Guru Vakra 2024: ನವರಾತ್ರಿಯಲ್ಲಿ ಗುರು ಹಿಮ್ಮುಖ ಸಂಚಾರ: ಈ ರಾಶಿಗಿದೆ ದುರ್ಗೆಯ ಆಶೀರ್ವಾದ
ನವಗ್ರಹಗಳಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ಇದರಲ್ಲಿ ಗುರು ಗ್ರಹವನ್ನು ದೇವತೆಗಳ ಗುರು ಎಂದು ಪರಿಗಣಿಸಲಾಗುತ್ತದೆ. ಈ ಗ್ರಹ ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತದೆ. ಹಾಗೆಯೇ ಹಿಮ್ಮುಖವಾಗಿ ಸಂಚಾರ ಮಾಡುತ್ತದೆ. ಗುರುಗ್ರಹ ಅಕ್ಟೋಬರ್ 9ರಂದು ಬೆಳಿಗ್ಗೆ 10:01ಕ್ಕೆ ವೃಷಭ ರಾಶಿಯಲ್ಲಿ ಹಿಮ್ಮೆಟ್ಟಲಿದೆ. ಮುಂದಿನ ವರ್ಷ ಫೆಬ್ರವರಿ 4ರವರೆಗೆ ಗುರು ಅದೇ ಸ್ಥಾನದಲ್ಲಿ ವೃಷಭ ರಾಶಿಯಲ್ಲಿ ಸಾಗುತ್ತದೆ.
ಗುರುವಿನ ಈ ಸಂಚಾರ ಕೆಲ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ವ್ಯಾಪಾರಸ್ಥರು ನವರಾತ್ರಿ ಮತ್ತು ದೀಪಾವಳಿಯ ಹಬ್ಬದ ಋತುವಿನಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಅಲ್ಲದೆ ಉದ್ಯೋಗದಲ್ಲಿ ಖ್ಯಾತಿ ಹೊಂದುತ್ತಾರೆ. ತಾಯಿ ದುರ್ಗೆಯ ಆಶೀರ್ವಾದದಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲಿದೆ. ಹಾಗಾದರೆ ಗುರು ಗ್ರಹ ಹಿಮ್ಮುಖ ಸಂಚಾರದಿಂದಾಗಿ ಯಾವ ರಾಶಿಯವರು ಅದೃಷ್ಟವಂತರಾಗಲಿದ್ದಾರೆಂದು ತಿಳಿಯೋಣ.

ವೃಷಭ ರಾಶಿ
ಗುರುಗ್ರಹದ ಹಿಮ್ಮುಖ ಚಲನೆ ವೃಷಭ ರಾಶಿಯ ಜನರಿಗೆ ಆರ್ಥಿಕ ಲಾಭವನ್ನು ತರುತ್ತದೆ. ವೃಷಭ ರಾಶಿಯವರ ಆದಾಯದ ಮೂಲಗಳು ಹೆಚ್ಚಾಗುತ್ತವೆ. ಆದಾಯದಲ್ಲಿ ಹಠಾತ್ ಹೆಚ್ಚಳ ಕಂಡುಬರಲಿದೆ. ನಿಮ್ಮ ವೃತ್ತಿಜೀವನದಲ್ಲಿಯೂ ನೀವು ಪ್ರಗತಿಯನ್ನು ಪಡೆಯುವ ಸಾಧ್ಯತೆಗಳಿವೆ.
ವೃಷಭ ರಾಶಿಯ ಉದ್ಯಮಿಗಳಿಗೆ ಇದು ಸುವರ್ಣ ಕಾಲವಾಗಿದೆ. ಶ್ರಮಕ್ಕೆ ತಕ್ಕ ಲಾಭ ಸಿಗಲಿದ್ದು, ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಂಬಂಧಗಳು ಬಲಗೊಳ್ಳುತ್ತವೆ. ಉದ್ಯೋಗಸ್ಥರಿಗೆ ಕೆಲಸದ ಸ್ಥಳದಲ್ಲಿ ಬಡ್ತಿಯ ಅವಕಾಶಗಳು ಸಿಗುತ್ತವೆ. ನಿಮ್ಮ ಕಾರ್ಯಶೈಲಿಯೂ ಸುಧಾರಿಸುತ್ತದೆ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಗುರು ಹಿಮ್ಮುಖವಾಗಿರುವುದರಿಂದ ಅದೃಷ್ಟ ಹೆಚ್ಚಾಗಲಿದೆ. ಅಲ್ಲದೆ ಜೀವನದಲ್ಲಿ ಸಂತೋಷ ಮನೆ ಮಾಡಲಿದೆ. ಉದ್ಯೋಗದಲ್ಲಿ ಬದಲಾವಣೆ ಆಗಲಿದ್ದು ಇದರಿಂದ ಬಡ್ತಿ ಸಿಗಲಿದೆ. ವೃತ್ತಿಜೀವನದಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತೀರಿ.
ಈ ಸಮಯದಲ್ಲಿ ನೀವು ವಿದೇಶ ಪ್ರವಾಸಕ್ಕೆ ಹೋಗುವ ಸಾಧ್ಯತೆಗಳಿವೆ. ದೊಡ್ಡ ವ್ಯವಹಾರವನ್ನು ಮಾಡಬಹುದು. ಪ್ರೀತಿ ಮತ್ತು ಸಂಬಂಧಗಳ ವಿಷಯದಲ್ಲಿ ಮಂಗಳಕರ ಯೋಗವಿದೆ. ಜೀವನ ಸಂಗಾತಿಗಾಗಿ ನೀವು ಹುಡುಕಾಟ ನಡೆಸುತ್ತಿದ್ದರೆ ಅದು ಈ ಸಮಯದಲ್ಲಿ ಪೂರ್ಣಗೊಳ್ಳಬಹುದು.

ಕರ್ಕಾಟಕ ರಾಶಿ
ಕರ್ಕ ರಾಶಿಯವರಿಗೆ ಗುರುವಿನ ಹಿಮ್ಮುಖ ಸಂಚಾರ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ. ಉದ್ಯಮಿಗಳು ಹೂಡಿಕೆಯಿಂದ ಲಾಭ ಪಡೆಯಬಹುದು. ನೀವು ಕುಟುಂಬದಿಂದ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಎಲ್ಲಾ ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ. ನಿಮ್ಮ ಜೀವನದಲ್ಲಿ ಕೆಲವು ಹೊಸ ಯೋಜನೆಗಳು ಪ್ರಾರಂಭವಾಗಬಹುದು.
ಈ ಸಮಯದಲ್ಲಿ ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಸಂತೋಷ ಮತ್ತು ಸಮೃದ್ಧಿ ಕೂಡ ಹೆಚ್ಚಾಗಬಹುದು. ನೀವು ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ಹಬ್ಬ ಹರಿದಿನಗಳಲ್ಲಿ ಚಿನ್ನ, ಬೆಳ್ಳಿ, ಆಭರಣಗಳ ವ್ಯಾಪಾರ ಮಾಡುವವರಿಗೆ ಒಳ್ಳೆಯ ಹಣ ಸಿಗುತ್ತದೆ.

ಧನು ರಾಶಿ
ನಿಮ್ಮ ಒಳ್ಳೆಯ ದಿನಗಳು ಗುರು ಹಿಮ್ಮೆಟ್ಟುವಿಕೆಯೊಂದಿಗೆ ಪ್ರಾರಂಭವಾಗುತ್ತವೆ. ಆದಾಯದಲ್ಲಿ ಹಠಾತ್ ಹೆಚ್ಚಳದ ಸಾಧ್ಯತೆಗಳಿವೆ. ಈ ಸಮಯದಲ್ಲಿ ಆಸ್ತಿ, ವಾಹನ, ಮನೆ ಖರೀದಿಸುವ ಅವಕಾಶಗಳು ಸಿಗಲಿವೆ. ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಮಯವಿದು. ಜೀವನ ಸಂತೋಷದಿಂದ ಕೂಡಿರುತ್ತದೆ. ನಿಮ್ಮ ಜೀವನದಲ್ಲಿ ಸಂತೋಷದ ಪ್ರವಾಹ ಇರುತ್ತದೆ.

ಮೀನ ರಾಶಿ
ಮೀನ ರಾಶಿಯ ಜನರು ಮೀನ ರಾಶಿಯಲ್ಲಿ ಗುರುವಿನ ಹಿಮ್ಮೆಟ್ಟುವಿಕೆಯಿಂದ ಲಾಭ ಪಡೆಯಲಿದ್ದಾರೆ. ಮೊದಲನೆಯದಾಗಿ ಆದಾಯದಲ್ಲಿ ಹೆಚ್ಚಳವಾಗಲಿದೆ. ಅದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ವ್ಯವಹಾರದಲ್ಲಿ ಸವಾಲುಗಳಿರುತ್ತವೆ. ಆದರೆ ಈ ಸವಾಲುಗಳು ಪ್ರಗತಿಯ ಹಾದಿಯನ್ನು ಸುಗಮಗೊಳಿಸುತ್ತದೆ.
ಧಾರ್ಮಿಕ ಕಾರ್ಯಗಳಲ್ಲಿ ಖರ್ಚು ಹೆಚ್ಚಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ನೀವು ಸಾಲ ಇತ್ಯಾದಿಗಳಿಂದ ಮುಕ್ತರಾಗುವ ಸಾಧ್ಯತೆ ಇದೆ. ನಿಮ್ಮ ಜೀವನದಲ್ಲಿ ಸಂತೋಷದ ಅವಕಾಶಗಳಿವೆ. ಅಲ್ಲದೆ ಸಂಪತ್ತು ಹೆಚ್ಚಾಗುವ ಸಾಧ್ಯತೆಗಳು ಇವೆ.











Click it and Unblock the Notifications