Get Updates
Get notified of breaking news, exclusive insights, and must-see stories!

Guru Gochar 2023: ಮೇಷ ರಾಶಿಯಲ್ಲಿ ಗುರು ಸಂಕ್ರಮಣ: ದ್ವಾದಶಿ ರಾಶಿಗಳ ಮೇಲೆ ಇದರ ಪರಿಣಾಮವೇನು?

ಅಕ್ಷಯ ತೃತೀಯ (ಏಪ್ರಿಲ್ 22)ದಂದು ಗುರುಗ್ರಹ ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸುತ್ತದೆ. ಗುರು ಗ್ರಹ ಪ್ರತಿ ವರ್ಷ ರಾಶಿಗಳನ್ನು ಬದಲಾಯಿಸುತ್ತದೆ. 12 ರಾಶಿಗಳನ್ನು ಪ್ರವೇಶಿಸಲು 12 ವರ್ಷ ತೆಗೆದುಕೊಳ್ಳುತ್ತದೆ. ಸದ್ಯ ಗುರು ಮೇಷ ರಾಶಿಯನ್ನು ಪ್ರವೇಶಿಸುತ್ತಿದೆ.

ಈ ದಿನದಂದು ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಿದರೂ ಅದು ಒಳ್ಳೆಯದಾಗುತ್ತದೆ. ಜೊತೆಗೆ ಅದು ದೀರ್ಘಕಾಲ ಉಳಿಯುತ್ತದೆ ಎಂದು ನಂಬಲಾಗುತ್ತದೆ. ಗುರುಗ್ರಹ ಏಪ್ರಿಲ್ 22, 2023 ರಂದು ಮೇಷ ರಾಶಿ ಪ್ರವೇಶಿಸುವ ಮೂಲಕ ತನ್ನ ಆಶೀರ್ವಾದವನ್ನು ನೀಡುತ್ತದೆ. ಹಾಗಾದರೆ ದ್ವಾದಶಿ ರಾಶಿಗಳ ಮೇಲೆ ಈ ಸಂಚಾರ ಯಾವ ಬದಲಾವಣೆಗಳನ್ನು ತರುತ್ತದೆ ಎಂದು ತಿಳಿಯೋಣ.

ಮೇಷ: ಭಯ, ಆತಂಕ ದೂರ

ಮೇಷ: ಭಯ, ಆತಂಕ ದೂರ

ಗುರುವಿನ ದೃಷ್ಟಿ ಮೇಷ ರಾಶಿಯ ಐದನೇ ಮತ್ತು ಒಂಬತ್ತನೇ ಮನೆಯ ಮೇಲೆ ಇರುತ್ತದೆ. ಮೇಷ ರಾಶಿಯ ಜನರು ಕಳೆದ ಒಂದು ವರ್ಷದಿಂದ ಸಾಕಷ್ಟು ಭಯ, ಅನುಮಾನ ಮತ್ತು ಆತಂಕವನ್ನು ಅನುಭವಿಸುತ್ತಿದ್ದರು. ಗುರುಗ್ರಹದ ಆಗಮನದಿಂದ ಇನ್ನುಮುಂದೆ ಶುಭವಾಗಲಿದೆ.

ಆದರೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಂತರ ರಾಹು ನಿಮ್ಮ ರಾಶಿಯಿಂದ ಹೊರಬಂದಾಗ ಮಾತ್ರ ನಕಾರಾತ್ಮಕ ಪರಿಣಾಮಗಳು ಸಂಪೂರ್ಣವಾಗಿ ಕಡಿಮೆಯಾಗುತ್ತವೆ. ಹಾಗೆಯೇ ನೀವು ಬಹಳ ದಿನಗಳಿಂದ ಕಾಯುತ್ತಿದ್ದ ಕಾರ್ಯಗಳು ನಡೆಯಲಿವೆ. ನೀವಂದುಕೊಂಡ ಕೆಲಸಗಳು ವೇಗ ಪಡೆದುಕೊಳ್ಳಲಿವೆ.

ಯಾವುದೇ ಕಾಲೇಜು, ಕೋರ್ಸ್ ಅಥವಾ ಯಾವುದೇ ಹೊಸ ಕಲಿಕೆಗೆ ಸೇರಲು ಇದು ಉತ್ತಮ ಸಮಯವಾಗಿದ್ದು ಯಶಸ್ಸು ನಿಮ್ಮದಾಗಲಿದೆ. ಮಕ್ಕಳಾಗದ ವಿವಾಹಿತರಿಗೆ ಮುಂದಿನ ಒಂದು ವರ್ಷ ಮಗುವನ್ನು ಹೊಂದಲು ಉತ್ತಮ ಸಮಯ.

ವೃಷಭ: ಹೂಡಿಕೆಗೆ ಉತ್ತಮ ಸಮಯ

ವೃಷಭ: ಹೂಡಿಕೆಗೆ ಉತ್ತಮ ಸಮಯ

ಈ ಸಂಚಾರ ವೃಷಭ ರಾಶಿಯ 12 ನೇ ಮನೆಯಲ್ಲಿ ಸಂಭವಿಸಲಿದೆ. ಇದು ವಿದೇಶ ಪ್ರಯಾಣ ಮಾಡಲು, ಆಸ್ತಿ/ಕಾರು ಖರೀದಿಸಲು ಉತ್ತಮ ಸಮಯ. ಈ ವೇಳೆ ಆರೋಗ್ಯ ಸುಧಾರಿಸಲು ಪ್ರಾರಂಭಿಸುತ್ತದೆ. ನೀವು ಸಾಕಷ್ಟು ಸಾಲವನ್ನು ತೆಗೆದುಕೊಂಡಿದ್ದರೆ, ಮರುಪಾವತಿಸಲು ಪ್ರಾರಂಭಿಸುತ್ತೀರಿ.

ಯೋಗ, ಆಯುರ್ವೇದ ಅಥವಾ ಜ್ಯೋತಿಷ್ಯ, ವಾಸ್ತು ಮುಂತಾದ ರಹಸ್ಯ ವಿಜ್ಞಾನಗಳನ್ನು ಕಲಿಯಲು ಮತ್ತು ಹೂಡಿಕೆ ಮಾಡಲು ಇದು ಉತ್ತಮ ಸಮಯ. ಪುರೋಹಿತರು ಅಥವಾ ಗುರುಗಳಿಗೆ ಸಹಾಯ ಮಾಡುವುದು ನಿಮ್ಮ ಗುರುವಿನ ಮೇಲಿನ ಗೌರವ ಬಲಪಡಿಸುತ್ತದೆ.

ಮಿಥುನ: ಪ್ರಯಾಣಕ್ಕೆ ಹೊಸ ಅವಕಾಶ

ಮಿಥುನ: ಪ್ರಯಾಣಕ್ಕೆ ಹೊಸ ಅವಕಾಶ

ಮೇಷ ರಾಶಿಯಲ್ಲಿ ಗುರು ಸಂಕ್ರಮಣ 11ನೇ ಮನೆಯಲ್ಲಿ ನಡೆಯುತ್ತದೆ. ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಇದು ಉತ್ತಮ ಸಮಯ. ಗುರುವು ನಿಮ್ಮ ಮೂರನೇ ಮನೆಯನ್ನು ನೋಡುತ್ತಿದ್ದಾನೆ. ಇದು ಪ್ರಯಾಣಕ್ಕೆ ಹೊಸ ಅವಕಾಶಗಳನ್ನು ನೀಡುತ್ತದೆ.

ಹೊಸ YouTube ಚಾನಲ್ ಅಥವಾ ಸಾಮಾಜಿಕ ಮಾಧ್ಯಮಕ್ಕೆ ಸಂಬಂಧಿಸಿದ ಕೆಲಸ ಪ್ರಾರಂಭಿಸಲು ಸಮಯ ಉತ್ತಮವಾಗಿದೆ.

ವಿವಾಹಿತರು ಮಗುವನ್ನು ಪಡೆಯಲು ಯೋಜಿಸುತ್ತಿದ್ದರೆ ಇದು ಒಳ್ಳೆಯ ಸಮಯ. ವೈವಾಹಿಕ ಸಂಬಂಧವನ್ನು ಪ್ರಾರಂಭಿಸಲು ಅವಿವಾಹಿತರು ಸಾಕಷ್ಟು ಪ್ರಸ್ತಾಪಗಳನ್ನು ಮಾಡುತ್ತಾರೆ. ಪ್ರಯತ್ನಕ್ಕೆ ತಕ್ಕ ಫಲವನ್ನೂ ಪಡೆಯುತ್ತಾರೆ.

ಕಟಕ: ಕೆಲಸದಲ್ಲಿ ಗೊಂದಲ ನಿವಾರಣೆ

ಕಟಕ: ಕೆಲಸದಲ್ಲಿ ಗೊಂದಲ ನಿವಾರಣೆ

ಕಟಕ ರಾಶಿಯವರಿಗೆ, ವ್ಯಾಪಾರ ಅಥವಾ ಕೆಲಸದ ಮನೆಯಾದ ಹತ್ತನೇ ಮನೆಯಲ್ಲಿ ಈ ಸಾಗಣೆ ಸಂಭವಿಸಲಿದೆ. ಕಳೆದ ಒಂದು ವರ್ಷದಲ್ಲಿ ನಿಮ್ಮ ಕೆಲಸದಲ್ಲಿ ಸಾಕಷ್ಟು ಗೊಂದಲಗಳಿತ್ತು. ಈಗ ಗುರುವಿನ ಆಗಮನದೊಂದಿಗೆ ಎರಡು ಸಾಧ್ಯತೆಗಳಿವೆ, ನೀವು ಎಲ್ಲಾ ಅಡೆತಡೆಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ. ಮತ್ತು ನಿಮ್ಮ ಕೆಲಸದಲ್ಲಿ ಸ್ವಲ್ಪ ಕ್ರಮಬದ್ಧತೆಯನ್ನು ತರಲು ಸಾಧ್ಯವಾಗುತ್ತದೆ. ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ಸಮಯ ಇದಾಗಿದೆ.

ಆಸ್ತಿ ಅಥವಾ ಕಾರು ಖರೀದಿಸಲು ಉತ್ತಮ ಅವಕಾಶಗಳಿವೆ. ನಿಮ್ಮ ಹೂಡಿಕೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿ. ಹೊಸ ಉದ್ಯೋಗ ಹುಡುಕಲು ಉತ್ತಮ ಸಮಯವಿದು. ಕುಟುಂಬಸ್ಥರ ಆರೋಗ್ಯ ಸುಧಾರಿಸಲಿದೆ.

ಸಿಂಹ: ತೀರ್ಥಯಾತ್ರೆಗೆ ಉತ್ತಮ ಸಮಯ

ಸಿಂಹ: ತೀರ್ಥಯಾತ್ರೆಗೆ ಉತ್ತಮ ಸಮಯ

ಸಿಂಹ ರಾಶಿಯವರಿಗೆ ಪ್ರಯಾಣಕ್ಕೆ ಉತ್ತಮ ಅವಕಾಶ ಸಿಗಲಿದೆ. ಆತ್ಮಾವಲೋಕನ ಮಾಡಿಕೊಳ್ಳುವಿರಿ. ನೀವು ಸ್ನಾತಕೋತ್ತರ ಪದವಿ ಮಾಡುತ್ತಿದ್ದರೆ ಮತ್ತು ನೀವು ಸಂಶೋಧನಾ ಕಾರ್ಯವನ್ನು ಮಾಡಲು ಬಯಸಿದರೆ ವಿದ್ಯಾರ್ಥಿಗಳಿಗೆ ಉತ್ತಮ ಸಮಯವಿದು.

ತೀರ್ಥಯಾತ್ರೆ ಅಥವಾ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವ ಅವಕಾಶ ಸಿಗಲಿದೆ. ನಿಮ್ಮ ಮಾರ್ಗದರ್ಶಕರನ್ನು ಭೇಟಿ ಮಾಡಿ ಮತ್ತು ನಿಮ್ಮ ಶಿಕ್ಷಕರು/ಮಾರ್ಗದರ್ಶಿಗಳನ್ನು ಗೌರವಿಸಿ.

ಕನ್ಯಾ: ವಿದೇಶ ಪ್ರವಾಸ ಸಾಧ್ಯತೆ

ಕನ್ಯಾ: ವಿದೇಶ ಪ್ರವಾಸ ಸಾಧ್ಯತೆ

ಕನ್ಯಾ ರಾಶಿಯವರ ಎಂಟನೇ ಮನೆಯಲ್ಲಿ ರಾಹು ಇದ್ದಾನೆ. ಇದರಿಂದ ಮುಂದಿನ ಒಂದು ವರ್ಷದಲ್ಲಿ ಬಹಳಷ್ಟು ಅನುಮಾನಗಳು ಮತ್ತು ಆತಂಕಗಳು ಉಂಟಾಗುತ್ತವೆ. ನಿಮ್ಮನ್ನು ನೀವು ಅನುಮಾನಿಸಬಹುದು. ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ನಿಮ್ಮ ಹಿರಿಯರ ಸಲಹೆಯನ್ನು ತೆಗೆದುಕೊಳ್ಳಿ.

ವಿದೇಶ ಪ್ರವಾಸಕ್ಕೆ ಉತ್ತಮ ಸಮಯ. ಕುಟುಂಬ ಸಂಬಂಧಗಳು ಸುಧಾರಿಸುತ್ತವೆ. ಆಸ್ತಿ ಅಥವಾ ವಾಹನ ಖರೀದಿ ಮಾಡಬಹುದು. ಪ್ರಾಣಾಯಾಮ ಮಾಡುವುದು ಉತ್ತಮ.

ತುಲಾ: ಆರ್ಥಿಕ ಸ್ಥಿತಿಗತಿ ಉತ್ತಮ

ತುಲಾ: ಆರ್ಥಿಕ ಸ್ಥಿತಿಗತಿ ಉತ್ತಮ

ತುಲಾ ರಾಶಿಯವರಿಗೆ ಈ ಸಂಚಾರ ಏಳನೇ ಮನೆಯಲ್ಲಿ ಸಂಭವಿಸಲಿದೆ. ಕಳೆದ ಒಂದು ವರ್ಷದಿಂದ ನೀವು ವಿಶೇಷವಾಗಿ ಭಾವನಾತ್ಮಕವಾಗಿ ಕೆಟ್ಟ ಸಮಯವನ್ನು ಎದುರಿಸಿದ್ದೀರಿ. ಈಗ ನೀವು ಸ್ವಲ್ಪ ಸಮಾಧಾನದಲ್ಲಿದ್ದೀರಿ. ಜೀವನ ಸಂಗಾತಿ ಅಥವಾ ವ್ಯಾಪಾರ ಸಹಚರರೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ.

ಚೆನ್ನಾಗಿ ಗಳಿಸಲು ಮತ್ತು ಆರ್ಥಿಕವಾಗಿ ಬೆಳೆಯಲು ಉತ್ತಮ ಅವಕಾಶಗಳು ಸಿಗುತ್ತವೆ. ಒಡಹುಟ್ಟಿದವರ ನಡುವಿನ ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ.

ವೃಶ್ಚಿಕ: ಕಾನೂನು ತೊಂದರೆಗಳಿಂದ ಮುಕ್ತಿ

ವೃಶ್ಚಿಕ: ಕಾನೂನು ತೊಂದರೆಗಳಿಂದ ಮುಕ್ತಿ

ವೃಶ್ಚಿಕ ರಾಶಿಯವರ ಆರನೇ ಮನೆಯಿಂದ ಈ ಸಂಚಾರ ಸಂಭವಿಸಲಿದೆ. ನೀವು ನಿಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ್ದರೆ, ಉದ್ಯೋಗವನ್ನು ಹುಡುಕಲು ಇದು ಉತ್ತಮ ಸಮಯ. ನೀವು ಕೆಲವು ಕಾನೂನು ತೊಂದರೆಗಳನ್ನು ಎದುರಿಸುತ್ತಿದ್ದರೆ, ನೀವು ಪರಿಹಾರ ಅಥವಾ ಮಾರ್ಗವನ್ನು ಪಡೆಯಬಹುದು.

ಪ್ರವಾಸ ಅಥವಾ ಆಧ್ಯಾತ್ಮಿಕ/ಧಾರ್ಮಿಕ ಪ್ರಯಾಣಕ್ಕೆ ಇದು ಉತ್ತಮ ಸಮಯ. ಆರೋಗ್ಯ ಸಮಸ್ಯೆಗಳಿದ್ದರೆ ಸರಿಯಾಗಿ ರೋಗನಿರ್ಣಯ ಮಾಡುವಿರಿ. ಅದರಂತೆ ವೈದ್ಯಕೀಯ ಸಲಹೆಗಳನ್ನು ಪಡೆಯುತ್ತೀರಿ.

ಧನು: ಉನ್ನತ ಶಿಕ್ಷಣಕ್ಕೆ ಉತ್ತಮ ಸಮಯ

ಧನು: ಉನ್ನತ ಶಿಕ್ಷಣಕ್ಕೆ ಉತ್ತಮ ಸಮಯ

ಧನು ರಾಶಿಯವರ ಐದನೇ ಮನೆಯಲ್ಲಿ ಈ ಸಂಚಾರ ಸಂಭವಿಸುತ್ತದೆ. ನಿಮ್ಮ ಧರ್ಮವನ್ನು ಬಲಪಡಿಸಲು ಉತ್ತಮ ಸಮಯ. ನೀವು ವಿದ್ಯಾರ್ಥಿಯಾಗಿದ್ದರೆ ಉನ್ನತ ಶಿಕ್ಷಣಕ್ಕೆ ಅರ್ಜಿ ಸಲ್ಲಿಸಬಹುದು. ಹೊಸ ಸ್ನೇಹಿತರನ್ನು ಪಡೆಯಲು ಉತ್ತಮ ಸಮಯ. ನಿಮ್ಮ ದೈಹಿಕ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿರಿ.

ಮಕರ: ಹೊಸ ಆಸ್ತಿ ಅಥವಾ ಕಾರು ಖರೀದಿ ಸಾಧ್ಯತೆ

ಮಕರ: ಹೊಸ ಆಸ್ತಿ ಅಥವಾ ಕಾರು ಖರೀದಿ ಸಾಧ್ಯತೆ

ಮಕರ ರಾಶಿಯವರ ನಾಲ್ಕನೇ ಮನೆಯಲ್ಲಿ ಈ ಸಂಕ್ರಮಣ ನಡೆಯುತ್ತದೆ. ಹೊಸ ಆಸ್ತಿ ಅಥವಾ ಕಾರು ಖರೀದಿಸಲು ಅಥವಾ ನಿಮ್ಮ ಕೆಲಸದಲ್ಲಿ ಲಾಭ ಪಡೆಯಲು ಇದು ಉತ್ತಮ ಸಮಯ.

ಜ್ಯೋತಿಷ್ಯ ಅಥವಾ ವಾಸ್ತು ಶಾಸ್ತ್ರವನ್ನು ಕಲಿಯಲು ಅಥವಾ ಯೋಗ ಶಾಸ್ತ್ರವನ್ನು ಕಲಿಯಲು ಉತ್ತಮ ಸಮಯ. ದೂರದ ಪ್ರಯಾಣಕ್ಕೆ ಸಮಯ ಅನುಕೂಲಕರವಾಗಿದೆ. ಪ್ರಸ್ತುತ ಉದ್ಯೋಗದಲ್ಲಿ ಉನ್ನತಿಗೆ ಅವಕಾಶಗಳು ಸಿಗಲಿವೆ.

ನಿಮ್ಮ ಮೇಲಿನ ನಂಬಿಕೆಯಿಂದ ಜವಬ್ದಾರಿಗಳು ಹೆಚ್ಚಾಗುತ್ತದೆ. ಕೆಲಸದಲ್ಲಿ ಒತ್ತಡ ಹೆಚ್ಚಾದರೂ ಅದನ್ನು ನಿಭಾಯಿಸುವ ಶಕ್ತಿ ನಿಮಗಿರುತ್ತದೆ.

ಕುಂಭ: ಸ್ವಂತ ಉದ್ಯೋಗ ಆಂರಭಿಸುವ ಸಮಯ

ಕುಂಭ: ಸ್ವಂತ ಉದ್ಯೋಗ ಆಂರಭಿಸುವ ಸಮಯ

ಕುಂಭ ರಾಶಿಯವರ ಮೂರನೇ ಮನೆಯಲ್ಲಿ ಈ ಸಂಚಾರ ಸಂಭವಿಸಲಿದೆ. ನೀವು ಯೂಟ್ಯೂಬ್ ಚಾನೆಲ್ ಅಥವಾ ಇನ್‌ಸ್ಟಾಗ್ರಾಮ್ ಪುಟದಂತಹ ಆನ್‌ಲೈನ್‌ನಲ್ಲಿ ಏನನ್ನಾದರೂ ಪ್ರಾರಂಭಿಸಲು ಬಯಸಿದರೆ, ಇದು ಉತ್ತಮ ಸಮಯ. ನಿಮ್ಮ ಕಿರಿಯ ಸಹೋದರರೊಂದಿಗೆ ಭಿನ್ನಾಭಿಪ್ರಾಯಗಳನ್ನು ದೂರ ಮಾಡಲು ಸಾಧ್ಯವಾಗುತ್ತದೆ.

ಅವಿವಾಹಿತರು ಸಂಗಾತಿಯನ್ನು ಹುಡುಕಬಹುದು. ಮದುವೆಯಾಗಲು ಇದು ಅನುಕೂಲಕರ ಸಮಯ. ಸ್ನೇಹಿತರು ಮತ್ತು ಕುಟುಂಬಸ್ಥರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರೆ ಮೈತ್ರಿ ಮಾಡಿಕೊಳ್ಳಿ.

ಮೀನ: ಹೊಸ ಉದ್ಯೋಗವಕಾಶ

ಮೀನ: ಹೊಸ ಉದ್ಯೋಗವಕಾಶ

ಮೀನ ರಾಶಿಯವರ ಎರಡನೇ ಮನೆಯಲ್ಲಿ ಈ ಸಂಚಾರ ನಡೆಯುತ್ತದೆ. ನಿಮ್ಮ ಆಹಾರಕ್ರಮದ ಬಗ್ಗೆ ಎಚ್ಚರ ವಹಿಸಿ. ನಿಮ್ಮ ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ, ಮುಂದೆ ನಿಮಗೆ ಉತ್ತಮ ಅವಕಾಶಗಳು ಸಿಗುತ್ತವೆ.

ಮುಂದಿನ ಎರಡು ವರ್ಷಗಳ ಕಾಲ ಪ್ರತಿದಿನ ವಿಷ್ಣು ಸಹಸ್ರನಾಮವನ್ನು ಪಠಿಸಿ ಅಥವಾ ಆಲಿಸಿ. ಎಲ್ಲವೂ ಒಳ್ಳೆಯದಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+