Monthly Horoscope: ಅಕ್ಟೋಬರ್‌ನಲ್ಲಿ ಈ ಐದು ರಾಶಿಯವರಿಗೆ ರಾಜಯೋಗ; ಈ ತಿಂಗಳು ನಿಮ್ಮ ಭವಿಷ್ಯ ಹೇಗಿದೆ ನೋಡಿ!

October 2026 Monthly Horoscope: ಜ್ಯೋತಿಷ್ಯದ ಪ್ರಕಾರ, ಅಕ್ಟೋಬರ್‌ ತಿಂಗಳು ಬಹಳ ವಿಶೇಷ. ಈ ಅವಧಿಯಲ್ಲಾಗುವ ಗ್ರಹಗಳ ಸಂಚಾರದಿಂದ ಅನೇಕ ಶುಭ ಯೋಗ ರೂಪುಗೊಳ್ಳುತ್ತವೆ. ಅಕ್ಟೋಬರ್ ತಿಂಗಳು ಯಾವ ರಾಶಿಯವರಿಗೆ ಹೇಗೆ ಫಲ ನೀಡುತ್ತದೆ ನೋಡೋಣ.

ಮೇಷ ರಾಶಿ (Aries)

ಅಕ್ಟೋಬರ್ ತಿಂಗಳು ಹೊಸ ಅವಕಾಶ ತರುವುದು. ಅರ್ಧಕ್ಕೆ ನಿಂತು ಹೋಗಿರುವ ಕೆಲಸ ಮ್ತೆ ಹಳಿಗೆ ಬರುವುದು. ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗುವುದು. ಆದಾಐ ಹೆಚ್ಚಾಗುವ ಮಾರ್ಗ ತೆರೆದುಕೊಳ್ಳುವುದು. ಆದರೆ ಅನಗತ್ಯ ಖರ್ಚಿನ ಬಗ್ಗೆಯೂ ಎಚ್ಚರ ಇರಲಿ. ಸಂಗಾತಿಯೊಂದಿಗೆ ಮನಸ್ತಾಪ ಮೂಡಬಹುದು. ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ಕುಟುಂಬ ವಾತಾವರಣ ಸಂತೋಷದಿಂದ ಕೂಡಿರುವುದು. ಆರೋಗ್ಯ ಉತ್ತಮವಾಗಿರುವುದು.‌

Monthly horoscope October Check Predictions Lucky Number Colour of All Twelve Signs Lucky Zodiac Sign

ವೃಷಭ ರಾಶಿ (Taurus)

ನಿಮಗೆ ಅಕ್ಟೋಬರ್ ತಿಂಗಳು ಪ್ರಗತಿಯ ತಿಂಗಳಾಗಿರಬಹುದು. ಉದ್ಯೋಗ, ವ್ಯವಹಾರದಲ್ಲಿ ಪ್ರಮುಖ ಜವಾಬ್ದಾರಿ ಸಿಗಬಹುದು. ಹಣಕಾಸಿನ ಸ್ಥಿತಿ ಸುಧಾರಿಸುವುದು. ಕಠಿಣ ಪರಿಶ್ರಮ ಫಲ ನೀಡುವುದು. ಉಳಿತಾಯ ಮಾಡುವುದಕ್ಕೆ ಸಾಧ್ಯವಾಗುವುದು. ಅವಿವಾಹಿತರಿಗೆ ಮನೆಯಲ್ಲಿ ಮದುವೆ ಮಾತುಕತೆ ನಡೆಯುವುದು. ಆರೋಗ್ಯ ಸಾಮಾನ್ಯವಾಗಿರುವುದು.

ಮಿಥುನ ರಾಶಿ (Gemini)

ಅಕ್ಟೋಬರ್ ಬದಲಾವಣೆಯ ಮಾಸ. ಹೊಸ ಅವಕಾಶ ಒದಗಿ ಬರುವುದು. ಹಿಸ ಕೆಲಸಕ್ಕೆ ಕೈ ಹಾಕಬಹುದು. ವ್ಯವಹಾರ ವಿಸ್ತರಿಸುವುದಾದರೂ ಸಮಯ ಅನುಕೂಲಕರವಾಗಿದೆ. ಆರ್ಥಿಕ ಲಾಭಕ್ಕೆ ಅವಕಾಶ ಸಿಗುವುದು. ಕುಟುಂಬದ ಸಲುವಾಗಿ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು.

ಕರ್ಕಾಟಕ ರಾಶಿ (Cancer)

ಈ ತಿಂಗಳು ಭಾವನಾತ್ಮಕವಾಗಿ ಮತ್ತು ವೃತ್ತಿಪರವಾಗಿ ಮುಖ್ಯವಾಗಿರುವುದು. ಉದ್ಯೋಗದಲ್ಲಿ ಪ್ರಗತಿಗೆ ಅವಕಾಶಗಳಿರುವುದು. ಹೊಸ ಗ್ರಾಹಕರಿಂದ ಹೆಚ್ಚು ಲಾಭವಾಗುವುದು. ಹೊಸ ಹೊಸ ಅವಕಾಶಗಳು ಸಿಗುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಜೀರ್ಣಕ್ರಿಯೆ ಸಮಸ್ಯೆ ಕಾಣಿಸಿಕೊಳ್ಳಬಹುದು.

ಸಿಂಹ ರಾಶಿ (Leo)

ಈ ತಿಂಗಳು ಆತ್ಮವಿಶ್ವಾಸ ಹೆಚ್ಚಾಗುವುದು. ಇದು ಪ್ರಗತಿಯ ತಿಂಗಳಾಗಿರುವುದು. ನಾಯಕತ್ವದ ಗುಣ ವೃತ್ತಿಜೀವನದ ಪ್ರಗತಿಗೆ ಕಾರಣವಾಗುವುದು. ಹೊಸ ಜವಾಬ್ದಾರಿ ಸಿಗಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಆದರೂ ಖರ್ಚು ಮಾಡುವಾಗ ಭವಿಷ್ಯದ ಬಗ್ಗೆಯೂ ಯೋಚನೆ ಇರಲಿ. ಹೊಸ ಯೋಜನೆ ಕೈಗೆತ್ತಿಕೊಳ್ಳಲು ಸರಿಯಾದ ಸಮಯ. ತೆಗೆದುಕೊಳ್ಳುವ ಆಹಾರದ ಬಗ್ಗೆ ಗಮನ ಇರಲಿ.‌

ಕನ್ಯಾ ರಾಶಿ (Virgo)

ಇಲ್ಲಿವರೆಗಿನ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುವುದು. ಹೊಸ ಜವಾಬ್ದಾರಿ ಸಿಗುವುದು. ಹಣಕಾಸಿನ ವಿಷಯದಲ್ಲಿ ಲಾಭವಾಗುವುದು. ಆದಾಯ ಮತ್ತು ಉಳಿತಾಯ ಎರಡನ್ನೂ ಹೆಚ್ಚಿಸುವ ಅವಕಾಶ ಸಿಗುವುದು. ಕುಟುಂಬ ವಾತಾವರಣ ಸಂತೋಷದಿಂದ ಕೂಡಿರುವುದು. ನೀವು ಮಾಡುವ ಕೆಲಸ ತೃಪ್ತಿ ನೀಡುವುದು.

ತುಲಾ ರಾಶಿ (Libra)

ಸಂಬಂಧ ಮತ್ತು ವೃತ್ತಿ ಎರಡರಲ್ಲೂ ಸಮತೋಲನ ಸಾಧಿಸುವ ಸಮಯ ಇದು. ಅಕ್ಟೋಬರ್‌ನಲ್ಲಿ ಕೆಲವು ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು. ನಿಮ್ಮ ಆರ್ಥಿಕ ಸ್ಥಿತಿ ಬಲಪಡಿಸಲು ಹೊಸ ಅವಕಾಶಗಳು ಉದ್ಭವಿಸಬಹುದು. ಸಂತೋಷದ ದಿನ ನಿಮ್ಮ ಮುಂದಿರುವುದು. ಕುಟುಂಬ ಸದಸ್ಯರ ನಡುವೆ ಇದ್ದ ಮನಸ್ತಾಪ ಕಡಿಮೆಯಾಗುವುದು.

ವೃಶ್ಚಿಕ ರಾಶಿ (Scorpio)

ಅಕ್ಟೋಬರ್ ಸವಾಲುಗಳ ತಿಂಗಳು. ಕೆಲಸದಲ್ಲಿ ಸ್ಪರ್ಧೆ ಹೆಚ್ಚಾಗುವುದು. ಮಾನಸಿಕ ಒತ್ತಡ ಹೆಚ್ಚಾಗುವುದು. ತಾಳ್ಮೆಯಿಂದ ಕೆಲಸ ಮಾಡಿದರೆ ಪರಿಸ್ಥಿತಿ ನಿಭಾಯಿಸಬಹುದು. ವ್ಯವಹಾರಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರ ಇರಲಿ. ಹೂಡಿಕೆ ಮಾಡುವುದಕ್ಕೆ ಸಮಯ ಅನುಕೂಲಕರವಾಗಿಲ್ಲ. ಖರ್ಚಿನ ಬಗ್ಗೆಯೂ ಎಚ್ಚರ ಇರಲಿ.

ಧನು ರಾಶಿ (Sagittarius)

ಹೊಸ ಅನುಭವ ಅವಕಾಶ ಎದುರಾಗುವುದು. ದೂರದ ಊರಿಗೆ ಪ್ರಯಾಣ ಮಾಡುವ ಅವಕಾಶ ಸಿಗಬಹುದು. ಕೆಲಸದಲ್ಲಿ ಪ್ರಗತಿಯಾಗುವುದು. ಆರ್ಥಿಕ ಸ್ಥಿತಿ ಸುಧಾರಿಸುವುದು. ಕುಟುಂಬ ಸದಸ್ಯರಿಂದ ಬೆಂಬಲ ಸಿಗುವುದು. ಭವಿಷ್ಯದ ಬಗ್ಗೆ ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದು.

ಮಕರ ರಾಶಿ (Capricorn)

ಕಠಿಣ ಪರಿಶ್ರಮ ಫಲಪ್ರದವಾಗಿರುವುದು. ಜವಾಬ್ದಾರಿ ಹೆಚ್ಚಾಗುವುದು. ಪ್ರತಿಷ್ಠೆಯೂ ಹೆಚ್ಚಾಗಬಹುದು. ಉಳಿತಾಯ ಹೆಚ್ಚಾಗುವುದು. ಮನೆಯ ವಾತಾವರಣ ಉತ್ತಮವಾಗಿರುವುದು. ಇಡೀ ತಿಂಗಳು ನೆಮ್ಮದಿಯಿಂದ ಕಳೆಯುವುದು. ವೈವಾಹಿಕ ಜೀವನ ಸುಕರವಾಗಿರುವುದು. ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ.

ಕುಂಭ ರಾಶಿ (Aquarius)

ನಿಮ್ಮ ಯೋಚನಾ ಲಹರಿಯೇ ನಿಮಗೆ ಲಾಭ ತಂದುಕೊಡುವುದು. ಹೊಸ ಅವಕಾಶ ಸಿಗುವುದು. ಆದಾಯ ಹೆಚ್ಚಾಗುವ ಸಾಧ್ಯತೆಯಿದೆ. ಖರ್ಚು ನಿಯಣತ್ರಣದಲ್ಲಿದ್ದರೆ ಒಳ್ಳೆಯದು. ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಸಹಾಯ ಸಿಗುವುದು. ಪ್ರೇಮ ಜೀವನದಲ್ಲಿ ಸಂಬಂಧಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ಇರುವುದು.

Monthly horoscope: ಮೀನ ರಾಶಿ (Pisces)

ಆತ್ಮವಿಶ್ವಾಸ ಹೆಚ್ಚುವುದು. ಹೊಸ ಆರಂಭಕ್ಕೆ ಸಮಯ ಅನುಕೂಲಕರವಾಗಿರುವುದು. ಆರ್ಥಿಕ ಸ್ಥಿತಿ ಸುಧಾರಿಸುವುದು. ಸಾಲ ತೀರಿಸುವ ಅವಕಾಶ ಸಿಗುವುದು. ಈ ಸಮಯ ವಿದ್ಯಾರ್ಥಿಗಳ ಪಾಲಿಗೆ ಅದೃಷ್ಟ ಹೊತ್ತು ತರುವುದು. ತೆಗೆದುಕೊಳ್ಳುವ ಪ್ರಮುಖ ನಿರ್ಧಾರ ನಿಮ್ಮ ಮುಂದಿನ ಜೀವನದ ದಿಕ್ಕನ್ನೇ ಬದಲಾಯಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+