ಈ ದಿನಾಂಕಗಳಲ್ಲಿ ಜನಿಸಿದ ಹುಡುಗಿಯರು ಅದೃಷ್ಟ ಲಕ್ಷ್ಮಿಯರಂತೆ: ಹುಟ್ಟಿದ ಹಾಗೂ ಕೊಟ್ಟ ಮನೆಗೆ ಇವರಿಂದಲೇ ಕೀರ್ತಿ
ಜ್ಯೋತಿಷ್ಯದಲ್ಲಿ ಹುಟ್ಟಿದ ದಿನಾಂಕ, ಸಮಯವನ್ನು ಆಧರಿಸಿ ರಾಶಿ ನಕ್ಷತ್ರವನ್ನು ಗುರುತಿಸಲಾಗುತ್ತದೆ. ರಾಶಿ ನಕ್ಷತ್ರಕ್ಕೆ ಅನುಗುಣವಾಗಿ ಭವಿಷ್ಯ ಹೇಳಲಾಗುತ್ತದೆ. ಅಲ್ಲದೆ, ಗುಣ ಸ್ವಭಾವವನ್ನು ಸಹ ನಿರ್ಧರಿಸಲಾಗುತ್ತದೆ. ಹಾಗೆಯೇ ಸಂಖ್ಯಾಶಾಸ್ತ್ರದಲ್ಲಿ, ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಮೇಲೆ ಭವಿಷ್ಯ, ಗುಣ ಸ್ವಭಾವಗಳನ್ನು ಹೇಳಲಾಗುತ್ತದೆ.
ಜನ್ಮ ದಿನಾಂಕದಲ್ಲಿರುವ ಒಟ್ಟು ಸಂಖ್ಯೆಗಳನ್ನು ಕೂಡಿಸಿ ಮೂಲಾಂಕ ಅಥವಾ ಧಾತು ಸಂಖ್ಯೆ ಅಥವಾ ರಾಡಿಕ್ಸ್ ಅನ್ನು ನಿರ್ಧರಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ ರಾಶಿಗಳಿಗೆ ಹೇಗೆ ಅಧಿಪತಿ ಗ್ರಹ ಇರುತ್ತದೆಯೋ ಹಾಗೆಯೇ ಸಂಖ್ಯಾಶಾಸ್ತ್ರೀಯ ನಂಬಿಕೆಗಳ ಪ್ರಕಾರ, ಪ್ರತಿಯೊಂದು ಮೂಲಾಂಕಕ್ಕೂ ಅಧಿಪತ್ಯದ ಗ್ರಹ ಇರುತ್ತದೆ.

ಈ ಪ್ರಕಾರ ನೋಡುವುದಾದರೆ ಮೂಲಾಂಕ 6 ಅನ್ನು ಪ್ರೀತಿ, ಸೌಂದರ್ಯ, ಮೋಡಿ, ಸೃಜನಶೀಲತೆ ಮತ್ತು ಸಂತೋಷಕ್ಕೆ ಸಂಬಂಧಿಸಿದ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ. ಯಾವುದೇ ತಿಂಗಳ 6, 15 ಅಥವಾ 24ರಂದು ಜನಿಸಿದ ಹುಡುಗಿಯರ ಮೂಲಾಂಕ 6 ಆಗಿರುತ್ತದೆ. ಸಂಖ್ಯಾಶಾಸ್ತ್ರದಲ್ಲಿ, ಈ ಸಂಖ್ಯೆಯು ಶುಕ್ರ ಗ್ರಹದೊಂದಿಗೆ ಸಂಬಂಧಿಸಿದೆ.
ಅತ್ಯಂತ ಆಕರ್ಷಕ ವ್ಯಕ್ತಿತ್ವ
ಸಂಖ್ಯಾಶಾಸ್ತ್ರದ ಪ್ರಕಾರ, 6ನೇ ಸಂಖ್ಯೆ ಹೊಂದಿರುವ ಹುಡುಗಿಯರು ಆಕರ್ಷಕ ವ್ಯಕ್ತಿತ್ವ ಲಕ್ಷಣಗಳನ್ನು ಹೊಂದಿರುತ್ತಾರೆ ಎನ್ನಲಾಗಿದೆ. ಅವರು ತಮ್ಮ ಬಟ್ಟೆ, ಮೇಕಪ್ ಮತ್ತು ಜೀವನ ಶೈಲಿಯನ್ನು ಅಚ್ಚುಕಟ್ಟಾಗಿ ಮತ್ತು ಸುಂದರವಾಗಿ ಇಟ್ಟುಕೊಳ್ಳುತ್ತಾರೆ. ಇವರು ಎದುರಿಗಿರುವವರನ್ನು ಬಹಳ ಬೇಗನೇ ತಮ್ಮತ್ತ ಆಕರ್ಷಿಸಿ ಬಿಡುತ್ತಾರೆ. ಅವರ ಮಾತನಾಡುವ ರೀತಿ ಬೇರೆಯವರ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ.
ಪತಿಯ ಪಾಲಿಗೆ ಸೌಭಾಗ್ಯ ಲಕ್ಷ್ಮೀ
6ನೇ ಸಂಖ್ಯೆ ಪ್ರೀತಿ ಮತ್ತು ಸಂಬಂಧಗಳೊಂದಿಗೆ ನಂಟು ಹೊಂದಿರುವಂಥದ್ದು. ಈ ಸಂಖ್ಯೆಯ ಹುಡುಗಿಯರು ಭಾವನಾತ್ಮಕವಾಗಿರುತ್ತಾರೆ ಮತ್ತು ಸಂಬಂಧಗಳಿಗೆ ತುಂಬಾ ಬೆಲೆ ಕೊಡುತ್ತಾರೆ. ತಮ್ಮ ಸಂಬಂಧಗಳ ಬಗ್ಗೆ ಪ್ರಾಮಾಣಿಕವಾಗಿರುತ್ತಾರೆ. ಸಂಗಾತಿಯ ಪಾಲಿಗೆ ಇವರು ಅದೃಷ್ಟ ದೇವತೆಗಳಂತೆ. ಅತ್ತೆ ಮನೆಯ ಪಾಲಿಗೆ ಸೌಭಾಗ್ಯ ಲಕ್ಷ್ಮೀ ಎಂದೇ ಹೇಳಲಾಗುತ್ತದೆ.
ಇವರು ಮುಂದಿಟ್ಟು ಮಾಡುವ ಕೆಲಸ ಕಾರ್ಯಗಳಲ್ಲಿ ಸೋಲು ಬಹಳ ವಿರಳವಂತೆ. ಈ ದಿನಾಂಕದಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ತಮ್ಮ ಸಂಗಾತಿಯ ಭಾವನೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತಾರೆ. ಸಂಗಾತಿಯ ಅಗತ್ಯಗಳ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ತನ್ನ ಪತಿಯ ಸಂತೋಷಕ್ಕಾಗಿ ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ.
ಸಂಬಂಧದಲ್ಲಿ ಮನಸ್ತಾಪ ಬಂದಾಗ, ತಕರಾರು ಆದಾಗ ಜಗಳವಾಡುವ ಪ್ರವೃತ್ತಿ ಇವರಲ್ಲಿ ಇರುವುದಿಲ್ಲ. ಬದಲಿಗೆ ಪರಸ್ಪರ ತಿಳುವಳಿಕೆ ಮತ್ತು ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಾರೆ. ಸಂಖ್ಯಾಶಾಸ್ತ್ರ ಲೆಕ್ಕಾಚಾರದ ಪ್ರಕಾರ ಕುಟುಂಬ ಮತ್ತು ಸಂಗಾತಿಯ ಬಗ್ಗೆ ಸಹಕಾರ ಮನೋಭಾವವನ್ನು ಇವರು ಹೊಂದಿರುತ್ತಾರೆ.
ಇವರದ್ದು ಶಿಸ್ತಿನ ಜೀವನ
ನಂಬರ್ 6 ಶುಕ್ರ ಗ್ರಹಕ್ಕೆ ಸಂಬಂಧಿಸಿದ ಸಂಖ್ಯೆಯಾಗಿರುವುದರಿಂದ ಇದು ಕಲೆ, ಸಂಗೀತ, ಫ್ಯಾಷನ್, ಅಲಂಕಾರ ಮತ್ತು ಸೌಂದರ್ಯಕ್ಕೂ ಸಂಬಂಧಿಸಿದೆ. ಈ ಸಂಖ್ಯೆಯನ್ನು ಹೊಂದಿರುವವರು ಸುಂದರವಾದ ವಸ್ತುಗಳ ಬಗ್ಗೆ ಆಸಕ್ತಿ ಹೊಂದಿರುತ್ತಾರೆ. ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಕೂಡ ಅಷ್ಟೇ ಚೆನ್ನಾಗಿ ಕಾಪಾಡಿಕೊಳ್ಳುತ್ತಾರೆ. ಇವರದ್ದು ಒಂದು ರೀತಿಯಲ್ಲಿ ಶಿಸ್ತಿನ ಜೀವನ.
ಇವರಿಗೆ ಸರಿ ಹೊಂದುವ ರಾಡಿಕ್ಸ್ ನಂಬರ್
ಯಾರ ಮೂಲಾಂಕ 6 ಆಗಿರುವುದೋ ಅವರ ಸಂಬಂಧ 2, 3, 6 ಮತ್ತು 9 ರಾಡಿಕ್ಸ್ ಇರುವವರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಈ ಧಾತು ಸಂಖ್ಯೆ ಇರುವವರ ಜೊತೆಗೆ ಉತ್ತಮ ಭಾವನಾತ್ಮಕ ಸಂಬಂಧವನ್ನು ಹೊಂದಿರುತ್ತಾರೆ. ಸಂಖ್ಯಾಶಾಸ್ತ್ರದಲ್ಲಿ, ಅಂಶ 6 ಅನ್ನು ಪ್ರೀತಿ, ಆಕರ್ಷಣೆ, ಸೌಂದರ್ಯ, ಕಲೆ ಮತ್ತು ಸಂಬಂಧಗಳಿಗೆ ಸಂಬಂಧಿಸಿದ ಸಂಖ್ಯೆ ಎಂದು ಕರೆಯಲಾಗುತ್ತದೆ. ಆದರೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅವರ ಜನ್ಮ ದಿನಾಂಕವನ್ನು ಮಾತ್ರ ಆಧರಿಸಿ ನಿರ್ಧರಿಸಲು ಸಾಧ್ಯವಿಲ್ಲ. ಪಾಲನೆ, ವೈಯಕ್ತಿಕ ಅನುಭವಗಳು, ಪರಿಸರ ಮತ್ತು ಆಲೋಚನಾ ವಿಧಾನದಂತಹ ಅನೇಕ ಅಂಶಗಳು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತವೆ ಎನ್ನುವುದನ್ನು ಸಹ ನೆನಪಿನಲ್ಲಿಡಬೇಕು.


Click it and Unblock the Notifications
