ಇನ್ನು 10 ದಿನಗಳಲ್ಲಿ ಹೆಚ್ಚುವುದು ಈ ರಾಶಿಯವರ ಸಿರಿ ಸಂಪತ್ತು, ಸಾಲದಿಂದ ಸಿಗುವುದು ಮುಕ್ತಿ, ಅಕ್ಟೋಬರ್‌ವರೆಗೆ ಅದೃಷ್ಟ
ಜ್ಯೋತಿಷ್ಯದಲ್ಲಿ, ಗುರುಗ್ರಹವನ್ನು ಅತ್ಯಂತ ಶುಭ ಮತ್ತು ಪ್ರಭಾವಶಾಲಿ ಗ್ರಹಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಜೂನ್ 2, 2026 ರಂದು ಗುರು ಕರ್ಕಾಟಕ ರಾಶಿಗೆ ಪ್ರವೇಶಿಸುತ್ತಾನೆ. ಇದು ವರ್ಷದ ಅತ್ಯಂತ ಮಹತ್ವದ ಗ್ರಹ ಸಂಚಾರಗಳಲ್ಲಿ ಒಂದಾಗಿದೆ. ಹಾಗಾಗಿ ಇದನ್ನು ಮಹಾಗೋಚರ ಎಂದು ಕರೆಯುತ್ತಾರೆ. ಗುರು ಗ್ರಹದ ಈ ಮಹಾ ಗೋಚರ ಅನೇಕರ ಜೀವನವನ್ನು ಬದಲಾಯಿಸುತ್ತದೆ.
ಗುರುವು ಸಂಪತ್ತು, ಜ್ಞಾನ, ಮದುವೆ, ಮಕ್ಕಳು, ಯಶಸ್ಸು,ಸಂತೋಷ ಮತ್ತು ಸಮೃದ್ಧಿಗೆ ಕಾರಣವಾಗುವ ಗ್ರಹ. ಆದ್ದರಿಂದ, ಗುರುವಿನ ಸಂಕ್ರಮಣವಾದಾಗಲೆಲ್ಲಾ ವ್ಯಕ್ತಿಯ ಜೀವನದ ಈ ಪ್ರಮುಖ ಕ್ಷೇತ್ರಗಳಲ್ಲಿ ಬದಲಾವಣೆಯಾಗುತ್ತವೆ. ಜೂನ್ 2, 2026 ರಂದು, ಗುರುವು ಮಿಥುನ ರಾಶಿಯಿಂದ ತನ್ನ ಉತ್ತುಂಗ ರಾಶಿಯಾದ ಕರ್ಕ ರಾಶಿಗೆ ಸಾಗುತ್ತಾನೆ. ನಂತರ ಪುಷ್ಯ ನಕ್ಷತ್ರಕ್ಕೂ ಪ್ರವೇಶಿಸುತ್ತದೆ. ಈ ಸಂಯೋಗವನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ.
5 ರಾಶಿಯವರಿಗೆ ಅಕ್ಟೋಬರ್ ವರೆಗೆ ಪ್ರಯೋಜನ:
ಗುರುವು ಅಕ್ಟೋಬರ್ 31, 2026 ರವರೆಗೆ ಕರ್ಕಾಟಕ ರಾಶಿಯಲ್ಲಿಯೇ ಇರುತ್ತಾನೆ. ಈ ಐದು ತಿಂಗಳುಗಳು ವೃತ್ತಿ, ಹಣ, ಸಂಬಂಧಗಳು ಇತ್ಯಾದಿಗಳ ವಿಷಯದಲ್ಲಿ ಐದು ರಾಶಿಯವರಿಗೆ ಅತ್ಯಂತ ಶುಭವಾಗಿರಲಿದೆ.
ಗುರು ಗೋಚರದಿಂದ ಅದೃಷ್ಟ ಪಡೆಯುವ ರಾಶಿಗಳು:

ವೃಷಭ ರಾಶಿ: ದೊಡ್ಡ ಯಶಸ್ಸು ಖಚಿತ. ಗುರುವಿನ ಸಂಚಾರವು ವೃಷಭ ರಾಶಿಯವರಿಗೆ ಅಪಾರ ಪ್ರಯೋಜನಗಳನ್ನು ತರಬಹುದು. ವೃತ್ತಿಜೀವನದಲ್ಲಿ ಗಮನಾರ್ಹ ಪ್ರಗತಿಯಾಗುವುದು. ನಿಮ್ಮ ಆರ್ಥಿಕ ಸ್ಥಿತಿ ಉಚ್ಛ್ರಾಯ ಮಟ್ಟಕ್ಕೆ ಏರುವುದು. ಆದಾಯವು ಗಮನಾರ್ಹವಾಗಿ ಹೆಚ್ಚಾಗಬಹುದು. ಉದ್ಯಮಿಗಳು ತಮ್ಮ ಕಠಿಣ ಪರಿಶ್ರಮದ ಪ್ರತಿಫಲವನ್ನು ಪಡೆಯುತ್ತಾರೆ. ಆರೋಗ್ಯವು ಸುಧಾರಿಸುತ್ತದೆ. ದೀರ್ಘಕಾಲದ ಕಾಯಿಲೆಗಳಿಂದ ಚೇತರಿಸಿಕೊಳ್ಳುವಿರಿ. ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.

ಕರ್ಕಾಟಕ ರಾಶಿ: ಹಣ ಮತ್ತು ಗೌರವ ಹೆಚ್ಚಾಗುತ್ತದೆ. ಗುರುವು ತನ್ನ ರಾಶಿಯನ್ನು ಬದಲಾಯಿಸುತ್ತಾ ಕರ್ಕಾಟಕ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಇದು ಗುರುವಿನ ಉತ್ತುಂಗ ರಾಶಿಯಾಗಿದೆ. ಹಾಗಾಗಿ ಈ ರಾಶಿಯ ಅಡಿಯಲ್ಲಿ ಜನಿಸಿದವರು ಅತ್ಯಂತ ಸಕಾರಾತ್ಮಕ ಪ್ರಯೋಜನಗಳನ್ನು ಅನುಭವಿಸುತ್ತಾರೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಉತ್ತಮವಾಗಿ ಕಾರ್ಯನಿರ್ವಹಿಸುವುದು ಸಾಧ್ಯವಾಗುತ್ತದೆ. ಗೌರವ ಹೆಚ್ಚಾಗುತ್ತದೆ. ಮನಸ್ಸಿನ ಶಾಂತಿ ಕಂಡುಕೊಳ್ಳುವಿರಿ. ವಿದ್ಯಾರ್ಥಿಗಳು ಗಮನಾರ್ಹ ಯಶಸ್ಸನ್ನು ಸಾಧಿಸಬಹುದು.

ಕನ್ಯಾ ರಾಶಿ: ಹೊಸ ಮೂಲದಿಂದ ಹಣ ಬರುತ್ತದೆ. ಗುರುವಿನ ಸಂಚಾರವು ಕನ್ಯಾರಾಶಿಯವರ ಆದಾಯವನ್ನು ಹೆಚ್ಚಿಸುತ್ತದೆ. ಬಹು ಮೂಲಗಳಿಂದ ಪ್ರಯೋಜನ ಪಡೆಯಬಹುದು. ಹೂಡಿಕೆಗಳು ಉತ್ತಮ ಲಾಭವನ್ನು ನೀಡಬಹುದು. ವೃತ್ತಿಯಲ್ಲಿ ಪ್ರಗತಿ ಸಾಧ್ಯ. ಈ ಸಮಯದಲ್ಲಿ ಉದ್ಯಮಿಗಳು ಗಣನೀಯ ಲಾಭ ಪಡೆಯುವರು. ವೈಯಕ್ತಿಕ ಜೀವನವೂ ಉತ್ತಮವಾಗಿರುತ್ತದೆ.

ಧನು ರಾಶಿ: ವೃತ್ತಿಜೀವನದಲ್ಲಿ ಮುನ್ನಡೆಯಲು ಅವಕಾಶ. ಧನು ರಾಶಿಯ ಅಧಿಪತಿ ಗುರು. ಹಾಗಾಗಿ ಇವರಿಗೆ ಜೂನ್ 2 ರಿಂದ ಅಕ್ಟೋಬರ್ 31 ರ ನಡುವೆ ವೃತ್ತಿಜೀವನದಲ್ಲಿ ಗಮನಾರ್ಹ ಪ್ರಗತಿಯ ಅವಕಾಶಗಳು ಒಲಿದು ಬರುವುದು. ಬಡ್ತಿ ಸಾಧ್ಯ. ವ್ಯವಹಾರವು ಅಭಿವೃದ್ಧಿ ಹೊಂದುತ್ತದೆ. ಉದ್ಯೋಗ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಪರಿಹಾರ ಸಿಗುತ್ತದೆ.

ಮೀನ ರಾಶಿ: ಅದೃಷ್ಟ ನಿಮ್ಮ ಕಡೆಗೆ ಇರುವುದು. ಗುರುವು ಮೀನ ರಾಶಿಯನ್ನು ಆಳುತ್ತಿದ್ದು, ಈ ರಾಶಿಯವರಿಗೆ ಹೆಚ್ಚಿನ ಲಾಭವಾಗುವುದು. ಮೀನ ರಾಶಿಯವರು ಪ್ರಸ್ತುತ ಶನಿಯ ಸಾಡೇ ಸಾತಿಯ ಎರಡನೇ ಹಂತವನ್ನು ಎದುರಿಸುತ್ತಿದ್ದಾರೆ. ಗುರು ಗೋಚರ ನಿಮ್ಮ ಕಷ್ಟಗಳಿಂದ ಪರಿಹಾರ ನೀಡುತ್ತದೆ. ಅದೃಷ್ಟ ನಿಮ್ಮ ಕಡೆಗೆ ಇದ್ದು, ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ಬಾಕಿ ಇರುವ ಯೋಜನೆಗಳು ಪೂರ್ಣಗೊಳ್ಳುತ್ತವೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಕೂಡಿ ಬರುವುದು. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುವುದು.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications