ರಜನಿ ರಾಜಕೀಯ ಭವಿಷ್ಯ; ಚಾಣಕ್ಯರಾಗಬೇಕು ಚಂದ್ರಗುಪ್ತರಲ್ಲ

Posted By: ಪ್ರಕಾಶ್ ಅಮ್ಮಣ್ಣಾಯ
Subscribe to Oneindia Kannada

ತಮಿಳುನಾಡಿನಲ್ಲಿ ಹೊಸ ವರ್ಷದ ಸಂಭ್ರಮ. ಜತೆಗೆ ರಜನೀಕಾಂತ್ ರಾಜಕೀಯ ಪ್ರವೇಶ ಹಾಗೂ ಹೊಸ ಪಕ್ಷ ಸ್ಥಾಪಿಸುವ ಸುದ್ದಿಗೆ ಹೆಚ್ಚು ಮಹತ್ವ. ತಮಿಳರ ಆರಾಧ್ಯ ದೈವ ರಜನೀಕಾಂತ್ ರಾಜಕೀಯ ಭವಿಷ್ಯ ಹೇಗಿದೆ ಎಂಬ ಕುತೂಹಲ ಸಹಜ.

ಅದಕ್ಕೆ ಉತ್ತರದಂತೆ ಈ ಲೇಖನ ನಿಮ್ಮೆದುರು ಇದೆ. ಅಂದಹಾಗೆ ರಜನೀಕಾಂತ್ ಜಾತಕ ವಿಶ್ಲೇಷಣೆ ಸಲೀಸಲ್ಲ. ಇವರಿಗೆ ಜಾತಕದಲ್ಲಿ ದುರ್ಧರ ಯೋಗವಿದೆ. ಜತೆಗೆ ಕಾಳಸರ್ಪ ಯೋಗವಿದೆ. ಇವರದು ಶ್ರವಣ ನಕ್ಷತ್ರ, ಮಕರ ರಾಶಿ. ಸಿಂಹ ಲಗ್ನ.

ಬಾಬಾಜಿ ಹಾಗೂ ಗುರುರಾಯರ ಕೃಪೆಯಿಂದ ರಜನಿ ರಾಜಕೀಯ ಎಂಟ್ರಿ

ಕಳೆದ ವರ್ಷ ಜನವರಿಯಿಂದ ಬುಧ ದಶೆ ಆರಂಭವಾಗಿದೆ. ಇವರ ಜಾತಕ ವಿಮರ್ಶೆ ಮಾಡಬೇಕಾದರೆ ಬಹಳ ಅನುಷ್ಠಾನ ಬೇಕು. ರಾಮಾಯಣದಲ್ಲಿ ವಾಲಿಗೆ ದುರ್ಧರ ಯೋಗವಿತ್ತು. ಈ ಯೋಗ ಇರುವವರನ್ನು ನೇರಾನೇರ ಎದುರಿಸಿ ಗೆಲ್ಲುವುದು ಕಷ್ಟ.

ರಾಜಕೀಯಕ್ಕೆ ರಜನಿಕಾಂತ್ : ಕರ್ನಾಟಕದ ನಾಯಕರು ಏನು ಹೇಳಿದರು?

ಆದ್ದರಿಂದಲೇ ರಾಮ ಹಿಂದಿನಿಂದ ಬಾಣ ಹೊಡೆದು, ವಾಲಿಯನ್ನು ಕೊಂದ. ದುರ್ಧರ ಯೋಗ ಇದ್ದರೆ ಅದೇ ಶಕ್ತಿ.

ಪೊಲೀಸ್ ಲೆಕ್ಕಾಚಾರ

ಪೊಲೀಸ್ ಲೆಕ್ಕಾಚಾರ

ರಜನೀಕಾಂತ್ ಎಲ್ಲರನ್ನೂ ಹಾಗೆಲ್ಲ ಹತ್ತಿರಕ್ಕೆ ಬಿಟ್ಟುಕೊಳ್ಳಲ್ಲ. ಬಹಳ ಪರೀಕ್ಷೆ ಮಾಡಿದ ನಂತರವೇ ಹತ್ತಿರ ಮಾಡಿಕೊಳ್ಳುತ್ತಾರೆ. ಮೇಲುನೋಟಕ್ಕೆ ಎಲ್ಲರ ಮಾತನ್ನು ಕೇಳಿಸಿಕೊಳ್ಳುವಂತೆ ಕಾಣಿಸುತ್ತಾರೆ. ಆದರೆ ತಮಗೆ ಬೇಕಾದ್ದೇ ಮಾಡುತ್ತಾರೆ. ವಿಪರೀತ ಹಠದ ಸ್ವಭಾವ. ಕ್ಷಣ ಮಾತ್ರದಲ್ಲಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಪೊಲೀಸರಿಗೆ ಎದುರಿಗಿರುವ ವ್ಯಕ್ತಿಯ ಸ್ವಭಾವ ಹೇಳುವ ಶಕ್ತಿಯಿರುತ್ತದಲ್ಲ ಹಾಗೇ ಇವರು ಕೂಡ.

ಮುಖ್ಯಮಂತ್ರಿ ಅಭ್ಯರ್ಥಿ ಆಗಬಾರದು

ಮುಖ್ಯಮಂತ್ರಿ ಅಭ್ಯರ್ಥಿ ಆಗಬಾರದು

ರಜನೀಕಾಂತ್ ಅವರು ಹೊಸ ಪಕ್ಷ ಆರಂಭಿಸಬಹುದು. ಆದರೆ ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳಬಾರದು. ಇವರೇ ಸಿಎಂ ಆಗಹೊರಟರೆ ವಿಪರೀತ ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಇವರ ಮೇಲೆ ಇಲ್ಲಸಲ್ಲದ ಆರೋಪ ಹೊರೆಸುತ್ತಾರೆ. ಪಿತೂರಿ ಮಾಡಿ, ಆ ಸ್ಥಾನದಿಂದ ಇಳಿಸುತ್ತಾರೆ.

ಚಾಣಕ್ಯನಂತೆ ಕಿಂಗ್ ಮೇಕರ್ ಆಗಿರಬೇಕು

ಚಾಣಕ್ಯನಂತೆ ಕಿಂಗ್ ಮೇಕರ್ ಆಗಿರಬೇಕು

ಆದ್ದರಿಂದ ರಜನೀಕಾಂತ್ ಅವರು ಚಾಣಕ್ಯನಂತೆ ಕಿಂಗ್ ಮೇಕರ್ ಆಗಿರಬೇಕೇ ವಿನಾ ಚಂದ್ರಗುಪ್ತನಂತೆ ಸಿಂಹಾಸನದಲ್ಲಿ ಕೂರಬೇಕು ಅಂದುಕೊಳ್ಳಬಾರದು. ಬೇರೆ ಅರ್ಹ ವ್ಯಕ್ತಿಯನ್ನು ಸಿಎಂ ಗಾದಿಗೆ ಹೆಸರಿಸಿ, ತಾವು ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದರೆ ಇವರ ಪಾಲಿಗೆ ಯಶಸ್ಸಿದೆ.

ಮೂರರಿಂದ ಐದು ಲೋಕಸಭಾ ಸ್ಥಾನ

ಮೂರರಿಂದ ಐದು ಲೋಕಸಭಾ ಸ್ಥಾನ

ಮುಂದೆ ಬರುವ ಲೋಕಸಭೆ ಚುನಾವಣೆಯಲ್ಲಿ ರಜನೀಕಾಂತ್ ಅವರ ಪಕ್ಷ ಮೂರರಿಂದ ಐದು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಆದರೆ ಇವರ ಜಾತಕದ ಗ್ರಹಸ್ಥಿತಿ ಪ್ರಕಾರ ತುಂಬ ಸವಾಲು ಎದುರಿಸಬೇಕು. ಇವರು ಸ್ವಭಾವ ಹೋರಾಟಗಾರನದು. ಯುದ್ಧಗಳೆಂದರೆ ಸಂಭ್ರಮ ಪಡುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tamil superstar Rajinikanth political career analysis according to Vedic astrology by well known astrologer Prakash Ammanaya.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ