Daily Horoscope: ಆಯುಷ್ಮಾನ್ ಯೋಗದಿಂದ ಈ ರಾಶಿಯವರಿಗೆ ಧನ ಲಾಭ, ಕಠಿಣ ಪರಿಶ್ರಮಕ್ಕೆ ತಕ್ಕ ಫಲ
Daily Horoscope September 19: ಇಂದು ಭಾದ್ರಪದ ಮಾಸದ ಶುಕ್ಲ ಪಕ್ಷದ ಅಷ್ಟಮಿ ತಿಥಿ ಇರುತ್ತದೆ . ಮೂಲ ನಕ್ಷತ್ರದ ಪ್ರಭಾವ ಈ ದಿನದ ಮೇಲಿರುವುದು. ಆಯುಷ್ಮಾನ್ ಯೋಗದ ಸಂಯೋಜನೆ ಇರುವುದು. ಗ್ರಹ ಸ್ಥಾನಗಳಿಂದಾಗಿ, ಕೆಲವು ರಾಶಿಯವರಿಗೆ ಹೊಸ ವೃತ್ತಿ ಅವಕಾಶಗಳು, ವ್ಯವಹಾರ ಲಾಭಗಳು ಸಿಗುವುದು. ಆರ್ಥಿಕ ಲಾಭವಾಗುವುದು.
ಮೇಷ ರಾಶಿ
ಹೊಸ ಕೆಲಸಕ್ಕಾಗಿ ದೂರದ ಊರಿಗೆ ಪ್ರಯಾಣ ಮಾಡಬೇಕಾಗಬಹುದು. ಕೆಲಸಗಳು ಸರಾಗವಾಗಿ ಪೂರ್ಣಗೊಳ್ಳುತ್ತವೆ. ವೃತ್ತಿಗೆ ಸಂಬಂಧಿಸಿದ ಕೆಲಸಗಳು ಪ್ರಗತಿಯಾಗುವುದು. ಕಠಿಣ ಪರಿಶ್ರಮವು ಉತ್ತಮ ಫಲಿತಾಂಶಗಳನ್ನು ನೀಡುವುದು.
ಪರಿಚಯಸ್ಥರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಆರೋಗ್ಯವು ಸಾಮಾನ್ಯವಾಗಿರುವುದು.

ವೃಷಭ ರಾಶಿ
ಹೊಸ ಕೆಲಸವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸಬಹುದು. ವ್ಯವಹಾರದಲ್ಲಿ ಲಾಭವಾಗುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಸಿಕ್ಕಿರುವ ಅವಕಾಶಗಳನ್ನು ಬಳಸಿಕೊಳ್ಳಲು ಪ್ರಯತ್ನಿಸಿ. ಮನಸ್ಸಿನಲ್ಲಿ ಹೊಸ ಉತ್ಸಾಹ ಮೂಡುವುದು. ಕುಟುಂಬ ಸದಸ್ಯರ ಬೆಂಬಲದಿಂದಾಗಿ ಆತ್ಮವಿಶ್ವಾಸ ಹೆಚ್ಚಾಗುವುದು.
ಕೆಲಸದಲ್ಲಿ ಸಿಗುವ ಯಶಸ್ಸು ಆರ್ಥಿಕ ಸ್ಥಿತಿಯನ್ನು ಬಲಪಡಿಸುವುದು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ಮಿಥುನ ರಾಶಿ
ಸಾಮಾಜಿಕ ಸಂಪರ್ಕಗಳು ಹೊಸ ವ್ಯಾಪಾರ ಅವಕಾಶಗಳಿಗೆ ಕಾರಣವಾಗಬಹುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೊದಲು ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ. ವೃತ್ತಿಜೀವನದತ್ತ ಗಮನ ಹರಿಸಿ. ಮನಸ್ಸಿನ ಆಸೆ ಈಡೇರುವುದು. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಆರೋಗ್ಯವು ಸಾಮಾನ್ಯವಾಗಿರುವುದು.
ಕಟಕ ರಾಶಿ
ವ್ಯವಹಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಜಾಗರೂಕರಾಗಿರಿ. ಯುವಜನರಿಗೆ ಸಂದರ್ಶನಗಳಲ್ಲಿ ಯಶಸ್ಸು ಸಿಗುವುದು. ಕೆಲಸದ ಸ್ಥಳದಲ್ಲಿ ತಾಳ್ಮೆಯಿಂದಿರಿ. ಕುಟುಂಬದಲ್ಲಿ ನಡೆಯುತ್ತಿರುವ ವಿವಾದವು ಕೊನೆಗೊಳ್ಳುವುದು. ಮನೆಯಲ್ಲಿನ ವಾತಾವರಣವು ಸಂತೋಷದಿಂದ ಇರುವುದು. ಹಣಕಾಸಿನ ವಿಷಯಗಳಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ.
ಸಿಂಹ ರಾಶಿ
ಕೆಲಸದ ಬಗ್ಗೆ ಏಕಾಗ್ರತೆ ಹೆಚ್ಚಿಸಿಕೊಳ್ಳಿ. ಕೆಲಸದ ಸ್ಥಳದಲ್ಲಿ ನಿಮ್ಮ ಖ್ಯಾತಿ ಮತ್ತು ಮನ್ನಣೆ ಹೆಚ್ಚಾಗಬಹುದು. ವೈಯಕ್ತಿಕ ವಿಷಯಗಳನ್ನು ಎಲ್ಲರೊಂದಿಗೆ ಶೇರ್ ಮಾಡಬೇಡಿ. ಕುಟುಂಬದ ಹಿರಿಯರಿಂದ ಆರ್ಥಿಕ ನೆರವು ಸಿಗಬಹುದು. ಹಣದ ವಿಷಯದಲ್ಲಿ ಉದಾರವಾಗಿ ವರ್ತಿಸುವಾಗ ಜಾಗರೂಕರಾಗಿರಿ.
ಕನ್ಯಾರಾಶಿ
ಹೊಸ ಅವಕಾಶಗಳನ್ನು ಬಳಸಿಕೊಳ್ಳುವುದರಿಂದ ವ್ಯವಹಾರದಲ್ಲಿ ಸಕಾರಾತ್ಮಕ ಫಲಿತಾಂಶಗಳು ಸಿಗಬಹುದು. ಹಿರಿಯರಿಂದ ನಿಮಗೆ ಬೆಂಬಲ ಸಿಗುವುದು. ಕೆಲಸದ ಸ್ಥಳದಲ್ಲಿ ಉತ್ಸಾಹ ಮತ್ತು ಆತ್ಮವಿಶ್ವಾಸ ಹೆಚ್ಚಾಗುವುದು. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುವುದು.
ತುಲಾ ರಾಶಿ
ಒಂದು ನಿರ್ದಿಷ್ಟ ನಿರ್ಧಾರವು ನಿಮ್ಮ ವ್ಯವಹಾರದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಬಹುದು. ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಇಂದು ಮಹತ್ವದ ದಿನವಾಗಿರುವುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು.
ಮಾನಸಿಕವಾಗಿ ಬಲಶಾಲಿಯಾಗಿರುವಿರಿ. ಆತ್ಮವಿಶ್ವಾಸದಿಂದ ಮುನ್ನಡೆಯಿರಿ.
ವೃಶ್ಚಿಕ ರಾಶಿ
ವ್ಯವಹಾರದಲ್ಲಿ ಏರಿಳಿತಗಳು ಇರಬಹುದು. ಬೇರೆಯವರಿಂದ ಪ್ರಭಾವಿತರಾಗಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಅನಗತ್ಯ ವಿವಾದಗಳಿಂದ ದೂರವಿರಿ.
ಹಣದ ವಿಷಯಗಳಲ್ಲಿ ಜಾಗರೂಕರಾಗಿರಿ. ಯಾರ ಪ್ರಭಾವಕ್ಕೂ ಒಳಗಾಗಿ ಹೂಡಿಕೆ ಮಾಡಬೇಡಿ. ಆರೋಗ್ಯ ಸಮಸ್ಯೆ ಕಾಡಬಹುದು.
ಧನು ರಾಶಿ
ನಿಮ್ಮ ಮಾತಿನಲ್ಲಿ ಸಂಯಮವಿರಲಿ. ಮಾತೇ ಮುಳ್ಳಾಗಬಹುದು. ಮಾನಸಿಕ ಒತ್ತಡವು ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು. ಕುಟುಂಬ ಸದಸ್ಯರೊಂದಿಗೆ ಮಾತನಾಡುವಾಗ ತಾಳ್ಮೆಯಿಂದಿರಿ. ಬಾಕಿ ಇರುವ ಹಣವನ್ನು ಸ್ವೀಕರಿಸಲು ಇಂದು ಒಳ್ಳೆಯ ದಿನ. ಮಾನಸಿಕ ಅಶಾಂತಿ ಆಯಾಸಕ್ಕೆ ಕಾರಣವಾಗಬಹುದು.
ಮಕರ ರಾಶಿ
ಉತ್ಸಾಹದಿಂದಲೇ ದಿನದ ಆರಂಭವಾಗುವುದು. ಹೊಸ ಅವಕಾಶಗಳು ಸಿಗುವುದು. ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗುವುದು. ಸ್ನೇಹಿತರು ಕಷ್ಟದ ಸಮಯದಲ್ಲಿ ಜೊತೆ ನಿಲ್ಲುವರು. ಮನಸ್ಥಿತಿ ಉತ್ತಮವಾಗಿರುವುದು. ಮಾನಸಿಕ ನೆಮ್ಮದಿ ಹೆಚ್ಚುವುದು.
ಕುಂಭ ರಾಶಿ
ವ್ಯವಹಾರದಲ್ಲಿ ಲಾಭವಾಗುವುದು. ಲಾಭ ಗಳಿಸುವ ಅವಕಾಶಗಳು ಹೆಚ್ಚುವುದು. ಹಳೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರಿಂದ ಸಮಾಧಾನವಾಗುವುದು. ಕೆಲಸದಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು. ಹಳೆಯ ಆಸೆ ಈಡೇರುವುದು. ಕುಟುಂಬದಲ್ಲಿ ಸಂತೋಷದ ವಾತಾವರಣವಿರುವುದು.
ಮೀನ ರಾಶಿ
ಹೆತ್ತವರ ಕೋಪವನ್ನು ಎದುರಿಸಬೇಕಾಗಬಹುದು. ಆದರೆ ನಿಮ್ಮ ಪ್ರೀತಿಪಾತ್ರರ ಮುಖದಲ್ಲಿ ನಗುವನ್ನು ತರುವಲ್ಲಿ ಯಶಸ್ವಿಯಾಗುವಿರಿ. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಆರೋಗ್ಯವು ಉತ್ತಮವಾಗಿರುವುದು. ಒತ್ತಡ ಮತ್ತು ಚಿಂತೆ ಕಡಿಮೆಯಾಗುವುದು.


Click it and Unblock the Notifications
