Daily Horoscope Sep 8: ಇಂದು ಹೊಳೆಯುವುದು ಈ ನಾಲ್ಕು ರಾಶಿಯವರ ಅದೃಷ್ಟ, ವೃತ್ತಿಜೀವನದಲ್ಲಿ ಪ್ರಗತಿ, ಧನಲಾಭ
Daily Horoscope Sep 8: ಇಂದು ಕೃಷ್ಣ ಪಕ್ಷದ ದ್ವಾದಶಿ ತಿಥಿ ಮಧ್ಯಾಹ್ನ 2.44 ರವರೆಗೆ ಇರುತ್ತದೆ. ನಂತರ ತ್ರಯೋದಶಿ ತಿಥಿ ಪ್ರಾರಂಭವಾಗುತ್ತದೆ. ನಕ್ಷತ್ರಗಳ ರಾಜ ಎಂದು ಪರಿಗಣಿಸಲಾದ ಪುಷ್ಯ ನಕ್ಷತ್ರವು ಸಂಜೆ 4.40 ರವರೆಗೆ ಪರಿಣಾಮಕಾರಿಯಾಗಿರುವುದು. ನಂತರ ಆಶ್ಲೇಷ ನಕ್ಷತ್ರ ಪ್ರಾರಂಭವಾಗುತ್ತದೆ. ಯೋಗದ ಬಗ್ಗೆ ಹೇಳುವುದಾದರೆ, ಪರಿಘ ಯೋಗವು ತಡರಾತ್ರಿ 12.40 ವರೆಗೆ ಇದ್ದು, ನಂತರ ಶಿವ ಯೋಗ ಪ್ರಾರಂಭವಾಗುತ್ತದೆ.
ಮೇಷ ರಾಶಿ (Aries)
ನಿಂತು ಹೋಗಿರುವ ಕೆಲಸ ಚುರುಕಾಗುವುದು. ಕೆಲಸದ ಒತ್ತಡ ಇದ್ದಕ್ಕಿದ್ದಂತೆ ಹೆಚ್ಚಾಗಬಹುದು. ಆತ್ಮವಿಶ್ವಾಸದಿಂದ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಪ್ರಮುಖ ಕೆಲಸಗಳಿಗೆ ಅನುಗುಣವಾಗಿ ಆದ್ಯತೆ ನೀಡಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವುದು. ಮನೆಯಲ್ಲಿ ವಾತಾವರಣ ಸಾಮಾನ್ಯವಾಗಿರುವುದು. ಹಣದ ಸಮಸ್ಯೆಗೆ ಪರಿಹಾರ ಸಿಗುವುದು. ಅನಿರೀಕ್ಷಿತ ವೆಚ್ಚಗಳು ಎದುರಾಗಬಹುದು. ಆರೋಗ್ಯಕ್ಕೆ ಗಮನ ಕೊಡಿ.

ವೃಷಭ ರಾಶಿ (Taurus)
ವ್ಯವಹಾರಗಳಲ್ಲಿ ವಿಶೇಷ ಎಚ್ಚರಿಕೆ ವಹಿಸಿ. ಕಾನೂನು, ಆಡಳಿತಾತ್ಮಕ ಅಥವಾ ರಿಯಲ್ ಎಸ್ಟೇಟ್ ಸಂಬಂಧಿತ ವಿಷಯಗಳಲ್ಲಿ ಪ್ರಗತಿಯಾಗುವುದು. ಸಂಬಂಧಗಳಲ್ಲಿ ಉಂಟಾಗಿರುವ ಮನಸ್ತಾಪ ಕಡಿಮೆಯಾಗುವುದು. ಅವಿವಾಹಿತರಿಗೆ ಮದುವೆ ಮಾತುಕತೆ ನಡೆಯಬಹುದು.ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುವುದು. ಆತುರದ ಹೂಡಿಕೆಗಳನ್ನು ಮಾಡದಿರುವುದೇ ಒಳ್ಳೆಯದು.
ಮಿಥುನ ರಾಶಿ (Gemini)
ಹೊಸ ಸಂಪರ್ಕಗಳು ಭವಿಷ್ಯದಲ್ಲಿ ಹೆಚ್ಚು ಪ್ರಯೋಜನಗಳನ್ನು ತಂದು ಕೊಡುವುದು. ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಹುಟ್ಟಿಕೊಳ್ಳುವುದು. ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಸಿಗುವುದು.ಅಗತ್ಯಕ್ಕೆ ಅನುಗುಣವಾಗಿ ನಿಮ್ಮ ಕೆಲಸಕ್ಕೆ ಆದ್ಯತೆ ನೀಡಿ.ನಿಮ್ಮ ಆಲೋಚನೆ ಅಭಿಪ್ರಾಯಗಳಿಗೆ ಗೌರವ ಸಿಗುವುದು. ಹಣದ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಯಾರಿಗೂ ಸಾಲ ನೀಡುವುದಕ್ಕೆ ಹೋಗಬೇಡಿ.
ಕಟಕ ರಾಶಿ (Cancer)
ವ್ಯಾಪಾರ ಪಾಲುದಾರಿಕೆಗೆ ಸಂಬಂಧಿಸಿದಂತೆ ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಹಿರಿಯ ಅಧಿಕಾರಿಗಳಿಂದ ಉತ್ತಮ ಮಾರ್ಗದರ್ಶನ ಸಿಗುವುದು. ಹಿಂದಿನ ಪ್ರಯತ್ನಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡುವುದು. ಆತ್ಮವಿಶ್ವಾಸ ಹೆಚ್ಚಾಗುವುದು. ನೀವು ಮಾಡುವ ಕೆಲಸಗಳಿಗೆ ಕುಟುಂಬದಿಂದ ಭಾವನಾತ್ಮಕ ಬೆಂಬಲ ಸಿಗುವುದು. ಭವಿಷ್ಯದ ಯೋಜನೆಗಳ ಕುರಿತು ಸಂಗಾತಿಯೊಂದಿಗೆ ಗಂಭೀರ ಚರ್ಚೆಗಳು ನಡೆಯುವುದು. ಅಗತ್ಯ ವಸ್ತುಗಳಿಗಾಗಿ ಖರ್ಚು ಮಾಡಬೇಕಾಗಿ ಬರಬಹುದು. ಉಳಿತಾಯಕ್ಕೆ ಆದ್ಯತೆ ನೀಡಿ. ಹಳೆಯ ಹೂಡಿಕೆಗಳಿಂದ ಲಾಭವಾಗುವುದು. ಮಾನಸಿಕ ಒತ್ತಡ ಮತ್ತು ಆತಂಕ ಹೆಚ್ಚಾಗುವುದು.
ಸಿಂಹ ರಾಶಿ (Leo)
ಕೆಲಸದ ಸ್ಥಳದಲ್ಲಿನ ಅಡೆತಡೆಗಳು ದೂರವಾಗುವುದು. ಹಳೆಯ ವ್ಯಾಪಾರ ಸಂಪರ್ಕಗಳು ಗಮನಾರ್ಹ ಆರ್ಥಿಕ ಲಾಭಗಳನ್ನು ತರುವ ಸಾಧ್ಯತೆಯಿದೆ. ನಿಂತು ಹೋಗಿರುವ ಯೋಜನೆಗಳು ವೇಗ ಪಡೆಯುವುದು. ನಾಯಕತ್ವ ಕೌಶಲ್ಯವನ್ನು ಪ್ರದರ್ಶಿಸಲು ಅವಕಾಶ ಸಿಗುವುದು. ಮನೆಯಲ್ಲಿ ನಿಮ್ಮ ಅಭಿಪ್ರಾಯಗಳನ್ನು ಗೌರವಿಸಲಾಗುವುದು. ಆರ್ಥಿಕ ಸ್ಥಿತಿ ಸಮತೋಲನದಲ್ಲಿರುವುದು. ಆದಾಯದ ಮೂಲಗಳು ಹೆಚ್ಚಾಗುವುದು. ಅಪಾಯಕಾರಿ ಹೂಡಿಕೆಗಳನ್ನು ತಪ್ಪಿಸಿ.
ಕನ್ಯಾರಾಶಿ (Virgo)
ವ್ಯಾಪಾರ ಪ್ರವಾಸಗಳು ಭವಿಷ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿರುವುದು. ಸಾಮರ್ಥ್ಯಗಳು ಹೆಚ್ಚಾಗುವುದು. ಸರಿಯಾದ ಯೋಜನೆ ನಿಮ್ಮ ಕೆಲಸಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಳಿಸಲು ಸಹಾಯವಾಗುವುದು. ಮನೆಯಲ್ಲಿ ಸಾಮರಸ್ಯದ ವಾತಾವರಣ ಇರುವುದು. ಪ್ರಮುಖ ವಿಷಯಗಳ ಕುರಿತು ಸಂಗಾತಿಯೊಂದಿಗೆ ಸಕಾರಾತ್ಮಕ ಚರ್ಚೆಗಳನ್ನು ನಡೆಸುವಿರಿ. ಆದಾಯ ಮತ್ತು ವೆಚ್ಚಗಳ ನಡುವೆ ಉತ್ತಮ ಸಮತೋಲನ ಇರುವುದು. ಸಣ್ಣಪುಟ್ಟ ಜೀರ್ಣಕಾರಿ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ.
ತುಲಾ ರಾಶಿ (Libra)
ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಕಠಿಣ ಪರಿಶ್ರಮದ ಪ್ರತಿಫಲ ಸಿಗುವುದು. ಸಂಬಂಧಿಕರು ಅಥವಾ ಸ್ನೇಹಿತರ ಭೇಟಿಯಿಂದ ಸಂತೋಷ ಹೆಚ್ಚಾಗುವುದು. ವೈವಾಹಿಕ ಜೀವನದಲ್ಲಿ ಸಣ್ಣ ಸಂತೋಷಗಳು ಸಂಬಂಧವನ್ನು ಗಾಢವಾಗಿಸುವುದು. ಮನಸ್ಸಿಗೆ ಮತ್ತು ದೇಹಕ್ಕೆ ವಿಶ್ರಾಂತಿಯ ಅಗತ್ಯವಿದೆ.
ವೃಶ್ಚಿಕ ರಾಶಿ (scorpio)
ಹಳೆಯ ಯೋಜನೆಗಳನ್ನು ಪೂರ್ಣಗೊಳಿಸುವತ್ತ ಗಮನ ಹರಿಸಿ. ಕಚೇರಿಯಲ್ಲಿ ಸ್ಪರ್ಧೆ ಹೆಚ್ಚಾಗುವುದು. ಸಹೋದ್ಯೋಗಿಗಳೊಂದಿಗಿನ ಭಿನ್ನಾಭಿಪ್ರಾಯಗಳಿಗೆ ತಕ್ಷಣ ರಿಯಾಕ್ಟ್ ಮಾಡಬೇಡಿ. ಮನೆಯಲ್ಲಿ ಶುಭ ಕಾರ್ಯಗಳಾಗುವುದು. ಹಳೆಯ ಸಾಲಗಳು ತೀರುವುದು. ಒಳಹರಿವಿನೊಂದಿಗೆ ವೆಚ್ಚಗಳು ಹೆಚ್ಚಾಗುವುದು. ಒತ್ತಡ ಮತ್ತು ನಿದ್ರೆಯ ಕೊರತೆಯು ತಲೆನೋವು ಅಥವಾ ಆಯಾಸಕ್ಕೆ ಕಾರಣವಾಗಬಹುದು.
ಧನು ರಾಶಿ (Sagittarius)
ಹೊಸ ಸಂಪರ್ಕಗಳು ವ್ಯವಹಾರದಲ್ಲಿ ಉತ್ತಮ ಲಾಭಕ್ಕೆ ಕಾರಣವಾಗುವುದು. ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಸಿಗಬಹುದು. ಅದೃಷ್ಟ ನಿಮ್ಮ ಕಡೆ ಇದ್ದರೆ, ವೃತ್ತಿಗೆ ಸಂಬಂಧಿಸಿದ ಪ್ರಮುಖ ಕಾರ್ಯಗಳು ಮುಂದುವರಿಯುವುದು. ಕುಟುಂಬದ ವಾತಾವರಣವು ಆಹ್ಲಾದಕರ ಮತ್ತು ಸಕಾರಾತ್ಮಕವಾಗಿರುವುದು. ಧಾರ್ಮಿಕ ಪ್ರವಾಸದಿಂದ ಕುಟುಂಬ ಸಾಮರಸ್ಯ ಹೆಚ್ಚಾಗುವುದು. ಪ್ರಯಾಣ ಅಥವಾ ಅಧ್ಯಯನಕ್ಕೆ ಸಂಬಂಧಿಸಿದ ವೆಚ್ಚಗಳು ಹೆಚ್ಚಾಗಬಹುದು.
ಮಕರ ರಾಶಿ (Capricorn)
ನಿಂತು ಹೋಗಿದ್ದ ಯೋಜನೆಗಳನ್ನು ಮತ್ತೆ ಶುರು ಮಾಡಲು ಸಮಯ ಅನುಕೂಲಕರವಾಗಿದೆ. ಆಸ್ತಿಗೆ ಸಂಬಂಧಿಸಿದ ವಿಷಯಗಳು ಸಕಾರಾತ್ಮಕ ಪ್ರಗತಿಯನ್ನು ಕಾಣುವುದು. ಕೆಲಸದಲ್ಲಿ ಶಿಸ್ತು ಮತ್ತು ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಲು ಇದು ಒಳ್ಳೆಯ ಸಮಯ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುವುದು. ವೈವಾಹಿಕ ಜೀವನದಲ್ಲಿ ಹಣಕಾಸಿನ ಚರ್ಚೆಗಳು ಮುಖ್ಯವಾಗುವುದು. ಹಳೆಯ ಹೂಡಿಕೆಗಳು ಅಥವಾ ಪೂರ್ವಜರ ಆಸ್ತಿಯಿಂದ ಹಠಾತ್ ಆರ್ಥಿಕ ಲಾಭವಾಗುವುದು.
ಕುಂಭ ರಾಶಿ (Aquarius)
ಹೊಸ ಆಲೋಚನೆಗಳನ್ನು ಕಾರ್ಯಗತಗೊಳಿಸುವಿರಿ. ಕೆಲಸದಲ್ಲಿ ಮೇಲಧಿಕಾರಿಗಳಿಂದ ಸಂಪೂರ್ಣ ಬೆಂಬಲ ಸಿಗುವುದು. ವಿದ್ಯಾರ್ಥಿಗಳು ಸ್ನೇಹಿತ ಅಥವಾ ಹಿರಿಯರ ಸಹಾಯದಿಂದ ಉತ್ತಮ ತಂತ್ರಗಳನ್ನು ರೂಪಿಸಲು ಸಾಧ್ಯವಾಗುವುದು. ಸಂಗಾತಿಯಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುವುದು. ಮಕ್ಕಳ ಭವಿಷ್ಯದ ಬಗ್ಗೆ ನಿರ್ದಿಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ನಿಮ್ಮ ಮತ್ತು ಕುಟುಂಬದ ನಡುವಿನ ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ. ಆದಾಯ ಮತ್ತು ಖರ್ಚು ಸಮತೋಲನದಲ್ಲಿರುವುದು. ಆರೋಗ್ಯದತ್ತ ಗಮನ ಹರಿಸಿ.
ಮೀನ ರಾಶಿ (Pisces)
ಹಿಂದಿನ ಅನುಭವಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ವ್ಯವಹಾರದಲ್ಲಿನ ನಷ್ಟವನ್ನು ಸರಿದೂಗಿಸಬಹುದು. ಸಹೋದ್ಯೋಗಿಗಳೊಂದಿಗಿನ ಭಿನ್ನಾಭಿಪ್ರಾಯ ಹೋಗಲಾಡಿಸಲು ಪ್ರಯತ್ನಿಸಿ. ಕಠಿಣ ಪರಿಶ್ರಮ ವಹಿಸಬೇಕಾಗುವುದು. ವಿದ್ಯಾರ್ಥಿಗಳು ಶಿಸ್ತು ಮತ್ತು ಏಕಾಗ್ರತೆಯನ್ನು ಕಾಪಾಡಿಕೊಳ್ಳಬೇಕಾಗುವುದು. ಮನೆಯ ವಿಷಯಗಳಿಗೆ ಬಂದಾಗ ನಿಮ್ಮ ಮಾತನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಅನಿರೀಕ್ಷಿತವಾಗಿ ವೆಚ್ಚಗಳು ಹೆಚ್ಚಾಗಬಹುದು.ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.


Click it and Unblock the Notifications
