ಮಾಘ ಮಾಸದ ವಾರದ ಪಂಚಾಂಗ : ಫೆಬ್ರವರಿ 07ರಿಂದ 13
ಮಾಘ ಮಾಸದ ಫೆಬ್ರವರಿ 07ರಿಂದ 13ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ. [ರಾಹುಕಾಲ ಗುಳಿಕಕಾಲ ಯಾಕ್ರೀ ನೋಡಬೇಕು?]

ಫೆ.07. ರವಿವಾರ : ಉತ್ತರಾಷಾಢಾ ನಕ್ಷತ್ರ. ದೂರ ಪ್ರಯಾಣದಿಂದ ಸಂತಸ.
ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6.
ಫೆ.08. ಸೋಮವಾರ : ಶ್ರವಣಾ. ಅವರಾತ್ರಿ ಅಮವಾಸ್ಯೆ (ರವಿವಾರ ರಾತ್ರಿ 10-20ಕ್ಕೆ ಆರಂಭ. ಸೋಮವಾರ ರಾತ್ರಿ 8ಕ್ಕೆ ಮುಕ್ತಾಯ). ದೂರ ಪ್ರಯಾಣದಿಂದ ಯಶಸ್ಸು.
ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.
ಫೆ.09. ಮಂಗಳವಾರ : ಧನಿಷ್ಠಾ. ಮಾಘ ಮಾಸ ಶುಕ್ಲ ಪಕ್ಷ ಆರಂಭ. ದೂರ ಪ್ರಯಾಣದಿಂದ ಹಾನಿ.
ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.
ಫೆ.10. ಬುಧವಾರ : ಶತತಾರಾ. ದೂರ ಪ್ರಯಾಣದಿಂದ ಸಂತೋಷ.
ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.
ಫೆ.11. ಗುರುವಾರ : ಪೂರ್ವಾಭಾದ್ರಪದ. ದೂರ ಪ್ರಯಾಣದಿಂದ ನಷ್ಟ.
ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.
ಫೆ.12. ಶುಕ್ರವಾರ : ಉತ್ತರಾಭಾದ್ರಪದ. ದೂರ ಪ್ರಯಾಣದಿಂದ ಸಂತೋಷ.
ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.
ಫೆ.13. ಶನಿವಾರ : ರೇವತಿ ಮತ್ತು ಅಶ್ವಿನಿ. ಎರಡನೇ ಶನಿವಾರ. ಸರಕಾರಿ ರಜೆ. ದೂರ ಪ್ರಯಾಣದಿಂದ ಶುಭಫಲ.
ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.
ಯಮಗಂಡಕಾಲ ಮುಖ್ಯ ಕೆಲಸಗಳಿಗೆ ಉತ್ತಮವಲ್ಲ.
ಗುಳಿಕಕಾಲ ಎಲ್ಲ ಕೆಲಸ ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ.
ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯ ಕೆಲಸ ಆರಂಭಿಸಲು ಸೂಕ್ತವಲ್ಲ.
ಮದುವೆಗೆ ಶುಭ ಮುಹೂರ್ತ : ಗುರುವಾರ, ಶುಕ್ರವಾರ, ಶನಿವಾರ.
ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತ : ಬುಧವಾರ, ಶುಕ್ರವಾರ, ಶನಿವಾರ. ಈ ವಾರ ಹೊಸಮನೆಗೆ ಸಂಬಂಧಪಟ್ಟ ಯಾವುದೇ ಕೆಲಸ ಕಾರ್ಯ ಮಾಡಿಕೊಳ್ಳಬಹುದು.
ಈ ವಾರದ ಗ್ರಹಗತಿ : ಸಿಂಹ : ಗುರು+ರಾಹು. ತುಲಾ : ಮಂಗಳ. ವೃಶ್ಚಿಕ: ನೀಚಶನಿ. ಧನುಸ್ಸು: ಬುಧ+ಶುಕ್ರ. ಮಕರ : ರವಿ+ಚಂದ್ರ (ನಂತರ ಮುಂದಿನ ರಾಶಿಗೆ ಚಂದ್ರ ಪ್ರವೇಶ). ಕುಂಭ: ಕೇತು.












Click it and Unblock the Notifications