Horoscope Today: ದಿನ ಭವಿಷ್ಯ ಜನವರಿ 7- ಮಂಗಳವಾರ 12 ರಾಶಿಗಳ ಜಾತಕ ಹೇಗಿದೆ?

ನವಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಹೀಗೆ ರಾಶಿಯನ್ನು ಬದಲಾಯಿಸುವಾಗ ಗ್ರಹಗಳ ಶುಭ ಹಾಗೂ ಅಶುಭ ಪರಿಣಾಮಗಳು ಕಂಡು ಬರುತ್ತವೆ. ಜಾತಕದಲ್ಲಿ ಗ್ರಹಗಳ ಸ್ಥಾನ ಉತ್ತಮವಾಗಿ ಇದ್ದರೆ ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ. ಆದರೆ ಗ್ರಹಗಳ ಸ್ಥಾನ ದುರ್ಬಲವಾಗಿದ್ದರೆ ಜೀವನದಲ್ಲಿ ಕೆಲ ಅಡೆತಡೆಗಳು ಉಂಟಾಗಬಹುದು. ಜನವರಿ 7 ಕೆಲವು ರಾಶಿಯವರಿಗೆ ಅದ್ಭುತವಾಗಿದೆ. ಹಾಗಾದರೆ ಜನವರಿ 7 ಮಂಗಳವಾರ 12 ರಾಶಿಗಳ ಭವಿಷ್ಯ ಯಾವ ರೀತಿಯಾಗಿದೆ ಎಂದು ಈಗ ತಿಳಿಯೋಣ.

ಮೇಷ ರಾಶಿ

ಮೇಷ ರಾಶಿಯವರಿಗೆ ಜನವರಿ 7 ಮಂಗಳಕರವಾಗಿರುತ್ತದೆ. ಸಾಮಾಜಿಕ ಪ್ರತಿಷ್ಠೆ ಹೆಚ್ಚಲಿದೆ. ಆರ್ಥಿಕ ವಿಷಯಗಳಲ್ಲಿ ಪ್ರಗತಿ ಕಂಡುಬರಲಿದೆ. ಸಂಬಂಧಗಳಲ್ಲಿ ನಿಕಟತೆ ಇರುತ್ತದೆ. ಸಂಬಂಧಿಕರಲ್ಲಿ ಗೌರವ ಹೆಚ್ಚಾಗುತ್ತದೆ. ಮಂಗಳವಾರ ಹನುಮಂತನನ್ನು ಪೂಜಿಸುವುದರಿಂದ ಅತ್ಯಂತ ಉತ್ತಮ ಫಲ ಸಿಗಲಿದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಇಂದು ಹನುಮಂತನನ್ನು ಪೂಜಿಸುವುದರಿಂದ ಅತ್ಯಂತ ಶುಭ ಫಲ ಸಿಗಲಿವೆ.

Horoscope today astrological prediction january 7 2025 for 12 zodiac signs in kannada

ವೃಷಭ ರಾಶಿ

ಜನವರಿ 7 ವೃಷಭ ರಾಶಿಯವರಿಗೆ ಮಿಶ್ರ ಫಲ ನೀಡಲಿದೆ. ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದರೆ, ಅದಕ್ಕೆ ಸಂಬಂಧಿಸಿದ ಕಾರ್ಯಗಳು ಈಡೇರಲಿವೆ. ಸಂಬಂಧಗಳಲ್ಲಿ ಉದ್ವಿಗ್ನತೆ ಉಂಟಾಗಬಹುದು. ಇಂದು ಆರೋಗ್ಯಕ್ಕೆ ಒಳ್ಳೆಯ ದಿನವಲ್ಲ. ಶಿಕ್ಷಣ ಕ್ಷೇತ್ರದಲ್ಲಿನ ಪ್ರಯತ್ನಗಳು ಫಲಪ್ರದವಾಗುತ್ತವೆ. ಮಂಗಳವಾರ ಸೂರ್ಯೋದಕ್ಕಿಂತ ಮುಂಚಿತವಾಗಿ ಎದ್ದು ಸೂರ್ಯೋದಕ್ಕಿಂತ ಮುಂಚಿತವಾಗಿ ಪೂಜೆ ಮಾಡುವುದರಿಂದ ಜೀವನದಲ್ಲಿ ಬರುವ ಸಮಸ್ಯೆಗಳು ದೂರವಾಗುತ್ತವೆ. ಹನುಮನನ್ನು ಪೂಜಿಸುವುದರಿಂದ ಹಾಗೂ ಬಡವರಿಗೆ ವಸ್ತ್ರದಾನ ಮಾಡುವುದರಿಂದ ಅತ್ಯಂತ ಶುಭ ಫಲ ಸಿಗಲಿವೆ.

ಮಿಥುನ ರಾಶಿ

ಜನವರಿ 7 ಮಿಥುನ ರಾಶಿಯವರಿಗೆ ಅಷ್ಟೊಂದು ಉತ್ತಮವಾಗಿರುವುದಿಲ್ಲ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಹಲವಾರು ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಹಣದ ವ್ಯವಹಾರದಲ್ಲಿ ಜಾಗರೂಕರಾಗಿರಿ. ಸ್ನೇಹ ಸಂಬಂಧಗಳು ಗಾಢವಾಗುತ್ತವೆ. ಬೆಳಿಗ್ಗೆ ಹಸುವಿಗೆ ಪೂಜೆ ಮಾಡಿ, ಆಹಾರವನ್ನು ನೀಡಿ.

ಕಟಕ ರಾಶಿ

ಸಮಾಜದಲ್ಲಿ ಸ್ಥಾನಮಾನ ಪ್ರತಿಷ್ಠೆ ಹೆಚ್ಚಲಿದೆ. ಆಹ್ಲಾದಕರ ಪ್ರಯಾಣವನ್ನು ನೀವು ಈ ದಿನ ಮಾಡಬಹುದು. ಆದಾಯ ಹೆಚ್ಚಿಸುವ ಅವಕಾಶಗಳು ಸಿಗಲಿವೆ. ಆಸ್ತಿ ವಿಚಾರದಲ್ಲಿ ಉದ್ವಿಗ್ನತೆ ಉಂಟಾಗಬಹುದು. ತಾಳ್ಮೆಯಿಂದ ಎಲ್ಲಾ ವ್ಯವಹಾರಗಳನ್ನು ಪೂರ್ಣಗೊಳಿಸಿ. ಬಡವರಿಗೆ ಧಾನ್ಯಗಳು ಹಾಗೂ ಆಹಾರವನ್ನು ದಾನ ಮಾಡಿ. ನೀರಿನಲ್ಲಿ ಕರಿ ಎಳ್ಳನ್ನು ಬೆರೆಸಿ ಸ್ನಾನ ಮಾಡಿ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಜನವರಿ 7 ಶುಭ ಫಲವನ್ನು ನೀಡಲಿದೆ. ಗ್ರಹಗಳ ಸ್ಥಾನ ಸಿಂಹ ರಾಶಿಯವರ ಜಾತಕವನ್ನು ಬಲಗೊಳಿಸಲಿದೆ. ಹಣಕಾಸಿನ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮಗೆ ಕೆಲಸದಲ್ಲಿ ಮನೆಯವರ ಬೆಂಬಲ ಸಿಗಲಿದೆ. ಸಮಾಜಲದಲ್ಲಿ ಗೌರವ ಹೆಚ್ಚಾಗಲಿದೆ. ಬೆಳಿಗ್ಗೆ ಮನೆ ಅಂಗಳ ಸ್ವಚ್ಚಗೊಳಿಸಿ, ಸೂರ್ಯ ಮಂತ್ರವನ್ನು ಪಠಿಸಿ. ಬೀದಿಯಲ್ಲಿರುವ ಪ್ರಾಣಿಗಳಿಗೆ ಆಹಾರ ನೀಡಿ, ಅನಾಥರಿಗೆ ಅನ್ನದಾನ ಮಾಡುವುದರಿಂದ ಹನುಮನ ಮೆಚ್ಚುಗೆ ನಿಮಗೆ ಸಿಗಲಿದೆ.

ಕನ್ಯಾ ರಾಶಿ

ಈ ದಿನ ಕನ್ಯಾ ರಾಶಿಯವರು ಆರೋಗ್ಯದ ಬಗ್ಗೆ ಜಾಗೃತರಾಗಿರಿ. ಶುಕ್ರನ ಬದಲಾವಣೆಯು ವೈಯಕ್ತಿಕ ಸಂತೋಷದಲ್ಲಿ ಅಡ್ಡಿ ಉಂಟುಮಾಡುತ್ತದೆ. ಆರ್ಥಿಕ ವಿಷಯಗಳು ಸುಧಾರಿಸುತ್ತವೆ. ವೈವಾಹಿಕ ಜೀವನದಲ್ಲಿ ಒತ್ತಡ ಉಂಟಾಗಬಹುದು. ಬೇರೆಯವರೊಂದಿಗೆ ಉತ್ತಮ ಸಂಬಂಧ ಹೊಂದಿರಿ, ಯಾವುದೇ ವ್ಯಕ್ತಿಯೊಂದಿಗೆ ಜಗಳ ಆಡಬೇಡಿ. ಬೆಳಿಗ್ಗೆ ಹಸುವಿಗೆ ಹಸಿರು ಮೇವನ್ನು ತಿನ್ನಿಸಿ.

ತುಲಾ ರಾಶಿ

ತುಲಾ ರಾಶಿಯವರಿಗೆ ಜನವರಿ 7 ತುಂಬಾ ಅದ್ಭುತ ಫಲವನ್ನು ನೀಡಲಿದೆ. ನೀವು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಯಾವುದೋ ಅಜ್ಞಾತ ಭಯದಿಂದ ಬಳಲಬಹುದು. ಇದರಿಂದ ಚಿಂತೆ ಮಾಡಬೇಡಿ. ನೀವು ಕೆಲಸದಲ್ಲಿ ಮೇಲಾಧಿಕಾರಿಯಿಂದ ಒತ್ತಡವನ್ನು ಅನುಭವಿಸಬಹುದು. ಆದರೆ ಈ ದಿನ ಹಲವಾರು ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ಅನಾವಶ್ಯಕ ಓಡಾಟ ಇರುತ್ತದೆ. ಇದಕ್ಕೆ ಪೋಷಕರ ಬೆಂಬಲ ಸಿಗಲಿದೆ. ಮುಂಜಾನೆ ಬಡವರಿಗೆ ಊಟ ಹಾಕಿ ವಯಸ್ಸಾದವರಿಗೆ ವಸ್ತ್ರದಾನ ಮಾಡಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಜನವರಿ 7 ಮಂಗಳವಾರ ಮಂಗಳಕರವಾಗಿದೆ. ಈ ದಿನ ನಿಮ್ಮ ಗೌರವ ಹೆಚ್ಚಾಗಲಿದೆ. ಸಮಾಜಮುಖಿ ಕಾರ್ಯಗಳಲ್ಲಿ ಪ್ರಗತಿ ಕಂಡುಬರಲಿದೆ. ನ್ಯಾಯಾಲಯದ ವಿಷಯಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ಸೃಜನಶೀಲ ಕೆಲಸದಲ್ಲಿ ಉತ್ಸಾಹವನ್ನು ಪ್ರದರ್ಶಿಸುವಿರಿ. ಮನೆಯಲ್ಲಿ ಕುಟುಂಬಸ್ಥರಿಗೆ ಆಧ್ಯಾತ್ಮಕ ಪಾಠವನ್ನು ಮಾಡುವುದು ಒಳಿತನ್ನು ತರುತ್ತದೆ. ಹಸಿದ ಪ್ರಾಣಿಗಳಿಗೆ ಆಹಾರವನ್ನು ನೀಡುವುದು ಉತ್ತಮ ಫಲಗಳನ್ನು ನೀಡುತ್ತದೆ.

ಧನು ರಾಶಿ

ಧನು ರಾಶಿಯವರಿಗೆ ಮಂಗಳವಾರ ಉತ್ತಮ ದಿನವಾಗಿದೆ. ಜನವರಿ 7 ಸಾಕಷ್ಟು ಕಾರ್ಯಗಳಲ್ಲಿ ನೀವು ಯಶಸ್ಸನ್ನು ಪಡೆಯುವಿರಿ. ಆರ್ಥಿಕ ವಿಷಯಗಳಲ್ಲಿ ಪ್ರಗತಿ ಕಂಡುಬರಲಿದೆ. ಉದ್ಯೋಗದಲ್ಲಿ ಯಶಸ್ಸು ಇರುತ್ತದೆ. ಜೀವನದಲ್ಲಿ ಕೆಲ ಸಮಸ್ಯೆಗಳು ಎದುರಾಗಬಹುದು. ಆದರೆ ಹನುಮನ ಆಶೀರ್ವಾದದಿಂದ ಅದೆಲ್ಲವನ್ನು ನಿಭಾಯಿಸುವ ಶಕ್ತಿ ನಿಮಗೆ ಸಿಗಲಿದೆ. ಬೆಳಿಗ್ಗೆ ಗುರುವಿನ ಮಂತ್ರವನ್ನು ಪಠಿಸಿ. ಆಲದ ಗಿಡವನ್ನು ನೆಟ್ಟು ಪೋಷಣೆ ಮಾಡಿ.

ಮಕರ ರಾಶಿ

ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಸಂತೋಷದಲ್ಲಿ ವಿಘ್ನ ಉಂಟಾಗಲಿದೆ. ಅನಾವಶ್ಯಕ ಓಡಾಟ ಇರುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಹನುಮಂತನ ಆಶೀರ್ವಾದದಿಂದ ಎಲ್ಲಾ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳ್ಳಲಿವೆ. ಶನಿ ದೇವನ ಮಂತ್ರವನ್ನು ಪಠಿಸಿ ಇದರಿಂದ ನಿಮ್ಮ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳುತ್ತವೆ.

ಕುಂಭ ರಾಶಿ

ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ಆತ್ಮವಿಶ್ವಾಸದ ಕೊರತೆ ಇರುತ್ತದೆ. ಈ ಬಗ್ಗೆ ಚಿಂತಿಸುವುದು ಬೇಡ. ಕೌಶಲ್ಯದಿಂದ ಮಾಡಿದ ಕೆಲಸಗಳು ಪೂರ್ಣಗೊಳ್ಳುತ್ತವೆ. ಕೌಟುಂಬಿಕ ಒತ್ತಡ ಉಂಟಾಗಬಹುದು. ಸಂಬಂಧಗಳಲ್ಲಿ ನಿಕಟತೆ ಇರುತ್ತದೆ. ಪರಿಹಾರವಾಗಿ ಬೆಳಿಗ್ಗೆ ಶನಿದೇವನ ಮಂತ್ರವನ್ನು ಪಠಿಸಿ. ಗಾಯಗೊಂಡ ನಾಯಿಗೆ ಚಿಕಿತ್ಸೆ ನೀಡಿ.

ಮೀನ ರಾಶಿ

ಜನವರಿ 7 ಮೀನ ರಾಶಿಯವರಿಗೆ ಉತ್ತಮ ದಿನವಾಗಿದೆ. ಸಂಬಂಧಗಳಲ್ಲಿ ನಿಕಟತೆ ಇರುತ್ತದೆ. ಸೃಜನಾತ್ಮಕ ಪ್ರಯತ್ನಗಳು ಪೂರ್ಣಗೊಳ್ಳಲಿವೆ. ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ವ್ಯಾಪಾರದ ಖ್ಯಾತಿ ಹೆಚ್ಚಾಗುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ. ಹಸುವಿಗೆ ರೊಟ್ಟಿಗಳನ್ನು ನೀಡಿ. ಗುರುವಿನ ಮಂತ್ರವನ್ನು ಜಪಿಸಿ. ಇದರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+