ಮಾಘ ಮಾಸ, ಜ.18ರಿಂದ 24 : ವಾರದ ಪಂಚಾಂಗ
ಪುಷ್ಯ ಮಾಸದ ಜ.18ರಿಂದ 24ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ.

ಜ.18.ರವಿವಾರ : ಜ್ಯೇಷ್ಠಾ, ಮೂಲಾ ನಕ್ಷತ್ರ. ಮುಖ್ಯ ಕೆಲಸದ ನಿಮಿತ್ಯ ದೂರ ಪ್ರಯಾಣ ಮಾಡಿದರೆ ಅಪಯಶಸ್ಸು.
ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6.
ಜ.19.ಸೋಮವಾರ : ಪೂರ್ವಷಾಢಾ. ಅಮವಾಸ್ಯೆ ರಾತ್ರಿ 10ಕ್ಕೆ ಆರಂಭ. ಮುಖ್ಯ ಕೆಲಸದ ನಿಮಿತ್ಯ ದೂರ ಪ್ರಯಾಣ ಮಾಡಿದರೆ ನಷ್ಟ.
ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.
ಜ.20.ಮಂಗಳವಾರ : ಉತ್ತರಷಾಢಾ. ಅಮವಾಸ್ಯೆ. ಸಂಜೆ 6.44ಕ್ಕೆ ಅಮವಾಸ್ಯೆ ಮುಕ್ತಾಯ. ಮುಖ್ಯ ಕೆಲಸದ ನಿಮಿತ್ಯ ದೂರ ಪ್ರಯಾಣ ಮಾಡಿದರೆ ಶುಭ.
ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.
ಜ.21.ಬುಧವಾರ : ಶ್ರವಣಾ. ಮಾಘ ಮಾಸ ಪ್ರಾರಂಭ. ಹೊಸಮನೆಗೆ ಮುಂಬಾಗಿಲು ಇಡಬಹುದು. ಮುಖ್ಯ ಕೆಲಸದ ನಿಮಿತ್ಯ ದೂರ ಪ್ರಯಾಣ ಮಾಡಿದರೆ ಲಾಭ.
ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.
ಜ.22.ಗುರುವಾರ : ಧನಿಷ್ಠಾ. ಹೊಸ ವಾಹನ ತೆಗೆದುಕೊಳ್ಳಬಹುದು. ಮುಖ್ಯ ಕೆಲಸದ ನಿಮಿತ್ಯ ದೂರ ಪ್ರಯಾಣ ಮಾಡಿದರೆ ಶುಭ.
ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.
ಜ.23.ಶುಕ್ರವಾರ : ಶತತಾರಾ. ಮುಖ್ಯ ಕೆಲಸದ ನಿಮಿತ್ಯ ದೂರ ಪ್ರಯಾಣ ಮಾಡಿದರೆ ಶುಭ.
ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.
ಜ.24.ಶನಿವಾರ : ಪೂರ್ವಾಭಾದ್ರಪದ. ಮುಖ್ಯ ಕೆಲಸದ ನಿಮಿತ್ಯ ದೂರ ಪ್ರಯಾಣ ಮಾಡಿದರೆ ಹಾನಿ.
ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.
ಯಮಗಂಡಕಾಲ ಮುಖ್ಯ ಕೆಲಸಗಳಿಗೆ ಉತ್ತಮವಲ್ಲ.
ಗುಳಿಕಕಾಲ ಎಲ್ಲ ಕೆಲಸ ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ.
ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯ ಕೆಲಸ ಆರಂಭಿಸಲು ಸೂಕ್ತವಲ್ಲ.
ಮದುವೆಗೆ ಶುಭ ಮುಹೂರ್ತ : ರವಿವಾರ, ಬುಧವಾರ, ಗುರುವಾರ, ಶನಿವಾರ.
ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತ : ಬುಧವಾರ, ಶುಕ್ರವಾರ.
ಈ ವಾರದ ಬುಧವಾರದಿಂದ ಹೊಸಮನೆಗೆ ಸಂಬಂಧಪಟ್ಟಂತೆ ಎಲ್ಲ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬಹುದು.
ಈ ವಾರದ ಗ್ರಹಗತಿ : ಕರ್ಕ: ಗುರು. ಕನ್ಯಾ : ಸ್ವಕ್ಷೇತ್ರದಲ್ಲಿ ರಾಹು. ವೃಶ್ಚಿಕ : ನೀಚಶನಿ. ಧನು: ಚಂದ್ರ (ನಂತರ ಮುಂದಿನ ರಾಶಿಗೆ ಚಂದ್ರ ಪ್ರವೇಶ) ಮಕರ : ರವಿ+ಶುಕ್ರ+ಬುಧ. ಕುಂಭ : ಕುಜ. ಮೀನ : ಸ್ವಕ್ಷೇತ್ರದಲ್ಲಿ ಕೇತು.












Click it and Unblock the Notifications