May 2025 Horoscope: ಮೇ 2025ರ ಮಾಸ ಭವಿಷ್ಯ- ಈ ರಾಶಿ ಮುಟ್ಟಿದ್ದೆಲ್ಲವೂ ಚಿನ್ನ

2025 ಮೇ ತಿಂಗಳು ಅನೇಕ ರಾಶಿಗಳು ತಮ್ಮ ಸ್ಥಾನಗಳನ್ನು ಬದಲಾಯಿಸಲಿವೆ. 14.04.2025ರಂದು ಗುರು ವೃಷಭದಿಂದ ಮಿಥುನ ರಾಶಿಗೆ ಪ್ರವೇಶ ಮಾಡಲಿದೆ. ಜೊತೆಗೆ ಸೂರ್ಯ ಕೂಡ ವೃಷಭ ರಾಶಿಯಲ್ಲಿ ಸಂಚಾರ ಮಾಡಲಿದೆ. ಅಲ್ಲದೆ 20.05.2025ರಂದು ರಾಹುಕೇತುಗಳು ಕುಂಭ ಸಿಂಹರಾಶಿಯಲ್ಲಿ ಸಂಚರಿಸಲಿವೆ. ಮೇ ತಿಂಗಳಲ್ಲಿ 01.05.2025ರಂದು ಕಾರ್ಮಿಕರ ದಿನಾಚರಣೆ ಹಾಗೂ 12.05.2025 ಬುದ್ಧ ಪೂರ್ಣಿಮಾ ಇದೆ. 01.05.2025 ರಿಂದ 31.05.2025ರವರೆಗೆ ಒಟ್ಟಾರೆ ಗ್ರಹಗಳ ಸಂಚಾರ ಹನ್ನೆರಡು ರಾಶಿಗಳ ಆರ್ಥಿಕ, ವೃತ್ತಿ, ಕೌಟುಂಬಿಕ, ಪ್ರೀತಿ ಜೀವನದಲ್ಲಿ ಯಾವ ಪರಿಣಾಮ ಬೀರಲಿದೆ ಎಂದು ಈಗ ತಿಳಿಯೋಣ.

May 2025 Monthly Horoscope in Kannada

ಮೇಷ ರಾಶಿ:

ಈಗ ನಿಮಗೆ ಗುರುಬಲ ಇಲ್ಲ ಅಂದರೆ ಅರ್ಧ ಗುರುಬಲ. ಮೂರನೇ ಮನೆಯ ಗುರು ಸಹ ಕೊಂಚ ಫಲವನ್ನು ನೀಡುತ್ತಾನೆ. ಸಾಡೆಸಾತಿ ಶುರುವಾಗಿದೆ ಅದರ ಬಿಸಿ ಅನುಭವಕ್ಕೆ ಬರುತ್ತಿದೆ. ಆದರೆ ಈ ತಿಂಗಳ 20ರ ನಂತರ ರಾಹು 11ನೇ ಮನೆ ಲಾಭಸ್ಥಾನಕ್ಕೆ ಪ್ರವೇಶವಾಗುವುದರಿಂದ ಹಣಕಾಸಿನ ಹರಿವು ಉತ್ತಮವಾಗುತ್ತದೆ. ಯಾವೂದೋ ಊಹಿಸದ ಮೂಲದಿಂದ ಹಣ ಒದಗಿ ಬರುತ್ತದೆ. ಷೇರ್ಸ್ ನಲ್ಲಿ ಹಣ ಹೂಡಿದ್ದರೆ ಲಾಭ ಬರುತ್ತದೆ.

Take a Poll

ಈ ತಿಂಗಳ ಮೊದಲ ವಾರದಲ್ಲಿ ಬುಧ ನಿಮ್ಮ ರಾಶಿಗೆ ಬರುತ್ತಾನೆ. ಇದು ನಿಮಗೆ ಕೊಂಚ ಬಲ ಕೊಡುತ್ತದೆ. 15ರ ನಂತರ ಸೂರ್ಯ ವೃಷಭಕ್ಕೆ ಪ್ರವೇಶವಾದಾಗ ತಂದೆಯ ಆರೋಗ್ಯಕ್ಕೆ ಸಮಸ್ಯೆ ಇದೆ. ಶನಿ ಹನ್ನೆರಡನೇ ಮನೆಗೆ ಬಂದಿರುವುದರಿಂದ ಖರ್ಚುಗಳು ಹೆಚ್ಚು. ಆದಷ್ಟು ಯೋಚಿಸಿ ವಿವೇಚನೆಯಿಂದ ಮುಂದುವರೆಯಿರಿ. ಹನುಮಂತನ ಪ್ರಾರ್ಥನೆ ಮಾಡಿ. ಯಾವುದೇ ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳುವಾಗ ಯೋಚಿಸಿ ಮುಂದುವರೆಯಿರಿ.

May 2025 Monthly Horoscope in Kannada

ವೃಷಭ ರಾಶಿ:

ಈಗ 20ರವರೆಗೂ ರಾಹು ಲಾಭಸ್ಥಾನದಲ್ಲಿ ಇದ್ದು ಧನಲಾಭ ಚೆನ್ನಾಗಿದೆ. ನಂತರ ಹತ್ತನೇ ಮನೆಗೆ ರಾಹು ಪ್ರವೇಶದಿಂದ ಲಾಭ ಇಲ್ಲದಿದ್ದರೂ ನಷ್ಟವೇನೂ ಇಲ್ಲ. ಆದರೆ ಶನಿ ಲಾಭ ಸ್ಥಾನದಲ್ಲಿ ಇದ್ದು ಧನಲಾಭ ಕಾರ್ಯ ಸಫಲತೆ ಕೊಡುತ್ತಾನೆ. ಅಭಿವೃದ್ಧಿ ಇದೆ. ಈ ತಿಂಗಳ ಅಂತ್ಯದವರೆಗೂ ಶನಿಯ ಜೊತೆ ಶುಕ್ರನೂ ಲಾಭಸ್ಥಾನದಲ್ಲಿ ಇದ್ದು ಅನೇಕ ಒಳ್ಳೆಯ ಸಂಗತಿಗಳನ್ನು ಕೊಡುತ್ತಾನೆ. ಪ್ರಗತಿ ಚೆನ್ನಾಗಿ ಇರುತ್ತದೆ. ಈ ಎರಡೂ ಗ್ರಹಗಳೂ ನಿಮ್ಮ ಯಶಸ್ಸು ಅಭಿವೃದ್ಧಿಗೆ ಕಾರಣರಾಗುತ್ತಾರೆ.

ಮೇ 14 ರ ನಂತರ ಗುರು ಮಿಥುನರಾಶಿಗೆ ಪ್ರವೇಶವಾಗುವುದರಿಂದ ಇನ್ನಷ್ಟು ಒಳ್ಳೆಯ ಸಂಗತಿಗಳು ಇವೆ. ಅವಿವಾಹಿತರಿಗೆ ವಿವಾಹ ಸಂಬಂಧಗಳು ಬರುತ್ತವೆ. ವೃತ್ತಿಯಲ್ಲಿ ಒಳ್ಳೆಯ ಸ್ಥಾನಮಾನ ದೊರೆಯುತ್ತದೆ. ಶತ್ರುಗಳು ದೂರವಾಗುತ್ತಾರೆ. ನಿಮಗೆ ಧನಲಾಭ, ಕಾರ್ಯ ಸಿದ್ಧಿ, ಒಳ್ಳೆಯ ಹಿತೈಷಿಗಳ ಸಹವಾಸ ಕೌಟುಂಬಿಕಸೌಖ್ಯ ಮೊದಲಾದ ಶುಭಸಂಗತಿಗಳು ನಿಮ್ಮದಾಗಲಿದೆ.

May 2025 Monthly Horoscope in Kannada

ಮಿಥುನ ರಾಶಿ:

ಶುಭಫಲಗಳನ್ನು ಪಡೆಯಲು ನೀವು ಇನ್ನೂ ಕಾಯಬೇಕು. ಆದರೆ ಈ ತಿಂಗಳಲಿ ಬುಧ ನಿಮಗೆ ಲಾಭಸ್ಥಾನದಲ್ಲಿ ಇರುವುದರಿಂದ ವೃತ್ತಿಯಲ್ಲಿ ವ್ಯಾಪಾರದಲ್ಲಿ ಲಾಭಗಳು ಒಳ್ಳೆಯ ಸಂಗತಿಗಳು ಜರುಗುತ್ತವೆ. ಯಾವಗ್ರಹವೂ ಕೆಟ್ಟ ಸ್ಥಾನದಲ್ಲಿ ಇಲ್ಲ. ಆದರೆ ಗುರುಬಲ ಶನಿಬಲ ಯಾವುದೂ ಇಲ್ಲ. ಹತ್ತನೇ ಮನೆಯಲ್ಲಿ ಶುಕ್ರ ರಾಹು ಶನಿ ನಿಮ್ಮ ವೃತ್ತಿಯನ್ನು ಸಂಭಾಳಿಸುತ್ತಾರೆ.

ಬಡ್ತಿ ಸಮೇತ ವರ್ಗಾವಣೆ, ಅಥವಾ ಒಳ್ಳೆಯ ಸ್ಥಾನಮಾನ ಪದವಿ ನಿರೀಕ್ಷೆ ಮಾಡಬಹುದು. ಗುರು ಈ ತಿಂಗಳ 14 ಕ್ಕೆ ನಿಮ್ಮ ರಾಶಿಗೇ ಬರುತ್ತಾನೆ. ಕೊಂಚ ಒತ್ತಡಗಳನ್ನು ಕೊಡುತ್ತಾನೆ. ಆದರೆ 20 ರ ನಂತರ ಕೇತು ಮೂರನೇ ಮನೆಗೆ ಪ್ರವೇಶವಾಗಿ ನಿಮಗೆ ಹೆಚ್ಚಿನ ಧನಲಾಭ ಅನುಕೂಲ ಇದೆ. ಹೂಡಿಕೆಗಳಲ್ಲಿ ಲಾಭ ದೊರೆಯುತ್ತದೆ. ಶತ್ರುಗಳು ದೂರವಾಗುತ್ತಾರೆ. ತಾಯಿಯಿಂದ ಸಹಾಯ ಇದೆ. ಕಾರ್ಯಕ್ಷೇತ್ರದಲ್ಲಿ ಇರುವ ಒತ್ತಡಗಳು ಕೊಂಚಮಟ್ಟಿಗೆ ಕಡಿಮೆಯಾಗುತ್ತದೆ. ಆರೋಗ್ಯವೂ ಸುಧಾರಿಸುತ್ತದೆ.

May 2025 Monthly Horoscope in Kannada

ಕಟಕ ರಾಶಿ:

ಅಷ್ಟಮಶನಿಯಿಂದ ಮುಕ್ತಿ ಸಿಕ್ಕಿದೆ. ಶನಿ ಈಗ ನವಮಸ್ಥಾನಕ್ಕೆ ಬಂದಿದ್ದಾನೆ. ಧರ್ಮದಲ್ಲಿ ಮನಸ್ಸು ನೀಡುತ್ತಾನೆ. ಮೇ 14 ರ ವರೆಗೂ ನಿಮಗೆ ಗುರುಬಲ ಇದೆ. ಲಾಭಸ್ಥಾನದಲ್ಲಿ ಇರುವ ಗುರು ನೀವು ಮಾಡುವ ಕೆಲಸಕ್ಕೆ ಬರುವ ಅಡೆತಡೆಗಳನ್ನು ನಿವಾರಣೆ ಮಾಡಿ ನಿಮ್ಮ ಯೋಜನೆಗಳು ಫಲಪ್ರದವಾಗುವ ಹಾಗೆ ಮಾಡುತ್ತಾನೆ.

ಮನಸ್ಸಿಗೆ ಆಹ್ಲಾದ ಎನಿಸುತ್ತದೆ. ನಿಂತು ಹೋದ ಕೆಲಸ ಕಾರ್ಯಗಳು ಚಾಲನೆ ಪಡೆದುಕೊಳ್ಳುತ್ತದೆ. ಒಂಬತ್ತನೇ ಮನೆಯಲ್ಲಿ ಶನಿಯ ಜೊತೆ ಶುಕ್ರ, ರಾಹು ಇರುವುದು ಕೂಡ ನಿಮಗೆ ಲಾಭಕರೆವೇ ಆಗಿದೆ. 20 ರ ನಂತರ ರಾಹು ಎಂಟನೇ ಮನೆಗೆ ಪ್ರವೇಶವಾಗುತ್ತಾನೆ ಪಾಪಗ್ರಹಗಳು ಎಂಟನೇ ಮನೆಯಲ್ಲಿ ಇದ್ದರೆ ತೊಂದರೆ ಇಲ್ಲ. ಕೇತು ಎರಡನೇ ಮನೆಗೆ ಬರುತ್ತಾನೆ. ಕೌಟುಂಬಿಕವಾಗಿ ಕೊಂಚ ಅಶಾಂತಿ ಇರುತ್ತದೆ. ಈ ಮಾಸ ನಿಮಗೆ ಮಿಶ್ರಫಲ.

May 2025 Monthly Horoscope in Kannada

ಸಿಂಹರಾಶಿ:

ನಿಮಗೆ ಅಷ್ಟಮಶನಿ ಪ್ರಾರಂಭವಾಗಿದೆ. ಕೊಂಚ ಆತಂಕದ ವಾತಾವರಣ, ಮಾನಸಿಕ ಒತ್ತಡ ಇರುತ್ತದೆ. ಹಣಕಾಸಿನ ಏರುಪೇರಿನ ಪರಿಸ್ಥಿತಿ ಎದುರಾಗಬಹುದು. ಮೇ 14ರ ನಂತರ ಗುರುಬಲ ಬರುತ್ತದೆ. ಗುರು ಲಾಭಸ್ಥಾನಕ್ಕೆ ಪ್ರವೇಶ ಮಾಡುತ್ತಾನೆ. ಇದು ನಿಮಗೆ ಅನೇಕ ಭಾಗ್ಯಗಳನ್ನೂ ಸೌಖ್ಯಗಳನ್ನೂ ಕೊಡುತ್ತದೆ. ಹಣಕಾಸಿನ ಏರುಪೇರು ನಿಯಂತ್ರಣಕ್ಕೆ ಬರುತ್ತದೆ. ಬುಧ ಈ ಮಾಸದಲ್ಲಿ ಒಂಬತ್ತನೇ ಮನೆಯಲ್ಲಿ ಇರುತ್ತಾನೆ. ಇದೂ ಸಹ ನಿಮಗೆ ರಕ್ಷಣೆ ಕೊಡುತ್ತದೆ.

ಈ ತಿಂಗಳ 20ಕ್ಕೆ ರಾಹು ಏಳನೇ ಮನೆಗೆ ಪ್ರವೇಶ ಮಾಡುತ್ತಾನೆ. ಕೇತು ನಿಮ್ಮ ರಾಶೀಗೇ ಬರುತ್ತಾನೆ. ಇದು ನಿಮಗೆ ವೈಯುಕ್ತಿಕ ಆರೋಗ್ಯ ಕ್ಕೆ ತೊಂದರೆ ಬರಬಹುದ. ಸುಭ್ರಹ್ಮಣ್ಯನಿಗೆ ಹಾಲಿನ ಅಭಿಷೇಕ ಮಾಡಿಸಿ. ಉಸಿರಾಟ, ಅಲರ್ಜಿ, ಫಂಗಲ್ ಇನಫೆಕ್ಷನ್, ಬ್ಯಾಕ್ಟೀರಿಯಲ್ ಇನಪೆಕ್ಷನ್ ಬರಬಹುದು. ಆದರೆ ಗುರುಬಲ ಇರುವುದರಿಂದ ಪರಿಸ್ಥಿತಿ ವಿಷಮಕ್ಕೆ ಹೋಗದಂತೆ ತಡೆಯುತ್ತದೆ.

May 2025 Monthly Horoscope in Kannada

ಕನ್ಯಾ ರಾಶಿ:

ಈತಿಂಗಳ 14ರ ವರೆಗೂ ನಿಮಗೆ ಗುರುಬಲ ಇದೆ. ಆದರೆ ಆರನೇ ಮನೆಯಿಂದ ಶನಿ ಏಳನೇ ಮನೆಗೆ ಪ್ರವೇಶವಾಗಿದ್ದಾನೆ. ಶನಿಯ ಬಲ ನಿಮಗೆ ಕಡಿಮೆ ಆಗಿದೆ. ಏಳನೇ ಮನೆಯ ಶನಿ ಕೆಡುಕಲ್ಲದಿದ್ದರೂ ಉಪಕಾರಿ ಅಲ್ಲ. ಒತ್ತಡಗಳನ್ನು ಕೊಡುತ್ತಾನೆ ಹಾಗೂ ಕೋಪ ಸಿಡುಕು ಅಸಹನೆ ಮುಂತಾದ ಸ್ವಭಾವ ಹೆಚ್ಚು ಮಾಡುತ್ತಾನೆ. 20ರ ನಂತರ ರಾಹು ಆರನೇ ಮನೆಗೆ ಬಂದು ಕೇತು ನಿಮ್ಮ ರಾಶಿಯನ್ನು ಬಿಟ್ಟು ಸಿಂಹರಾಶಿಗೆ ಪ್ರವೇಶವಾಗುತ್ತಾನೆ. ಇದು ನಿಮಗೆ ಒಳ್ಳೆಯ ಫಲಗಳನ್ನು ನೀಡುತ್ತದೆ.

ಆರೋಗ್ಯ ಸುಧಾರಿಸುತ್ತದೆ. ಮುಂದಿನ ದಿನಗಳಲ್ಲಿ ಗುರುವಿನ ಬದಲಾವಣೆ ನಿಮಗೆ ಅಷ್ಟೊಂದು ಶುಭದಾಯಕವಾಗಿಲ್ಲ. ಗುರು ಹತ್ತನೇ ಮನೆಯ ಪ್ರವೇಶ ಸ್ಥಾನಮಾನ ಬದಲಾವಣೆಯನ್ನು ತೋರಿಸುತ್ತದೆ. ಪದಚ್ಯುತಿಯೂ ಆಗಬಹುದು. ಎಚ್ಚರಿಕೆಯಿಂದ ಇರಿ. ಕಾರ್ಯಕ್ಷೇತ್ರದಲ್ಲಿ ಒತ್ತಡ, ಕೌಟುಂಬಿಕ ತಲ್ಲಣಗಳು ಎದುರಾಗಬಹುದು. ಕೆಲಸಗಳು ಮುಂದಕ್ಕೆ ಸಾಗುವುದಿಲ್ಲ. ನಿಂತಲ್ಲೇ ನಿಂತು ಬಿಡುತ್ತದೆ. ಕೌಟುಂಬಿಕ ವಾತಾವರಣ ಕೂಡ ಆಹ್ಲಾದದಾಯಕವಾಗಿರುವುದಿಲ್ಲ. ನಿಮ್ಮ ಮನೆ ದೇವರ ಸ್ಮರಣೆ ದರ್ಶನ ವಿಹಿತ.

May 2025 Monthly Horoscope in Kannada

ತುಲಾ ರಾಶಿ:

ಈಗ ನಿಮಗೆ ಗುರು ಅಷ್ಟಮದಲ್ಲಿ 14ರ ವರೆಗೂ ಇರುತ್ತಾನೆ. ಇಲ್ಲಿಯವರೆಗೆ ಬಹಳ ಕಷ್ಟ ನಷ್ಟಗಳನ್ನು ಅನುಭವಿಸಿದ್ದೀರಿ. ಈಗ 14 ರಂದು ಗುರು ಒಂಬತ್ತನೇ ಮನೆಗೆ ಪ್ರವೇಶ ಮಾಡುತ್ತಾನೆ. ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ. ಅನೇಕ ಅವಕಾಶಗಳು ನಿಮ್ಮ ಮುಂದೆ ಬರುತ್ತದೆ. ನಿಂತು ಹೋಗಿದ್ದ ಕೆಲಸಗಳೆಲ್ಲ ಚಕಚಕನೆ ಮುಂದುವರೆಯುತ್ತದೆ. ವೃತ್ತಿಯಲ್ಲಿ ಮಹತ್ರ ಬದಲಾವಣೆ ಇದೆ. ಪದವಿ ಬಡ್ತಿ ಅಧಿಕಾರ ಪ್ರಾಪ್ತಿ ಇದೆ. ಬಹಳ ದಿನಗಳಿಂದ ಕಂಗೆಸುತ್ತಿದ್ದ ಸಮಸ್ಯೆಗಳು ಈಗ ಪರಿಹಾರ ಕಾಣುತ್ತದೆ. ಶನಿ ಕೂಡ ಪಂಚಮದಿಂದ ಷಷ್ಠಕ್ಕೆ ಬಂದಿದ್ದಾನೆ. ಆರನೇ ಮನೆಯ ಶನಿ ಬಹಳ ಉಪಕಾರಿ.

ನಿಮ್ಮ ಸಮಸ್ಯೆಗಳು ಶೀಘ್ರ ಪರಿಹಾರ ಕಾಣುತ್ತದೆ. ಕಳೆದ ವರ್ಷದಿಂದ ಬಹಳ ಕಷ್ಟನಷ್ಟಗಳನ್ನು ಅನುಭವಿಸಿದ್ದೀರಿ. ಆದರೆ ಈಗ ಶನಿಯ ಆರನೇಯ ಪ್ರವೇಶದಿಂದ ಹಾಗೂ ಗುರುವಿನ ಭಾಗ್ಯಸಥಾನದ ಪ್ರವೇಶದಿಂದ ನಿಮಗೆ ಅದೃಷ್ಟ ಒದಗಿ ಬರುತ್ತದೆ. ಹಾಗೆಯೇ ಕೇತುವಿನ ಲಾಭಸ್ಥಾನದ ಪ್ರವೇಶ ಸಹಾ ನಿಮಗೆ ಹೆಚ್ಚಿನ ಧನಲಾಭ ಕಾರ್ಯಸಿದ್ದಿಗೆ ಕಾರಣವಾಗುತ್ತದೆ. ಎಲ್ಲ ವಿಷಯಗಳಲ್ಲೂ ಪರಿಸ್ಥಿತಿ ನಿಮಗೆ ಅನುಕೂಲಕರವಾಗಿ ಬದಲಾಯಿಸುತ್ತದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಹೊಸ ನೌಕರಿ ದೊರೆಯುವ ಅವಕಾಶ ಇದೆ. ಈ ಮಾಸದ ಆರಂಭದಿಂದಲೇ ಶುಭಶಕುನಗಳು ಗೋಚರವಾಗುತ್ತದೆ.

May 2025 Monthly Horoscope in Kannada

ವೃಶ್ಚಿಕರಾಶಿ:

ಈಗ ನಿಮಗೆ ಏಳರಲ್ಲಿ ಇರುವ ಗುರು ಈ 14 ರ ನಂತರ ಎಂಟನೇ ಮನೆಗೆ ಬರುತ್ತಾನೆ. ಆರೋಗ್ಯದಲ್ಲಿ ಕೊಂಚ ವ್ಯತ್ಯಾಸಗಳು ಕಾಣಬಹುದು. ಪಂಚಮ ಶನಿ ಪ್ರಾರಂಭವಾಗಿದೆ. ಹಾಗೂ ಲಾಭಸ್ಥಾನದಲ್ಲಿ ಇದ್ದ ಕೇತು 10 ನೇ ಮನೆಗೆ ಪ್ರವೇಶವಾಗುತ್ತಾನೆ. ಯಾವ ಬಲವಾದ ಗ್ರಹಬಲವೂ ಈಗ ನಿಮಗೆ ಕಾಣುತ್ತಿಲ್ಲ. ಹಣಕಾಸಿನ ಸ್ಥಿತಿಕೊಂಚ ಇಳಿಯಬಹುದು. ನಿಮ್ಮ ಯೋಜನೆಗಳು ನಿಮ್ಮ ಅನಿಸಿಕೆಯಂತೆ ನಡೆಯದೆ ಇಅರಬಹುದು. ವಿಳಂಬವಾಗಬಹುದು. ಈಗ ಐದನೇ ಮನೆಯಲ್ಲಿ ಶುಕ್ರ ಇರುವುದರಿಂದ ನಿಮಗೆ ತಕ್ಕಮಟ್ಟಿನ ಬಲ ನೀಡುತ್ತದೆ.

ಯಶಸ್ಸಿನ ಹಾದಿಯಲ್ಲಿ ಅಡೆತಡೆಗಳಿದ್ದರೂ ಸಾಗುತ್ತಿದ್ದೀರಿ. ಅವಿವಾಹಿತರಿಗೆ ಮೇ 14 ರ ಒಳಗೆ ವಿವಾಹ ಆಗಬೇಕು. ಇಲ್ಲವಾದಲ್ಲಿ ಮತ್ತೆ ಒಂದು ವರ್ಷ ಕಾಯಬೇಕಾಗುತ್ತದೆ. ಕಾರ್ಯಕ್ಷೇತ್ರದಲ್ಲಿ ನಿಧಾನ ಪ್ರಗತಿ. ಒಳ್ಳೆಯ ಅವಕಾಶಗಳು ಮುಂದೆ ಮುಂದೆ ಹೋಗುತ್ತವೆ. ಕೈಗೆ ಸಿಕ್ಕಿದರೂ ಸಿಗದಂತೆ ತಪ್ಪಿಸಿಕೊಳ್ಳುತ್ತದೆ. ನಮಗೆ ಕಾಣದಂತೆ ಎಲ್ಲೋ ಹೊಡೆತ ಬೀಳುತ್ತದೆ. ಸಂಬಂಧಗಳಲ್ಲಿ ಕಿರಿಕಿರಿ ಶುರುವಾಗಬಹುದು. ಸಾಕಷ್ಟು ಖರ್ಚುಗಳು ಇವೆ. ಶನಿ ಸವಾಲುಗಳನ್ನು ಕೊಡುತ್ತಾನೆ, ಹನುಮಾನ್ ಚಾಲೀಸ ಪಠಿಸಿ.

May 2025 Monthly Horoscope in Kannada

ಧನಸ್ಸು ರಾಶಿ:

ಈಗ ನಿಮಗೆ ಶನಿ ಮೂರನೇ ಮನೆಯಿಂದ ನಾಲ್ಕನೇ ಮನೆಗೆ ಪ್ರವೇಶವಾಗಿದ್ದಾನೆ. ನಾಲ್ಕರ ಶನಿ ಅಷ್ಟೊಂದು ಉಪಕಾರಿ ಅಲ್ಲ. ಆದರೆ ಅಪಕಾರಿಯೂ ಅಲ್ಲ. ಗುರು ಕೂಡಾ ಈಗ ಆರನೇ ಮನೆಯಲ್ಲಿ ರಾಹುಕೇತುಗಳು ನಾಲ್ಕನೇ-ಹತ್ತನೇ ಮನೆಯಲ್ಲಿ ಇದ್ದಾರೆ. ಅಷ್ಟು ಒಳ್ಳೆಯ ಬೆಳವಣಿಗೆ ಇಲ್ಲಿಯವರೆಗೂ ಕಂಡುಬಂದಿಲ್ಲ. ಆದರೆ 14 ರ ನಂತರ ಗುರುಬಲ ಬರುವುದರಿಂದ ಪರಿಸ್ಥಿತಿ ನಿಮ್ಮ ಹಿಡಿತಕ್ಕೆ ಬರುತ್ತದೆ. ಆರೋಗ್ಯದಲ್ಲಿ ಹಾಗೂ ಆರ್ಥಿಕತೆಯಲ್ಲಿ ಸಾಕಷ್ಟು ಏರುಪೇರುಗಳನ್ನು ಅನುಭವಿಸಿದ್ದೀರಿ. ಮಾನಸಿಕ ಕ್ಲೇಶ ಅನುಭವಿಸಿದ್ದೀರಿ. ಈಗ ಅದಕ್ಕೆಲ್ಲ ಒಂದು ಸರಳ ಪರಿಹಾರ ಗೋಚರಿಸುತ್ತದೆ. ನೀವು ಯಾವುದನ್ನು ಬೆಟ್ಟದ ಹಾಗಿರುವ ಕಷ್ಟ ಎಂದು ತಿಳಿದಿದ್ದೀರೋ ಅದು ಹತ್ತಿಯಂತೆ ಹಗುರವಾಗಿ ಹಾರಿಹೋಗುತ್ತದೆ.

ರಾಹು ಕೂಡ ಮೂರನೇ ಮನೆಗೆ ಪ್ರವೇಶವಾಗಿ ನಿಮ್ಮನ್ನು ಬಲಪಡಿಸುತ್ತಾನೆ. ಪರಿಸ್ಥಿತಿ ಹತೋಟಿಗೆ ಬಂದು ನೀವು ಎಣಿಸಿದ ಕೆಲಸಕಾರ್ಯಗಳಲ್ಲಿ ಜಯ ಯಶಸ್ಸು ಸಿಗುತ್ತದೆ. ವೃತ್ತಿಯಲ್ಲಿ ಬಡ್ತಿ, ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ನಾಲ್ಕರಲ್ಲಿ ಶುಕ್ರ ಈ ಮಾಸದ ಕೊನೆಯವರೆಗೂ ಇರುತ್ತಾನೆ. ಇದು ಕೂಡ ಬಹಳ ನಿಮಗೆ ಬೆಂಬಲ ಕೊಡುತ್ತದೆ. ಸಂಗಾತಿಯಿಂದ ಸಹಾಯ ಬೆಂಬಲ ಪಡೆಯುತ್ತೀರಿ. ವಿದೇಶ ಯಾತ್ರೆ ಇದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಅವಕಾಶ ಸಿಗುತ್ತದೆ. ಕೋರ್ಟು ವ್ಯಾಜ್ಯಗಳಲ್ಲಿ ಜಯ ಸಿಗುತ್ತದೆ.

May 2025 Monthly Horoscope in Kannada

ಮಕರ ರಾಶಿ:

ಶನಿಯ ಮೂರನೇ ಮನೆಯ ಪ್ರವೇಶ ನಿಮಗೆ ಒಂದು ಮಹತ್ತರ ಬದಲಾವಣೆಯನ್ನು ತರುತ್ತದೆ. ಇದುವರೆಗೂ ಇದ್ದ ಸಾಡೆಸಾತಿ ಪ್ರಭಾವದಿಂದ ಮುಂಕ್ತಿಹೊಂದಿದ್ದೀರಿ. ಏಳುವರ್ಷದಿಂದ ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸಿದ್ದೀರಿ. ಈಗ ಸುಖಪಡುವ ಕಾಲ ಬಂದಿದೆ. ಕೀರ್ತಿ ಯಶಸ್ಸು ನಿಮ್ಮ ಹೆಗಲೇರಲಿದೆ. ಹಣಕಾಸಿನ ಸ್ಥಿತಿ ಸುಗಮವಾಗಲಿದೆ. ನಿಮ್ಮ ವಿರೋಧಿಗಳು ಕೂಡ ಈಗ ಸ್ನೇಹಹಸ್ತ ಚಾಚುತ್ತಾರೆ. ಅಪರಿಚಿತರು ಸಹ ಸಹಾಯ ಮಾಡುವ ಕಾಲ. ದೇವರ ಅನುಗ್ರಹ ದೊರೆತು ಎಲ್ಲ ಕೆಲಸ ಕಾರ್ಯಗಳಲ್ಲಿ ಜಯ ಸಾಧಿಸುತ್ತೀರಿ.

ಜೀವನದಲ್ಲಿ ಇರುವ ಅಡೆತಡೆಗಳು ದೂರವಾಗಿ ಜೀವನ ಸರಾಗವಾಗಿ ನಡೆಯುತ್ತದೆ. ನೌಕರಿ ಸಿಗುವುದು, ವಿವಾಹ, ಮನೆ ಕಟ್ಟುವುದು, ಆಸ್ತಿ ಕೊಳ್ಳುವುದು ಮುಂತಾದ ಸಕಾರಾತ್ಮಕ ಕೆಲಸಗಳಿಗೆ ಗುರುವಿನ ಅನುಗ್ರಹ ದೊರೆತು ಎಲ್ಲವೂ ಸರಾಗವಾಗಿ ನೆರವೇರುತ್ತದೆ. ಶತ್ರುಗಳು ದೂರವಾಗುತ್ತಾರೆ. ನಿಮ್ಮ ಸರ್ವತೋಮುಖ ಅಭಿವೃದ್ಧಿಯ್ನು ಕಾಣುತ್ತೀರಿ. ಮನಸ್ಸಿಗೆ ಸಂತಸ ಸಿಗಲಿದೆ. ಅವಕಾಶಗಳ ಮಳೆಯೇ ಸುರಿಯುತ್ತದೆ. ಶುಭಶಕುನಗಳು ಈ ಮಾಸ ಪ್ರಾರಂಭದಿಂದಲೇ ನಿಮ್ಮ ಅನುಭವಕ್ಕೆ ಬರುತ್ತದೆ.

May 2025 Monthly Horoscope in Kannada

ಕುಂಭ ರಾಶಿ:

ಈಗ ಶನಿ ನಿಮ್ಮ ರಾಶಿಯನ್ನು ಬಿಟ್ಟು ಮೀನರಾಶಿಗೆ ಪ್ರವೇಶವಾಗಿದ್ದಾನೆ. ಸಾಡೆಸಾತಿಯ ಕೊನೆಯ ಹಂತದಲ್ಲಿದ್ದೀರಿ. ಈಗ ಅಷ್ಟೇನೂ ನಿಮಗೆ ತ್ರಾಸದಾಯಕವಲ್ಲ ಆದರೂ ತಕ್ಕಮಟ್ಟಿನ ಎಚ್ಚರಿಕೆಯಲ್ಲಿ ಇರಿ. ಮುಂದೆ ಗುರುವಿನ ಐದನೇ ಮನೆ ಪ್ರವೇಶ ವೈಯುಕ್ತಿಕ ಬೆಳವಣಿಗೆಗೆ ಸಹಾಯವಾಗಲಿದೆ. ಇದುವರೆಗೂ ಚತುರ್ಥದ ಗುರುವಿನಿಂದ ಜೀವನದಲ್ಲಿ ಅಡೆತಡೆಗಳು ನಕಾರಾತ್ಮಕ ಸಂಗತಿಗಳನ್ನು ಅನುಭವಿಸಿದ್ದೀರಿ. ಎಲ್ಲ ಕಡೆಯಿಂದಲೂ ಹಿನ್ನಡೆ ಅಪಮಾನ ಅನುಭವಿಸಿದ್ದೀರಿ. ವಿನಾಕಾರಣ ನೋವು ಅಪಮಾನಗಳು ನಿಮ್ಮ ಹೆಗಲೇರಿದೆ. ಯಾವ ಕೆಲಸಕ್ಕೆ ಕೈಹಾಕಿದರೂ ನಿಂತಲ್ಲೇ ನಿಲ್ಲುತ್ತಿತ್ತು.

ಕೋರ್ಟು ಕಚೇರಿ ಅಲೆದಾಟ ಧನಹಾನಿ ಮೊದಲಾದ ಮನಸ್ಸಿಗೆ ನೋವು ಕೊಡುವಂಥ ಘಟನೆಗಳಿಂದ ನೊಂದಿದ್ದೀರಿ. ಈಗ ಗುರು ನಿಮ್ಮ ರಾಶಿಯಿಂದ ಐದನೇ ಮನೆಗೆ ಪ್ರವೇಶ ಮಾಡುವುದರಿಂದ ಸಂಪೂರ್ಣ ಗುರುಬಲ ದೊರೆತು ನಿಮಗೆ ಅನೇಕ ಶುಭಫಲಗಳು ದೊರೆಯಲಿದೆ. ಒತ್ತಡಗಳಿಂದ ದೂರವಾಗುತ್ತೀರಿ. ಕತ್ತಿನ ಮೇಲೆ ತೂಗುತ್ತಿರುವ ಕತ್ತಿಯಿಂದ ತಪ್ಪಿಸಿಕೊಳ್ಳುತ್ತೀರಿ. ನಿಮ್ಮ ಸಮಸ್ಯೆಗಳು ಬಹಳಷ್ಟು ಪರಿಹಾರ ಕಾಣಲಿದೆ. ಈ ತಿಂಗಳ ಕೊನೆಯವರೆಗೆ ಎರಡನೇ ಮನೆಯಲ್ಲಿ ಶುಕ್ರ ಇರುವುದು ನಿಮಗೆ ಶುಭಫಲಗಳನ್ನು ಕೊಡುತ್ತದೆ. ಅವಿವಾಹಿತರು ವಿವಾಹ ಪ್ರಯತ್ನ ಮಾಡಬಹುದು.

May 2025 Monthly Horoscope in Kannada

ಮೀನ ರಾಶಿ:

ಈಗ ಸಾಡೆಸಾತಿಯ ಎರಡನೇ ಭಾಗಕ್ಕೆ ಬಂದಿದ್ದೀರಿ. ಇನ್ನೂ ನೀವು ಶನಿಯ ಪ್ರಭಾವದಲ್ಲಿ ಇರುವುದರಿಂದ ಹೆಚ್ಚಿಗೆ ಏನೂ ನಿರೀಕ್ಷೆ ಇಲ್ಲ. ಇದ್ದಂತೆ ನಡೆದುಕೊಂಡು ಹೋದರೆ ಅದೇ ಅದೃಷ್ಟ. ಆರೋಗ್ಯದಲ್ಲಿ ಗಮನ ಇರಲಿ. ಹಣಕಾಸು ಸ್ಥಿತಿಯ ಮೇಲೆ ಹಿಡಿತ ಇರಲಿ. ಗುರು ಈಗ ನಾಲ್ಕನೇ ಮನೆಗೆ ಪ್ರವೇಶ ಮಾಡುವುದರಿಂದ ಒತ್ತಡದ ಜೀವನ. ಕೌಟುಂಬಿಕ ನಿರ್ವಹಣೆ, ವಿದ್ಯಾಭ್ಯಾಸ ಹಣಕಾಸು ಸ್ಥಿತಿ ಎಲ್ಲವೂ ಕೊಂಚ ಕಷ್ಟಕರವಾಗಿ ಇರುತ್ತದೆ. ವಿದ್ಯಾರ್ಥಿಗಳಿಗೆ ಹಿನ್ನಡೆ ಇದೆ.

ಮುಂದೆ ಕೇತು ಆರನೇ ಮನೆಗೆ ಪ್ರವೇಶವಾದಾಗ ನಿಮಗೆ ಹಣಕಾಸಿನ ಸ್ಥಿತಿ ಕೊಂಚಮಟ್ಟಿಗೆ ಸುಧಾರಿಸುತ್ತದೆ. ರಾಹು ಕೂಡ ಕುಂಭರಾಶಿಗೆ ಪ್ರವೇಶ ಮಾಡಿದಾಗ ಆರೋಗ್ಯ ಉತ್ತಮಗೊಳ್ಳುತ್ತದೆ. ಈ ತಿಂಗಳು ಶುಕ್ರ ನಿಮ್ಮ ರಾಶಿಯಲ್ಲೇ ಇರುತ್ತಾನೆ. ಹಾಗಾಗಿ ಕೆಲವು ಶುಭಸಂಗತಿಗಳು ನಿಮಗೆ ಸಂತೋಷ ಕೊಡುತ್ತದೆ. ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಶುಕ್ರ ನಿಮ್ಮನ್ನು ಕಾಪಾಡುತ್ತಾನೆ ಏನೇ ಆದರೂ ಯಾವುದೇ ಕೆಲಸ ಸರಿಯಾಗಿ ಯೋಚಿಸಿ ನಿರ್ಧಾರ ಮಾಡಿ. ಸಹನೆ ಸಮಾಧಾನ ನಿಮ್ಮ ಮಂತ್ರವಾಗಿರಲಿ.

ಶುಭಮಸ್ತು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+