Daily Horoscope May 22: ಈ ರಾಶಿಯವರ ಹಣಕಾಸಿನ ಸಮಸ್ಯೆ ಬಗೆಹರಿಯುವುದು, ಗಳಿಕೆಯ ಅವಕಾಶ ಹೆಚ್ಚುವುದು
Horoscope May 22: ಶುಕ್ರವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಶುಕ್ರವಾರ ರಾಹುಕಾಲವು ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:00 ರವರೆಗೆ ಇರುತ್ತದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.
ಮೇಷ ರಾಶಿ:
ಆಶಾವಾದಿಯಾಗಿರಿ. ನಿಮ್ಮ ನಿರೀಕ್ಷೆಗಳು, ಭರವಸೆಗಳು ಮತ್ತು ಆಸೆಗಳು ಈಡೇರುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಹಣ ಗಳಿಸಲು ಹಲವಾರು ಅವಕಾಶಗಳು ಸಿಗುವುದು. ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಲು ಉತ್ತಮ ದಿನ.

ವೃಷಭ ರಾಶಿ:
ಕುಟುಂಬದ ಹಿರಿಯರಿಂದ ಹಣಕಾಸು ನಿರ್ವಹಣೆ ಮತ್ತು ಉಳಿತಾಯದ ಬಗ್ಗೆ ಸಲಹೆ ಪಡೆಯಬಹುದು. ಪ್ರೀತಿಪಾತ್ರರೊಂದಿಗೆ ವಾದಕ್ಕಿಳಿಯುವ ಸ್ಥಿತಿ ಎದುರಾಗಬಹುದು. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ಕಷ್ಟಕರವೆಂದು ತೋರುವ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಅನಗತ್ಯ ಜಗಳಗಳು ಮತ್ತು ವಾದಗಳನ್ನು ತಪ್ಪಿಸುವುದು ಒಳ್ಳೆಯದು.
ಮಿಥುನ ರಾಶಿ:
ನಿಮ್ಮ ಬೆಲೆಬಾಳುವ ವಸ್ತುಗಳು ಮತ್ತು ಬ್ಯಾಗ್‌ಗಳ ಬಗ್ಗೆ ಜಾಗರೂಕರಾಗಿರಿ. ಕಳ್ಳತನವಾಗುವ ಸಾಧ್ಯತೆಯಿದೆ. ವಿಶೇಷವಾಗಿ, ಇಂದು ನಿಮ್ಮ ಪರ್ಸ್ ಅನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಿ. ಕಚೇರಿ ವಿಚಾರಗಳಲ್ಲಿ ನಿಮ್ಮ ಆಲೋಚನೆಗಳನ್ನು ಸರಿಯಾದ ರೀತಿಯಲ್ಲಿ ಪ್ರಸ್ತುತಪಡಿಸಿದರೆ ಲಾಭ ಪಡೆಯುವ ಸಾಧ್ಯತೆಯಿದೆ. ಸಂಗಾತಿಯ ಕೆಲಸದ ಹೊರೆ ಹೆಚ್ಚಾಗುವುದು.
ಕರ್ಕಾಟಕ ರಾಶಿ:
ನಿಮಗೆ ಯಾವುದು ಲಾಭ ಎನ್ನುವುದನ್ನು ಅರಿತುಕೊಂಡು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಿ. ಯಾರಿಗೂ ಸಾಲ ನೀಡಬೇಡಿ. ಪ್ರೀತಿಪಾತ್ರರಿಂದ ನಿಮ್ಮ ಸಂತೋಷ ಇನ್ನಷ್ಟು ಹೆಚ್ಚಾಗುವುದು. ಇಂದು ವೈವಾಹಿಕ ಜೀವನದ ಅತ್ಯುತ್ತಮ ದಿನವಾಗಬಹುದು.
ಸಿಂಹ ರಾಶಿ:
ಸ್ನೇಹಿತರೊಂದಿಗೆ ಆಹ್ಲಾದಕರ ಸಮಯ ಕಳೆಯುವಿರಿ. ಅತಿಯಾದ ಆಹಾರ ಮತ್ತು ಪಾನೀಯಗಳ ಬಗ್ಗೆ ಎಚ್ಚರದಿಂದಿರಿ. ಕಠಿಣ ಸಮಯದಲ್ಲಿ ನಿಮ್ಮ ಸಂಗಾತಿಯಿಂದ ಬೆಂಬಲ ಸಿಗುವುದಿಲ್ಲ. ಇದು ನಿಮ್ಮನ್ನು ಅಸಮಾಧಾನಗೊಳಿಸಬಹುದು.
ಕನ್ಯಾ ರಾಶಿ:
ತಾಳ್ಮೆ ಕಾಪಾಡಿಕೊಳ್ಳಿ.ಹಣವನ್ನು ಸಂಗ್ರಹಿಸುವ ಮತ್ತು ಉಳಿಸುವ ಕೌಶಲ್ಯವನ್ನು ಕಲಿಯಬಹುದು. ಮಾತಿನ ಮೂಲಕವೇ ಸಮಸ್ಯೆಗಳನ್ನು ಬಗೆಹರಿಸುವಿರಿ. ಸ್ನೇಹಿತರೊಂದಿಗೆ ಪ್ರಯಾಣಕ್ಕೆ ತೆರಳುವ ಸಾಧ್ಯತೆ ಇದೆ.
ತುಲಾ ರಾಶಿ:
ಕೆಲಸದ ಒತ್ತಡವು ಕಿರಿಕಿರಿ ಉಂಟು ಮಾಡಬಹುದು. ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸಿ. ಕೆಲಸದಲ್ಲಿ ಪ್ರತಿಸ್ಪರ್ಧಿಗಳಿಂದ ತೊಂದರೆ ಉಂಟಾಗಬಹುದು. ಸಂಗಾತಿ ಮಾಡುವ ಎಡವಟ್ಟಿನಿಂದ ನೀವು ಮುಜುಗರಕ್ಕೆ ಒಳಪಡಬೇಕಾಗಬಹುದು.
ವೃಶ್ಚಿಕ ರಾಶಿ:
ಪ್ರಯಾಣಕ್ಕಾಗಿ ಹಣ ಖರ್ಚು ಮಾಡುವಿರಿ. ವಿವಾದಾತ್ಮಕ ವಿಷಯಗಳಿಗೆ ತಲೆ ಕೊಡಬೇಡಿ.ನಿಮ್ಮ ವೈಯಕ್ತಿಕ ರಹಸ್ಯಗಳನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಲು ಇದು ಸರಿಯಾದ ಸಮಯವಲ್ಲ. ಜೀವನ ಸಂಗಾತಿಯೊಂದಿಗೆ ಸುತ್ತಾಡುವುದಕ್ಕೆ ಹೋಗಬಹುದು.
ಧನು ರಾಶಿ:
ನಿಮಗೆ ತಿಳಿದಿರುವ ಜನರ ಮೂಲಕ ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಮಕ್ಕಳು ಮನೆಯ ಕೆಲಸಗಳನ್ನು ಪೂರ್ಣಗೊಳಿಸಲು ನಿಮಗೆ ಸಹಾಯ ಮಾಡುತ್ತಾರೆ. ಮಕ್ಕಳಿಂದ ನಿಮ್ಮ ಸಂತೋಷ ಹೆಚ್ಚಾಗುವುದು.
ಮಕರ ರಾಶಿ:
ದುಬಾರಿ ಜೀವನಶೈಲಿ ಮತ್ತು ಖರ್ಚಿನಿಂದಾಗಿ ಹಣಕಾಸಿನ ಚಿಂತೆ ಕಾಡಬಹುದು. ಹೆತ್ತವರ ಕೋಪಕ್ಕೆ ಕಾರಣರಾಗುವಿರಿ. ಹಣಕಾಸಿನ ವಿಚಾರದಲ್ಲಿ ಎಚ್ಚರದಿಂದಿರಿ. ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ.
ಕುಂಭ ರಾಶಿ:
ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿ ಇಡಬೇಕು. ಖರ್ಚುಗಳು ಹೆಚ್ಚಾಗುತ್ತವೆ. ಹಳೆಯ ಸಂಪರ್ಕಗಳು ಮತ್ತು ಸಂಬಂಧಗಳನ್ನು ಪುನರುಜ್ಜೀವನಗೊಳಿಸಲು ಒಳ್ಳೆಯ ದಿನ. ಕೆಲಸದ ಮೇಲೆ ಗಮನಹರಿಸಿದರೆ ಫಲಿತಾಂಶವನ್ನು ದ್ವಿಗುಣಗೊಳಿಸಬಹುದು.
ಮೀನ ರಾಶಿ:
ನಿಮಗೆ ಗೊತ್ತಿಲ್ಲದ ಮೂಲದಿಂದ ಹಣವನ್ನು ಪಡೆಯಬಹುದು. ಅನೇಕ ಆರ್ಥಿಕ ತೊಂದರೆಗಳಿಂದ ಪರಿಹಾರ ಸಿಗುವುದು. ಸಮಸ್ಯೆಗಳನ್ನು ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳುವ ಮೂಲಕ ಮನಸ್ಸನ್ನು ಹಗುರಾಗಿಸಿಕೊಳ್ಳಬಹುದು.ಸಂಗಾತಿಯೊಂದಿಗೆ ಗಂಭೀರವಾದ ವಿಚಾರದಲ್ಲಿ ವಾದ ನಡೆಯಬಹುದು.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications