Numerology: 40 ವರ್ಷಗಳ ಬಳಿಕ ಕೋಟ್ಯಾಧಿಪತಿ ಯೋಗ! ಈ 4 ತಿಂಗಳಲ್ಲಿ ಜನಿಸಿದವರ ಅದೃಷ್ಟವೇ ಬದಲಾಗಲಿದೆ!
Numerology: ಜ್ಯೋತಿಷ್ಯದ ಪ್ರಕಾರ, ಹುಟ್ಟಿದ ಸಮಯಕ್ಕೆ ಅನುಗುಣವಾಗಿ ವ್ಯಕ್ತಿಯ ನಕ್ಷತ್ರ, ಜನ್ಮ ರಾಶಿ ನಿರ್ಧಾರವಾಗುತ್ತದೆ. ನಂತರ ಈ ರಾಶಿ ನಕ್ಷತ್ರಗಳಿಗೆ ಅನುಗುಣವಾಗಿ ವ್ಯಕ್ತಿಯ ಭವಿಷ್ಯವನ್ನು ಹೇಳಲಾಗುತ್ತದೆ. ಹೀಗೆಯೇ ಸಂಖ್ಯಾ ಶಾಸ್ತ್ರದ ಪ್ರಕಾರ ನೀವು ಜನಿಸಿದ ತಿಂಗಳು ಕೂಡಾ ನಿಮ್ಮ ಜೀವನ, ಭವಿಷ್ಯ ಹೇಗಿರುತ್ತದೆ ಎನ್ನುವುದು ನಿರ್ಧರಿಸುತ್ತದೆಯಂತೆ. ಈ ಲೆಕ್ಕಾಚಾರದ ಪ್ರಕಾರ ಕೆಲವರು ಹುಟ್ಟುತ್ತಲೇ ಅದೃಷ್ಟವನ್ನು ಜೊತೆಗೆಯೇ ತಂದರೆ, ಇನ್ನು ಕೆಲವರು ಜೀವನದಲ್ಲಿ ತಡವಾಗಿ ಯಶಸ್ಸನ್ನು ಕಾಣುತ್ತಾರೆ ಎನ್ನಲಾಗಿದೆ. ಕೆಲವು ತಿಂಗಳುಗಳಲ್ಲಿ ಜನಿಸಿದವರು 40 ವರ್ಷದ ನಂತರವೇ ಶ್ರೀಮಂತರಾಗುವ ಯೋಗವನ್ನು ಹೊಂದಿರುತ್ತಾರೆ ಎನ್ನುತ್ತದೆ ಸಂಖ್ಯಾ ಶಾಸ್ತ್ರ. ಇದಕ್ಕೆ ಮೊದಲು ಅವರು ಎಷ್ಟೇ ಕಷ್ಟಪಟ್ಟರೂ, ಶ್ರಮ ಪಟ್ಟರೂ ನಿರೀಕ್ಷಿತ ಯಶಸ್ಸು ಸಿಗುವುದೇ ಇಲ್ಲವಂತೆ. ನಲವತ್ತು ವರ್ಷವಾಗುತ್ತಿದ್ದ ಹಾಗೆಯೇ ಅವರಿಗೆ ಸಿರಿವಂತರಾಗುವ ಯೋಗ ಕೂಡಿ ಬರುವುದಂತೆ.
ಜೀವನದಲ್ಲಿ ಇಷ್ಟು ವಿಳಂಬವಾಗಿ ಯಶಸ್ಸು ಸಿಗುವುದು ಎಂದರೆ ಈ ಸಮೃದ್ಧಿಯು ಪ್ರಬುದ್ಧತೆ, ತಾಳ್ಮೆ ಮತ್ತು ಕರ್ಮದ ಸಮಯದೊಂದಿಗೆ ಸಂಬಂಧಿಸಿದೆ. ಹಾಗಿದ್ದರೆ ಯಾವ ತಿಂಗಳಲ್ಲಿ ಜನಿಸಿದವರು 40 ವರ್ಷದ ನಂತರ ಶ್ರೀಮಂತರಾಗುವ ಸಾಧ್ಯತೆ ಹೆಚ್ಚು ನೋಡೋಣ.

ಏಪ್ರಿಲ್ : ಏಪ್ರಿಲ್‌ನಲ್ಲಿ ಜನಿಸಿದವರ ಮೇಲೆ ಮಂಗಳ ಗ್ರಹದ ಆಶೀರ್ವಾದವಿರುತ್ತದೆ. ಈ ತಿಂಗಳಲ್ಲಿ ಜನಿಸಿದವರು ಧೈರ್ಯವಂತರು. ಇವರು ತ್ವರಿತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಹಾಗೆಯೇ ಉತ್ತಮ ನಾಯಕತ್ವದ ಗುಣಗಳನ್ನು ಕೂಡಾ ಹೊಂದಿರುತ್ತಾರೆ. ಮುಖ್ಯವಾಗಿ, ಅವರು ರಿಸ್ಕ್ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ. ಈ ತಿಂಗಳಲ್ಲಿ ಜನಿಸಿದವರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿದ್ದರೆ ಉತ್ತಮ ಪ್ರಗತಿಯನ್ನು ಕಾಣುವರು. ಇವರು 40 ವರ್ಷದವರೆಗೆ ಏನೇ ಮಾಡಿದರೂ ನಿರೀಕ್ಷಿತ ಯಶಸ್ಸು ಸಿಗುವುದೇ ಇಲ್ಲ. ಆದರೆ ನಲವತ್ತು ವರ್ಷ ಆಗುತ್ತಿದ್ದ ಹಾಗೆಯೇ ಇವರಿಗೆ ಧನಯೋಗ ಕೂಡಿ ಬರುತ್ತದೆ. ನಂತರ ಅವರಿಗೆ ಯಾವುದೇ ರೀತಿಯಲ್ಲಿಯೂ ಆರ್ಥಿಕ ಸಮಸ್ಯೆ ಎದುರಾಗುವುದೇ ಇಲ್ಲ.
ಮೇ ತಿಂಗಳು: ಮೇ ತಿಂಗಳಲ್ಲಿ ಜನಿಸಿದವರ ಮೇಲೆ ಶುಕ್ರನ ಆಶೀರ್ವಾದವಿರುತ್ತದೆ. ಇದರಿಂದಾಗಿ, ಅವರು ಸಂಪತ್ತು ಮತ್ತು ಆಸ್ತಿಗಳನ್ನು ಸಂಗ್ರಹಿಸುವುದು, ಐಷಾರಾಮಿ ಜೀವನ ನಡೆಸುವುದು ಸಾಧ್ಯವಾಗುತ್ತದೆ. ಅವರಿಗೆ ಹಣದ ಮೌಲ್ಯ ಚೆನ್ನಾಗಿಯೇ ಗೊತ್ತಿರುತ್ತದೆ. ಇದರಿಂದಾಗಿ, ಅವರು ಅನಗತ್ಯವಾಗಿ ಹೆಚ್ಚು ಖರ್ಚು ಮಾಡುವುದಿಲ್ಲ. ಈ ತಿಂಗಳಲ್ಲಿ ಜನಿಸಿದವರು ಫ್ಯಾಷನ್, ಬ್ಯಾಂಕಿಂಗ್ ಮತ್ತು ಕಲೆಯಂತಹ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸುವರು. ಅವರು ಈ ಕ್ಷೇತ್ರಗಳಲ್ಲಿದ್ದರೆ, ಉತ್ತಮ ಪ್ರಗತಿ ಹೊಂದುವರು. ಸಮಾಜದಲ್ಲಿ ಉತ್ತಮ ಸ್ಥಾನವನ್ನು ಸಾಧಿಸುವರು.
ಆಗಸ್ಟ್ : ಆಗಸ್ಟ್ ತಿಂಗಳಲ್ಲಿ ಜನಿಸಿದವರು ಸೂರ್ಯನಿಂದ ಆಶೀರ್ವದಿಸಲ್ಪಟ್ಟಿರುತ್ತಾರೆ. ಪರಿಣಾಮವಾಗಿ, ಈ ತಿಂಗಳಲ್ಲಿ ಜನಿಸಿದವರು ಸ್ವಾಭಾವಿಕವಾಗಿ ಗೌರವ, ಅಧಿಕಾರ ಮತ್ತು ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಅವರು ಯಾವಾಗಲೂ ದೊಡ್ಡ ಗುರಿಯನ್ನೇ ಹೊಂದಿರುತ್ತಾರೆ. ಈ ತಿಂಗಳುಗಳಲ್ಲಿ ಜನಿಸಿದವರು ಆರಂಭದಿಂದಲೂ ರಾಜಕೀಯ, ಸಿನಿಮಾ ಮತ್ತು ಮಾಧ್ಯಮದಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡಿದರೆ, ಕ್ರಮೇಣ ಸುಲಭವಾಗಿ ಪ್ರಗತಿ ಹೊಂದುತ್ತಾರೆ. ಇವರು ನಲವತ್ತು ವರ್ಷದ ನಂತರ ಇದ್ದಕ್ಕಿದ್ದಂತೆಯೇ ಜೀವನದಲ್ಲಿ ಅನಿರೀಕ್ಷಿತವಾಗಿ ಉತ್ತಮ ಸ್ಥಾನಕ್ಕೆ ಏರುವರು.
ಡಿಸೆಂಬರ್: ಡಿಸೆಂಬರ್ ತಿಂಗಳಲ್ಲಿ ಜನಿಸಿದವರ ಮೇಲೆ ಶನಿ ಮತ್ತು ಗುರು ಗ್ರಹದ ಪರಿಪೂರ್ಣ ಆಶೀರ್ವಾದ ಇರುವುದು. ಇದರಿಂದಾಗಿ, ಈ ತಿಂಗಳಲ್ಲಿ ಜನಿಸಿದವರು ಜೀವನದಲ್ಲಿ ಕ್ರಮೇಣ ಯಶಸ್ಸಿನ ಮೆಟ್ಟಿಲನ್ನು ಹತ್ತುತ್ತಾರೆ. ಜೀವನದ ಆರಂಭದಲ್ಲಿ ಸ್ವಲ್ಪ ಕಷ್ಟ ಅಡೆ ತಡೆ ಎದುರಾದರೂ ನಂತರ ಎಲ್ಲವೂ ಸರಿ ಹೋಗುವುದು. ಕಠಿಣ ಪರಿಶ್ರಮ ಮತ್ತು ಅದೃಷ್ಟದ ಬೆಂಬಲದಿಂದ ತಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳುವರು. ಅವರು ಶಿಸ್ತುಬದ್ಧ ಜೀವನ ನಡೆಸುವರು ಮತ್ತು ಪ್ರಾಮಾಣಿಕರಾಗಿರುವರು. ಅವರು ಜೀವನದಲ್ಲಿ ಯಾರಿಗೂ ಮೋಸ ಮಾಡುವ ಜಾಯಮಾನದವರಲ್ಲ. ಎಲ್ಲಾ ರೀತಿಯ ಸದ್ಗುಣಗಳನ್ನೇ ಇವರು ಹೊಂದಿರುತ್ತಾರೆ. ಈ ತಿಂಗಳುಗಳಲ್ಲಿ ಜನಿಸಿದವರು ಐಟಿ ವಲಯ, ವಿದೇಶಿ ಸಂಬಂಧಿತ ವ್ಯವಹಾರಗಳಲ್ಲಿ ಉತ್ತಮ ಫಲ ಪಡೆಯುತ್ತಾರೆ.


Click it and Unblock the Notifications
