ರಾಹು ಕೇತು ಸಂಚಾರದಿಂದ ಹೆಚ್ಚಾಗುವುದು ಈ ರಾಶಿಯವರಿಗೆ ಕಷ್ಟ : ಪ್ರತಿ ಹೆಜ್ಜೆಯಲ್ಲಿಯೂ ಇರಲಿ ಎಚ್ಚರ
ಜ್ಯೋತಿಷ್ಯದ ಪ್ರಕಾರ ರಾಹು ಮತ್ತು ಕೇತುಗಳನ್ನು ಅಸ್ಪಷ್ಟ ಮತ್ತು ಛಾಯಾ ಗ್ರಹಗಳೆಂದೇ ಕರೆಯಲಾಗುತ್ತದೆ. ಅವುಗಳ ಸಂಚಾರದಲ್ಲಿನ ಬದಲಾವಣೆ ಅಂದರೆ ರಾಶಿ, ನಕ್ಷತ್ರಗಳ ಬದಲಾವಣೆ ಎಲ್ಲಾ 12 ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತವೆ.
ಈ ಎರಡೂ ಗ್ರಹಗಳು ಸುಮಾರು 18 ತಿಂಗಳುಗಳಲ್ಲಿ ಅಂದರೆ ಒಂದೂವರೆ ವರ್ಷದ ಬಳಿಕ ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಇಲ್ಲಿ ನೆನಪಿಡಬೇಕಾದ ಅಂಶ ಎಂದರೆ ಈ ಎರಡೂ ರಾಶಿಗಳು ಯಾವಾಗಲೂ ಹಿಮ್ಮುಖವಾಗಿಯೇ ಚಲಿಸುತ್ತವೆ. ಪಂಚಾಂಗದ ಪ್ರಕಾರ, ಈ ವರ್ಷ ಡಿಸೆಂಬರ್ 5, 2026 ರಂದು, ರಾಹು ಕುಂಭ ರಾಶಿಯನ್ನು ಬಿಟ್ಟು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಕೇತು ಸಿಂಹ ರಾಶಿಯನ್ನು ಬಿಟ್ಟು ಕರ್ಕ ರಾಶಿಯನ್ನ ಪ್ರವೇಶಿಸುತ್ತಾನೆ.

ಈ ಎರಡು ಗ್ರಹಗಳ ಸ್ಥಾನದಲ್ಲಿನ ಈ ಪ್ರಮುಖ ಬದಲಾವಣೆ ಅಥವಾ ಸಂಚಾರವು ಪ್ರತಿಯೊಬ್ಬರ ಜೀವನ, ವೃತ್ತಿ, ಆರ್ಥಿಕ ಸ್ಥಿತಿ ಮತ್ತು ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಪ್ರಸ್ತುತ ಗ್ರಹಗಳ ಸ್ಥಾನ ಮತ್ತು ಮುಂಬರುವ ಸಂಚಾರದ ಪರಿಣಾಮದಿಂದಾಗಿ, ಕೆಲವು ರಾಶಿವರಿಗೆ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಆದರೆ, ಕೆಲವು ರಾಶಿಯವರಿಗೆ ಈ ಸಮಯ ತುಂಬಾ ಅನುಕೂಲಕರವಾಗಿರುವುದು.
ಈ 4 ರಾಶಿಯವರು ಅತ್ಯಂತ ಜಾಗರೂಕರಾಗಿರಬೇಕು
ಜ್ಯೋತಿಷ್ಯದ ಪ್ರಕಾರ, ಕರ್ಕ, ಸಿಂಹ, ಮಕರ ಮತ್ತು ಕುಂಭ ರಾಶಿಯವರು ಈ ಸಮಯದಲ್ಲಿ ವಿಶೇಷವಾಗಿ ಜಾಗರೂಕರಾಗಿರಬೇಕು.
ಕರ್ಕಾಟಕ ರಾಶಿ (Cancer): ಮಾನಸಿಕ ಒತ್ತಡ ಹೆಚ್ಚಾಗಬಹುದು. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಕೆಲಸದಲ್ಲಿ ವಿರೋಧಿಗಳ ಬಗ್ಗೆ ಜಾಗರೂಕರಾಗಿರಬೇಕು. ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಸಿಂಹ ರಾಶಿ (Leo): ಹಣಕಾಸಿನ ವಿಷಯಗಳಲ್ಲಿ ಏರಿಳಿತಗಳನ್ನು ಅನುಭವಿಸಬೇಕಾಗಬಹುದು. ಮುಂದೆ ಹಿಂದೆ ಯೋಚಿಸದೆ ಹೂಡಿಕೆ ಮಾಡಲು ಹೋಗಬೇಡಿ. ಹಣದ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಯಾರೊಂದಿಗೂ ವಾದಕ್ಕೆ ಇಳಿಯಬೇಡಿ.
ಮಕರ ರಾಶಿ (Capricorn) : ವೃತ್ತಿ ಮತ್ತು ವ್ಯವಹಾರದಲ್ಲಿ ಹಠಾತ್ ಅಡೆತಡೆಗಳು ಎದುರಾಗಬಹುದು. ಉದ್ಯೋಗಿಗಳು ತಮ್ಮ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳೊಂದಿಗೆ ಸಮನ್ವಯವನ್ನು ಕಾಯ್ದುಕೊಳ್ಳಬೇಕು. ಮಾತಿನ ಮೇಲೆ ಹಿಡಿತವಿದ್ದರೆ ಒಳ್ಳೆಯದು. ಯಾರೊಂದಿಗೂ ಜಗಳಕ್ಕೆ ಹೋಗಬೇಡಿ.
ಕುಂಭ ರಾಶಿ (Aquarius): ಖರ್ಚುಗಳು ಇದ್ದಕ್ಕಿದ್ದಂತೆ ಹೆಚ್ಚಾಗಬಹುದು. ಹಣದ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಗುಪ್ತ ಶತ್ರುಗಳ ಬಗ್ಗೆ ಎಚ್ಚರ ಇರಲಿ. ಕಾಗದಪತ್ರಗಳಿಗೆ ಸಹಿ ಹಾಕುವಾಗ ಎಚ್ಚರ ವಹಿಸಿ.
ಉಳಿದ ರಾಶಿಚಕ್ರ ಚಿಹ್ನೆಗಳಿಗೆ ಸಮಯ ಹೇಗಿರುತ್ತದೆ?
ಈ ನಾಲ್ಕು ರಾಶಿಯವರನ್ನು ಬಿಟ್ಟು ಈ ಅವಧಿಯು ಮೇಷ, ವೃಷಭ, ಮಿಥುನ, ಕನ್ಯಾ, ತುಲಾ, ವೃಶ್ಚಿಕ, ಧನು ಮತ್ತು ಮೀನ ರಾಶಿಯವರಿಗೆ ಮಿಶ್ರ ಅಥವಾ ಸಕಾರಾತ್ಮಕ ಫಲಿತಾಂಶಗಳನ್ನು ತರಬಹುದು. ಈ ರಾಶಿಯವರು ತಮ್ಮ ಕಠಿಣ ಪರಿಶ್ರಮದ ಆಧಾರದ ಮೇಲೆ ವೃತ್ತಿಜೀವನದಲ್ಲಿ ಪ್ರಗತಿ ಸಾಧಿಸುವರು. ಹೊಸ ವ್ಯವಹಾರ ಅವಕಾಶಗಳು ಸಿಗುವುದು. ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗುವುದು.
ರಾಹು ಮತ್ತು ಕೇತುವಿನ ಋಣಾತ್ಮಕ ಪರಿಣಾಮಗಳನ್ನು ತಪ್ಪಿಸಲು ಸರಳ ಮಾರ್ಗಗಳು
* ಶಿವನನ್ನು ನಿಯಮಿತವಾಗಿ ಪೂಜಿಸಿ.
* ಶಿವಲಿಂಗಕ್ಕೆ ನೀರು ಅರ್ಪಿಸಿ.
* ಶನಿವಾರದಂದು ಕಪ್ಪು ಎಳ್ಳು, ಉದ್ದಿನ ಬೇಳೆ ಅಥವಾ ಛತ್ರಿಯನ್ನು ದಾನ ಮಾಡುವುದರಿಂದ ರಾಹು ಮತ್ತು ಕೇತುವಿನ ನಕಾರಾತ್ಮಕ ಪರಿಣಾಮಗಳು ಕಡಿಮೆಯಾಗುತ್ತವೆ.
* ನಾಯಿಗಳಿಗೆ ಪಕ್ಷಿಗಳಿಗೆ ಆಹಾರ ನೀಡಿ.


Click it and Unblock the Notifications
