Get Updates
Get notified of breaking news, exclusive insights, and must-see stories!

August Horoscope 2023: ಅಗಸ್ಟ್‌ ತಿಂಗಳಲ್ಲಿ ದ್ವಾದಶಿ ರಾಶಿಗಳ ಗ್ರಹಚಾರ ಫಲ ಹೇಗಿದೆ ನೋಡಿ....

ಅಗಸ್ಟ್‌ ಮಾಸದಲ್ಲಿ ಗ್ರಹಗಳ ಸ್ಥಾನ ಪಲ್ಲಟನೆಯಿಂದ ಯಾವ ರಾಶಿಗಳ ಮೇಲೆ ಉತ್ತಮ ಪರಿಣಾಮ ಬೀರಲಿದೆ ಮತ್ತು ಯಾವ ರಾಶಿಯ ಜನರು ಸಂಕಷ್ಟ ಎದುರಿಸಲಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ. ಅಗಸ್ಟ್‌ ಮಾಸಿಕ ಭವಿಷ್ಯದ ಅನ್ವಯ ನಿಮ್ಮ ರಾಶಿಯಲ್ಲಿ ವೃತ್ತಿ ಜೀವನ, ಕೌಟುಂಬಿಕ ಜೀವನ ಮತ್ತು ಆರ್ಥಿಕ ಪರಿಸ್ಥಿತಿಯ ಮೇಲೆ ಯಾವ ರೀತಿಯ ಪರಿಣಾಮ ಬೀರಿಲಿದೆ ಎಂಬುದನ್ನು ತಿಳಿದುಕೊಳ್ಳಿರಿ.

ಶೋಭಾಕೃತ ನಾಮ ಸಂವತ್ಸರದ ಗ್ರೀಷ್ಮ ಋತು ಆಷಾಢಮಾಸದ ಶುದ್ಧತ್ರೋದಶಿಯಿಂದ ಅಧಿಕ ಶ್ರಾವಣ ಶುದ್ಧ ಚತುರ್ದಶಿಯ ವರೆಗೆ. ಅಗಸ್ಟ್‌ 2023ರ ಮಾಸಭವಿಷ್ಯ.

ತಾ 17.07.23 ದಕ್ಷಿಣಾಯನ ಪ್ರಾರಂಭ. ಸೂರ್ಯನ ಕಟಕರಾಶಿ ಪ್ರವೇಶ. ತಾ 07.07.23 ಸಿಂಹ ರಾಶಿಗೆ ಶುಕ್ರನ ಪ್ರವೇಶ.

ಚಂದ್ರನು ಜುಲೈ ತಿಂಗಳ ಪೂರಾ ಅನೂರಾಧ ನಕ್ಷತ್ರದಿಂದ ಪೂರ್ವಾಷಾಢ ನಕ್ರತ್ರದ ವರೆಗೆ ಸಂಚರಿಸುತ್ತಾನೆ.

ಮೇಷರಾಶಿ:

ಮೇಷರಾಶಿ:

ಈ ತಿಂಗಳು ನಿಮಗೆ ಸೂರ್ಯ ಮೂರನೇ ಮನೆಯಲ್ಲಿ ಇರುವವರೆಗೂ ಧನಲಾಭ, ಸರ್ಕಾರದ ಕೆಲಸಗಳಿಂದ ಲಾಭ, ಸರ್ಕಾರದ ಕೆಲಸಗಳು ಸುಸೂತ್ರವಾಗಿ ನಡೆಯುತ್ತವೆ. ಮೂರನೇ ಮನೆಯಲ್ಲಿ ಬುಧ ಇರುವುದು ಕೊಂಚ ಮನೋ ಚಿಂತನೆಗೆ ಕಾರಣವಾಗುತ್ತದೆ. ಮನಸ್ಸು ವ್ಯಾಕುಲಗೊಳ್ಳುತ್ತದೆ. ಯಾರೊಂದಿಗೂ ಮನಸ್ಸು ಕೆಡಿಸಿಕೊಳ್ಳಬೇಡಿ. ನಿಮ್ಮ ಮನಸ್ಸಿಗೆ ನಿಮ್ಮ ಕೈಯಾರೆ ಘಾಸಿ ಮಾಡಿಕೊಳ್ಳಬೇಡಿ. ಐದನೇ ಮನೆಗೆ ಬುಧ ಶುಕ್ರರು ಬಂದಾಗ ನಿಮಗೆ ಕೊಂಚ ಸಮಾಧಾನ ನೀಡುತ್ತಾರೆ. ಹನ್ನೊಂದರ ಶನಿ ನಿಮಗೆ ಕಾರ್ಯ ಸಫಲತೆಯನ್ನು ಕೊಡುತ್ತಾನೆ. ಹಣದ ಹರಿವನ್ನು ಉತ್ತಮ ಪಡಿಸುತ್ತಾನೆ. ಯಾವುದೇ ಕೆಲಸಕಾರ್ಯ ಶೀಘ್ರಗತಿಯಲ್ಲಿ ನಡೆಯುವಂತೆ ಅನುಗ್ರಹಿಸುತ್ತಾನೆ. ತಿಂಗಳ 9ನೇ ತಾರೀಖು ಬುಧ ನಾಲ್ಕನೇ ಮನೆ ಅಂದರೆ ಕಟಕರಾಶಿಗೆ ಪ್ರವೇಶವಾದಾಗ ನಿಮಗೆ ಜ್ಙಾನವೃದ್ಧಿ, ಮಾನಸಿಕ ವಿಕಸನ, ಮನಸ್ಸಿಗೆ ಹಿತ ಕೊಡುವ ಸಂಗತಿಗಳು ನಡೆಯುತ್ತದೆ. ಗುರುಗಳ ದರ್ಶನಭಾಗ್ಯ ಇದೆ. ನಿಮ್ಮ ರಾಶಿಯಲ್ಲೇ ಗುರು ರಾಹು ಇರುವುದು ಕೊಂಚ ಖರ್ಚುಗಳನ್ನು ತೋರಿಸುತ್ತದೆ.

ವೃಷಭರಾಶಿ:

ವೃಷಭರಾಶಿ:

ಈಗ ನಿಮಗೆ 12ರ ಗುರು ಖರ್ಚುಗಳನ್ನು ತೋರಿಸುತ್ತಾನೆ. ನಿಮಗೇ ಅರಿವಿಲ್ಲದೆ ಹಣ ಖರ್ಚಾಗುತ್ತದೆ. ಲೆಕ್ಕ ಸಿಗುವುದಿಲ್ಲ. ಎರಡನೇ ಮನೆಯ ಸೂರ್ಯ ಹಾಗೂ ಬುಧ ಸಹ ನಿಮಗೆ ಉಪಕಾರಿ ಅಲ್ಲ. ಆದರೆ 17ರ ನಂತರ ಸೂರ್ಯ ಮೂರನೇ ಮನೆ ಪ್ರವೇಶವಾದಾಗ ನಿಮಗೆ ಸೂರ್ಯನ ಬೆಂಬಲ ಸಿಗುತ್ತದೆ. ಧೈರ್ಯ ಶೌರ್ಯ ದಿಂದ ಯಾವ ಕೆಲಸ ಮಾಡಿದರೂ ನಿಮಗೆ ಜಯ ಸಿಗುತ್ತದೆ. ಸೂರ್ಯ ನಿಮ್ಮ ಶಕ್ತಿಯನ್ನು ಆತ್ಮಬಲವನ್ನೂ ಹೆಚ್ಚಿಸುತ್ತಾನೆ. ಮನೋನಿಗ್ರಹ ಮಾಡುತ್ತಾನೆ. ನಿಮ್ಮ ಬುದ್ಧಿಯನ್ನು ಹರಿತ ಮಾಡುತ್ತಾನೆ. ಧನಲಾಭವನ್ನೂ ಕೊಡುತ್ತಾನೆ. 17ರ ನಂತರ ನೀವು ಯಾವುದಾದರೂ ನಿರ್ಧಾರ ತೆಗೆದುಕೊಂಡರೆ ನಿಮಗೆ ಯಶಸ್ಸು ಖಂಡಿತ. ನಾಲ್ಕನೇ ಮನೆಗೆ ಶುಕ್ರಬಂದಾಗ ಬಂಧುಗಳಿಂದ ಉಪಕಾರ ಬೆಂಬಲ ದೊರೆಯುತ್ತದೆ. ಬಂಧುಜನರೊಡನೆ ಸಂತೋಷದಿಂದ ಕಾಲಕಳೆಯುವ ಯೋಗ ಇದೆ. ವಾಹನದಿಂದ ಲಾಭ ಇದೆ. ಹೊಸ ವಾಹನ ಖರೀದಿ ಮಾಡುವ ಯೋಗ ಇದೆ. ಆರನೇ ಮನೆಯಲ್ಲಿ ಕೇತು ಕೂಡ ನಿಮಗೆ ಸಹಾಯ ಬೆಂಬಲ ನೀಡುತ್ತಾನೆ. ಸೂರ್ಯ ಹಾಗೂ ಕೇತು ನಿಮಗೆ ಹಣದ ಹರಿವನ್ನು ಕೊಂಚಮಟ್ಟಿಗೆ ಉತ್ತಮಪಡಿಸುತ್ತಾರೆ. ಕೊಂಚ ಮಾನಸಿಕ ಚಿಂತೆ ಕಾಡುತ್ತದೆ. ಕಳೆದುಹೋದ ಯಾವುದೋ ನೆನಪುಗಳು ಮತ್ತೆ ಮೇಲಕ್ಕೆದ್ದು ನಿಮ್ಮ ಮನಸ್ಸನ್ನು ಚಂಚಲ ಗೊಳಿಸುತ್ತದೆ. ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಕಳೆದುಹೋದದ್ದರ ಬಗ್ಗೆ ಚಿಂತಿಸಬೇಡಿ. ಮುಂದೆ ನಿಮಗೆ ಒಳ್ಳೆಯ ದಿನಗಳು ಇದೆ. ಸಹನೆಯಿಂದ ಕಾಯಬೇಕು.

ಮಿಥುನರಾಶಿ:

ಮಿಥುನರಾಶಿ:

ನಿಮಗೆ ಈಗ ಲಾಭಸ್ಥಾನದಲ್ಲಿ ಗುರು-ರಾಹು ಇರುವುದು ಬಹಳ ಅದೃಷ್ಟ ಕೊಡುತ್ತಿದೆ. ಯಾವುದೇ ಕೆಲಸದಲ್ಲಿ ಧನಲಾಭ ಇದೆ. ಹಣದ ಹರಿವು ಬಹಳ ಉತ್ತಮವಾಗಿದೆ. ಎಲ್ಲ ಕೆಲಸಗಳು ನಿಮ್ಮ ಊಹೆಗಿಂತ ವೇಗವಾಗಿ ನಡೆಯುತ್ತದೆ. ನಿಮ್ಮ ಮನಸ್ಸಿನಲ್ಲಿ ಕಾರ್ಯಸಫಲತೆಯ ತೃಪ್ತಿ ದೊರೆಯುತ್ತದೆ. ನಿಮ್ಮ ರಾಶಿಯಲ್ಲೇ ಇರುವ ಬುಧನಿಂದ ಪ್ರಯಾಣ ಯೋಗ ಇದೆ. ವಿದೇಶ ಪ್ರಯಾಣವೂ ಆಗಬಹುದು. ಎಲ್ಲಿಯಾದರೂ ವಿಹಾರ ಹೋಗುವ ಯೋಗವೂ ಇದೆ. 17ರಂದು ಸೂರ್ಯನ ಎರಡನೇ ಮನೆ ಪ್ರವೇಶದಿಂದ ಕುಟುಂಬದಲ್ಲಿ ಕೊಂಚ ಏರುಪೇರು ಕಾಣಬಹುದು. ಸಂಗಾತಿಯೊಡನೆ ಕೊಂಚ ಘರ್ಷಣೆ ಆಗಬಹುದು. ಚಿಂತೆ ಬೇಡ. ಗುರುಬಲ ಇರುವುದರಿಂದ ಯಾವುದೂ ವಿಕೋಪಕ್ಕೆ ಹೋಗುವುದಿಲ್ಲ. ಮೂರನೇ ಮನೆಗೆ ಕುಜನ ಪ್ರವೇಶವಾದಾಗ ನಿಮಗೆ ಭೂಮಿಯಿಂದ ಲಾಭ ಇದೆ. ಭೂಮಿ ಆಸ್ತಿ ಕೊಳ್ಳುವ ಯೋಗವೂ ಇದೆ. ಗುರುಬಲದ ಜೊತೆಗೆ ಕುಜನ ಬಲವೂ ಸೇರಿ ನಿಮಗೆ ಅಧಿಕಲಾಭ ಸಿಗುವಂತಾಗುತ್ತದೆ. ಶುಕ್ರನೂ ಮೂರನೇ ಮನೆಯಲ್ಲಿ ಇರುವುದರಿಂದ ಶುಭಫಲಗಳು ಖಂಡಿತಾ ಇದೆ. ನಿಮಗೆ ನಿಮ್ಮ ಸೌಖ್ಯಕ್ಕೆ ಬೇಕಾಗುವ ಪದಾರ್ಥಗಳನ್ನು ಕೊಳ್ಳುವ ಯೋಗ ಇದೆ.

ಕಟಕರಾಶಿ:

ಕಟಕರಾಶಿ:

ನಿಮಗೆ ಈಗ ಅಷ್ಟಮ ಶನಿಯ ಕಾಲ. ಇದು ನಿಮಗೆ ಹಲವು ರೀತಿ ಸಮಸ್ಯೆಗಳನ್ನು ತಂದೊಡ್ಡಿರುತ್ತದೆ. ಈಗಾಗಲೇ ನಿಮಗೆ ಅನುಭವಕ್ಕೆ ಬಂದಿರಬಹುದು. ಬಂದುಗಳೊಂದಿಗೆ ಕೇವಲವಾಗಿ ಮಾತನಾಡುವುದು, ಹಣಕಾಸಿನ ಒತ್ತಡ, ಮನೆಯಲ್ಲಿ ಬಿಗುವಿನ ವಾತಾವರಣ, ವಿದ್ಯಾರ್ಥಿಗಳಿಗೆ ಹಿನ್ನಡೆ, ವೃತ್ತಿಯಲ್ಲಿ ಒತ್ತಡ, ಮೇಲಧಿಕಾರಿಗಳ ಕೋಪ ಯಾವುದೇ ಕೆಲಸಕಾರ್ಯದಲ್ಲಿ ಹೇಳತೀರದ ವಿಳಂಬ ಇಂಥವೆಲ್ಲ ಅನುಭವಿಸುತ್ತಲೇ ಇದ್ದೀರಿ. ಈಗ ನೀವು ನಿಮ್ಮ ಕೆಲಸ ಪ್ರಾಮಾಣಿಕತೆಯಿಂದ ಮಾಡಿ. ಫಲಾಫಲಗಳನ್ನು ದೇವರಿಗೆ ಬಿಡಿ. 12ನೇ ಮನೆಯಲ್ಲಿ ಸೂರ್ಯ-ಬುಧ ಕೂಡ ನಿಮಗೆ ಅನುಕೂರವಾಗಿಲ್ಲ. ಸರ್ಕಾರದಿಂದ ಖರ್ಚುಗಳು, ಬ್ಯಾಂಕ್ ಸಾಲ ಮೊದಲಾದವು ಇದ್ದರೆ ತೀರಿಸಬೇಕೆಂಬ ಒತ್ತಡ ಇರುತ್ತದೆ. ಸಂಗಾತಿಯೊಡನೆ ಘರ್ಷಣೆ ಇರುತ್ತದೆ. ತಂದೆ ತಾಯಿಯ ಆರೋಗ್ಯ ಕೈಕೊಡಬಹುದು. ಜಾಗ್ರತೆಯಿಂದ ಇರಿ. ಎರಡನೇ ಮನೆಗೆ ಶುಕ್ರ ಬಂದಾಗ ನಿಮಗೆ ಕೊಂಚ ಉಪಯೋಗ ಇದೆ. ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ಹಾಕಬೇಕು. ಏಕಾಗ್ರತೆ ಸಾಧಿಸಬೇಕು. ಮನಸ್ಸು ಚಂಚಲವಾಗುತ್ತದೆ. ಗಮನ ಇರಲಿ. ನೀವು ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಹನುಮಾನ್ ಚಾಲೀಸಾ ಹೇಳಿಕೊಳ್ಳಿ.

ಸಿಂಹರಾಶಿ:

ಸಿಂಹರಾಶಿ:

ಈಗ ನಿಮಗೆ ಗುರುಬಲ ಇದ್ದು ಯಾವುದಕ್ಕೂ ಯೋಚನೆ ಮಾಡುವಷ್ಟಿಲ್ಲ. ಆದರೆ ಒಂಬತ್ತನೇ ಮನೆಯಲ್ಲಿ ಗುರುವಿನ ಜೊತೆ ರಾಹು ಕೂಡ ಇರುವುದರಿಂದ ಗುರುವಿನ ಅನುಗ್ರಹ ಸಂಪೂರ್ಣ ಇರುವುದಿಲ್ಲ. ರಾಹು ಮೀನರಾಶಿಗೆ ಪ್ರವೇಶವಾದಾಗ ನಿಮಗೆ ಒಳ್ಳೆಯ ಫಲಗಳು ಗುರುವಿನಿಂದ ದೊರೆಯುತ್ತದೆ. ಈಗ ಗುರು ಕೊಂಚ ಬಲಹೀನ ಹಾಗಾಗಿ ನೀವು ಗುರುವಿನ ಅನುಗ್ರಹಕ್ಕಾಗಿ ಗೋಪೂಜೆ, ಸಾಧುಸಂತರ ದರ್ಶನ ಆಶಿರ್ವಾದ ಪಡೆಯುವುದು, ಗುರುಗಳಿಗೆ ಕಾಣಿಕೆ ಕಳಿಸುವುದು, ನಿಮ್ಮ ಗುರುಪೀಠಕ್ಕೆ ಹೋಗಿ ಬರುವುದು ಮಾಡಿದರೆ ಗುರುವಿನ ಅನುಗ್ರಹ ದೊರೆತು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಬಿಳಿಹಸುವಿಗೆ ಗೋಗ್ರಾಸ ಕೊಡಿ. ಕಡಲೆ, ಅಕ್ಕಿ ಬೆಲ್ಲ ಇವನ್ನು ನೆನೆಸಿ ಹಸುವಿಗೆ ಕೊಡಿ. ಶನಿ ಏಳನೇ ಮನೆಯಲ್ಲಿ ಇರುವುದು ಸಹ ನಿಮಗೆ ಅಷ್ಟು ಲಾಭದಾಯಕವಲ್ಲ. ಯಾವುದಾದರೂ ಹೂಡಿಕೆಯಲ್ಲಿ ಹಣ ತೊಡಗಿಸ ಬೇಕಾದರೆ ಕೊಂಚ ಜಾಗ್ರತೆ ವಹಿಸಿ. 17ನೇ ತಾರೀಖಿನ ವರೆಗೂ ಸೂರ್ಯ 11ನೇ ಮನೆಯಲ್ಲಿ ಇರುತ್ತಾನೆ. ಅಲ್ಲಿಯವರೆಗೂ ನಿಮಗೆ ವೃತ್ತಿಯಲ್ಲಿ ವ್ಯಾಪಾರದಲ್ಲಿ ಯಶಸ್ಸು ಇದೆ. 17ರ ನಂತರ ಕೊಂಚ ಒತ್ತಡ ಆಗಬಹುದು. ಹೆಚ್ಚಿನ ನಷ್ಟವೇನೂ ಆಗುವುದಿಲ್ಲ. ಈ ತಿಂಗಳು ಮಧ್ಯಮ ಫಲಗಳನ್ನು ಪಡೆಯುತ್ತೀರಿ.

ಕನ್ಯಾರಾಶಿ:

ಕನ್ಯಾರಾಶಿ:

ಗುರು ಮತ್ತು ರಾಹು ಅಷ್ಠಮದಲ್ಲಿ ಇರುವುದು ಅಷ್ಟು ಶುಭವಲ್ಲ ಆದರೆ ಶನಿ ಆರನೇ ಮನೆಯಲ್ಲಿ ಇರುವುದು ನಿಮಗೆ ಲಾಭವನ್ನು ಕೊಡುತ್ತದೆ. ಶನಿ ಆರನೇ ಮನೆಯಲ್ಲಿ ಕಾರ್ಯಸಫಲತೆ ಹಾಗೂ ಅಧಿಕ ಧನಲಾಭವನ್ನು ಕೊಡುತ್ತಾನೆ. 17ರ ನಂತರ ಸೂರ್ಯ ಹನ್ನೊಂದನೇ ಮನೆಗೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಲಾಭ ಇದೆ. ಸರ್ಕಾರದಿಂದ ಲಾಭ ಇದೆ. ಸರ್ಕಾರದ ಕೆಲಸಗಳು ಸಲೀಸಾಗಿ ಆಗುತ್ತದೆ. ಬ್ಯಾಂಕ್ ಲೋನ್ ಬೇಕಾಗಿದ್ದರೆ ಈಗ ಪ್ರಯತ್ನ ಮಾಡಬಹುದು. ನಿಮ್ಮ ರಾಶಿಯ ಅಧಿಪತಿ ಬುಧ 9ನೇ ತಾರೀಖು ಹನ್ನೊಂದನೇ ಮನೆಗೆ ಅಂದರೆ ಕಟಕ ರಾಶಿಗೆ ಪ್ರವೇಶವಾದಾಗ ನಿಮಗೆ ಸರ್ವವಿಧದಲ್ಲಿ ಒಳ್ಳೆಯದಾಗುತ್ತದೆ. ಸಜ್ಜನರ ವಿದ್ವಾಂಸರ ಸಂಗ ದೊರೆಯುತ್ತದೆ. ಗುರುಗಳ ಮನೆದೇವರ ಆಶಿರ್ವಾದ ದೊರೆಯುತ್ತದೆ. ಮನೆದೇವರ ದರ್ಶನ ಭಾಗ್ಯ ಲಭಿಸಬಹುದು. ಯಾವುದೋ ಒಂದು ಬಹಳ ದಿನಗಳಿಂದ ಪ್ರಯತ್ನ ಮಾಡುತ್ತಿರುವ ಕೆಲಸ ಈಗ ಕೈಗೂಡುತ್ತದೆ. ಶೇರುಗಳಲ್ಲಿ ಹಣ ಹೂಡಿರುವವರಿಗೆ ಒಳ್ಳೆಯ ಲಾಭ ಇದೆ. ಶೇರುಗಳಲ್ಲಿ ಹಣ ಹೂಡಬೇಕೆಂದು ಬಯಸುವವರಿಗೆ ಈಗ ಬಹಳ ಒಳ್ಳೆಯ ಸಮಯ. ನಿಮಗೆ ನಿಮ್ಮ ಗುರಿ ನಿಚ್ಚಳವಾಗಿ ಕಾಣುತ್ತದೆ. ನೀವು ಬಹಳ ಮಾತಾಡುವ ಪ್ರಕೃತಿಯವರು. ಮಾತು ನಿಮಗೆ ಲಾಭವನ್ನೂ ತಂದುಕೊಡುತ್ತದೆ. ಹಾಗೆಯೇ ಕೆಡುಕನ್ನೂ ಉಂಟುಮಾಡುತ್ತದೆ. ಹಾಗಾಗಿ ಮಾತನಾಡುವಾಗ ಯೋಚಿಸಿ ಮಾತನಾಡಿ.

ತುಲಾರಾಶಿ:

ತುಲಾರಾಶಿ:

ನಿಮಗೆ ಪಂಚಮ ಶನಿಯ ಪ್ರಭಾವ ನಡೆಯುತ್ತಿದ್ದರೂ ಈಗ ಗುರುಬಲ ಇದೆ. ಗುರು ನೇರವಾಗಿ ನಿಮ್ಮ ರಾಶಿಯನ್ನು ನೋಡುತ್ತಾನೆ. ಇದು ನಿಮಗೆ ಸಾಕಷ್ಟು ಅನುಕೂಲ ಕೊಡುತ್ತದೆ. ರಾಹು ಕೂಡ ನಿಮ್ಮ ರಾಶಿಯನ್ನು ನೋಡುತ್ತಾನೆ. ರಾಹು ನೋಡುವುದರಿಂದ ತೊಂದರೆ ಇಲ್ಲ. ಏಕೆಂದರೆ ರಾಹು ತುಲಾರಾಶಿಗೆ ಮಿತ್ರ. ಪಂಚಮ ಶನಿ ನಿಮಗೆ ಕೊಂಚ ಒತ್ತಡಗಳನ್ನು ಕೊಡುತ್ತದೆ. ಹಣಕಾಸಿಗೆ ಅಡ್ಡಿ ತಂದೊಡ್ಡುತ್ತದೆ. ಆದರೆ ಗುರುವಿನ ಅನುಗ್ರಹದಿಂದ ಸಮಸ್ಯೆಗಳು ಹಗುರವಾಗಿ ನಿಮಗೆ ನೆಮ್ಮದಿ ತಂದುಕೊಡುತ್ತದೆ. ರಾಹು ಮೀನ ರಾಶಿಗೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಅನುಕೂಲಗಳು ಉಂಟಾಗುತ್ತದೆ. ಈಗ ಒಂಬತ್ತರಲ್ಲಿ ಸೂರ್ಯ ಹನ್ನೊಂದರಲ್ಲಿ ಕುಜ-ಶುಕ್ರ ಇದ್ದಾರೆ. ಹನ್ನೊಂದ ಶುಕ್ರ ನಿಮಗೆ ವರ್ಚಸ್ಸನ್ನು ತಂದುಕೊಡುತ್ತಾನೆ. ವಿದ್ವತ್ ಜನರ ಸಂಪರ್ಕ ಸಜ್ಜನರ ಸಂಗ ವಿದ್ವತ್ ಪೂರ್ಣ ಸಭೆಗಳನ್ನು ಭಾಗವಹಿಸಿವುದು ಜ್ಞಾನಾರ್ಜನೆ ಮೊದಲಾದ ಸಂಗತಿಗಳು ನಡೆಯುತ್ತದೆ. 9ನೇ ತಾರೀಖು ಬುಧ ಹತ್ತನೇ ಮನೆಗೆ ಪ್ರವೇಶವಾಗುವುದರಿಂದ ಕೊಂಚ ಧನಲಾಭ ಇದೆ. ಆಸ್ತಿ ಕೊಳ್ಳುವುದಿದ್ದರೆ ಈಗ ಒಳ್ಳೆಯ ಸಮಯ. ಭೂಮಿ ವ್ಯವಹಾರದಲ್ಲೂ ಲಾಭ ಇದೆ. ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಗೆ ಈಗ ಒಳ್ಳೆಯ ವ್ಯಾಪಾರ ವ್ಯವಹಾರ ನಡೆಯುವ ಸಮಯ. ದುರ್ಗಾ ಅಷ್ಟೋತ್ತರ ಜಪಿಸಿ.

ವೃಶ್ಚಿಕರಾಶಿ:

ವೃಶ್ಚಿಕರಾಶಿ:

ಈಗ ನಿಮಗೆ ಗುರುಬಲ ಹಾಗೂ ಶನಿಬಲ ಇಲ್ಲ. ರಾಹುಬಲ ಮಾತ್ರವೇ ಇದೆ. ಹೀಗಾಗಿ ಯಾವುದೇ ಕೆಲಸ ಕಾರ್ಯ ಯೋಚಿಸಿ ಮಾಡಿ. ಹತ್ತನೇ ಮನೆಯಲ್ಲಿ ಕುಜ-ಶುಕ್ರ ಇರುವುದು ನಿಮ್ಮ ವೃತ್ತಿಗೆ ಯಶಸ್ಸು ತಂದುಕೊಡುತ್ತದೆ. ಯಾವುದರಲ್ಲೂ ಹಣ ಹೂಡಿಕೆ ಮಾಡಬೇಡಿ. ಸಾಲ ಕೊಡಬೇಡಿ. ಸಾಲ ಇದ್ದರೆ ಅದನ್ನು ಮರುಪಾವತಿ ಮಾಡಲು ಈಗ ಕಷ್ಟವಾಗುತ್ತದೆ. ಲಾಭದ ದಿನಗಳಿಗೆ ನೀವು ಕಾಯಬೇಕು. ದೈನಂದಿನ ಜೀವನ ಭಯವಿಲ್ಲ. ಅದು ನಡೆದುಕೊಂಡು ಹೋಗುತ್ತದೆ. ವಿಶೇಷ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತದೆ. ಶನಿ ನಾಲ್ಕನೇ ಮನೆಯಲ್ಲಿ ಇರುವುದರಿಂದ ವಾಹನದಿಂದ ನಷ್ಟ ಸಾಧ್ಯತೆ ಇದೆ. ವಾಹನ ಉದ್ದಿಮೆದಾರರಿಗೂ ಈಗ ನಷ್ಟದ ಭಯ ಇದೆ. ವ್ಯಾಪಾರ ವ್ಯವಹಾರ ಮಂದಗತಿಯಲ್ಲಿ ನಡೆಯುತ್ತದೆ. ನರಸಿಂಹ ಅಷ್ಟೋತ್ತರ ಪಠಿಸಿ. ಈ ರಾಶಿಯ ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಗೆ ಈಗ ಕ್ಷೀಣಫಲ. ನೀವು ನಿರೀಕ್ಷೆ ಮಾಡಿದಷ್ಟು ಲಾಭ ದೊರೆಯುವುದಿಲ್ಲ. ರಾಜಕಾರಣಿಗಳಿಗೂ ಈಗ ಒತ್ತಡದ ಸಮಯ. ಅಧಿಕಾರ ಬರುವುದೋ ಬಾರದೋ ಬಂದ ಅಧಿಕಾರ ಉಳಿಯುವುದೋ ಇಲ್ಲವೋ ಎಂಬ ತಾಕಲಾಟದಲ್ಲಿ ಇರುತ್ತೀರಿ. ದುರ್ಗಾಪರಮೇಶ್ವರಿಯಲ್ಲಿ ಆರಾಧಿಸಿ. ತಿಂಗಳ ಮೊದಲಲ್ಲಿ ಸೂರ್ಯ ಎಂಟನೇ ಮನೆಯಲ್ಲಿ ಇರುತ್ತಾನೆ. ಆಗ ನಿಮಗೆ ಒತ್ತಡದಿಂದ ತಲೆಶೂಲೆ ಆಗಬಹುದು. ಯಾವುದನ್ನೂ ಶಾಂತ ರೀತಿಯಿಂದ ನಿಭಾಯಿಸಿ. ವೃತ್ತಿಗೆ ಬಾಧೆಯಿಲ್ಲ. ವೃತ್ತಿಯಲ್ಲಿ ಅಭಿವೃದ್ಧಿ ಇದೆ.

ಧನಸ್ಸುರಾಶಿ:

ಧನಸ್ಸುರಾಶಿ:

ಬೇರೆ ಎಲ್ಲಾ ರಾಶಿಯವರಿಗಿಂತ ಅತ್ಯುತ್ತಮ ಫಲಗಳು ಈಗ ನಿಮಗೆ ಸಿಗುತ್ತದೆ. ನಿಮಗೆ ಈಗ ಗುರುಬಲ ಶನಿಬಲ ಎರಡೂ ಇರುವುದು ಬಹಳ ಲಾಭದಾಯಕ. ನೀವು ಅಂದುಕೊಂಡ ಕೆಲಸಗಳು ಶೀಘ್ರಗತಿಯಲ್ಲಿ ನೆರವೇರುತ್ತದೆ. ಪ್ರತಿ ಹಂತದಲ್ಲೂ ಈಗ ನಿಮಗೆ ನಿಮ್ಮ ಮನಸ್ಸಿಗೆ ಸಂತೋಷ ಕೊಡುವ ಘಟನೆಗಳು ನಡೆಯುತ್ತದೆ. ಆಸ್ತಿ ಕೊಳ್ಳುವ ಯೋಗ ಇದೆ. ಮನೆಕಟ್ಟುವ ಯೋಗ ಇದೆ. ಮನೆಗಾಗಿ ಬ್ಯಾಂಕ್ ಸಾಲಕ್ಕೆ ಪ್ರಯತ್ನಿಸಿದಲ್ಲಿ ಈಗ ಬಹುಸುಲಭವಾಗಿ ದೊರೆಯುತ್ತದೆ. ಬ್ಯಾಂಕ್ ಸಾಲ ಸಿಗಲೂ ಕೂಡ ಯೋಗ ಇರಬೇಕು ಗ್ರಹಗತಿಗಳು ಕೂಡಿ ಬರಬೇಕು ಈಗ ನಿಮಗೆ ಯೋಗ ಇದೆ. ಉನ್ನತ ಅಧಿಕಾರ ವರ್ಗದವರಿಗೆ ಗೌರವ ಪ್ರಶಸ್ತಿ ಪ್ರಾಪ್ತಿ ಇದೆ. ಈ ರಾಶಿಯ ರಾಜಕಾರಣಿಗಳಿಗೆ ಉನ್ನತ ಸ್ಥಾನಮಾನ ದೊರೆಯುತ್ತದೆ. ನಿಮಗೆ ಬೇಕಾಗುವಂಥ ಸ್ಥಾನಗಳು ದೊರೆಯುತ್ತದೆ. ನಿಮ್ಮನ್ನು ರಕ್ಷಿಸುವ ಗುರು ಹಿತೈಷಿಗಳು ಇರುತ್ತಾರೆ. ನಿಮ್ಮ ಪರ ಮಾತನಾಡುವವರು ಇರುತ್ತಾರೆ. ಹಣದ ಹರಿವು ಉತ್ತಮವಾಗಿದೆ. ವಿದ್ಯಾರ್ಥಿಗಳಿಗೆ ಈಗ ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ಹೋಗುವ ಅವಕಾಶ ಒದಗಿ ಬರುತ್ತದೆ. ವ್ಯಾಪಾರ ವ್ಯವಹಾರಗಳಿಗಾಗಿ ವಿದೇಶ ಯಾತ್ರೆ ಮಾಡುವವರು ಈಗ ಧಾರಾಳವಾಗಿ ಮಾಡಬಹುದು. ಯಾವುದೇ ಸಂಸ್ಥೆಯಲ್ಲಿ ನಿರಾತಂಕವಾಗಿ ಹಣ ಹೂಡಿಕೆ ಮಾಡುವುದರಿಂದ ಒಳ್ಳೆಯ ಲಾಭ ಕಾಣುವಿರಿ. ರಾಹು ಐದನೇ ಮನೆಯಲ್ಲಿ ಇರುವುದು ಕೊಂಚ ದೋಷಕರ ಹಾಗಾಗಿ ಸುಬ್ರಹ್ಮಣ್ಯನನ್ನು ಆರಾಧಿಸಿ.

ಮಕರರಾಶಿ:

ಮಕರರಾಶಿ:

ಈಗ ನಿಮಗೆ ಗುರುಬಲ ಇಲ್ಲ. ಸಾಡೆಸಾತಿ ಶನಿಯ ಪ್ರಭಾವದಲ್ಲಿ ಇದ್ದೀರಿ ಆದರೂ ಶನಿಯ ಪ್ರಭಾವದಿಂದ ಸಾಕಷ್ಟು ಹೊರಬಂದಿದ್ದೀರಿ. ಅನೇಕ ಏಳುಬೀಳುಗಳನ್ನು ಕಂಡಿದ್ದೀರಿ. ಜೀವನ ನಿಮಗೆ ಈ ಸಮಯದಲ್ಲಿ ಸಾಕಷ್ಟು ಕಲಿಸಿಕೊಟ್ಟಿದೆ. ನಮ್ಮವರು ಯಾರು ಹೊರಗಿನವರು ಯಾರು ಎಂಬುದನ್ನು ತೋರಿಸಿಕೊಟ್ಟಿದೆ. ಈಗ ನಾಲ್ಕನೇ ಮನೆಯಲ್ಲಿ ಗುರುರಾಹು ಇದ್ದಾರೆ. ರಾಹು ಮೂರನೇ ಮನೆಗೆ ಪ್ರವೇಶವಾದಾಗ ಅಂದರೆ ಮೀನರಾಶಿಗೆ ರಾಹು ಪ್ರವೇಶವಾದಾಗ ನಿಮಗೆ ಹೆಚ್ಚಿನ ಶುಭ-ಫಲಗಳು ದೊರೆಯುತ್ತದೆ. ಈಗ ಉಳಿದ ಗ್ರಹಗಳ ಚಲನೆಯಿಂದ ಅಲ್ಪ ಪ್ರಮಾಣದ ಲಾಭವನ್ನಷ್ಟೇ ನೋಡಬಹುದು. ಆರನೇ ಮನೆಯಲ್ಲಿ ಸೂರ್ಯ 17 ನೇ ತಾರೀಕಿನವರೆಗೂ ಇದ್ದು ನಿಮಗೆ ಧೈರ್ಯ ಪರಾಕ್ರಮ ಕೊಟ್ಟು ಮುನ್ನುಗ್ಗಿ ಕೆಲಸ ಸಾಧಿಸುವ ಛಲ ಕೊಡುತ್ತದೆ. ಯಾವುದೇ ಕೆಲಸ ಕಾರ್ಯಗಳಿಗೆ ಅಡ್ಡಿ ಆತಂಕ ಇದ್ದಲ್ಲಿ ನಿವಾರಣೆ ಮಾಡುತ್ತಾನೆ. ಹೊಸ ಅವಕಾಶಗಳು ಬರುವ ಸಮಯ. ನೀವು ಅದನ್ನು ನಿಮಗೆ ಲಾಭವಾಗುವಂತೆ ಅನುಕೂಲ ಮಾಡಿಕೊಳ್ಳಬೇಕು. ನೀವು ಪ್ರತಿದಿನ ವಿಷ್ಣು ಸಹಸ್ರನಾಮ ಪಾರಾಯಣ ಮಾಡಬೇಕು. ದುರ್ಗಾ ದೇವಿಗೆ ಕೆಂಪುಹೂವಿನಿಂದ ಪೂಜೆ ಮಾಡಬೇಕು. ಯಾರೊಡನೆಯೂ ವಾಗ್ವಾದಕ್ಕೆ ಹೋಗಬೇಡಿ. ಒಳ್ಳೆಯ ಕಾಲ ಖಂಡಿತಾ ಮುಂದೆ ಇದೆ. ಕೊಂಚ ತಾಳ್ಮೆ ಇರಲಿ.

ಕುಂಭರಾಶಿ:

ಕುಂಭರಾಶಿ:

ಈಗ ನಿಮಗೆ ಗುರು ಮೂರನೇ ಮನೆಯಲ್ಲಿ ಇದ್ದಾನೆ. ಸಹೋದರರಿಂದ ಲಾಭ ಇದೆ. ಸಹೋದರರಿಗೆ ಒಳ್ಳೆಯದಾಗುತ್ತದೆ. ಮೂರನೇ ಮನೆಯಲ್ಲಿ ಇರುವ ರಾಹು ಕೂಡ ನಿಮಗೆ ಅನುಕೂಲವಂತನೇ ಆಗಿದ್ದಾನೆ. ಧನಲಾಭ ಕೊಡುತ್ತಾನೆ. ಶನಿ ನಿಮ್ಮ ರಾಶಿಯಲ್ಲಿ ಇರುವುದರಿಂದ ಈಗ ನಿಮಗೆ ಕೊಂಚ ಗಂಭೀರ ಸಮಯ. ಒತ್ತಡಗಳು ಹೆಚ್ಚು ಇರುತ್ತದೆ. ಆರೋಗ್ಯ ಕೈಕೊಡುತ್ತದೆ. ಆರೋಗ್ಯ ನಿರ್ಲಕ್ಷಿಸಬೇಡಿ. ವೃತ್ತಿಯಲ್ಲಿ ವರ್ಗಾವಣೆ ಒತ್ತಡಗಳು ಸಾಮಾನ್ಯವಾಗಿ ಇರುತ್ತದೆ. 17ರ ನಂತರ ಸೂರ್ಯ ಕಟಕರಾಶಿಗೆ ಪ್ರವೇಶವಾದಾಗ ನಿಮಗೆ ಅದರಿಂದ ಕೊಂಚ ಅನುಕೂಲ ಇದೆ. ಆರರ ಸೂರ್ಯ ನಿಗೆ ಹೆಚ್ಚಿನ ಆತ್ಮಬಲವನ್ನು ಕೊಡುತ್ತಾನೆ. ತಂದೆಯಿಂದ ಲಾಭ ಇದೆ. ತಂದೆಯ ಕಡೆಯ ಆಸ್ತಿ ಯಾವುದಾದರೂ ಬರುವುದಿದ್ದರೆ ಅದಕ್ಕೆ ದಾರಿ ಸುಲಭ ಆಗುತ್ತದೆ. ಏಳರಲ್ಲಿ ಶುಕ್ರ ಹಾಗೂ ಕುಜ ನಿಮಗೆ ಅಲ್ಪ ಲಾಭ ಮಾಡಿಸುತ್ತಾರೆ. ಯಾವುದೇ ಹೂಡಿಕೆ ಮಾಡಬೇಡಿ. ಸಾಲ ನಿಮಗೆ ಸಿಗುತ್ತದೆ. ಆದರೆ ನೀವು ಯಾರಿಗೂ ಸಾಲ ಕೊಡಬೇಡಿ. ವೃತ್ತಿಯಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡುವವರು ಇರುತ್ತಾರೆ. ಅಂಥವರ ಬಗ್ಗೆ ಜಾಗ್ರತೆ ಇರಲಿ. ಬಂಧುಗಳೊಡನೆ ವೈಮನಸ್ಸು ಆಗುವ ಸಾಧ್ಯತೆ ಇದೆ. ನಿಮಗೆ ಈಗ ಹಾಲು ನೀರಿನ ವ್ಯತ್ಯಾಸ ಗೊತ್ತಾಗುವ ಸಮಯ. ಸಾಡೆ ಸಾತಿ ಶನಿ ನಿಮಗೆ ಕಷ್ಟ ಕೊಟ್ಟರೂ ಒಳ್ಳೆಯದು ಕೆಟ್ಟದ್ದರ ತಾರತಮ್ಯ ತೋರಿಸುತ್ತಾನೆ. ಶನಿಯ ಪ್ರಭಾವ ಕಡಿಮೆಯಾಗಲು ಹನುಮಾನ್ ಚಾಲೀಸ ಪಠಿಸಿ. ಕಪ್ಪು ಹಸುವಿಗೆ ಗೋಗ್ರಾಸ ಕೊಡಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+