ಧನು ರಾಶಿಯಲ್ಲಿ ಬುಧನ ದಹನ: ಯಾವ ರಾಶಿಯವರಿಗೆ ಶುಭ? ಯಾವ ರಾಶಿಯವರಿಗೆ ಅಶುಭ?
ಧನು ರಾಶಿಯಲ್ಲಿ ಬುಧನ ದಹನ 2 ಜನವರಿ 2023ರಂದು ಸಂಭವಿಸಲಿದೆ. ಬುಧವು ನಮ್ಮ ಸೌರವ್ಯೂಹದ ಚಿಕ್ಕದಾದ ಮತ್ತು ವೇಗವಾಗಿ ಚಲಿಸುವ ಗ್ರಹವಾಗಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಬುಧ ಗ್ರಹವನ್ನು ರಾಜಕುಮಾರ ಎಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಬುಧ ಬಲವಿದ್ದರೆ ಬುದ್ಧಿವಂತಿಕೆ, ತಾರ್ಕಿಕ ಸಾಮರ್ಥ್ಯ ಮತ್ತು ಉತ್ತಮ ಸಂವಹನ ಕೌಶಲ್ಯ ಹೊಂದಬಹುದು. ಬುಧ ನಮ್ಮ ಬುದ್ಧಿವಂತಿಕೆ, ಸ್ಮರಣೆ ಮತ್ತು ಕಲಿಕೆಯ ಸಾಮರ್ಥ್ಯವನ್ನು ಪ್ರತಿನಿಧಿಸುವ ಗ್ರಹವಾಗಿದೆ. ಇದು ನಮ್ಮ ನರಮಂಡಲ, ಮಾತು, ಭಾಷಾ ಸಂವಹನ (ಲಿಖಿತ ಅಥವಾ ಮೌಖಿಕ)ವನ್ನು ನಿಯಂತ್ರಿಸುತ್ತದೆ.
ಜ್ಯೋತಿಷ್ಯದಲ್ಲಿ ದಹನದ ಅರ್ಥ ಹೀಗಿದೆ- ಸರಳವಾಗಿ ಹೇಳುವುದಾದರೆ, ಒಂದು ಗ್ರಹ ಸೂರ್ಯ ಸಮೀಪದಲ್ಲಿ ಬಂದಾಗ ಉಂಟಾಗುವ ಪರಿಸ್ಥಿತಿ ಎಂದು ನಾವು ಹೇಳಬಹುದು. ಈ ಗ್ರಹವು ಸೂರ್ಯನಿಗೆ ತುಂಬಾ ಹತ್ತಿರದಲ್ಲಿರುವ ಕಾರಣದಿಂದ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಈ ವೇಳೆ ಇದನ್ನು ದಹನ ಗ್ರಹ ಎಂದು ಕರೆಯಲಾಗುತ್ತದೆ.
ಧನು ರಾಶಿಯಲ್ಲಿ ಬುಧನ ದಹನ: ಸಮಯ
2ನೇ ಜನವರಿ 2023 ರಂದು ಬುಧ ಧನು ರಾಶಿಯಲ್ಲಿ 2:33ಕ್ಕೆ ದಹನವಾಗಲಿದ್ದು, 13 ಜನವರಿ 2023 ರಂದು ಬೆಳಿಗ್ಗೆ 5:15 ಕ್ಕೆ ದಹನದಿಂದ ಹೊರಬರುತ್ತದೆ. ಇದು ದ್ವಾದಶಿ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಜೀವನದ ಮೇಲೆ ಧನು ರಾಶಿಯಲ್ಲಿ ಬುಧ ದಹನದ ಪ್ರಭಾವದ ಬಗ್ಗೆ ವಿವರವಾಗಿ ತಿಳಿಯಿರಿ.

ಮೇಷ: ಮಾತಿನ ಶೈಲಿ ಬದಲಾವಣೆ
ಧನು ರಾಶಿಯಲ್ಲಿ ಬುಧನ ದಹನ ಮೇಷ ರಾಶಿಯವರ ಜೀವನದಲ್ಲಿ ಕೆಲ ಬದಲಾವಣೆಯನ್ನು ತರಲಿದೆ. ನಿಮ್ಮ ಮಾತಿನಲ್ಲಿ ಬದಲಾವಣೆಯಾಗುವುದು. ಕಠೋರವಾದ ಮಾತುಗಳಿಂದ ನೀವು ಮೃದುವಾಗಿ ಮಾತನಾಡಲು ಆರಂಭಿವಿಸುವಿರಿ. ನಿಮ್ಮ ಮಾತು ಎಲ್ಲರ ಗಮನ ಸೆಳೆಯಲಿದೆ. ನಿಮ್ಮ ಮಾತಿನಲ್ಲಿ ಮದುರತೆ ಇರಲಿದೆ.
ಈ ವರ್ಷ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ರಾಜಕೀಯ ಹಿನ್ನೆಲೆಯುಳ್ಳವರಿಗೆ ಈ ಸಮಯ ಮಂಗಳಕರವಾಗಿದೆ. ಆದರೆ ಸಂವಹನದ ವೇಳೆ ಜಾಗರೂಕತೆಯಿಂದಿರಿ. ನಿಮ್ಮ ತಂದೆ, ಗುರುಗಳು ಮತ್ತು ಮಾರ್ಗದರ್ಶಕರೊಂದಿಗೆ ಸಂವಹನ ನಡೆಸುತ್ತಿದ್ದರೂ ಸಹ ಮಾತಿನ ಬಗ್ಗೆ ಗಮನ ಹರಿಸುವುದು ಉತ್ತಮ. ನಿಮ್ಮ ಮಾತು ಬೇರೆಯವರಿಗೆ ನೋಯಿಸಬಹುದು. ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆಯೂ ನೀವು ಜಾಗೃತರಾಗಿರಬೇಕು. ಈ ಸಮಯದಲ್ಲಿ ನಿಮ್ಮ ಬುದ್ಧಿವಂತಿಕೆ, ಸ್ಮರಣೆ ಮತ್ತು ಕಲಿಕೆಯ ಸಾಮರ್ಥ್ಯ ಹೆಚ್ಚಾಗಲಿದೆ.

ವೃಷಭ: ಮೋಸ ಹೋಗುವ ಸಾಧ್ಯತೆ
ಧನು ರಾಶಿಯಲ್ಲಿ ಬುಧ ದಹನ ವೃಷಭ ರಾಶಿಯವರಿಗೆ ಮಿಶ್ರ ಫಲವನ್ನು ನೀಡುತ್ತದೆ. ಈ ಸಮಯದಲ್ಲಿ ನೀವು ಯಾವುದೇ ಊಹಾಪೋಹ ವ್ಯವಹಾರದಲ್ಲಿ ಭಾಗಿಯಾಗದಂತೆ ಸೂಚಿಸಲಾಗುತ್ತದೆ. ಏಕೆಂದರೆ ಇದರಿಂದ ಹಠಾತ್ ವಿತ್ತೀಯ ನಷ್ಟವನ್ನು ಎದುರಿಸಬೇಕಾಗಬಹುದು.
ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಅಜ್ಞಾನದಿಂದಾಗಿ ನೀವು ಕೆಲವು ಚರ್ಮ-ಸಂಬಂಧಿತ ಸೋಂಕುಗಳು ಅಥವಾ ಸಂತಾನೋತ್ಪತ್ತಿ ಸಂಬಂಧಿಸಿದ ಆರೋಗ್ಯ ಸಮಸ್ಯೆಯನ್ನು ಎದುರಿಸಬಹುದು. ಆದ್ದರಿಂದ ನೀವು ಏನು ತಿನ್ನುತ್ತೀರಿ ಎಂಬುದರ ಬಗ್ಗೆ ಜಾಗೃತರಾಗಿರಿ. ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಆಹಾರ ಸೇವಿಸಿ. ಕೆಲವು ತಪ್ಪು ಸಂವಹನದಿಂದಾಗಿ ನಿಮ್ಮ ಅತ್ತೆಯೊಂದಿಗಿನ ನಿಮ್ಮ ಸಂಬಂಧ ಈ ಅವಧಿಯಲ್ಲಿ ತೊಂದರೆಗೊಳಗಾಗಬಹುದು. ಆದ್ದರಿಂದ ಜಾಗರೂಕರಾಗಿರಿ ಮತ್ತು ಯಾವುದೇ ವಾದ ಅಥವಾ ಸಂಬಂಧಿತ ಚರ್ಚೆಗಳನ್ನು ತಪ್ಪಿಸಿ.

ಮಿಥುನ: ಸುಧಾರಣೆ ಮತ್ತು ಬೆಳವಣಿಗೆಯ ಸಮಯ
ಧನು ರಾಶಿಯಲ್ಲಿನ ಬುಧ ದಹನ ಈ ಸಮಯದಲ್ಲಿ ನಿಮ್ಮ ವ್ಯವಹಾರದಲ್ಲಿ ಸುಧಾರಣೆ ಮತ್ತು ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ. ಈ ಸಮಯ ನಿಮಗೆ ಗೊಂದಲ ಮತ್ತು ತಪ್ಪುಗ್ರಹಿಕೆಯನ್ನು ಉಂಟುಮಾಡಬಹುದು. ಆದರೆ ನಿಮ್ಮ ಮಾತು ಎಲ್ಲವನ್ನೂ ಸರಿ ಮಾಡುತ್ತದೆ. ನಿಮ್ಮ ಭರವಸೆಯ ಮಾತುಗಳು ಎಲ್ಲರನ್ನು ಮೆಚ್ಚಿಸುವಂತಿರುತ್ತದೆ. ಅದೃಷ್ಟ ನಿಮ್ಮೊಂದಿಗೆ ಇರುವುದರಿಂದ ಶ್ರಮದ ಫಲ ನಿಮಗೆ ದೊರೆಯುತ್ತದೆ. ಹೀಗಾಗಿ ನೀವಂದುಕೊಂಡ ಕಾರ್ಯಗಳು ತಡವಾದರೂ ನಡೆಯುತ್ತವೆ.

ಕಟಕ: ಹತಾಶೆ, ಹಣದ ನಷ್ಟ
ಈ ಸಮಯದಲ್ಲಿ ನೀವು ಕೆಲ ಕೆಲಸಕ್ಕಾಗಿ ಅನೇಕ ಪ್ರಯಾಣಗಳನ್ನು ಮಾಡಬೇಕಾಗಬಹುದು. ಇದರಿಂದಾಗಿ ನಿಮ್ಮ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುವುದಿಲ್ಲ. ಇದು ಹತಾಶೆ, ಹಣದ ನಷ್ಟ ಮತ್ತು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಪರಿಣಾಮವಾಗಿ ಈ ಸಮಯದಲ್ಲಿ ನೀವು ಹಣಕಾಸು ತೊಂದರೆಗೊಳಗಾಗಬಹುದು. ಯಾವುದೇ ಆನ್‌ಲೈನ್ ವಿತ್ತೀಯ ವಂಚನೆಯಿಂದ ನೀವು ಮೋಸ ಹೋಗುವ ಸಾಧ್ಯತೆಗಳಿವೆ. ಆದ್ದರಿಂದ ಜಾಗರೂಕರಾಗಿರಿ.
ಕೆಲಸದ ಒತ್ತಡದಿಂದ ತಪ್ಪಿಸಲು ನೀವು ಯಾವಾಗಲೂ ಕೆಲಸದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಮನೆಯಲ್ಲಿ ಶುಭ ಕಾರ್ಯಗಳಿಂದಾಗಿ ಕೆಲಸದ ಕಡೆಗೆ ನಿಮ್ಮ ಗಮನ ಕಡಿಮೆಯಾಗಬಹುದು. ಆದ್ದರಿಂದ ಕೆಲಸದ ಕಡೆಗೆ ಹೆಚ್ಚು ಒತ್ತು ನೀಡಿ. ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲಕರ ದಿನವಾಗಿದೆ.

ಸಿಂಹ: ಆರ್ಥಿಕ ಲಾಭಗಳಿಗೆ ಹೆಚ್ಚಿನ ಪ್ರಾಮುಖ್ಯತೆ
ಈ ಸಮಯದಲ್ಲಿ ಆರ್ಥಿಕ ಮತ್ತು ವಿತ್ತೀಯ ಲಾಭಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಿರಿ. ಧನು ರಾಶಿಯಲ್ಲಿ ಬುಧ ದಹನವು ಸಿಂಹ ರಾಶಿಯವರ ಆರ್ಥಿಕ ಜೀವನಕ್ಕೆ ಒಳ್ಳೆಯದಲ್ಲ. ಷೇರು ಮಾರುಕಟ್ಟೆ ಮತ್ತು ಲಾಟರಿ ವಿಚಾರದಲ್ಲಿ ಜಾಗರೂಕರಾಗಿರಿ. ಸಿಂಹ ರಾಶಿಯವರು ಹಠಾತ್ ವಿತ್ತೀಯ ನಷ್ಟವನ್ನು ಎದುರಿಸಬೇಕಾಗಬಹುದು. ಸಾಲ ತೆಗೆದುಕೊಂಡು ಯಾವುದೇ ಅಪಾಯವನ್ನು ತೆಗೆದುಕೊಳ್ಳದಂತೆ ಸೂಚಿಸಲಾಗಿದೆ.
ಉನ್ನತ ಅಧ್ಯಯನಕ್ಕಾಗಿ ಅಥವಾ ಕೆಲವು ವೃತ್ತಿಪರ ಕೋರ್ಸ್‌ಗಳಲ್ಲಿ ತೊಡಗಿಸಿಕೊಳ್ಳಲು ಯೋಜಿಸುತ್ತಿರುವ ಸಿಂಹ ರಾಶಿಯ ವಿದ್ಯಾರ್ಥಿಗಳು ಸಹ ಎರಡು ಬಾರಿ ಯೋಚಿಸಲು ಮತ್ತು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ಈ ಬಗ್ಗೆ ಸಂಶೋಧನೆಯನ್ನು ಕೈಗೊಳ್ಳಲು ಸೂಚಿಸಲಾಗುತ್ತದೆ.

ಕನ್ಯಾ: ಆರೋಗ್ಯ ಸಮಸ್ಯೆ
ನಿಮ್ಮ ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಗಮನ ಕೊಡಿ. ಈ ಸಮಯದಲ್ಲಿ ನೀವು ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಕೆಲ ವೃತ್ತಿ ಪರ ಸಮಸ್ಯೆಗಳನ್ನು ಎದುರಿಸಬಹುದು. ಮನೆಯಿಂದ ಕೆಲಸ ಮಾಡುವ ವೃತ್ತಿಪರರು ತಮ್ಮ ವೃತ್ತಿಪರ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಕೆಲಸವನ್ನು ಹಲವಾರು ಬಾರಿ ನಿರ್ವಹಿಸಬೇಕಾಗುತ್ತದೆ. ಅಲ್ಲದೆ, ಬುಧ ಲಗ್ನಾಧಿಪತಿಯಾಗಿರುವುದರಿಂದ, ಕನ್ಯಾ ರಾಶಿಯ ಸ್ಥಳೀಯರು ತಮ್ಮ ಆರೋಗ್ಯ ಮತ್ತು ದೈಹಿಕ ಯೋಗಕ್ಷೇಮದ ಬಗ್ಗೆ ಜಾಗೃತರಾಗಿರಲು ಸಲಹೆ ನೀಡಲಾಗುತ್ತದೆ.

ತುಲಾ: ತೀರ್ಥಯಾತ್ರೆಗೆ ಅಡ್ಡಿ
ಈ ಸಮಯದಲ್ಲಿ ನಿಮಗೆ ಮಿಶ್ರ ಫಲವಾಗಿರುತ್ತದೆ. ಯಾವುದೇ ಅಲ್ಪ ದೂರದ ಪ್ರಯಾಣ ಅಥವಾ ತೀರ್ಥಯಾತ್ರೆಗೆ ಯೋಜಿಸುತ್ತಿದ್ದರೆ ಅದು ನೆರವೇರೆದ ಇರಬಹುದು. ಧನು ರಾಶಿಯಲ್ಲಿ ಬುಧ ದಹನದಿಂದಾಗಿ ಕೊನೆಯ ಕ್ಷಣದಲ್ಲಿ ಅದು ಇದ್ದಕ್ಕಿದ್ದಂತೆ ರದ್ದುಗೊಳ್ಳಬಹುದು. ನಿಮ್ಮ ಕಿರಿಯ ಸಹೋದರನೊಂದಿಗೆ ವಾದವನ್ನು ತಪ್ಪಿಸಲು ಪ್ರಯತ್ನಿಸಿ. ಏಕೆಂದರೆ ಅದು ಜಗಳವಾಗಿ ಬದಲಾಗಬಹುದು. ಹೆಚ್ಚುವರಿಯಾಗಿ ನೀವು ಬರವಣಿಗೆ ಕ್ಷೇತ್ರದಲ್ಲಿ ವೃತ್ತಿಪರವಾಗಿ ಕೆಲಸ ಮಾಡುತ್ತಿದ್ದರೆ, ನೀವು ಕೇಂದ್ರೀಕರಿಸುವಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಹಣಕಾಸಿನ ವಿಚಾರದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಆದ್ದರಿಂದ ಕೆಲ ಸಂದರ್ಭಗಳಲ್ಲಿ ಹೆಚ್ಚುವರಿ ಹಣದೊಂದಿಗೆ ಸಿದ್ಧರಾಗಿರುವುದು ಒಳ್ಳೆಯದು.

ವೃಶ್ಚಿಕ: ಹಠಾತ್ ನಷ್ಟ
ಧನು ರಾಶಿಯಲ್ಲಿ ಬುಧ ದಹನದ ಸಮಯದಲ್ಲಿ ನೀವು ಯಾವುದೇ ಹಣಕಾಸಿನ ಲಾಭವನ್ನು ನಿರೀಕ್ಷಿಸುತ್ತಿದ್ದರೆ, ಅದು ವಿಳಂಬವಾಗಬಹುದು. ಈ ಸಮಯದಲ್ಲಿ ಹಠಾತ್ ನಷ್ಟವನ್ನು ಎದುರಿಸಬಹುದಾದ್ದರಿಂದ ಯಾವುದೇ ಊಹಾಪೋಹ ವ್ಯವಹಾರದಲ್ಲಿ ತೊಡಗಿಸಿಕೊಳ್ಳಬೇಡಿ. ಯಾರಾದರು ನಿಮ್ಮ ಬಗ್ಗೆ ತಪ್ಪು ತಿಳಿದುಕೊಳ್ಳಬಹುದು. ಹೀಗಾಗಿ ಬುದ್ಧಿವಂತರಾಗಿರಿ. ಹಣ ಉಳಿತಾಯ ಮಾಡಲು ಹೋಗಿ ನಿಮ್ಮವರನ್ನು ನೀವು ಕಳೆದುಕೊಳ್ಳಬೇಡಿ.
ವೃಶ್ಚಿಕ ರಾಶಿಯವರಿಗೆ ಇಂದು ತುಂಬಾ ಬಿಡುವಿಲ್ಲದ ಸಮಯವಾಗಿರುತ್ತದೆ. ಎಲ್ಲವೂ ಚೆನ್ನಾಗಿರುತ್ತವೆ. ಪ್ರತಿಯೊಬ್ಬರೂ ತಮ್ಮ ತಮ್ಮೊಳಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ. ಜಾಗರೂಕರಾಗಿದ್ದರೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬಹುದು. ಅಗತ್ಯವಿರುವ ಸ್ನೇಹಿತರಿಗೆ ಸಹಾಯ ಮಾಡಬೇಕಾಗಬಹುದು. ಕೆಲವೊಮ್ಮೆ ಒತ್ತಡ ಮತ್ತು ಕೆರಳಿಸುವ ಸ್ವಭಾವ ನಿಮ್ಮ ಗುರಿಯಿಂದ ನಿಮ್ಮನ್ನು ವಿಚಲಿತಗೊಳಿಸಬಹುದು. ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಮತ್ತೊಮ್ಮೆ ಯೋಚಿಸಿ.

ಧನು: ಯೋಗ ಮತ್ತು ಧ್ಯಾನ
ಧನು ರಾಶಿಯಲ್ಲಿ ಬುಧ ದಹನದ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಉತ್ತಮ ಕಾಳಜಿ ವಹಿಸಬೇಕು. ನಿಮ್ಮ ದಿನಚರಿಯಲ್ಲಿ ಯೋಗ ಮತ್ತು ಧ್ಯಾನವನ್ನು ಪ್ರಯತ್ನಿಸಿ ಮತ್ತು ಅಳವಡಿಸಿಕೊಳ್ಳಿ. ನರಮಂಡಲ ಅಥವಾ ಚರ್ಮಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಂದ ನೀವು ಬಳಲುತ್ತಿರುವ ಸಾಧ್ಯತೆಗಳಿವೆ.
ಕೆಲ ಸಮಯದ ನಂತರ ಧನು ರಾಶಿಯವರಿಗೆ ಯಶಸ್ಸು ಸಿಗಲಿದೆ. ಯಾವುದೇ ಅಪೂರ್ಣ ಕನಸನ್ನು ನನಸಾಗಿಸುವಲ್ಲಿ ಯೋಚನೆ ಮಾಡುವಿರಿ. ಹತ್ತಿರವಿರುವ ಯಾರಾದರೂ ನಿಮ್ಮ ತೊಂದರೆಗೆ ಕಾರಣವಾಗಬಹುದು. ಯಂತ್ರ ಅಥವಾ ಕಾರ್ಖಾನೆಗೆ ಸಂಬಂಧಿಸಿದ ವ್ಯವಹಾರದಲ್ಲಿ ಲಾಭ ಇರುತ್ತದೆ. ಮನೆಯ ವ್ಯವಸ್ಥೆಗೆ ಸಂಬಂಧಿಸಿದಂತೆ ಪತಿ-ಪತ್ನಿಯರ ನಡುವೆ ಕಲಹ ಉಂಟಾಗಬಹುದು. ಆದಷ್ಟು ತಾಳ್ಮೆಯಿಂದ ವರ್ತಿಸಿ.

ಮಕರ: ಆಸ್ತಿ ಖರೀದಿ
ಮಕರ ರಾಶಿಯವರು ಬಹಳ ದಿನಗಳಿಂದ ನಡೆಸುತ್ತಿದ್ದ ಕೆಲಸಗಳು ಪೂರ್ಣಗೊಳ್ಳುವುದರಿಂದ ಸಾಕಷ್ಟು ಸಮಾಧಾನವನ್ನು ಅನುಭವಿಸುವರು. ಆಸ್ತಿ ಖರೀದಿಗೆ ಸಂಬಂಧಿಸಿದ ಒಪ್ಪಂದವನ್ನು ದೃಢೀಕರಿಸಬಹುದು. ಅವಕಾಶವನ್ನು ಕೈ ಬಿಡಬೇಡಿ, ಗೃಹೋಪಯೋಗಿ ವಸ್ತುಗಳ ಆನ್‌ಲೈನ್ ಖರೀದಿಯನ್ನು ಮಾಡಬಹುದು. ಇತರರ ಮೇಲೆ ಅವಲಂಬಿತರಾಗುವ ಬದಲು, ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ಕೊಡಿ. ಯಾವುದೇ ರೀತಿಯ ಸಾಲವನ್ನು ತೆಗೆದುಕೊಳ್ಳಬೇಡಿ ಮತ್ತು ನೀಡಬೇಡಿ. ವ್ಯಾಪಾರ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಯೊಂದಿಗೆ ವಿವಾದ ಉಂಟಾಗಬಹುದು. ಜಾಗರೂಕರಾಗಿರಿ ಮತ್ತು ನೆರೆಹೊರೆಯವರೊಂದಿಗೆ ಸಿಹಿಯಾಗಿ ವರ್ತಿಸಿ.
ಧನು ರಾಶಿಯಲ್ಲಿ ಬುಧ ದಹನದ ಈ ಅವಧಿಯಲ್ಲಿ ನೀವು ನಿಮ್ಮ ಕುಟುಂಬದವರ ಆರೋಗ್ಯವನ್ನು ನೋಡಿಕೊಳ್ಳಬೇಕು ಮತ್ತು ಅಗತ್ಯವಿದ್ದಾಗ ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಈ ಸಮಯದಲ್ಲಿ ನೀವು ಹಠಾತ್ ವಿದೇಶಿ ವ್ಯಾಪಾರ ಪ್ರವಾಸಗಳಿಗೆ ಹೋಗಬೇಕಾಗಬಹುದು. ಆದರೆ ಅವು ಅನುಕೂಲಕರವಾಗಿಲ್ಲದಿರಬಹುದು. ಆದ್ದರಿಂದ ಯೋಜನೆಯನ್ನು ಸ್ವಲ್ಪ ಸಮಯದವರೆಗೆ ಮುಂದೂಡಲು ನಿಮಗೆ ಸಲಹೆ ನೀಡಲಾಗುತ್ತದೆ.

ಕುಂಭ: ಹೂಡಿಕೆಗೆ ಉತ್ತಮ ಸಮಯವಲ್ಲ
ಕೆಲವು ತಪ್ಪು ಹೂಡಿಕೆ ನಿರ್ಧಾರದಿಂದಾಗಿ ನೀವು ತೊಂದರೆಗೊಳಗಾಗಬಹುದು. ಆದ್ದರಿಂದ ಸದ್ಯಕ್ಕೆ ಯಾವುದೇ ಹೂಡಿಕೆ ಮಾಡುವುದನ್ನು ತಪ್ಪಿಸಲು ಪ್ರಯತ್ನಿಸಿ. ಕುಂಭ ರಾಶಿಯ ವಿದ್ಯಾರ್ಥಿಗಳು ಸ್ವಲ್ಪ ನಿರಾಶೆಗೊಳ್ಳಬಹುದು. ಕುಂಭ ರಾಶಿಯವರಿಗೆ ಏರಿಳಿತಗಳು ತುಂಬಿರುತ್ತವೆ. ಮಾನಸಿಕ ಒತ್ತಡದ ಜೊತೆಗೆ ಆರ್ಥಿಕ ಸವಾಲುಗಳೂ ಇರಬಹುದು. ಕೆಲಸಕ್ಕೆ ಸಂಬಂಧಿಸಿದಂತೆ ಹೆಚ್ಚು ಪ್ರಯಾಣ ಮಾಡಬಹುದು.
ಮನೆಯಲ್ಲಿ ಕೆಲವು ಸವಾಲುಗಳು ನಿಮಗೆ ಎದುರಾಗುತ್ತವೆ. ಆದರೆ ನೀವು ಎಲ್ಲಾ ಅಡೆತಡೆಗಳನ್ನು ಬುದ್ಧಿವಂತಿಕೆಯಿಂದ ಮಾಡುವಿರಿ. ವಿವಾಹಿತರು ತಮ್ಮ ಸಂಗಾತಿಯೊಂದಿಗೆ ಮನೆಯ ವಿಶೇಷ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದರೆ ಒಳ್ಳೆಯದು. ಮಕ್ಕಳೊಂದಿಗೆ ಉತ್ತಮ ಸಮಯ ಕಳೆಯುವಿರಿ.

ಮೀನ: ವೃತ್ತಿಜೀವನದಲ್ಲಿ ಬೆಳವಣಿಗೆ
ಧನು ರಾಶಿಯಲ್ಲಿ ಬುಧ ದಹನದ ಸಮಯದಲ್ಲಿ ವೃತ್ತಿಜೀವನದ ವಿಷಯದಲ್ಲಿ ಜಾಗರೂಕರಾಗಿರಬೇಕು. ಅವರು ಪುನರಾವರ್ತಿತ ಅಡೆತಡೆಗಳನ್ನು ಎದುರಿಸಬಹುದು. ಸಂವಹನದಲ್ಲಿ ಗೊಂದಲ, ದಾಖಲೆಗಳ ಸಮಸ್ಯೆಗಳು ಇರುತ್ತವೆ. ಈ ಸಮಸ್ಯೆಗಳನ್ನು ತಪ್ಪಿಸಲು, ಸಂವಹನ ಮಾಡುವಾಗ ಹೆಚ್ಚಿನ ಎಚ್ಚರಿಕೆ ವಹಿಸಿ ಮತ್ತು ಜಾಗೃತರಾಗಿರಿ. ನಿಮ್ಮ ವೃತ್ತಿಜೀವನದಲ್ಲಿ ಬೆಳವಣಿಗೆ ಹೊಂದಬಹುದು.
ಸಂಗಾತಿಯೊಂದಿಗಿನ ಸಂಬಂಧದಲ್ಲಿ ಉತ್ತಮವಾಗಿರುತ್ತದೆ ಮತ್ತು ಅವರ ಮಾತುಗಳನ್ನು ಕೇಳಿದ ನಂತರ ಹೊಸದನ್ನು ಮಾಡಲು ಯೋಚಿಸುತ್ತೀರಿ. ಕೆಲ ಸಮಯದ ನಂತರ ವ್ಯಾಪಾರಸ್ಥರು ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಕೆಲಸಕ್ಕೆ ಸಂಬಂಧಿಸಿದಂತೆ ನೀವು ಪ್ರಯಾಣಿಸಬೇಕಾಗಬಹುದು, ಅದು ಪ್ರಯೋಜನಕಾರಿಯಾಗಿರುತ್ತದೆ. ಉದ್ಯೋಗಸ್ಥರು ಕಚೇರಿ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ ಮತ್ತು ಮೇಲಾಧಿಕಾರಿಯಿಂದ ಪ್ರಶಂಸೆಯನ್ನು ಪಡೆಯಬಹುದು.












Click it and Unblock the Notifications