Malavya Yoga 2025: ಮಾಲವ್ಯ ಯೋಗ- ಈ ರಾಶಿಗೆ ಶುಕ್ರ ದೆಸೆಯಿಂದ ಸಕಲ ಸೌಕರ್ಯ ಪ್ರಾಪ್ತಿ

ಒಬ್ಬ ವ್ಯಕ್ತಿಗೆ ಸಂಪತ್ತು, ಧನಲಾಭ, ಸಕಲ ಸೌಕರ್ಯ ಸಿಗಬೇಕು ಅಂತಾದರೆ ಜ್ಯೋತಿಷ್ಯದ ಪ್ರಕಾರ ಆತನ ಜಾತಕದಲ್ಲಿ ಪ್ರಮುಖ ಗ್ರಹಗಳ ಸ್ಥಾನ ಅತ್ಯುನ್ನತವಾಗಿರಬೇಕು. ಜಾತಕದಲ್ಲಿ ಗ್ರಹಗಳ ಸ್ಥಾನ ದುರ್ಬಲವಾಗಿರುವ ವ್ಯಕ್ತಿ ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಾನೆ.

ಹೀಗಾಗಿ ಒಬ್ಬರ ಜಾತಕದಲ್ಲಿ ಗ್ರಹಗಳ ಸ್ಥಾನ ತುಂಬಾ ಮುಖ್ಯ. ಜೊತೆಗೆ ಗ್ರಹಗಳ ಸಂಯೋಜಯಿಂದ ರೂಪಗೊಳ್ಳುವ ಯೋಗಗಳಿಂದಲೂ ಶುಭ ಫಲಗಳು ಸಿಗುತ್ತದೆ. ಅಂದಹಾಗೆ ಮೀನ ರಾಶಿಯಲ್ಲಿ ಎರಡು ರಾಜಯೋಗಗಳು ರೂಪುಗೊಂಡಿವೆ. ಶುಕ್ರ ಮತ್ತು ಬುಧ ಗ್ರಹಗಳ ಸಂಯೋಗದಿಂದಾಗಿ ಮೀನ ರಾಶಿಯಲ್ಲಿ ಲಕ್ಷ್ಮಿ ನಾರಾಯಣ ಯೋಗ ರೂಪಗೊಂಡಿದೆ. ಜೊತೆಗೆ ಶುಕ್ರನು ಮೀನ ರಾಶಿಯಲ್ಲಿರುವುದರಿಂದ ಮಾಲವ್ಯ ರಾಜಯೋಗವೂ ಸೃಷ್ಟಿಯಾಗಿದೆ. 50 ವರ್ಷಗಳ ನಂತರ ಈ ಎರಡು ಯೋಗಗಳು ಒಟ್ಟಿಗೆ ರೂಪಗೊಂಡಿವೆ.

ಹೀಗಾಗಿ ಈ ಯೋಗಗಳಿಂದ ಕೆಲ ರಾಶಿಗಳಿಗೆ ಸಕಲ ಐಶ್ವರ್ಯ, ಸಂಪತ್ತು, ಧನಲಾಭವಾಗುವ ಸಾಧ್ಯತೆಗಳು ಇವೆ. ಜೊತೆಗೆ ಶುಕ್ರದೆಸೆಯಿಂದ ದಾಂಪತ್ಯದಲ್ಲಿ ಪ್ರೀತಿ, ಕುಟುಂಬದಲ್ಲಿ ಸಂತೋಷ, ಕೆಲಸದಲ್ಲಿ ಬೆಳವಣಿಗೆಯ ವಾತಾವರಣ ಸೃಷ್ಟಿಯಾಗಲಿದೆ. ಹಾಗಾದರೆ ಈ ರಾಜಯೋಗಗಳಿಂದಾಗಿ ಶುಭ ಪರಿಣಾಮ ಅನುಭವಿಸುವ ರಾಶಿಗಳು ಯಾವುವು ಎಂದು ಈಗ ತಿಳಿಯೋಣ.

malavya yoga 2025 this zodiac sign will get all the comforts from the position of venus

ಮೇಷ ರಾಶಿ

ಲಕ್ಷ್ಮಿ ನಾರಾಯಣ ಯೋಗ ಮತ್ತು ಮಾಲವ್ಯ ಯೋಗ ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾಗಿವೆ. ಮೇಷ ರಾಶಿಯವರ ಹತ್ತನೇ ಮನೆಯಲ್ಲಿ ಈ ಎರಡೂ ಯೋಗಗಳು ರೂಪಗೊಂಡಿವೆ. ಇದು ಈ ರಾಶಿಯ ಜನರ ಆದಾಯವನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ಶತ್ರುಗಳ ಕಾಟ ದೂರವಾಗುವುದು. ಮನೆಯಲ್ಲಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ. ವ್ಯಾಪಾರಿಗಳಿಗೆ ಈ ಸಮಯ ಅದ್ಭುತವಾದ ಫಲ ನೀಡಲಿದೆ.

ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸುವ ಉದ್ದೇಶವನ್ನು ಹೊಂದಿದ್ದರೆ, ಈ ಸಮಯ ಅದ್ಭುತವಾಗಿದೆ. ನೀವು ಹೂಡಿಕೆ ಮಾಡಿದ್ದರೆ ಅದರಿಂದ ಲಾಭ ಸಿಗಬಹುದು. ಆಮದು ಮತ್ತು ರಫ್ತು ವ್ಯವಹಾರದಲ್ಲಿರುವವರು ಉತ್ತಮ ಲಾಭವನ್ನು ಪಡೆಯುತ್ತಾರೆ. ನೀವು ಈ ಸಮಯದಲ್ಲಿ ಸಂಗಾತಿಯೊಂದಿಗೆ ತುಂಬಾ ಸಂತೋಷವಾಗಿರುತ್ತೀರಿ. ಸಮಾಜದಲ್ಲಿ ನಿಮ್ಮ ಮೌಲ್ಯ ಮತ್ತು ಗೌರವ ಹೆಚ್ಚಾಗುತ್ತದೆ. ಹಣದ ಹರಿವು ಉತ್ತಮವಾಗಿರುತ್ತದೆ. ಅಲ್ಲದೆ ಹಲವು ಮೂಲಗಳಿಂದ ಹಣ ಹರಿದು ಬರಲಿದೆ.

malavya yoga 2025 this zodiac sign will get all the comforts from the position of venus

ಸಿಂಹ ರಾಶಿ

ಅಪರೂಪವಾಗಿ ರೂಪಗೊಂಡ ಎರಡು ರಾಜಯೋಗಗಳು ಸಿಂಹ ರಾಶಿಯವರಿಗೆ ಉತ್ತಮ ಫಲ ನೀಡಲಿವೆ. ಸಿಂಹ ರಾಶಿಯ ಐದನೇ ಮನೆಯಲ್ಲಿ ಲಕ್ಷ್ಮಿ ನಾರಾಯಣ ಮತ್ತು ಮಾಲವ್ಯ ರಾಜಯೋಗ ಸೃಷ್ಟಿಯಾಗಿದೆ. ಇದರಿಂದಾಗಿ ಮನೆಗೆ ಶುಭ ಸುದ್ದಿಗಳು ಬರಲಿದೆ. ಮನೆಯಲ್ಲಿ ಮದುವೆಯಂತಹ ಶುಭ ಕಾರ್ಯಗಳು ನಡೆಯುತ್ತವೆ. ಈ ಸಮಯದಲ್ಲಿ ನಿಮಗೆ ಆದಾಯ ಹೊಳೆಯಂತೆ ಹರಿದು ಬರುವುದು.

ಈ ಸಮಯದಲ್ಲಿ ನೀವು ಐಷಾರಾಮಿ ಜೀವನವನ್ನು ನಡೆಸುವಿರಿ. ಐಷಾರಾಮಿ ಸೌಲಭ್ಯಗಳು ಹೆಚ್ಚಾಗುತ್ತವೆ. ಕೆಲಸದಲ್ಲಿ ಅನುಕೂಲಕರ ವಾತಾವರಣ ಇರುತ್ತದೆ. ವೃತ್ತಿಯಲ್ಲಿ ಪ್ರಗತಿ ಖಚಿತವಾಗಿ ಆಗುವುದು. ಈ ಸಮಯದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಸ್ಪಷ್ಟವಾಗಿರಲಿ. ವ್ಯಾಪಾರಿಗಳು ಹೊಸ ಒಪ್ಪಂದ ಮಾಡಿಕೊಳ್ಳುವರು. ಪೋಷಕರೊಂದಿಗಿನ ಸಂಬಂಧ ಬಲವಾಗಿರುತ್ತದೆ.

malavya yoga 2025 this zodiac sign will get all the comforts from the position of venus

ಕುಂಭ ರಾಶಿ

ಕುಂಭ ರಾಶಿಯ ಎರಡನೇ ಮನೆಯಲ್ಲಿ ಲಕ್ಷ್ಮಿ ನಾರಾಯಣ ಮತ್ತು ಮಾಲವ್ಯ ರಾಜಯೋಗ ರೂಪುಗೊಂಡಿದೆ. ಇದು ಕುಂಭ ರಾಶಿಯ ವ್ಯಕ್ತಿತ್ವವನ್ನು ಸುಧಾರಿಸುತ್ತದೆ. ನಿರುದ್ಯೋಗಿಗಳಿಗೆ ಕೆಲಸ ಸಿಗುವುದು. ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆಯಲ್ಲಿ ಉತ್ತಮ ಸುಧಾರಣೆಯನ್ನು ತರಲಿದೆ.

ಕೆಲಸ ಮಾಡುವ ಜನರಿಗೆ ಪ್ರಗತಿಗೆ ಅನೇಕ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ವಿವಾಹಿತರು ಸಂತೋಷದ ದಾಂಪತ್ಯ ಜೀವನವನ್ನು ನಡೆಸುವರು. ಮದುವೆಯಾಗದವರಿಗೆ ಅಂದುಕೊಂಡ ಬಾಳ ಸಂಗಾತಿ ಸಿಗುವರು.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದು ಮಾತ್ರ ಆಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+