ಹೋಳಿ 2023: ಈ ಬಣ್ಣದಿಂದ ಹೋಳಿ ಆಡಿದರೆ ತುಂಬಾ ಮಂಗಳಕರ

ಈ ವರ್ಷ ಮಾರ್ಚ್ 8 ರಂದು ಹೋಳಿ ಆಚರಿಸಲಾಗುತ್ತದೆ. ನಿಮ್ಮ ರಾಶಿಚಕ್ರ ಚಿಹ್ನೆಗೆ ಯಾವ ಬಣ್ಣ ಮಂಗಳಕರವಾಗಿದೆ ಎಂಬುದನ್ನು ತಿಳಿಯಿರಿ.

ಪ್ರತಿಯೊಬ್ಬರೂ ಅದೃಷ್ಟದ ಸಂಖ್ಯೆಯನ್ನು ಹೊಂದಿರುವಂತೆ ಅದೃಷ್ಟದ ಬಣ್ಣವನ್ನೂ ಹೊಂದಿರುತ್ತಾರೆ. ಅದರ ಮೇಲೆ ಹೆಚ್ಚಾಗಿ ನಂಬಿಕೆ ಕೂಡ ಇಡಲಾಗುತ್ತದೆ. ಜೊತೆಗೆ ಅದೃಷ್ಟದ ಬಣ್ಣಕ್ಕೆ ಮೊದಲ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ. ಹಾಗಾದರೆ ಈ ಹೋಳಿ ಹಬ್ಬದಲ್ಲಿ ನೀವು ಬಳಸಬಹುದಾದ ಅದೃಷ್ಟದ ಬಣ್ಣ ಯಾವುದು? ಯಾವ ಬಣ್ಣ ನಿಮಗೆ ಹೆಚ್ಚು ಸೂಕ್ತ? ಇದಕ್ಕೆ ಉತ್ತರ ಇಲ್ಲಿದೆ.

ಹೋಳಿ ಹಬ್ಬವನ್ನು ಹೋಲಿಕಾ ದಹನದ ಎರಡನೇ ದಿನದಂದು ಆಚರಿಸಲಾಗುತ್ತದೆ. ಈ ವರ್ಷ ಮಾರ್ಚ್ 8 ರಂದು ಹೋಳಿ ಆಚರಿಸಲಾಗುತ್ತದೆ. ಇದನ್ನು ವಸಂತೋತ್ಸವ ಎಂದು ವಿವಿಧ ಬಣ್ಣಗಳಿಂದ ಆಚರಿಸಲಾಗುತ್ತದೆ. ಹೋಳಿಯನ್ನು ವಸಂತ ಮತ್ತು ಋತುವಿನ ಬದಲಾವಣೆಯ ಆರಂಭವೆಂದು ಹೇಳಲಾಗುತ್ತದೆ. ಹೋಳಿ ಹಬ್ಬದ ಸಂದರ್ಭದಲ್ಲಿ ಕಾಶಿಯಲ್ಲಿರುವ ಚೌಸತಿ ದೇವಿಯನ್ನು ಭೇಟಿ ಮಾಡುವ ಸಂಪ್ರದಾಯವೂ ಇದೆ. ಈ ದಿನದಂದು ದೇವಿಯನ್ನು ಅದ್ಧೂರಿಯಾಗಿ ಅಲಂಕರಿಸಲಾಗುತ್ತದೆ.

ಈ ವಿಶೇಷ ಸಂದರ್ಭದಲ್ಲಿ ನಿಮ್ಮ ರಾಶಿಚಕ್ರ ಚಿಹ್ನೆಯ ಪ್ರಕಾರ ಹೋಳಿ ಆಡಲು ಯಾವ ಬಣ್ಣಗಳು ಹೆಚ್ಚು ಮಂಗಳಕರವೆಂದು ತಿಳಿಯಿರಿ.

ಮೇಷ: ಹೋಳಿ ಹಬ್ಬಕ್ಕೆ ಯಾವ ಬಣ್ಣ ಮಂಗಳಕರ?

ಮೇಷ: ಹೋಳಿ ಹಬ್ಬಕ್ಕೆ ಯಾವ ಬಣ್ಣ ಮಂಗಳಕರ?

ಮೇಷ ರಾಶಿಯವರು ಹೋಳಿ ಆಡಲು ಯಾವ ಬಣ್ಣವನ್ನಾದರೂ ಬಳಕೆ ಮಾಡಬಹುದು. ಆದರೆ ನೀವು ಬಳಕೆ ಮಾಡುವ ಬಣ್ಣದಿಂದ ಚರ್ಮ ಹಾಳಾಗದಂತೆ ನೋಡಿಕೊಳ್ಳಿ. ಹೋಳಿ ಆಡಿ ಸ್ನಾನ ಮಾಡಿದ ನಂತರ ಬೆಳ್ಳಿ ಅಥವಾ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ. ನಂತರ ನಿಮ್ಮ ನೆರೆಹೊರೆಯಲ್ಲಿ ವಾಸಿಸುವ ಹಿರಿಯರ ಆಶೀರ್ವಾದ ಪಡೆಯಿರಿ. ಇದರೊಂದಿಗೆ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಹೆಚ್ಚು ನೀರು ಕುಡಿಯಿರಿ.

ವೃಷಭ: ಹೋಳಿ ಹಬ್ಬಕ್ಕೆ ಯಾವ ಬಣ್ಣ ಮಂಗಳಕರ?

ವೃಷಭ: ಹೋಳಿ ಹಬ್ಬಕ್ಕೆ ಯಾವ ಬಣ್ಣ ಮಂಗಳಕರ?

ವೃಷಭ ರಾಶಿಯವರು ಕೆಂಪು ಗುಲಾಲ್ ಜೊತೆ ಹೋಳಿ ಆಡಬಹುದು. ಸ್ನಾನದ ನಂತರ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿ. ನಿಮ್ಮ ಕುಲದೈವವನ್ನು ಕೈಮುಗಿದು ನಮಸ್ಕರಿಸಿ. ಅಲ್ಲದೆ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಪಿಸ್ತಾದಿಂದ ಮಾಡಿದ ಸಿಹಿತಿಂಡಿಗಳನ್ನು ಸೇವಿಸಿ. ಸಾಧ್ಯವಾದರೆ ಅದನ್ನು ನೆರೆಹೊರೆಯವರಿಗೂ ನೀಡಿ.

ಮಿಥುನ: ಹೋಳಿ ಹಬ್ಬಕ್ಕೆ ಯಾವ ಬಣ್ಣ ಮಂಗಳಕರ?

ಮಿಥುನ: ಹೋಳಿ ಹಬ್ಬಕ್ಕೆ ಯಾವ ಬಣ್ಣ ಮಂಗಳಕರ?

ಮಿಥುನ ರಾಶಿಯವರು ತಿಳಿ ಹಸಿರು ಬಣ್ಣದೊಂದಿಗೆ ಹೋಳಿ ಆಡಲು ಸೂಕ್ತವಾಗಿದೆ. ಸ್ನಾನದ ನಂತರ, ನಿಮ್ಮ ತಂದೆಯ ಪಾದಗಳನ್ನು ಸ್ಪರ್ಶಿಸಿ ಮತ್ತು ಅವರ ಆಶೀರ್ವಾದವನ್ನು ಪಡೆಯಿರಿ. ಅಲ್ಲದೆ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಸಿಹಿತಿಂಡಿಗಳನ್ನು ಸೇವಿಸಿ. ಮೊದಲು ಅದನ್ನು ದುರ್ಗಾ ದೇವಿಗೆ ಅರ್ಪಿಸಿ. ಸಾಧ್ಯವಾದರೆ ಅದನ್ನು ದೇವಾಲಯದ ಹೊರಗೆ ಕುಳಿತಿರುವ ಜನರಿಗೂ ವಿತರಿಸಿ.

ಕಟಕ: ಹೋಳಿ ಹಬ್ಬಕ್ಕೆ ಯಾವ ಬಣ್ಣ ಮಂಗಳಕರ?

ಕಟಕ: ಹೋಳಿ ಹಬ್ಬಕ್ಕೆ ಯಾವ ಬಣ್ಣ ಮಂಗಳಕರ?

ಹಸಿರು ಬಣ್ಣದೊಂದಿಗೆ ಹೋಳಿ ಆಡಬಹುದು. ಈ ಬಣ್ಣ ನಿಮಗೆ ಮಂಗಳಕರವಾಗಿದೆ. ಸ್ನಾನದ ನಂತರ, ಹಸಿರು ಬಟ್ಟೆಗಳನ್ನು ಧರಿಸಿ. ನಿಮ್ಮ ಸ್ನೇಹಿತರಿಗೆ ಹೋಳಿ ಶುಭಾಶಯ ತಿಳಿಸಿ. ಮನಸ್ತಾಪವಿದ್ದರೆ ಇಂದೇ ಇತ್ಯಾರ್ಥ ಮಾಡಿಕೊಳ್ಳಿ. ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಅನಾಥರಿಗೆ ಅನ್ನ ದಾನ ಮಾಡಿ. ದೇವರ ಆಶೀರ್ವಾದವನ್ನು ಪಡೆಯಿರಿ.

ಸಿಂಹ: ಹೋಳಿ ಹಬ್ಬಕ್ಕೆ ಯಾವ ಬಣ್ಣ ಮಂಗಳಕರ?

ಸಿಂಹ: ಹೋಳಿ ಹಬ್ಬಕ್ಕೆ ಯಾವ ಬಣ್ಣ ಮಂಗಳಕರ?

ಈ ದಿನ ಸಿಂಹ ರಾಶಿಯವರು ಗುಲಾಬಿ ಬಣ್ಣದೊಂದಿಗೆ ಹೋಳಿ ಆಡಬಹುದು. ಈ ದಿನ ಗುಲಾಬಿ ಬಣ್ಣ ನಿಮಗೆ ಶುಭ ತರಲಿದೆ. ಆದರೆ ಅದು ನಿಮ್ಮ ತ್ವಚೆಯನ್ನು ಹಾಳು ಮಾಡದಂತೆ ಎಚ್ಚರ ವಹಿಸಿ. ಸ್ನಾನದ ನಂತರ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಿ. ನಿಮ್ಮ ತಾಯಿಯ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆಯಿರಿ. ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಹೆಚ್ಚು ನೀರು ಕುಡಿಯಿರಿ.

ಕನ್ಯಾ: ಹೋಳಿ ಹಬ್ಬಕ್ಕೆ ಯಾವ ಬಣ್ಣ ಮಂಗಳಕರ?

ಕನ್ಯಾ: ಹೋಳಿ ಹಬ್ಬಕ್ಕೆ ಯಾವ ಬಣ್ಣ ಮಂಗಳಕರ?

ಕಿತ್ತಳೆ ಬಣ್ಣದೊಂದಿಗೆ ಈ ದಿನ ಕನ್ಯಾ ರಾಶಿಯವರು ಹೋಳಿ ಆಡಬಹುದು. ಈ ಬಣ್ಣ ನಿಮಗೆ ಉತ್ತಮ ಫಲವನ್ನು ನೀಡುತ್ತದೆ. ಸ್ನಾನದ ನಂತರ, ಕಿತ್ತಳೆ ಬಣ್ಣದ ಬಟ್ಟೆಗಳನ್ನು ಧರಿಸಿ. ಮನೆಯಲ್ಲಿ ನಿಮ್ಮ ಕಿರಿಯರಿಗೆ ಏನನ್ನಾದರೂ ಉಡುಗೊರೆಯಾಗಿ ನೀಡಿ. ಅಲ್ಲದೆ, ನಿಮ್ಮ ಉತ್ತಮ ಆರೋಗ್ಯಕ್ಕಾಗಿ ನಿಮ್ಮ ನೆಚ್ಚಿನ ಸಿಹಿತಿಂಡಿಗಳನ್ನು ದಾನ ಮಾಡಿ.

ತುಲಾ: ಹೋಳಿ ಹಬ್ಬಕ್ಕೆ ಯಾವ ಬಣ್ಣ ಮಂಗಳಕರ?

ತುಲಾ: ಹೋಳಿ ಹಬ್ಬಕ್ಕೆ ಯಾವ ಬಣ್ಣ ಮಂಗಳಕರ?

ತುಲಾ ರಾಶಿಯವರು ಕೆಂಪು ಬಣ್ಣದಿಂದ ಹೋಳಿ ಆಡಬಹುದು. ಈ ಬಣ್ಣ ನಿಮಗೆ ಹೆಚ್ಚು ಉಪಯುಕ್ತವಾಗಿದೆ. ಸ್ನಾನದ ನಂತರ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿ. ಮನೆಯಲ್ಲಿ ದೇವರ ಮುಂದೆ ನಿಂತು ಕೊಂಚ ಹೊತ್ತು ಪ್ರಾರ್ಥನೆ ಮಾಡಿ. ದೇವರಿಗೆ ಹಾಲು ಮತ್ತು ಅನ್ನದಿಂದ ಮಾಡಿದ ಖೀರ್ ಅನ್ನು ನೈವೇದ್ಯ ಮಾಡಿ. ಸಾಧ್ಯವಾದರೆ ಅದನ್ನು ಬಡ ಮಕ್ಕಳಿಗೆ ವಿತರಿಸಿ.

ವೃಶ್ಚಿಕ: ಹೋಳಿ ಹಬ್ಬಕ್ಕೆ ಯಾವ ಬಣ್ಣ ಮಂಗಳಕರ?

ವೃಶ್ಚಿಕ: ಹೋಳಿ ಹಬ್ಬಕ್ಕೆ ಯಾವ ಬಣ್ಣ ಮಂಗಳಕರ?

ವೃಶ್ಚಿಕ ರಾಶಿ ನೀಲಿ ಬಣ್ಣ ಹೆಚ್ಚು ಲಾಭ ತರುತ್ತದೆ. ಹೀಗಾಗಿ ಈ ದಿನ ನೀಲಿ ಬಣ್ಣದಿಂದ ಹೋಳಿ ಆಡಿ. ಸ್ನಾನ ಮಾಡಿದ ನಂತರ ನೀಲಿ ಬಟ್ಟೆಗಳನ್ನು ಧರಿಸಿ ಮತ್ತು ಅದರಲ್ಲಿ ಸ್ವಲ್ಪ ಸುಗಂಧ ದ್ರವ್ಯವನ್ನು ಹೊಂದಿರುವ ಸ್ವಚ್ಛವಾದ ಕರವಸ್ತ್ರವನ್ನು ಇರಿಸಿ. ಅಲ್ಲದೆ, ನಿಮ್ಮ ಉತ್ತಮ ಆರೋಗ್ಯಕ್ಕಾಗಿ ದೇವರನ್ನು ಪ್ರಾರ್ಥಿಸಿ. ದೇವಾಲಯದಲ್ಲಿ ಶ್ರೀಗಂಧದ ಸುಗಂಧದ ಧೂಪವನ್ನು ಹಚ್ಚಿ.

ಧನು: ಹೋಳಿ ಹಬ್ಬಕ್ಕೆ ಯಾವ ಬಣ್ಣ ಮಂಗಳಕರ?

ಧನು: ಹೋಳಿ ಹಬ್ಬಕ್ಕೆ ಯಾವ ಬಣ್ಣ ಮಂಗಳಕರ?

ಕಂದು ಬಣ್ಣದಿಂದ ಧನು ರಾಶಿಯವರು ಈ ದಿನ ಹೋಳಿ ಆಡಬಹುದು. ಈ ಬಣ್ಣ ನಿಮಗೆ ಮಂಗಳಕರವಾಗಿದೆ. ಹೋಳಿ ಆಡಲು ನಿಮ್ಮ ಶತ್ರುಗಳನ್ನು ಆಹ್ವಾನಿಸಿ. ಉತ್ತಮ ಬಾಂಧವ್ಯ ಇರುತ್ತದೆ. ಸ್ನಾನ ಮಾಡಿದ ನಂತರ ಕಂದು ಬಣ್ಣದ ಬಟ್ಟೆಗಳನ್ನು ಧರಿಸಿ. ಇಡೀ ಮನೆಯಲ್ಲಿ ಕರ್ಪೂರದ ಹೊಗೆಯನ್ನು ಹರಡಿ. ಅಲ್ಲದೆ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಹೆಚ್ಚು ನೀರು ಕುಡಿಯಿರಿ. ಸಂಜೆ ದೇವಾಲಯದಲ್ಲಿ 5 ಕರ್ಪೂರದ ದೀಪಗಳನ್ನು ಬೆಳಗಿಸಿ.

ಮಕರ: ಹೋಳಿ ಹಬ್ಬಕ್ಕೆ ಯಾವ ಬಣ್ಣ ಮಂಗಳಕರ?

ಮಕರ: ಹೋಳಿ ಹಬ್ಬಕ್ಕೆ ಯಾವ ಬಣ್ಣ ಮಂಗಳಕರ?

ನೇರಳೆ ಬಣ್ಣದಿಂದ ಹೋಳಿ ಆಡಿ. ಇದು ನಿಮಗೆ ಸಂತೋಷವನ್ನು ತರುತ್ತದೆ. ನಿಮ್ಮ ಸ್ನಾನ ಮಾಡಿದ ನಂತರ ನೇರಳೆ ಬಟ್ಟೆಗಳನ್ನು ಧರಿಸಿ. ಮನೆಯಲ್ಲಿ ಅಣ್ಣ ಇದ್ದರೆ ಇಲ್ಲದಿದ್ದರೆ ಅಣ್ಣನಂಥವರ ಆಶೀರ್ವಾದ ಪಡೆಯಿರಿ. ಇದರೊಂದಿಗೆ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಹೆಚ್ಚು ನೀರು ಕುಡಿಯಿರಿ. ದೇವರಿಗೆ ನೈವೇದ್ಯಗಾಗಿ ಸಿಹಿಯನ್ನು ಅರ್ಪಿಸಿ.

ಕುಂಭ: ಹೋಳಿ ಹಬ್ಬಕ್ಕೆ ಯಾವ ಬಣ್ಣ ಮಂಗಳಕರ?

ಕುಂಭ: ಹೋಳಿ ಹಬ್ಬಕ್ಕೆ ಯಾವ ಬಣ್ಣ ಮಂಗಳಕರ?

ಕುಂಭ ರಾಶಿ ಗೋಲ್ಡನ್ ಹಳದಿ ಬಣ್ಣ ಉತ್ತಮವಾಗಿದೆ. ಈ ಬಣ್ಣದಲ್ಲಿ ಹೋಳಿಯನ್ನು ಆಡಿ. ಹೋಳಿ ಆಡಿದ ನಂತರ, ಕೆಲವು ಸಿಹಿತಿಂಡಿಗಳನ್ನು ತಿನ್ನಿರಿ ಮತ್ತು ಇತರರಿಗೂ ತಿನ್ನಿಸಿ. ಸ್ನೇನದ ಬಳಿಕ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ. ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಮೊಸರಿನಿಂದ ಮಾಡಿದ ಆಹಾರವನ್ನು ದಾನ ಮಾಡಿ.

ಮೀನ: ಹೋಳಿ ಹಬ್ಬಕ್ಕೆ ಯಾವ ಬಣ್ಣ ಮಂಗಳಕರ?

ಮೀನ: ಹೋಳಿ ಹಬ್ಬಕ್ಕೆ ಯಾವ ಬಣ್ಣ ಮಂಗಳಕರ?

ಕೇಸರಿ ಬಣ್ಣದಿಂದ ಹೋಳಿ ಆಡಿ. ಹೋಳಿ ಆಡಿದ ನಂತರ ಸ್ನಾನ ಮಾಡಿ ಹಳದಿ ಅಥವಾ ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಿ ತುಳಸಿ ಗಿಡವನ್ನು ಸ್ಪರ್ಶಿಸಿ. ಇದರೊಂದಿಗೆ, ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಹೆಚ್ಚು ನೀರು ಕುಡಿಯಿರಿ. ಸಿಹಿತಿಂಡಿಯನ್ನು ಮಾಡಿ ಮತ್ತು ತುಳಸಿ ಎಲೆಗಳನ್ನು ಸೇರಿಸಿ, ದೇವರಿಗೆ ನೈವೇದ್ಯ ಮಾಡಿದ ನಂತರ ಪ್ರಸಾದವನ್ನು ಎಲ್ಲರಿಗೂ ವಿತರಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+