ನಾಲ್ಕು ರಾಶಿಯವರಿಗೆ ಹಣದ ಲಾಭ, ಶುಭ ಯೋಗದಿಂದ ಕೆಲಸದಲ್ಲಿ ಪ್ರಗತಿ, ತೆರೆದುಕೊಳ್ಳುವುದು ಯಶಸ್ಸಿನ ಹಾದಿ
Horoscope August 5: ಬೆಳಗಾಯಿತೆಂದರೆ ಸಾಕು ಈ ದಿನವನ್ನು ಹೇಗೆ ಆರಂಭಿಸುವುದು ಎನ್ನುವ ಚಿಂತೆ ಬಹುತೇಕ ಮಂದಿಯ ತಲೆಯಲ್ಲಿ ಇರುತ್ತದೆ. ಹಾಗದ್ರೆ ಎಲ್ಲಾ 12 ರಾಶಿಯವರ ಭವಿಷ್ಯವನ್ನು ಇಲ್ಲಿ ನೀಡಲಾಗಿದ್ದು, ಇದನ್ನು ನೋಡಿ ಮುಂದಿನ ಹೆಜ್ಜೆ ಹೇಗೆ ಇಡಬಹುದು ಎಂಬುದನ್ನ ತಿಳಿದುಕೊಳ್ಳಬಹುದು.
ಮೇಷ ರಾಶಿ
ಇಂದು ಒಳ್ಳೆಯ ದಿನವಾಗಿರುತ್ತದೆ. ಬಾಕಿ ಕೆಲಸಗಳು ಇಂದು ಪೂರ್ಣಗೊಳ್ಳಬಹುದು. ಈ ರಾಶಿಯಲ್ಲಿ ಜನಿಸಿದವರು ತಮ್ಮ ಯೋಜನೆಗಳನ್ನು ಯಾರಿಗೂ ಹೇಳದಿದ್ದರೆ ಯಶಸ್ಸು ಸಿಗುವುದು. ಹೂಡಿಕೆ ಮಾಡುವ ಮೊದಲು ಸರಿಯಾಗಿ ಯೋಚಿಸಿ. ವೈವಾಹಿಕ ಜೀವನದಲ್ಲಿ ಸಂತೋಷ ಇರುವುದು.

ವೃಷಭ ರಾಶಿ
ಸಂತೋಷದಿಂದಲೇ ಈ ದಿನ ಆರಂಭವಾಗುವುದು. ಕಷ್ಟಪಟ್ಟು ದುಡಿದರೆ ಉತ್ತಮ ಫಲ ಸಿಗುವುದು. ಆಸ್ತಿಗೆ ಸಂಬಂಧಿಸಿದ ವಹಿವಾಟುಗಳು ಲಾಭದಾಯಕವಾಗಿರುವುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುವರು. ಪ್ರಗತಿಗೆ ಹೊಸ ಮಾರ್ಗಗಳು ತೆರೆದು ಕೊಳ್ಳುವುದು.
ಮಿಥುನ ರಾಶಿ
ಇಂದು ಅದೃಷ್ಟ ನಿಮ್ಮ ಕಡೆ ಇರುತ್ತದೆ. ಎದುರಾಗಿದ್ದ ಗೊಂದಲಗಳು ಕೊನೆಯಾಗುವುದು. ಕೆಲವು ಕೆಲಸಗಳು ಹೆಚ್ಚಿನ ಲಾಭ ತಂದು ಕೊಡುವುದು. ಬಾಕಿ ಇರುವ ಕೆಲಸಗಳು ಪೂರ್ಣವಾಗುವುದು. ವೈವಾಹಿಕ ಜೀವನ ಸುಖಕರವಾಗಿರುವುದು.
ಕರ್ಕಾಟಕ ರಾಶಿ
ಇಂದು ಅನುಕೂಲಕರ ದಿನವಾಗಿರುತ್ತದೆ. ಸಂಗಾತಿಯಿಂದ ಸಿಹಿ ಸುದ್ದಿ ಸಿಗುವುದು. ವ್ಯವಹಾರದಲ್ಲಿ ಲಾಭವಾಗುವುದು. ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳು ಸಿಗುತ್ತವೆ. ಸಹೋದ್ಯೋಗಿಯಿಂದ ಬೆಂಬಲ ಸಿಗುವುದು.
ಸಿಂಹ ರಾಶಿ
ಇಂದು ನಿಮಗೆ ಅದೃಷ್ಟದ ದಿನವಾಗಿರಲಿದೆ. ಬುದ್ದಿವಂತಿಕೆಯಿಂದ ನಿರ್ಧಾರೆ ತೆಗೆದುಕೊಂಡರೆ ಲಾಭವಾಗುವುದು. ಬ್ಯಾಂಕಿಂಗ್ ವಲಯದಲ್ಲಿರುವವರಿಗೆ ಇಂದು ಒಳ್ಳೆಯ ದಿನ. ಬಡ್ತಿ ಸಿಗುವ ಸಾಧ್ಯತೆಗಳಿವೆ. ಸ್ನೇಹಿತರಿಂದ ಬೆಂಬಲ ಸಿಗುತ್ತದೆ.
ಕನ್ಯಾ ರಾಶಿ
ಆರೋಗ್ಯ ಸಮಸ್ಯೆ ಕಾಡಬಹುದು. ಸಮಯಕ್ಕೆ ಸರಿಯಾಗಿ ಕಾಳಜಿ ವಹಿಸಿದರೆ, ಶೀಘ್ರದಲ್ಲೇ ಪರಿಹಾರ ಸಿಗುವುದು. ನಿಮ್ಮ ಕಠಿಣ ಪರಿಶ್ರಮ ಇಂದು ಫಲ ನೀಡುವುದು. ನಿಮ್ಮ ಆಕರ್ಷಕ ವ್ಯಕ್ತಿತ್ವವು ಎಲ್ಲರ ಗಮನ ಸೆಳೆಯುವುದು.
ತುಲಾ ರಾಶಿ
ಉದ್ಯೋಗದಲ್ಲಿರುವವರಿಗೆ ಸಿಹಿ ಸುದ್ದಿ ಸಿಗುವುದು. ಹಳೆಯ ಸ್ನೇಹಿತರ ಭೇಟಿಯಿಂದ ಸಂತೋಷ ಸಿಗುವುದು. ಹೊಸ ವ್ಯವಹಾರದಲ್ಲಿ ಹೆಚ್ಚಿನ ಲಾಭವಾಗುವುದು. ಇಂದು ಹಠಾತ್ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ
ಹಳೆಯ ಸಮಸ್ಯೆಗಳು ಕೊನೆಯಾಗುವುದು. ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು. ಕಚೇರಿ ಕೆಲಸದಲ್ಲಿ ಎಚ್ಚರಿಕೆ ಇರಲಿ. ಮಾಡುವ ಕೆಲಸ ಕಾರ್ಯಗಳಲ್ಲಿ ಸಂಗಾತಿಯ ಬೆಂಬಲ ಸಿಗುವುದು. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಧನು ರಾಶಿ
ಇಂದು ನಿಮಗೆ ಸಂತೋಷದ ದಿನವಾಗಿರಲಿದೆ. ಆರೋಗ್ಯವು ಮೊದಲಿಗಿಂತ ಉತ್ತಮವಾಗಿರುತ್ತದೆ. ಅನಗತ್ಯ ಕೆಲಸ ಮಾಡುವುದನ್ನು ತಪ್ಪಿಸಿದರೆ ಒಳ್ಳೆಯದು. ಅಗತ್ಯವಿರುವವರಿಗೆ ಹಣದ ಸಹಾಯ ಮಾಡುವಿರಿ. ಮಾನಸಿಕ ತೃಪ್ತಿ ಹೆಚ್ಚಾಗುವುದು.
ಮಕರ ರಾಶಿ
ಇಂದು ನಿಮ್ಮ ಪಾಲಿಗೆ ಉತ್ತಮ ದಿನವಾಗಿರಲಿದೆ. ಉದ್ಯಮಿಗಳ ಪಾಲಿಗೂ ಶುಭ ದಿನ. ಆರ್ಥಿಕ ಲಾಭವಾಗುವುದು. ಪಾಲುದಾರಿಕೆ ವ್ಯವಹಾರ ಪ್ರಯೋಜನಕಾರಿಯಾಗುವುದು. ಭೂಮಿಗೆ ಸಂಬಂಧಿಸಿದ ಪ್ರಮುಖ ಸಮಸ್ಯೆ ಬಗೆಹರಿಯುತ್ತದೆ. ಪ್ರಗತಿಯ ಹೊಸ ಮಾರ್ಗಗಳು ತೆರೆದುಕೊಳ್ಳುವುದು.
ಕುಂಭ ರಾಶಿ
ಇಂದಿನ ದಿನ ಹೊಸ ಬದಲಾವಣೆಗಳನ್ನು ತರಲಿದೆ. ಅನಿರೀಕ್ಷಿತ ಆರ್ಥಿಕ ಲಾಭಗಳಾಗುವುದು. ಹಣಕಾಸು ಸ್ಥಿತಿ ಬಲವಾಗಿರುವುದು. ಈ ರಾಶಿಯ ಮಹಿಳೆಯರು ಸಂಗಾತಿಯಿಂದ ಉಡುಗೊರೆ ಪಡೆಯುವರು.ಕಚೇರಿ ಕೆಲಸದಲ್ಲಿ ಬಡ್ತಿ ಸಿಗುವುದು.
ಮೀನ ರಾಶಿ
ಕೆಲಸದಲ್ಲಿ ಆತ್ಮವಿಶ್ವಾಸ ಹೆಚ್ಚುವುದು. ಬಾಕಿ ಇರುವ ಕೆಲಸ ಪ್ರೀತಿಪಾತ್ರರ ಸಹಾಯದಿಂದ ಪೂರ್ಣಗೊಳ್ಳುವುದು. ವಿದ್ಯಾರ್ಥಿಗಳಿಗೆ ದಿನ ಅನುಕೂಲಕರವಾಗಿರುವುದು. ಅವಿವಾಹಿತರಿಗೆ ಮದುವೆ ನಿಶ್ಚಯವಾಗುವುದು.


Click it and Unblock the Notifications
