Daily Horoscope : ನಾಲ್ಕು ರಾಶಿಯವರಿಗೆ ಅದೃಷ್ಟದ ದಿನ, ಹೊಸ ಕೆಲಸಕ್ಕೆ ಕೈ ಹಾಕಿದರೆ ಸಿಗುವುದು ಯಶಸ್ಸು

ಇವತ್ತು ಶುಕ್ಲ ಪಕ್ಷ ಷಷ್ಠಿ ತಿಥಿ. ಈ ತಿಥಿ ಸಂಜೆ 5:50ರವರೆಗೆ ಇರುವುದು. ಸ್ವಾತಿ ನಕ್ಷತ್ರ ಬೆಳಿಗ್ಗೆ 4:58ರಿಂದ ನಾಡಿದ್ದು ಬೆಳಿಗ್ಗೆ 6:46ರವೆರೆಗೆ ಇರುವುದು. ಇಂದು ಯಾವ ರಾಶಿಯವರಿಗೆ ಅದೃಷ್ಟ ಜೊತೆಗಿರಲಿದೆ. ಯಾರಿಗೆ ಸಮಯ ಅನಾನುಕೂಲಕರವಾಗಿರುವುದು. ಎಲ್ಲಾ ೧೨ ರಾಶಿಗಳ ನಿತ್ಯ ಭವಿಷ್ಯ ಇಲ್ಲಿದೆ.

ಮೇಷ ರಾಶಿ (Aries)

ಕೆಲಸದ ಮೇಲೆ ಏಕಾಗ್ರತೆ ಹೆಚ್ಚಾಗುವುದು. ಹಣಕ್ಕೆ ಸಂಬಂಧಿಸಿದಂತೆ ಬೇರೆಯವರನ್ನು ಅವಲಂಬಿಸಬೇಡಿ. ವಿದ್ಯಾರ್ಥಿಗಳಿಗೆ ಇಔತ್ತು ಅನುಕೂಲಕರ ದಿನವಾಗಿರುವುದು. ದೇವಸ್ಥಾನಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ.

Today Rashi Bhavishya august 18 Daily Horoscope Zodiac Predictions Lucky Number Colour of all signs

ವೃಷಭ ರಾಶಿ (Taurus)

ಇಂದು ಅನುಕೂಲಕರ ದಿನವಾಗಿರುವುದು. ನೀವು ಅಂದುಕೊಂಡ ಕೆಲಸವನ್ನು ಸರಿಯಾಗಿಯೇ ಮಾಡಿ ಮುಗಿಸುವಿರಿ. ಕಚೇರಿ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸುವಿರಿ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುವುದು.

ಮಿಥುನ ರಾಶಿ (Gemini)

ವ್ಯವಹಾರವನ್ನು ವಿಸ್ತರಿಸಲು ಹೊಸ ಅವಕಾಶ ಸಿಗುವುದು. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭವಾಗುವುದು. ಉತ್ಸಾಹದಿಂದ ಎಲ್ಲಾ ಕೆಲಸವನ್ನು ಅಂದುಕೊಂಡ ಸಮಯಕ್ಕೆ ಮಾಡಿ ಮುಗಿಸುವಿರಿ.

ಕರ್ಕಾಟಕ ರಾಶಿ (Cancer)

ಈ ದಿನ ಮಿಶ್ರ ಫಲವನ್ನು ಅನುಭವಿಸುವಿರಿ.ಹೊಸ ಕೆಲಸ ಆರಂಭಿಸುವ ಬಗ್ಗೆ ಮನೆಯಲ್ಲಿ ಮಾತುಕತೆ ನಡೆಸುವಿರಿ. ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವ ಅವಕಾಶ ಸಿಗುವುದು. ವೃತ್ತಿಜೀವನದಲ್ಲಿ ಯಶಸ್ಸು ಸಿಗುವುದು. ಶತ್ರುಗಳು ಸೋಲೋಪ್ಪುವಿರಿ.

ಸಿಂಹ ರಾಶಿ (Leo)

ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಸಂತೋಷ ಹೆಚ್ಚಾಗುವುದು. ಎದುರಾಗುವ ಸಮಸ್ಯೆಗಳಿಂದ ಪರಿಹಾರ ಸಿಗಬೇಕಾದರೆ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ಮಾಡಬೇಕಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ಕನ್ಯಾ ರಾಶಿ (Virgo)

ಹೊಸ ಉತ್ಸಾಹದಿಂದ ದಿನದ ಆರಂಭವಾಗುವುದು.ವ್ಯವಹಾರ ಚಟುವಟಿಕೆಗಳು ಸರಾಗವಾಗಿ ಮುಂದುವರಿಯುವುದು. ರಾಜಕೀಯ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರಿಗೆ ದಿನ ಅನುಕೂಲಕರವಾಗಿರುವುದು.ಸಾಲದಿಂದ ಮುಕ್ತಿ ಪಡೆಯುವಿರಿ.

ತುಲಾ ರಾಶಿ (Libra)

ವ್ಯವಹಾರದಲ್ಲಿ ಆರ್ಥಿಕ ಲಾಭ ಹೆಚ್ಚುವುದು. ಉದ್ಯೋಗಿಗಳಿಗೆ ಹೊಸ ಕೆಲಸ ಸಿಗುವುದು. ಬರಹಗಾರರಿಗೆ ದಿನ ಅನುಕೂಲಕರವಾಗಿರುವುದು. ಇವತ್ತು ಯಾರಿಗೂ ಸಾಲ ಕೊಡಲು ಹೋಗಬೇಡಿ. ಸಾಲ ತೆಗೆದುಕೊಳ್ಳಬೇಡಿ.

ವೃಶ್ಚಿಕ ರಾಶಿ (Scorpio)

ಪ್ರವಾಸಕ್ಕೆ ಹೋಗುವಿರಿ. ಹಿರಿಯರ ಆಶೀರ್ವಾದದಿಂದ ಕೈ ಹಾಕುವ ಕೆಲಸಗಳಲ್ಲಿ ಯಶಸ್ವಿಯಾಗುವಿರಿ. ಸಂಗಾತಿಗೆ ಇಂದು ಪ್ರಗತಿಗೆ ಉತ್ತಮ ಅವಕಾಶ ಸಿಗುವುದು. ಉದ್ಯೋಗದಲ್ಲಿ ಪ್ರಗತಿಯಾಗುವುದು. ವೃತ್ತಿಜೀವನವನ್ನು ಮುನ್ನಡೆಸುತ್ತದೆ.

ಧನು ರಾಶಿ (Sagitarius)

ಇಂದು ಸಾಮಾನ್ಯಕ್ಕಿಂತ ದಿನ ಉತ್ತಮವಾಗಿರುವುದು. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಸಂಗಾತಿಯೊಂದಿಗೆ ದೀರ್ಘ ಸಂಭಾಷಣೆ ನಡೆಸಬಹುದು. ಸಂಬಂಧದಲ್ಲಿ ಸುಧಾರಣೆ ಇರುವುದು. ನಿರ್ದಿಷ್ಟ ಕಾರ್ಯದಲ್ಲಿ ಯಶಸ್ಸು ಸಿಗುವುದು.

ಮಕರ ರಾಶಿ (Capricorn)

ಕೆಲಸದಲ್ಲಿ ದೊಡ್ಡ ಜವಾಬ್ದಾರಿ ಸಿಗುವುದು. ಹೊಸ ಜವಾಬ್ದಾರಿಯನ್ನು ಉತ್ತಮವಾಗಿಯೇ ನಿಭಾಯಿಸುವಿರಿ. ಆರೋಗ್ಯವು ಉತ್ತಮವಾಗಿರುವುದು. ಕಡಿಮೆ ಸಮಯದಲ್ಲಿ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಮೇಲಧಿಕಾರಿಗಳಿಂದ ಮೆಚ್ಚುಗೆ ಸಿಗುವುದು.

ಕುಂಭ ರಾಶಿ (Aquarius)

ಸ್ನೇಹಿತನೊಂದಿಗೆ ಸೇರಿಕೊಂಡು ಹೊಸ ವ್ಯವಹಾರ ಆರಂಭಿಸುವಿರಿ. ಕೆಲಸ ಕಾರ್ಯಗಳಲ್ಲಿ ಸ್ನೇಹಿತರಿಂದ ಸಹಾಯವಾಗುವುದು. ಹೂಡಿಕೆಗೆ ಸರಿಯಾದ ಸಮಯ.

ಮೀನ ರಾಶಿ (Pisces)

ದಿನವು ಹೊಸ ಉತ್ಸಾಹದಿಂದ ಪ್ರಾರಂಭವಾಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಆರ್ಥಿಕ ಲಾಭ ಹೆಚ್ಚಾಗುವುದು. ವ್ಯವಹಾರದಲ್ಲಿ ಹೊಸ ಆರ್ಡರ್‌ ಸಿಗುವುದು. ಆರೋಗ್ಯ ಉತ್ತಮವಾಗಿರುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+