2ನೇ ನವರಾತ್ರಿ: ಬ್ರಹ್ಮಚಾರಿಣಿಗೆ ಸಿಹಿ ಪೊಂಗಲ್ ಇಷ್ಟ, ಘಮ ಘಮಿಸೋ ತುಪ್ಪ ಹಾಕಿ ಇದನ್ನು ಮಾಡೋದು ಹೇಗೆ?

Navaratri Second Day: ನವರಾತ್ರಿ ಕೇವಲ ನಮ್ಮ ರಾಜ್ಯದ ನಾಡಹಬ್ಬವಲ್ಲ. ಅದೊಂದು ಭಾರತದ ಹಬ್ಬ. ಕರ್ನಾಟಕದಂತ ತಮಿಳುನಾಡಿನಲ್ಲಿ ದುರ್ಗೆ, ಸರಸ್ವತಿ ಹಾಗೂ ಲಕ್ಷ್ಮಿ ದೇವತೆಗಳನ್ನ ಪೂಜಿಸುವ ಮೂಲಕ ಆಪ್ತರನ್ನು ಮನೆಗೆ ಆಹ್ವಾನಿಸುತ್ತಾರೆ. ಆಂಧ್ರ ಪ್ರದೇಶದಲ್ಲಿ ಬತುಕಮ್ ಪಾಂಡುಗ ಎಂಬ ಹೆಸರಲ್ಲಿ ಮಾ ಗೌರಿಯನ್ನು 9 ದಿನಗಳ ಕಾಲ ಅಲಂಕರಿಸಿ, ಪೂಜಿಸುತ್ತಾರೆ. ದೇವಿ ಸ್ವರೂಪಿ ಮುತ್ತೈದೆಯನ್ನು ಮನೆಗೆ ಕರೆದು ಸತ್ಕರಿಸೋದು ಇಲ್ಲಿನ ಸಂಪ್ರದಾಯ. ಗುಜರಾತ್‌ನಲ್ಲಿ ಮಾತೆ ಅಂಬೆಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಿದ್ದು, ಸಾಮಾನ್ಯವಾಗಿ ಈ ರಾಜ್ಯದ ಜನರು ನವರಾತ್ರಿ ಉಪವಾಸ ಮಾಡುತ್ತಾರೆ. ಅಲ್ಲದೇ ರಾತ್ರಿ ಇಡೀ ಗರ್ಭ ನೃತ್ಯ ಹಾಗೂ ದಾಂಡಿಯಾ ಮೂಲಕ ದೇವಿಗೆ ತಮ್ಮ ಕಲಾ ಸೇವೆ ಅರ್ಪಿಸುವ ಭಕ್ತರು, ದೇವಿಯಾರಾಧನೆಯಲ್ಲಿ ಮಗ್ನರಾಗುತ್ತಾರೆ.

Navaratri Second Day Bramhacharini to be offered pooja with sweet pongal how to make it recipe for you

ಇನ್ನು ಉತ್ತರ ಭಾರತದ ರಾಜ್ಯಗಳಾದ ಪಂಜಾಬ್, ಉತ್ತರ ಪ್ರದೇಶ, ಬಿಹಾರದಲ್ಲೂ ಮೊದಲು ಏಳು ದಿನಗಳ ಕಾಲ ಉಪವಾಸ ಮಾಡಿ ಕನ್ನಿಕಾ ಮುತ್ತೈದೆಯರಿಗೆ ಬಾಗೀನ ಅರ್ಪಿಸುವ ಮೂಲಕ ದೇವಿಯನ್ನು ಪೂಜಿಸುತ್ತಾರೆ. ಹಿಮಾಚಲ ಪ್ರದೇಶದಲ್ಲಿ ವಿಜಯ ದಶಮಿಯನ್ನು ವಿಶಿಷ್ಟವಾಗಿ ಆಚರಿಸಲಿದ್ದು, ಜಾನಪದ ನೃತ್ಯ ನಾಟಿ ಮೂಲಕ ಕುಲ್ಲು ದಸರಾ ಆಚರಿಸುತ್ತಾರೆ. ನವರಾತ್ರಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಅಕ್ಟೋಬರ್​ 11 ರಿಂದ 19ರವರೆಗೆ ನವರಾತ್ರಿ ಶುರುವಾಗಲಿದ್ದು, ಒಂದೊಂದು ದಿನ ಒಂದೊಂದು ನೈವೇದ್ಯವನ್ನು ಇಟ್ಟು ದೇವಿಯನ್ನು ಪೂಜಿಸಿದರೆ ಇಷ್ಟಾರ್ಥಗಳು ಈಡೇರಲಿವೆ.

Navaratri Second Day ಬ್ರಹ್ಮಚಾರಿಣಿಯ ಪೂಜೆ

ನವರಾತ್ರಿಯ (navaratri) ಎರಡನೇ ದಿನದಂದು ದುರ್ಗಾ ದೇವಿಯ ದ್ವಿತೀಯ ಸ್ವರೂಪವಾದ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಲಾಗುತ್ತದೆ. ಬ್ರಹ್ಮ ಎಂದರೆ ತಪಸ್ಸು, ಚಾರಿಣಿ ಎಂದರೆ ಆಚರಿಸುವವಳು ಎಂದರ್ಥ. ಈ ದೇವಿ ಶಾಂತ ಮತ್ತು ತಪಸ್ವಿ ರೂಪದಲ್ಲಿರುತ್ತಾಳೆ. ಬರಿಗಾಲಲ್ಲಿರೋ ಈ ದೇವಿಯ ಬಲಗೈಯಲ್ಲಿ ಜಪಮಾಲೆ ಮತ್ತು ಎಡಗೈಯಲ್ಲಿ ಕಮಂಡಲವಿರುತ್ತದೆ.ಶಿವನನ್ನು ಪತಿಯಾಗಿ ಪಡೆಯಲು ಈಕೆ ಸಾವಿರಾರು ವರ್ಷಗಳ ಕಾಲ ಕಠಿಣ ಉಪವಾಸ ಹಾಗೂ ತಪಸ್ಸನ್ನು ಆಚರಿಸಿದ ಕಾರಣ ಈಕೆಗೆ 'ಬ್ರಹ್ಮಚಾರಿಣಿ' ಹಾಗೂ 'ಅಪರ್ಣಾ' ಎಂಬ ಹೆಸರಿವೆ. ತನ್ನ ಬಾಹ್ಯ ಸೌಂದರ್ಯದಿಂದ ಶಿವನನ್ನು ಒಲಿಸಿಕೊಳ್ಳಲು ಸಾಧ್ಯವಾಗದ ಪಾರ್ವತಿ, ತನ್ನ ಆಂತರಿಕ ಸೌಂದರ್ಯವನ್ನು (beauty) ತಪಸ್ಸಿನ ಮೂಲಕ ತೋರಿಸಿ ಒಲಿಸಿಕೊಳ್ಳುವ ಕಥೆ ಪುರಾಣದಲ್ಲಿದ್ದು, ಆ ಮಾತೃಸ್ವರೂಪಿಯೇ ಬ್ರಹ್ಮಚಾರಿಣಿ. ಈ ದೇವಿಯ ಆರಾಧನೆಯಿಂದ ಭಕ್ತರಲ್ಲಿ ಕಠಿಣ ಪರಿಸ್ಥಿತಿಗಳನ್ನು ಎದುರಿಸುವ ಸಂಯಮ, ಧೈರ್ಯ, ಜ್ಞಾನ ಮತ್ತು ಸದ್ಗುಣಗಳು ಹೆಚ್ಚುತ್ತವೆ. ಜಾತಕದಲ್ಲಿರುವ ಮಂಗಳ ದೋಷಗಳು ನಿವಾರಣೆಯಾಗುತ್ತವೆ.

ಈಗೆಕೂ ಶೈಲ ಪುತ್ರಿಯಂತೆಯೇ ಶ್ವೇತ ವರ್ಣ ಹಾಗೂ ಮಲ್ಲಿಗೆ ಪ್ರಿಯವಾಗಿದ್ದು, ಸಿಹಿ ಪೊಂಗಲ್ ಹಾಗೂ ಪುಳಿಯೋಗರ ಪ್ರಿಯ ಖಾದ್ಯ. ಸಕ್ಕರೆ ಅಥವಾ ಬೆಲ್ಲದ ಪೊಂಗಲ್ ಮಾಡಿ, ದೇವಿಗೆ ಅರ್ಪಿಸಬಹುದು. ಈ ಖಾದ್ಯವನ್ನು ತಯಾರಿಸೋ ವಿಧಾನವಿಲ್ಲಿದೆ. ಸಕ್ಕರೆ ಆರೋಗ್ಯಕ್ಕೆ ಅಷ್ಟು ಒಳ್ಳೇಯದಲ್ಲದ ಕಾರಣ ನೈಸರ್ಗಿಕ ಬೆಲ್ಲ ಬಳಸಿ ಪೊಂಗಲ್ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.

Sweet Pongalಗೆ ಬೇಕಾಗುವ ಸಾಮಗ್ರಿಗಳು:

• ಅಕ್ಕಿ - 1 ಲೋಟ
• ಹೆಸರುಬೇಳೆ - ಅರ್ಧ ಕಪ್
• ಬೆಲ್ಲ - 2 ಕಪ್ (ಪುಡಿ ಮಾಡಿದ್ದು)
• ತುಪ್ಪ - 4 ರಿಂದ 5 ಚಮಚ
• ಗೋಡಂಬಿ ಮತ್ತು ದ್ರಾಕ್ಷಿ - ಒಂದು ಹತ್ತಿಪ್ಪತ್ತು.
• ಏಲಕ್ಕಿ ಪುಡಿ - ಅರ್ಧ ಚಮಚ
• ಹಾಲು - ಅರ್ಧ ಕಪ್ (ಹಾಕದಿದ್ರೂ ನಡೆಯುತ್ತೆ)
• ಪಚ್ಚ ಕರ್ಪೂರ - ಒಂದು ಚಿಟಿಕೆ (ದೇವಸ್ಥಾನದ ಪ್ರಸಾದದಂತೆ ಘಮ ಘಮಿಸಲು)

ಸಿಹಿ ಪೊಂಗಲ್ ಮಾಡೋದು ಹೇಗೆ?

1. ಬೇಳೆ ಹುರಿಯುವುದು: ಬಾಣಲೆಯಲ್ಲಿ ಹೆಸರು ಬೇಳೆ ಹಾಕಿ, ಅದು ಹಸಿ ವಾಸನೆ ಹೋಗಿ, ತುಸು ಬಣ್ಣ ಬದಲಾಗುವವರೆಗೆ ಸಣ್ಣ ಉರಿಯಲ್ಲಿ ಹುರಿಯರಿ. ಹುರಿದ ಬೇಳೆ ಮತ್ತು ಅಕ್ಕಿಯನ್ನು ಚೆನ್ನಾಗಿ ತೊಳೆದು, ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿ. ಇದಕ್ಕೆ 4 ರಿಂದ 4.5 ಕಪ್ ನೀರು (ಮತ್ತರ್ಧ ಕಪ್ ಹಾಲು) ಸೇರಿಸಿ 4 ಸಲ ಕೂಗಿಸಿ. ಕುಕ್ಕರ ಮುಚ್ಚಲ ತೆಗೆಯಲು ಬರೋ ಮುನ್ನ ಬಾಣಲೆಯೊಂದರಲ್ಲಿ ಪುಡಿ ಮಾಡಿದ ಬೆಲ್ಲಕ್ಕೆ ಅರ್ಧ ಕಪ್ ನೀರು ಹಾಕಿ ಕರಗಿಸಿ. ಬೆಲ್ಲ ಕರಗಿದ ನಂತರ ಅದನ್ನು ಸೋಸಿಕೊಂಡು (ಕಸವಿದ್ದರೆ) ಪಕ್ಕಕ್ಕಿಡಿ.

ಕುಕ್ಕರ್ ಮುಚ್ಚಲ ತೆಗೆಯಲು ಬಂದರೆ ಅನ್ನ ಮತ್ತು ಬೇಳೆಯನ್ನು ಚೆನ್ನಾಗಿ ಮಿಕ್ಸ್ ಮಾಡಿ. ಒಂದೆರಡು ಸಲ ಹೆಚ್ಚಾಗಿ ಕುಕ್ಕರ್ ಕೂಗಿಸಿದ್ದರೆ ಇದರ ಅಗತ್ಯವೇ ಇರುವುದಿಲ್ಲ. ಇದಕ್ಕೆ ಬೆಲ್ಲದ ನೀರನ್ನು ಸೇರಿಸಿ ಸಣ್ಣ ಉರಿಯಲ್ಲಿ 3-5 ನಿಮಿಷ ಚೆನ್ನಾಗಿ ಕುದಿಸಿ, ಬೆಲ್ಲವನ್ನು ಅನ್ನದೊಂದಿಗೆ ಬೆರೆಸಿ. ಸಣ್ಣ ಪ್ಯಾನ್‌ನಲ್ಲಿ ತುಪ್ಪ ಬಿಸಿ ಮಾಡಿ ಗೋಡಂಬಿ, ದ್ರಾಕ್ಷಿ ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಹುರಿದ ಗೋಡಂಬಿ-ದ್ರಾಕ್ಷಿ ಹಾಗೂ ಒಂದು ಚಿಟಿಕೆ ಪಚ್ಚ ಕರ್ಪೂರವನ್ನು ಪೊಂಗಲ್‌ಗೆ ಸೇರಿಸಿ ಚೆನ್ನಾಗಿ ಕೈಯಾಡಿಸಿ. ಈಗ ರುಚಿಕರವಾದ ಸಿಹಿ ಪೊಂಗಲ್ ದೇವಿಯ ನೈವೇದ್ಯಕ್ಕೆ ಸಿದ್ಧ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+