ಲಕ್ಷ್ಮೀ ನಾರಾಯಣ ಯೋಗ: 5 ರಾಶಿಯವರಿಗೆ ಸುವರ್ಣ ಸಮಯ! ಹೊಸ ಕೆಲಸ, ಉನ್ನತ ಸ್ಥಾನಮಾನದ ಅದೃಷ್ಟ
Lakshmi Narayan Rajyoga 2026: ವೈದಿಕ ಜ್ಯೋತಿಷ್ಯದಲ್ಲಿ, ಬುಧ ಮತ್ತು ಶುಕ್ರರ ಸಂಯೋಗವು ಅತ್ಯಂತ ಶುಭ. ಈ ಎರಡು ಗ್ರಹಗಳ ಸಂಯೋಗ ಲಕ್ಷ್ಮೀ ನಾರಾಯಣ ಯೋಗವನ್ನು ಸೃಷ್ಟಿಸುತ್ತದೆ. ಇದು ಸಂಪತ್ತು, ಸಮೃದ್ಧಿ, ಯಶಸ್ಸು ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ. ಪಂಚಾಂಗದ ಪ್ರಕಾರ, ಸೆಪ್ಟೆಂಬರ್ 26 ರಂದು, ಬುಧನು ಶುಕ್ರನ ರಾಶಿಯಾದ ತುಲಾ ರಾಶಿಗೆ ಪ್ರವೇಶ ಮಾಡುತ್ತಾನೆ. ಅಲ್ಲಿ ಶುಕ್ ಈಗಾಗಲೇ ಸಂಚಾರ ಮಾಡುತ್ತಾ ಇದ್ದಾನೆ. ಇದರಿಂದಾಗಿ ಬುಧ-ಶುಕ್ರ ಸಂಯೋಗ ಏರ್ಪಡುತ್ತದೆ. ಇದು ಶುಭಯೋಗವಾದ ಲಕ್ಷ್ಮೀ ನಾರಾಯಣ ಯೋಗವನ್ನು ಸೃಷ್ಟಿಸುತ್ತದೆ.
ಸಂಪತ್ತನ್ನು ನೀಡುವ ಶುಕ್ರನ ರಾಶಿಯಲ್ಲಿ ಶುಭ ಯೋಗ
ವ್ಯವಹಾರ, ಮಾತು ಮತ್ತು ಬುದ್ಧಿವಂತಿಕೆಯನ್ನು ನೀಡುವ ಬುಧ ಮತ್ತು ಸಂಪತ್ತನ್ನು ನೀಡುವ ಶುಕ್ರನ ಸಂಯೋಗದಿಂದ ರೂಪುಗೊಂಡ ಲಕ್ಷ್ಮಿ ನಾರಾಯಣ ಯೋಗವು ಯಾವಾಗಲೂ ಅದೃಷ್ಟವನ್ನು ಹೊತ್ತು ತರುತ್ತದೆ. ಈ ಬಾರಿ, ಈ ಯೋಗವು ಸಂಪತ್ತು ಮತ್ತು ಸಮೃದ್ಧಿಗೆ ಕಾರಣವಾದ ಗ್ರಹವಾದ ಶುಕ್ರನ ಅಧಿಪತ್ಯದ ರಾಶಿಯಾದ ತುಲಾ ರಾಶಿಯಲ್ಲಿಯೇ ರೂಪುಗೊಳ್ಳುತ್ತಿದೆ. ಹೀಗಾಗಿ ಲಕ್ಷ್ಮೀ ನಾರಾಯಣ ಯೋಗದ ಪ್ರಭಾವವನ್ನು ಹೆಚ್ಚಿಸುತ್ತದೆ. ಶುಕ್ರನು ನವೆಂಬರ್ 6, 2026 ರವರೆಗೆ ತುಲಾ ರಾಶಿಯಲ್ಲಿಯೇ ಇರುತ್ತಾನೆ. ಬುಧನು ಡಿಸೆಂಬರ್ 2 ರವರೆಗೆ ತುಲಾ ರಾಶಿಯಲ್ಲಿ ಇರುತ್ತಾನೆ. ಹೀಗಾಗಿ, ಲಕ್ಷ್ಮಿ ನಾರಾಯಣ ಯೋಗವು ನವೆಂಬರ್ 6, 2026 ರವರೆಗೆ ತುಲಾ ರಾಶಿಯಲ್ಲಿ ಸಕ್ರಿಯವಾಗಿರುವುದು. ಈ ಯೋಗವು ಐದು ರಾಶಿಯವರಿಗೆ ಅತ್ಯಂತ ಪ್ರಯೋಜನಕಾರಿಯಾಗಿರುವುದು.

ಲಕ್ಷ್ಮೀ ನಾರಾಯಣ ಯೋಗದಿಂದ ಅದೃಷ್ಟ ಪಡೆಯುವ ರಾಶಿಗಳು
ವೃಷಭ ರಾಶಿ (Taurus)
ವೃಷಭ ರಾಶಿಯವರು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳು ಬಗೆಹರಿಯಲಿವೆ. ಉದ್ಯೋಗದಲ್ಲಿರುವವರಿಗೆ ಮಹತ್ವದ ಅವಕಾಶ ಅಥವಾ ಜವಾಬ್ದಾರಿ ಸಿಗಬಹುದು. ಜೀವನವು ಹೊಸ ತಿರುವು ಪಡೆಯುವುದು. ನೀವು ಬಹಳ ದಿನಗಳಿಂದ ಕಾಯುತ್ತಿದ್ದ ಅನೇಕ ಸಕಾರಾತ್ಮಕ ಬದಲಾವಣೆಗಳು ಸಂಭವಿಸುವುದು. ಕೈ ತುಂಬಾ ಹಣ ಇರುವುದು. ಸಮಸ್ಯೆಗಳೆಲ್ಲಾ ಒಂದೊಂದಾಗಿಯೇ ಪರಿಹಾರವಾಗುವುದು.
ಸಿಂಹ ರಾಶಿ (Leo)
ಸಾರ್ವಜನಿಕ ಜೀವನದಲ್ಲಿ ಇರುವವರ ಗೌರವ ಹೆಚ್ಚಾಗುವುದು. ವ್ಯವಹಾರದಲ್ಲಿಯೂ ಲಾಭ ಹೆಚ್ಚಾಗುವುದು. ಹೊಸ ಕೆಲಸ ಶುರು ಮಾಡುವುದಕ್ಕೆ ಸಮಯ ಶುಭವಾಗಿದೆ. ಹೊಸ ಯೋಜನೆ ಕೈಗೆತ್ತಿಕೊಳ್ಳುವುದಕ್ಕೂ ಇದು ಒಳ್ಳೆಯ ಸಮಯ. ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಹಣಕ್ಕೆ ಕೊರತೆ ಇರುವುದಿಲ್ಲ.
ಕನ್ಯಾ ರಾಶಿ (Virgo)
ಕನ್ಯಾ ರಾಶಿಯವರ ಸಂವಹನ ಕೌಶಲ್ಯಗಳು ಸುಧಾರಿಸುವುದು. ಕೆಲಸದಲ್ಲಿ ನಿರ್ಲಕ್ಷ್ಯವನ್ನು ತಪ್ಸಿದರೆ ಪ್ರಯೋಜನವಾಗುವುದು. ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾದ ಭಯವೂ ಇರುವುದು. ನಿಮ್ಮ ಆಲೋಚನೆಗಳಲ್ಲಿ ಸ್ಪಷ್ಟವಾಗಿರಿ. ಹೊಸ ಕೆಲಸ ಸಿಗುವುದು. ವಿದ್ಯಾರ್ಥಿಗಳಿಗೂ ಸಮಯ ಅನುಕೂಲಕರವಾಗಿರುವುದು. ವ್ಯಾಪಾರ, ವ್ಯವಹಾರಗಳಲ್ಲಿ ಲಾಭವಾಗುವುದು.
ತುಲಾ ರಾಶಿ (Libra)
ಈ ಶುಭ ಯೋಗವು ತುಲಾ ರಾಶಿಯಲ್ಲಿಯೇ ರೂಪುಗೊಳ್ಳುತ್ತಿರುವುದರಿಂದ ಈ ರಾಶಿಯಲ್ಲಿ ಜನಿಸಿದವರಿಗೆ ಹೆಚ್ಚು ಲಾಭವಾಗುವುದು. ಬಾಕಿ ಇರುವ ಹಣ ಕೈ ಸೇರುವುದು. ಹೊಸ ಆಸ್ತಿಯನ್ನು ಖರೀದಿಸಬಹುದು. ಕನಸುಗಳು ನನಸಾಗುವುದು. ಅವಿವಾಹಿತರಿಗೆ ಮದುವೆ ಪ್ರಸ್ತಾಪ ಬರುವುದು. ಮದುವೆ ನಿಶ್ಚಯವೂ ಆಗುವುದು. ವೃತ್ತಿಯಲ್ಲಿ ಪ್ರಗತಿಯಾಗುವುದು. ಖ್ಯಾತಿ ಹೆಚ್ಚಾಗುವುದು.
ಮಕರ ರಾಶಿ (Capricorn):
ಈ ಸಮಯವು ಮಕರ ರಾಶಿಯವರ ಪ್ರಗತಿಗೆ ಹೊಸ ಮಾರ್ಗಗಳು ತೆರೆಯುವುದು. ಹೊಸ ಉದ್ಯೋಗ ಸಿಗುವುದು. ನೀವು ಇಷ್ಟಪಡುವ ಸ್ಥಳಕ್ಕೆ ವರ್ಗಾವಣೆಯಾಗುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಯಶಸ್ಸು ಸಿಗುವುದು. ಹಣದ ಸಮಸ್ಯೆ ನಿವಾರಣೆಯಾಗುವುದು.ಸಾಲದಿಂದ ಮುಕ್ತಿ ಸಿಗುವುದು.


Click it and Unblock the Notifications
