ಜ್ಯೋತಿಷ್ಯ: ಅದೃಷ್ಟ ರತ್ನಗಳ ಅಡ್ಡಪರಿಣಾಮಗಳು ಹೇಗೆ ಇರುತ್ತವೆ ಗೊತ್ತೆ?
ಎಲ್ಲರಿಗೂ ಅನ್ವಯ ಆಗುವ ವಿಚಾರವೊಂದನ್ನು ತಿಳಿಸುವುದು ನನ್ನ ಉದ್ದೇಶ. ಒಂದೇ ಪ್ರಶ್ನೆಯ ಬಗ್ಗೆ ಹಲವು ಮಂದಿ ವಿಚಾರಿಸುವುದರಿಂದ ಎಲ್ಲರಿಗೂ ಅನುಕೂಲ ಆಗಲಿ ಎಂದು ಈ ಲೇಖನ ಬರೆಯುತ್ತಿದ್ದೇನೆ.
ಜನ್ಮ ರಾಶಿಗೆ ಅನುಗುಣವಾಗಿ ಅದೃಷ್ಟ ರತ್ನವನ್ನು ಧರಿಸುವ ಪರಿಪಾಠ ಬಹಳ ಹಿಂದಿನಿಂದಲೂ ಇದೆ. ಆ ಪ್ರಕಾರ ಹಲವರು ನನ್ನ ಬಳಿ ಜ್ಯೋತಿಷ್ಯ ಕೇಳಿಕೊಂಡು ಬಂದಾಗ ಅವರವರ ರಾಶಿಗೆ ಆಗಿಬರುವ ಅದೃಷ್ಟ ರತ್ನದ ಬಗ್ಗೆ ಕೇಳಿತಿಳಿದುಕೊಳ್ಳುತ್ತಾರೆ. ಅದೆಷ್ಟು ಆತುರವಾಗಿ ಕೇಳುತ್ತಾರೆ ಅಂದರೆ, ಎಷ್ಟೋ ಬಾರಿ ನನ್ನ ಮುಂದಿನ ಮಾತುಗಳನ್ನು ಸಹ ಕೇಳಿಸಿಕೊಳ್ಳಲು ಸಿದ್ಧರಿರುವುದಿಲ್ಲ. ಎಷ್ಟು ಕ್ಯಾರೆಟ್ ನ ರತ್ನ ಧರಿಸಬೇಕು ಎಂದು ಕೂಡ ಕೇಳಿಸಿಕೊಳ್ಳುವುದಿಲ್ಲ.
ಏನಿದು ಜನ್ಮ ರಾಶಿಗೆ ಅನುಗುಣವಾಗಿ ಅದೃಷ್ಟ ರತ್ನ ಅಂದರೆ ಎಂಬ ಪ್ರಶ್ನೆ ನಿಮ್ಮ ಮನಸ್ಸಲ್ಲಿ ಮೂಡಬಹುದು.

ಮೇಷ- ವೃಶ್ಚಿಕಕ್ಕೆ ಹವಳ
ವೃಷಭ ತುಲಾಗೆ ವಜ್ರ
ಮಿಥುನ ಕನ್ಯಾಗೆ ಪಚ್ಚೆ
ಕರ್ಕಾಟಕಕ್ಕೆ ಮುತ್ತು
ಸಿಂಹಕ್ಕೆ ರೂಬಿ
ಧನುಸ್ಸು ಮೀನಕ್ಕೆ ಕನಕ ಪುಷ್ಯರಾಗ
ಮಕರ ಕುಂಭಕ್ಕೆ ನೀಲ
- ಇವೆಲ್ಲ ಜನ್ಮ ರಾಶಿಯ ಅನುಗುಣವಾಗಿ ಆಗಿಬರುವ ರತ್ನಗಳು.
ಆದರೆ, ಇದು ಎಲ್ಲ ಸಮಯಕ್ಕೂ ಅನ್ವಯ ಆಗುತ್ತದಾ? ಖಂಡಿತಾ ಇಲ್ಲ. ಜನ್ಮ ಜಾತಕವನ್ನು ಜ್ಯೋತಿಷಿಗಳಲ್ಲಿ ತೋರಿಸಬೇಕು. ಗ್ರಹಗಳ ಬಲಾಬಲವನ್ನು ಪರಿಶೀಲಿಸಿದ ನಂತರ ಯಾವ ಅದೃಷ್ಟ ರತ್ನವನ್ನು ಧರಿಸಿದರೆ ಉತ್ತಮ ಎಂಬುದು ಕೇಳಿ, ತಿಳಿದುಕೊಳ್ಳಬೇಕು.
ಒಂದು ವೇಳೆ ಹವಳ ಆಗಿಬರುವುದಿಲ್ಲ ಅಂತಾಗಿಯೂ ಆ ರತ್ನವನ್ನು ಧರಿಸಿದರೆ ಬಿ.ಪಿ., ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇನ್ನು ವಜ್ರ ಧರಿಸಿದ್ದು, ಅದು ಜಾತಕದ ಪ್ರಕಾರ ಆಗಿಬರುತ್ತಿಲ್ಲ ಎಂದಾದಲ್ಲಿ ದಂಪತಿ ಮಧ್ಯೆ ಕಲಹ, ಅಪಮಾನ, ವರ್ಚಸ್ಸಿಗೆ ಹಾನಿ, ವೃತ್ತಿರಂಗದಲ್ಲಿ ಹಿನ್ನಡೆ ಇತ್ಯಾದಿ ಸಂಭವಿಸುತ್ತದೆ. ಅದೇ ರೀತಿ ನೀಲ ಆಗಿಬರಲಿಲ್ಲ ಅಂದರೂ ಆ ರತ್ನ ಧರಿಸಿದ್ದಲ್ಲಿ ಅಷ್ಟ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.
ಹೀಗೆ ಯಾವ ರತ್ನವು ಆಗಿಬರವುದಿಲ್ಲವೋ ಅಂಥವನ್ನು ಧರಿಸಿದರೆ ನಕಾರಾತ್ಮಕ ಪರಿಣಾಮ ಎದುರಿಸಬೇಕಾಗುತ್ತದೆ. ಕೆಲವು ರತ್ನಗಳನ್ನು ಆಯಾ ದಶಾ ಕಾಲದ ಅವಧಿಯಲ್ಲಿ ಮಾತ್ರ ಧರಿಸಬೇಕು. ದುಬಾರಿ ರತ್ನ ಎಂಬ ಕಾರಣಕ್ಕೆ ಜೀವಮಾನವಿಡೀ ಧರಿಸುವಂತಿಲ್ಲ.
ಎಷ್ಟೋ ಮಂದಿಗೆ ಗೋಚಾರದಲ್ಲಿ ಉತ್ತಮ ಸಮಯ ಇರುತ್ತದೆ. ದಶಾ- ಭುಕ್ತಿ ಅತ್ಯುತ್ತಮವಾಗಿರುತ್ತದೆ. ಆದರೆ ಯಾವ ಕೆಲಸವೂ ಕೈಗೂಡುತ್ತಿರುವುದಿಲ್ಲ. ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಅದೆಂಥದ್ದೋ ಅನಾರೋಗ್ಯ ಸಮಸ್ಯೆ... ಹೀಗೆ ಕಾರಣ ಏನು ಎಂದು ನೋಡಿದರೆ ಒಂದೋ ಅವರಿಗೆ ಆಗಿಬಾರದ ರತ್ನ ಧರಿಸಿರುತ್ತಾರೆ. ಅಥವಾ ಆ ರತ್ನವು ಹಾನಿಯಾಗಿ, ನಕಾರಾತ್ಮಕ ಪರಿಣಾಮ ಬೀರುತ್ತಿರುತ್ತದೆ. ಅಂಥದ್ದು ಹಾಕಿರುತ್ತಾರೆ.
ಆದ್ದರಿಂದ ಒಂದೋ ನಿಮ್ಮ ಜಾತಕಕ್ಕೆ ಸೂಕ್ತವಾದ ಅದೃಷ್ಟ ರತ್ನವನ್ನು ಧರಿಸಿ. ಇಲ್ಲ, ಈಗಾಗಲೇ ಧರಿಸಿದ್ದಲ್ಲಿ ಎಷ್ಟು ಸಮಯ ಧರಿಸಬಹುದು ಎಂಬುದನ್ನು ಕೇಳಿ ತಿಳಿದುಕೊಳ್ಳಿ. ಇನ್ನು ಈ ಲೇಖನದ ಶುರುವಿನಲ್ಲಿ ಹೇಳಿರುವುದೆಲ್ಲ ಮುಖ್ಯ ರತ್ನಗಳ ಬಗ್ಗೆ. ಇವುಗಳಲ್ಲಿ ಉಪರತ್ನಗಳು ಕೂಡ ಇವೆ. ಅದು ನೀಡುವ ಫಲಿತಾಂಶ ಬಹುತೇಕ ಪರಿಣಾಮಕಾರಿ ಆಗಿರುತ್ತದೆ.
ಇಂಥ ಅದೃಷ್ಟ ರತ್ನ ಹಾಕಿದ ತಕ್ಷಣ ಮದುವೆ ಆಗಿಬಿಡುತ್ತದೆ, ಇಂಥದ್ದು ಧರಿಸಿದರೆ ಮಕ್ಕಳಾಗುತ್ತದೆ ಅಂತೆಲ್ಲ ಗೂಗಲ್ ಸರ್ಚ್ ಮಾಡಿಯೋ ಅಥವಾ ಯಾರೋ ಧರಿಸಿದವರಿಗೆ ಈ ಫಲ ಸಿಕ್ಕಿದೆ ಅಂದುಕೊಂಡು ಪೂರ್ವಾಪರ ಆಲೋಚಿಸದೆ ಪಾಲನೆ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಅದೃಷ್ಟ ರತ್ನ ಧರಿಸುವಾಗ ಎಚ್ಚರಿಕೆ, ಮಾರ್ಗದರ್ಶನ ಅತ್ಯಗತ್ಯ.
ಯಾವುದೇ ಮಾರ್ಗದರ್ಶನಕ್ಕೆ, ಸೂಕ್ತ ಜಾತಕ ವಿಶ್ಲೇಷಣೆಗೆ ವೈಯಕ್ತಿಕವಾಗಿ ಭೇಟಿ ಮಾಡಲು ಸಂಪರ್ಕ ಸಂಖ್ಯೆ 9886665656- 9886155755.












Click it and Unblock the Notifications