ಹರನ ವರವೇ ಶನಿದೇವನಿಗಿದೆ.

ನಮ್ಮ ಮಕ್ಕಳಲ್ಲಿ ನಮ್ಮದೇ ಡಿಎನ್‌ಎ ಇರುವುದರಿಂದ ಅವರೂ ಕೂಡ ನಮ್ಮ ದೇಹದ ಅಂಗವಿದ್ದಂತೆ. ಅದಕ್ಕೆಂದೇ ಅವರಿಗೇನಾದರೂ ತೊಂದರೆಯಾದರೆ ನಮ್ಮ ದೇಹಕ್ಕಾದಷ್ಟೇ ನಮಗೂ ನೋವಾಗುತ್ತದೆ. ಆದ್ದರಿಂದ ಕೆಟ್ಟತನ ಮಾಡಿ ಕ್ರೂರತನವಿರುವವರಿಗೆ ತಮ್ಮ ದೇಹದ ಅಂಗಗಳಿಗೆ ತೊಂದರೆಯಾಗುತ್ತದೆ. ಕೆಟ್ಟವರಿಗೆ ಅಷ್ಟಮಶನಿ ಕಾಟದಲ್ಲಿ ಇದೆಲ್ಲಾ ಆಗೋದು ಗ್ಯಾರಂಟೀನೆ. ಆದ್ದರಿಂದ ನಮ್ಮ ಮಕ್ಕಳು ಚೆನ್ನಾಗಿರಬೇಕೆಂದರೆ ನಾವು ಚೆನ್ನಾಗಿರುವ ಮತ್ತೊಬ್ಬರಿಗೆ ತೊಂದರೆ ಮಾಡಿರಬಾರದು. ಮಾಡಿದ್ದರೆ ಶಿಕ್ಷೆ ನೀಡುವ ಶನಿದೇವನಿಗೆ ದಯೆ, ಕರುಣೆ ಎಂದರೆ ಗೊತ್ತೇ ಇಲ್ಲ ಎಂಬುದನ್ನು ಅರಿತುಕೊಳ್ಳಬೇಕು.
ಶನಿದೇವನಿಂದ ಮೀನ ರಾಶಿಯವರಿಗೆ ಆರೋಗ್ಯದ ಮಹತ್ವ ಗೊತ್ತಾಗುತ್ತಿದೆ. ಪ್ರೀತಿಯ ಲೋಕದಲ್ಲಿ ಸುಖಿಸುತ ಜಗವನ್ನೇ ಮರೆತವರು, ಈಗ ಎಚ್ಚರಗೊಂಡು ಗಲಿಬಿಲಿಯಾಗಲಾರಂಭಿಸುವಂತಾಗಿದೆ. ಏನಾಯ್ತು ಎಂದುಕೊಳ್ಳುವಷ್ಟರಲ್ಲಿ ಎಲ್ಲ ಮುಗಿದು ಹೋಗಿರುತ್ತದೆ. ಆದ್ದರಿಂದ ಡೆತ್ ಸರ್ಟಿಪಿಕೆಟ್ ಬ್ಯಾಗ್‌ನಲ್ಲಿಟ್ಟುಕೊಳ್ಳುವಂತಹ ಮಾರಕ ರೋಗಗಳು ಬರುವ ಸಮಯ ಇದಾಗಿರುವುದರಿಂದ, ತುಂಬಾ ಸುಂದರವಾಗಿದ್ದಾರೆಂದು ಅವರಿವರೊಂದಿಗೆ ಮಿಲನಕ್ಕೆ ಮುಂದಾಗಬಾರದು. ಮುಂದಾದಿರೆನ್ನಿ ಮುಂದಿನ ಭವಿಷ್ಯ ಮುಗಿತೆಂದುಕೊಳ್ಳಿ. ಹೌದು, ಈ ಸಮಯದಲ್ಲಿ ಮೀನ ರಾಶಿಯವರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಶತಪ್ರಯತ್ನ ಮಾಡುತ್ತಲೇ ಇರಬೇಕು. ಓಡಾಡುವಾಗ ಮೈಯೆಲ್ಲಾ ಕಣ್ಣಾಗಿದ್ದುಕೊಂಡು ಮೈಮರೆಯಬಾರದು. ಅಮವಾಸ್ಯೆಗಳಂದು ಸುಖಾಸುಮ್ಮನೆ ಪ್ರಯಾಣದಲ್ಲಿ ಸಾಹಸದ ಕೆಲಸ ಮಾಡಬಾರದು. ಮಾಡಲು ಹೋದರೆ ತಿಥಿಯೂಟ ಮನೆಮಂದಿಗೆಲ್ಲ, ಎಚ್ಚರವಾಗಿರಬೇಕು.
ದೇಹದಲ್ಲಿನ ತೊಂದರೆಗಳಿಗೆ ಸರ್ಜರಿ ಮಾಡಿಸಬೇಕೆಂದು ವೈದ್ಯರು ಹೇಳಿದರೆ ಓಕೆ ಹೇಳಿ ಆರೋಗ್ಯವಂತರಾಗಬೇಕು. ಇದಕ್ಕಾಗಿಯೇ ಅಷ್ಟಮಶನಿಯ ಸಂಚಾರದ ಸಮಯದಲ್ಲಿ ಆರೋಗ್ಯ ವಿಮೆ ಮಾಡಿಸಿಟ್ಟುಕೊಳ್ಳಬೇಕು ಎಂದು ಹೇಳುವುದು. ದೇಹದಲ್ಲಿ ಉತ್ಸಾಹದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಮಕ್ಕಳ ತರಹ ಯಾವಾಗಲೂ ಚಟುವಟಿಕೆಯಿಂದಲೇ ಇರಬೇಕು. ಸ್ವಂತ ವಾಹನ ಅಪರಿಚಿತರಿಗೆ ಕೊಡಬಾರದು. ವಾಹನದ ವಿಮೆ ಮುಗಿದಿದ್ದರೆ ಕೂಡಲೇ ಕೂಡಲೇ ಮರುಚಾಲನೆಗೊಳಿಸಿಕೊಳ್ಳಬೇಕು. ದುಡ್ಡು ಉಳಿಯಬೇಕೆಂದರೆ ಹೀಗೆ ಮಾಡಬೇಕು.
ದೊಡ್ಡವನು ನಾನು ಎಂದುಕೊಂಡು ರೌಡಿಗಳ ತರಹ ಗ್ಯಾಂಗ್ ಕಟ್ಟಿಕೊಂಡು ಟೀಮ್ ವರ್ಕ್‌ನಂತೆ ಅನ್ಯಾಯ ಮಾಡುತ್ತಿದ್ದರೆ. ಇನ್ನು ಕೆಟ್ಟತನದಿಂದ ಮತ್ತೊಬ್ಬರಿಗೆ ತೊಂದರೆ ಕೊಡಲು ಹೋದರೆ ಮಹಾತ್ಮನು ಜೈಲಲ್ಲಿ "ಮೇಸ್ತ್ರಿ" ಕೆಲಸ ಕೊಡಿಸೋದು ಗ್ಯಾರಂಟಿ. ಆದ್ದರಿಂದ ಜೈಲಲ್ಲಿ "ಮೇಸ್ತ್ರಿ" ಕೆಲಸ ಮಾಡಲು ಮನಸ್ಸಿಲ್ಲದಿದ್ದರೆ ಉತ್ತಮತನ ಮೈಗೂಡಿಸಿಕೊಳ್ಳಬೇಕು. ಮತ್ತೊಬ್ಬರಿಗೆ ಒಳ್ಳೆಯದನ್ನು ಮಾಡಲು ಗ್ಯಾಂಗ್ ಕಟ್ಟಿಕೊಂಡು ಟೀಮ್ ವರ್ಕ್ ಮಾಡಬೇಕು.
ಮತ್ತೊಬ್ಬರ ಸಂತೋಷ, ನೆಮ್ಮದಿ ಹಾಳು ಮಾಡಿದ್ದನ್ನು ಶನಿಮಹಾತ್ಮನು ನೋಡಿರುತ್ತಾನೆ. ಮಹಾತ್ಮನು ಇಂಥವರನ್ನು ಸಂತೋಷವಾಗಿಡಲು ಹೇಗೆ ಸಾಧ್ಯ? ಕೆಟ್ಟವರಿಗೆ ಬುದ್ಧಿ ಕಲಿಸಲೆಂದೇ ಪರಮೇಶ್ವರನು ಶನಿರಾಯನಿಗೆ ವರವಿತ್ತಿದ್ದಾನೆ. ಶನಿದೇವನು ತನ್ನ ಕೆಲಸ ತಾನು ಮಾಡುತ್ತಾನೆ ಅಷ್ಟೇ. ಕೆಲ ಬಾಣ್ಲಿಗಳಿರುತ್ತಾರೆ ಮತ್ತೊಬ್ಬರ ಹೊಟ್ಟೆಗೊಡೆದು ತಾವು ಹೊಟ್ಟೆತುಂಬ ತಿಂದುಂಡು ಎದೆಯುಬ್ಬಿಸಿ ಅಡ್ಡಾಡುತ್ತಿದ್ದಾರೆ ದೊಡ್ಡ ಕೆಲಸ ಮಾಡಿದೆನೆಂದುಕೊಂಡು. ಇಂಥವರನ್ನಂತೂ ಶನಿದೇವನು ಹೊಟ್ಟೆಗಿಲ್ಲದಂಗೆ ಮಾಡಿ ಬೀದಿಯಲ್ಲಿ ಬಿಸಾಕುತ್ತಾನೆ. ಬಿಡುವುದೇ ಇಲ್ಲ.
ಇನ್ನು ಶನಿದೇವನ ಕಾಡಾಟಕ್ಕೆ ಸೂಕ್ತವಾದ ಪರಿಹಾರ ಮಾಡಿಸಿಕೊಂಡು ಜೀವನವನ್ನು ಪಾವನಗೊಳಿಸಿಕೊಳ್ಳಬೇಕು. ಅವರಿವರು, ಅದು ದಾನಕೊಡಿ ಇದು ದಾನ ಕೊಡಿ ಎಂದು ಹೇಳಿದರೆಂದು ಅವರಿಗೆ ದಾನ ಕೊಡುತ್ತಾರೆ ಕೆಲವರು. ನಿಮ್ಮಿಂದ ದಾನ ಪಡೆದವರಿಗೆ, ಅವರನ್ನು ಪರೀಕ್ಷಿಸಲು "ನಮ್ಮ ಪರಿಚಿತರೊಬ್ಬರಿಗೆ ತೊಂದರೆಯಾಗಿದೆ ಒಂದು ಬಾಟಲಿ ರಕ್ತ ದಾನ ಕೊಡ್ತೀರಾ ಅಂತ ಕೇಳಿ. ಅವರು ಕೊಡಲು ಒಪ್ಪಿದರೆ ನಿಮ್ಮ ದಾನ ಸಾರ್ಥಕವಾಯಿತೆಂದುಕೊಳ್ಳಬೇಕು. ಇಲ್ಲಾಂದ್ರೆ "ಹಾವಿಗೆ ಹಾಲೆರದಂತಾಯಿತು" ಎಂದುಕೊಂಡು ನಿಮ್ಮ ಮೂರ್ಖತನ ಅರಿತುಕೊಳ್ಳಬೇಕು.
ಶನಿದೇವನು ಸಾಡೇಸಾತಿಯಾಗಿ ಬಂದಿದ್ದಕ್ಕೆ ಮಹಾತ್ಮನಿಗೆ ಬಿಗ್ ಥ್ಯಾಂಕ್ಸ್ ಹೇಳಬೇಕು. ಯಾಕೆಂದರೆ ಮಹಾತ್ಮನಿಂದಲೇ ಎಲ್ಲದರ, ಎಲ್ಲರ ಮಹತ್ವ ಗೊತ್ತಾಗುತ್ತದೆ. ಅಲ್ಲದೇ ಶನಿದೇವನ ಕಾಡಾಟಕ್ಕೆ ಜಾತಕದ ಮೂಲಕ ನಿಖರವಾದ ಪರಿಹಾರ ಮಾಡಿಸಿಕೊಳ್ಳಲು ಕೂಡ ಅವನೇ ಬುದ್ಧಿ ಕೊಡಬೇಕು. ಇಲ್ಲಾಂದ್ರೆ ಪರಿಹಾರ ಮಾಡಿಸಿಕೊಳ್ಳಲು ಕಾಸು ಖರ್ಚಾಗತ್ತೆಂತ "ಬಾ ಬಾ ಲೇ ಪಾ " "ಬಂದದ್ದ ಬರಲಿ ಅನೋಭಿಸಿದ್ರಾಯ್ತು ಹೋಗ್ಲಿ ಅತ್ಲಾಕೆ" ಎಂದುಕೊಳ್ಳುತ್ತಾರೆ ದುರಾದೃಷ್ಟವಂತರು.
ಶನಿದೇವನ ಸಂಪ್ರೀತಿಗೆ ಸುಲಭ ಪರಿಹಾರಗಳು ಎಂಬುದು ಮುಂದಿನ ಲೇಖನದಲ್ಲಿ. (ಒನ್‌ಇಂಡಿಯಾ ಕನ್ನಡ)
ವಾಸ್ತು ಟಿಪ್ಸ್ : ಕಂಪ್ಯೂಟರ್ ಬಳಸುವಾಗ ದಕ್ಷಿಣ, ನೈರುತ್ಯ, ಆಗ್ನೇಯ ದಿಕ್ಕನ್ನು ನೋಡುವವರು ಈ ಕೂಡಲೇ ಬದಲಾಯಿಸಿಕೊಂಡು ಪೂರ್ವ, ಉತ್ತರ, ಈಶಾನ್ಯ ದಿಕ್ಕು ನೋಡುವ ಹಾಗೆ ಕುಳಿತುಕೊಳ್ಳಬೇಕು.
ಶನಿದೇವನ ಕೃಪೆಗೆ : ಶಿವ ಸಹಸ್ರನಾಮ ಪಠಿಸಬೇಕು.
ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications