Mercury Transit: ವರ್ಷದ ನಂತರ ಮಿಥುನ ರಾಶಿಗೆ ಬಂದ ಬುಧ: ಈ 3 ರಾಶಿಗಳ ಅದೃಷ್ಟದ ಬಾಗಿಲು ತೆರೆಯಲಿದೆ..!
ವೈದಿಕ ಜ್ಯೋತಿಷ್ಯದಲ್ಲಿ ಬುಧವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಜೊತೆಗೆ ಇದನ್ನು ಗಣಿತ, ಜ್ಯೋತಿಷ್ಯ ಮತ್ತು ಬರವಣಿಗೆಯ ಅಂಶವೆಂದು ಪರಿಗಣಿಸಲಾಗಿದೆ. ಜೂನ್ 24 ಅಂದರೆ ಶನಿವಾರ ಮಧ್ಯಾಹ್ನ 12.48ಕ್ಕೆ ಬುಧ ಗ್ರಹ ಮಿಥುನ ರಾಶಿಯಲ್ಲಿ ಸಾಗಲಿದೆ. ಮಿಥುನ ರಾಶಿಯಲ್ಲಿ ಬುಧ ಸಂಕ್ರಮಣ ಕೆಲವರಿಗೆ ಶುಭ ಲಾಭವನ್ನು ತಂದರೆ ಮತ್ತೊಂದೆಡೆ ಕೆಲವರಿಗೆ ಸಮಸ್ಯೆಗಳನ್ನು ತರಬಹುದು.
ಬುದ್ಧಿಶಕ್ತಿ, ಅಧ್ಯಯನ, ವ್ಯವಹಾರ ಮತ್ತು ಮಾತಿನ ಅಂಶವೆಂದು ಪರಿಗಣಿಸಲ್ಪಟ್ಟ ಬುಧ 1 ವರ್ಷದ ನಂತ ತನ್ನದೇ ಆದ ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ಇದರ ಪರಿಣಾಮ 3 ರಾಶಿಗಳ ಮೇಲೆ ಉತ್ತಮವಾಗಿರುತ್ತದೆ. ಇದರಿಂದ 3 ರಾಶಿಯವರು ಹಠಾತ್ ಅದೃಷ್ಟ, ಸಂಪತ್ತು ಮತ್ತು ಪ್ರಗತಿಯನ್ನು ಪಡೆಲಿದ್ದಾರೆ. ಹಾಗಾದರೆ ಯಾವ ರಾಶಿಯವರು ಅದೃಷ್ಟಶಾಲಿಯಾಗಲಿದ್ದಾರೆ ಎಂದು ನೋಡೋಣ.

ಕನ್ಯಾ ರಾಶಿ: ಕನ್ಯಾ ರಾಶಿಯ ಅಧಿಪತಿ ಬುಧ. ಈ ಸಂಕ್ರಮಣದ ಸಮಯದಲ್ಲಿ ಬುಧ 10ನೇ ಮನೆಗೆ ಚಲಿಸುತ್ತದೆ. ಈ ಮನೆ ಉದ್ಯಮ ಮತ್ತು ವ್ಯಾಪಾರದ ಮನೆಯಾಗಿದೆ. ಈ ಕಾರಣದಿಂದಾಗಿ ಈ ಸಮಯದಲ್ಲಿ ಕನ್ಯಾ ರಾಶಿಯವರಿಗೆ ವ್ಯವಹಾರದಲ್ಲಿ ಲಾಭಗಳು ಲಭ್ಯವಾಗುತ್ತವೆ. ವ್ಯಾಪಾರಿಗಳು ಉತ್ತಮ ಲಾಭ ಮತ್ತು ಯಶಸ್ಸನ್ನು ಪಡೆಯಲಿದ್ದಾರೆ.
ಕನ್ಯಾ ರಾಶಿ ಅವರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಬೆಳವಣಿಗೆಯನ್ನು ಕಾಣಲಿದ್ದಾರೆ. ದುಡಿಯುವ ಜನರು ತಮ್ಮ ಕೆಲಸವನ್ನು ಬದಲಾಯಿಸುವ ಆಲೋಚನೆಯಲ್ಲಿದ್ದರೆ, ಅವರು ಈ ಅವಧಿಯಲ್ಲಿ ಪ್ರಯತ್ನಿಸಿದರೆ, ಅವರು ಬಯಸಿದ ಉದ್ಯೋಗವನ್ನು ಪಡೆಯುತ್ತಾರೆ. ಹಿರಿಯರೊಂದಿಗಿನ ಸಂಬಂಧ ಮಧುರವಾಗಿರುತ್ತದೆ.

ಮೇಷ ರಾಶಿ: ಬುಧ ಮೇಷ ರಾಶಿಯ 3ನೇ ಮನೆಗೆ ಸಾಗುತ್ತದೆ. ಹೀಗಾಗಿ ಮೇಷ ರಾಶಿಯವರಿಗೆ ಈ ಬುಧ ಸಂಕ್ರಮಣ ಅದ್ಭುತವಾಗಿರಲಿದೆ. ಈ ಅವಧಿಯಲ್ಲಿ ಈ ರಾಶಿಚಕ್ರ ಚಿಹ್ನೆಗಳ ಧೈರ್ಯ ಮತ್ತು ಶೌರ್ಯ ಹೆಚ್ಚಾಗುತ್ತದೆ. ವಿದೇಶ ಸಂಬಂಧಿ ಉದ್ಯೋಗದಲ್ಲಿರುವವರಿಗೆ ಉತ್ತಮ ಲಾಭ ದೊರೆಯಲಿದೆ.
ಈ ಸಮಯದಲ್ಲಿ ನೀವು ನಿಮ್ಮ ಶತ್ರುಗಳನ್ನು ಸೋಲಿಸುವಿರಿ. ಆರ್ಥಿಕವಾಗಿ ಈ ಅವಧಿಯು ತುಂಬಾ ಮಂಗಳಕರವಾಗಿರುತ್ತದೆ. ನೀವು ಇಲ್ಲಿಯವರೆಗೆ ಯಾವುದೇ ಹೂಡಿಕೆಯನ್ನು ಮಾಡಿದ್ದರೆ, ಈ ಅವಧಿಯಲ್ಲಿ ನೀವು ಅದರಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ನ್ಯಾಯಾಲಯದ ಪ್ರಕರಣಗಳಲ್ಲಿ ತೀರ್ಪು ನಿಮ್ಮ ಪರವಾಗಿ ಬರಲಿದೆ.

ಕುಂಭ ರಾಶಿ: ಬುಧ ಕುಂಭ ರಾಶಿಯ 5ನೇ ಮನೆಗೆ ಸಾಗುತ್ತದೆ. ಹೀಗಾಗಿ ಕುಂಭ ರಾಶಿಯವರಿಗೆ ಈ ಅವಧಿಯು ಅದೃಷ್ಟದಾಯಕವಾಗಿರುತ್ತದೆ. ಸಂಶೋಧನೆಗೆ ಸಂಬಂಧಿಸಿದ ಕ್ಷೇತ್ರದಲ್ಲಿರುವವರು ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಪ್ರೇಮ ಸಂಬಂಧಗಳು ಉತ್ತಮವಾಗಿರುತ್ತವೆ. ಈ ಅವಧಿಯಲ್ಲಿ ನೀವು ಹೆಚ್ಚಿನ ಲಾಭಗಳನ್ನು ಪಡೆಯುತ್ತೀರಿ. ನಿಮ್ಮ ಕೈಯಲ್ಲಿ ಹೆಚ್ಚು ಹಣ ಇರುತ್ತದೆ. ಮಕ್ಕಳ ಮೂಲಕ ಒಳ್ಳೆಯ ಸುದ್ದಿಯನ್ನು ಸ್ವೀಕರಿಸುವಿರಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅಭ್ಯಾಸ ಮಾಡುವ ಅಥವಾ ಅನುಷ್ಠಾನಗೊಳಿಸುವ ಮೊದಲು ದಯವಿಟ್ಟು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)












Click it and Unblock the Notifications