ಅಕ್ಟೋಬರ್ ಕೊನೆಗೆ ಈ ರಾಶಿಯವರಿಗೆ ಜಾಕ್ ಪಾಟ್: ಅದೃಷ್ಟದ ಪರ್ವಕಾಲ, ಸಕ್ಸಸ್ ಗ್ಯಾರಂಟಿ
Guru Ketu Yuti 2026 : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗುರು ಗ್ರಹ ಸಂಪತ್ತು, ಬುದ್ಧಿವಂತಿಕೆ, ಬೆಳವಣಿಗೆ ಮತ್ತು ಅದೃಷ್ಟದ ಅಂಶ. ಗುರು ಧನು ಮತ್ತು ಮೀನ ರಾಶಿಯ ಅಧಿಪತಿ. ಗುರು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುವುದಕ್ಕೆ ಸುಮಾರು ಒಂದು ವರ್ಷ ತೆಗೆದುಕೊಳ್ಳುತ್ತಾನೆ. ಗುರುವಿನ ರಾಶಿ ಬದಲಾವಣೆ ಬಹಳ ಮುಖ್ವಾಗಿರುತ್ತದೆ.
Guru Ketu Yuti 2026: ಯಾವಾಗ ಆಗೋದು?
ಗುರು ಗ್ರಹ ಈಗ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತಿದೆ. ಅಕ್ಟೋಬರ್ 31ಕ್ಕೆ ರಾಶಿ ಬದಲಾಯಿಸುವ ಮೂಲಕ ಸಿಂಹ ರಾಶಿಯನ್ನು ಪ್ರವೇಶಿಸುತ್ತದೆ. ಹೀಗಾಗಿ ಈಗಾಗಲೇ ಸಿಂಹ ರಾಶಿಯಲ್ಲಿ ಸಂಚರಿಸುತ್ತಿರುವ ಕೇತುವಿನೊಂದಿಗೆ ಗುರುವಿನ ಸಂಯೋಗವಾಗುತ್ತದೆ. ಕೇತು ಒಂದು ಛಾಯಾಗ್ರಹ. ಕೇತು ಆಧ್ಯಾತ್ಮಿಕತೆ, ಅನಿರೀಕ್ಷಿತ ಬದಲಾವಣೆ ಮತ್ತು ನಿಗೂಢ ಘಟನೆಯೊಂದಿಗೆ ಸಂಬಂಧ ಹೊಂದಿರುವ ಗ್ರಹ. ಗುರು ( jupiter) ಮತ್ತು ಕೇತುವಿನ ಸಂಯೋಜನೆಯು ಎಲ್ಲಾ 12 ರಾಶಿಯವರ ಮೇಲೆ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತದೆ.

ಗುರು ಕೇತು ಸಂಯೋಗದಿಂದ ನಾಲ್ಕು ರಾಶಿಯವರು ಆರ್ಥಿಕ ಮತ್ತು ವೃತ್ತಿಪರ ಪ್ರಗತಿಯನ್ನು ನೋಡುವ ಸಾಧ್ಯತೆಯಿದೆ. ಆ ರಾಶಿಗಳು ಯಾವುವು ಎಂದು ನೋಡೋಣ.
ಮೇಷ ರಾಶಿ (Aries) :
ಮೇಷ ರಾಶಿಯವರ 5ನೇ ಮನೆಯಲ್ಲಿ ಗುರು ಮತ್ತು ಕೇತುವಿನ ಈ ಸಂಯೋಜನೆ ನಡೆಯುತ್ತದೆ. ಇದರ ಫಲವಾಗಿ ತುಂಬಾ ಸಮಯದಿಂದ ನಿಮ್ಮ ಕೈ ಸೇರದೆ ಬಾಕಿ ಉಳಿದಿರುವ ಹಣ ನಿಮ್ಮದಾಗುತ್ತದೆ. ಆದಾಯದ (income) ಹೊಸ ಮೂಲ ಹುಟ್ಟಿಕೊಳ್ಳುವುದು. ಹೊಸ ಅವಕಾಶ ಸೃಷ್ಟಿಸಲು ಅನುಕೂಲಕರ ವಾತಾವರಣ ಒದಗಿ ಬರುವುದು. ಕೆಲಸದಲ್ಲಿ ಇರುವವರಿಗೆ ಹೆಚ್ಚುವರಿ ಜವಾಬ್ದಾರಿ ಸಿಗುವುದು. ಬಡ್ತಿ ಅಥವಾ ಸಂಬಳ ಹೆಚ್ಚಾಗುವ ಅವಕಾಶಗಳೂ ಇರಬಹುದು. ಉದ್ಯಮಿಗಳು ಹೊಸ ಡೀಲ್ ಸಹಿ ಮಾಡುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಒಳ್ಳೆಯ ಲಾಭವಾಗುವುದು. ಹಣಕ್ಕೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳುವಾಗ ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಆತುರಕ್ಕೆ ಬಿದ್ದು ಹೂಡಿಕೆ ಮಾಡಲು ಹೋಗಬೇಡಿ.
ಕರ್ಕಾಟಕ ರಾಶಿ (Cancer):
ಕರ್ಕಾಟಕ ರಾಶಿಯವರ 2ನೇ ಮನೆಯಲ್ಲಿ ಈ ಗ್ರಹಗಳ ಸಂಯೋಜನೆ ನಡೆಯುತ್ತದೆ. ಈ ಮನೆ ಕುಟುಂಬ, ಉಳಿತಾಯ ಮತ್ತು ಮಾತಿಗೆ ಸಂಬಂಧಿಸಿದ್ದಾಗಿದೆ. ಆದಾಯ ಹೆಚ್ಚಿಸಿಕೊಳ್ಳುವ ಅವಕಾಶ ಸಿಗುವುದು. ಆದಾಯ ಹೆಚ್ಚಳದ ಜೊತೆಗೆ ಉಳಿತಾಯ ಕೂಡಾ ಸಾಧ್ಯವಾಗುವುದು. ಕಚೇರಿಯಲ್ಲಿ ನಿಮ್ಮ ಮಾತಿಗೆ, ಕೆಲಸಕ್ಕೆ ಮನ್ನಣೆ ಸಿಗುವುದು. ಹೂಡಿಕೆಯಿಂದ ಹೆಚ್ಚಿನ ಲಾಭವಾಗುವುದು. ಹೊಸ ಹೂಡಿಕೆಗೆ ಕೈ ಹಾಕುವ ಮೊದಲು ಸಾಧಕ ಬಾಧಕಗಳ ಬಗ್ಗೆ ಸರಿಯಾಗಿ ಆಲೋಚನೆ ಮಾಡಿಕೊಳ್ಳಿ.
ಸಿಂಹ ರಾಶಿ (Leo) :
ಸಿಂಹ ರಾಶಿಯಲ್ಲಿಯೇ ಗುರು ಮತ್ತು ಕೇತುವಿನ ಸಂಯೋಜನೆ ಆಗುತ್ತಿದೆ. ಹಾಗಾಗಿ ನಿಮ್ಮ ರಾಶಿಯವರಿಗೆ ಈ ಅವಧಿ ಬಹಳ ಮುಖ್ಯ. ಅನಿರೀಕ್ಷಿತ ಆದಾಯದ ಮೂಲ ಹುಟ್ಟಿಕೊಳ್ಳುವುದು. ವೃತ್ತಿಪರ ಉದ್ಯಮಗಳಲ್ಲಿ ಪ್ರಗತಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ವ್ಯವಹಾರ ಮಾಡುವವರಿಗೆ ಈ ಅವಧಿಯಲ್ಲಿ ದೊಡ್ಡ ಮಟ್ಟದ ಲಾಭವಾಗುವುದು, ವ್ಯವಹಾರ ವಿಸ್ತರಣೆಗೆ ಕೈ ಹಾಕಬಹುದು. ಬಡ್ತಿ, ಸಂಬಳ ಹೆಚ್ಚಳ ಮುಂತಾದ ಸಕಾರಾತ್ಮಕ ಬದಲಾವಣೆ ಉದ್ಯೋಗಿಗಳ ಜೀವನದಲ್ಲಿ ಆಗಬಹುದು. ಬಹಳ ಕಾಲದಿಂದ ಬಾಕಿ ಇರುವ ಹಣ ಮತ್ತೆ ಕೈ ಸೇರುವುದು. ಪ್ರಭಾವಿ ವ್ಯಕ್ತಿಗಳ ಪರಿಚಯ ವ್ಯವಹಾರದ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಧನು ರಾಶಿ (Sagittarius):
ಧನು ರಾಶಿಯವರ 9ನೇ ಮನೆಯಲ್ಲಿ ಗುರು-ಕೇತು ಸಂಯೋಜನೆ ನಡೆಯುತ್ತದೆ. ಈ ಮನೆಯು ಅದೃಷ್ಟ, ಉನ್ನತ ಶಿಕ್ಷಣ, ಆಧ್ಯಾತ್ಮಿಕತೆ ಮತ್ತು ದೂರದ ಪ್ರಯಾಣಕ್ಕೆ ಸಂಬಂಧಿಸಿದೆ. ಆದ್ದರಿಂದ, ಹೊಸ ಅವಕಾಶ ಪಡೆಯಲು ಮತ್ತು ವ್ಯಾಪಾರ ಬೆಳವಣಿಗೆಗೆ ಇದು ಅನುಕೂಲಕರ ಸಮಯವಾಗಿದೆ. ಉದ್ಯಮಿಗಳು ನಿರೀಕ್ಷೆಗಿಂತ ಉತ್ತಮ ಆದಾಯವನ್ನು ಪಡೆಯಬಹುದು. ಆರ್ಥಿಕ ಸಮಸ್ಯೆ ಎದುರಿಸುತ್ತಿರುವವರು ತಮ್ಮ ಆದಾಯ ಹೆಚ್ಚಿಸಲು ಹೊಸ ಮಾರ್ಗ ಕಂಡುಕೊಳ್ಳಬಹುದು. ಉದ್ಯೋಗಾಕಾಂಕ್ಷಿಗಳು ತಮ್ಮ ಅರ್ಹತೆಗೆ ಅನುಗುಣವಾಗಿ ಅವಕಾಶ ಪಡೆಯುವರು.


Click it and Unblock the Notifications
