• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಣಿ ಎಲಿಜಬೆತ್ ವಿಚಾರದಲ್ಲಿ ನಿಜವಾಗದಿರಲಿ ಕಾಲಜ್ಞಾನಿಯ ಭವಿಷ್ಯ!

|

ಫ್ರಾನ್ಸ್ ಮೂಲದ ಜಗದ್ವಿಖ್ಯಾತ ಭವಿಷ್ಯಕಾರ, ಕಾಲಜ್ಞಾನಿ ನಾಸ್ಟ್ರಡಾಮಸ್ 'ದಿ ಪ್ರೋಫೆಸೀಸ್' ಎಂಬ ಪುಸ್ತಕದಲ್ಲಿ ಇಡೀ ಭೂಮಂಡಲದ ಬಗ್ಗೆಯೇ ಭವಿಷ್ಯ ನುಡಿದಿದ್ದರು. ಈ ಪುಸ್ತಕ 1555 ರಲ್ಲಿ ಪ್ರಕಟಗೊಂಡಿತ್ತು. ಪುಸ್ತಕದಲ್ಲಿ ಉಲ್ಲೇಖವಿರುವಂತೆ ಹಲವು ವಿಚಾರಗಳು ಜರುಗಿವೆ ಎಂಬ ನಂಬಿಕೆ ಹಲವರಲ್ಲಿದೆ.

ಇದೇ ಪುಸ್ತಕದಲ್ಲಿ 2020 ರ ಕರಾಳ ಭವಿಷ್ಯವನ್ನೂ ನಾಸ್ಟ್ರಡಾಮಸ್ ದಾಖಲಿಸಿದ್ದರು. ''ಈ ವರ್ಷ ಇಂಗ್ಲೆಂಡ್ ರಾಣಿ ಮರಣ ಹೊಂದುತ್ತಾರೆ'' ಎಂದೂ ನಾಸ್ಟ್ರಡಾಮಸ್ ಊಹಿಸಿದ್ದರು.

ಈಗ ನೋಡಿದ್ರೆ, ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್ ನಿಂದ ಒಂದು ಆತಂಕಕಾರಿ ಸುದ್ದಿ ಹೊರಬಿದ್ದಿದೆ. ಜಗತ್ತಿನುದ್ದಕ್ಕೂ ತನ್ನ ಕರಾಳಬಾಹುವನ್ನು ಚಾಚಿರುವ ಕೊರೊನಾ ಇದೀಗ ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್ ನೊಳಗೂ ಎಂಟ್ರಿಕೊಟ್ಟಿದೆ.

2020 ಹೇಗಿರಲಿದೆ: ನಾಸ್ಟ್ರಡಾಮಸ್ ಹೇಳಿದ್ದಾನೆ ಭೀಕರ ಭವಿಷ್ಯ

ವಾರದ ಹಿಂದೆಷ್ಟೇ ಪ್ರಿನ್ಸ್ ಚಾರ್ಲ್ಸ್ ಗೆ ಕೋವಿಡ್-19 ಪಾಸಿಟೀವ್ ದೃಢಪಟ್ಟಿತ್ತು. ಇದಾದ ಬಳಿಕ ರಾಣಿ ಎರಡನೇ ಎಲಿಜಬೆತ್ ರವರ ಪರಿಚಾರಕ ಸಿಬ್ಬಂದಿಗೂ ಕೊರೊನಾ ವೈರಸ್ ಸೋಂಕು ತಗುಲಿರುವುದು ವರದಿಯಾಗಿದೆ. ಹೀಗಾಗಿ ಕೊರೊನಾ ಭೀತಿಯಿಂದ ರಾಣಿ ಎರಡನೇ ಎಲಿಜಬೆತ್ ಮತ್ತು ಪ್ರಿನ್ಸ್ ಫಿಲಿಪ್ ಐಸೋಲೇಷನ್ ಗೆ ತೆರಳಿದ್ದಾರೆ.

ಪರಿಚಾರಕ ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್

ಪರಿಚಾರಕ ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್

ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್ ನಲ್ಲಿ ಕೆಲಸ ನಿರ್ವಹಿಸುವ ರಾಣಿಯ ಆಪ್ತ ಪರಿಚಾರಕ ಸಿಬ್ಬಂದಿಯೋರ್ವನಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ಲಂಡನ್ ಮಾಧ್ಯಮಗಳು ವರದಿ ಮಾಡಿವೆ. ಈ ಹಿನ್ನಲೆಯಲ್ಲಿ ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್ ನಿಂದ ವಿಂಡ್ಸರ್ ಕ್ಯಾಸಲ್ ಗೆ ತೆರಳಿ ಪ್ರತ್ಯೇಕವಾಗಿದ್ದಾರೆ ರಾಣಿ ಎರಡನೇ ಎಲಿಜಬೆತ್.

ಐಸೋಲೇಷನ್ ನಲ್ಲಿ ರಾಣಿ

ಐಸೋಲೇಷನ್ ನಲ್ಲಿ ರಾಣಿ

ಮಾರ್ಚ್ 11 ರಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರನ್ನ ರಾಣಿ ಭೇಟಿ ಮಾಡಿದ್ದರು. ಬೋರಿಸ್ ಜಾನ್ಸನ್ ಗೂ ಕೋವಿಡ್-19 ಪಾಸಿಟಿವ್ ಕಂಡು ಬಂದಿದೆ. ಇತ್ತ ತಮ್ಮ ಪುತ್ರ ಪ್ರಿನ್ಸ್ ಚಾರ್ಲ್ಸ್ ಗೂ ಸೋಂಕು ತಗುಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ರಾಣಿ ಎರಡನೇ ಎಲಿಜಬೆತ್ ಐಸೋಲೇಷನ್ ನಲ್ಲಿದ್ದಾರೆ.

2020 ರ ಬಗ್ಗೆ ಆ ಕಾಲಜ್ಞಾನಿ ಹೇಳಿದ ಕರಾಳ ಭವಿಷ್ಯ ನಿಜವಾಗ್ತಿದ್ಯಲ್ಲಾ!

ಅರಮನೆ ಸಿಬ್ಬಂದಿಗೆ ಸೂಚನೆ

ಅರಮನೆ ಸಿಬ್ಬಂದಿಗೆ ಸೂಚನೆ

ಅಸಲಿಗೆ ಅರಮನೆಯಲ್ಲಿ ಸುಮಾರು 500 ಪರಿಚಾರಕರು ಕೆಲಸ ಮಾಡುತ್ತಾರೆ. ಓರ್ವ ಪರಿಚಾರಕನಿಗೆ ಸೋಂಕು ತಗುಲಿರುವುದರಿಂದ, ಎಲ್ಲರಿಗೂ ಪ್ರತ್ಯೇಕವಾಗಿರಲು ಸೂಚಿಸಲಾಗಿದೆ.

ನಿಜವಾಗದಿರಲಿ ಭವಿಷ್ಯ

ನಿಜವಾಗದಿರಲಿ ಭವಿಷ್ಯ

93 ವರ್ಷದ ರಾಣಿ ಎರಡನೇ ಎಲಿಜಬೆತ್ ಗೆ ಸದ್ಯ ಕೊರೊನಾ ಭೀತಿ ಕಾಡುತ್ತಿದೆ. ಕೋವಿಡ್-19 ಗೆ ವಯಸ್ಸಾದವರೇ ಹೆಚ್ಚು ಪ್ರಾಣ ಬಿಡುತ್ತಿರುವುದರಿಂದ, ರಾಣಿ ಎಲಿಜಬೆತ್ ಕೂಡ ಆತಂಕಗೊಂಡಿದ್ದಾರೆ. ಇತ್ತ ಎರಡನೇ ಎಲಿಜಬೆತ್ ಸಾವಿನ ಬಗ್ಗೆ ನಾಸ್ಟ್ರಡಾಮಸ್ ಭವಿಷ್ಯ ಬೇರೆ ನುಡಿದಿರುವುದು ಮತ್ತಷ್ಟು ಕಳವಳಕ್ಕೆ ಕಾರಣವಾಗಿದೆ. ಇನ್ನೊಂದು ಕಡೆ ಕೊರೊನಾ ಮಾರಿ ರಾಣಿಯನ್ನ ಕಾಡದಿರಲಿ, ನಾಸ್ಟ್ರಡಾಮಸ್ ಭವಿಷ್ಯ ಸುಳ್ಳಾಗಲಿ ಎಂದು ಲಂಡನ್ ಜನತೆ ಪ್ರಾರ್ಥಿಸುತ್ತಿದ್ದಾರೆ.

English summary
Queen Elizabeth's aide tests Postive for Covid 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X