Horoscope Today: ದಿನ ಭವಿಷ್ಯ ಫೆಬ್ರವರಿ 24- ಈ ರಾಶಿಗೆ ಪರಶಿವನ ದೆಸೆಯಿಂದ ಸುಖ ಸಮೃದ್ಧಿ
ಸೋಮವಾರ ಫೆಬ್ರವರಿ 24 ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಏಕದಶಿ ದಿನಾಂಕವಾಗಿದೆ. ಈ ದಿನ ರಾಹುಕಾಲ ಬೆಳಗ್ಗೆ 8ರಿಂದ ಬೆಳಗ್ಗೆ 9:34ರವರೆಗೆ ಇರುತ್ತದೆ. ಇದರ ನಂತರ ದ್ವಾದಶಿ ದಿನಾಂಕ ಪ್ರಾರಂಭವಾಗುತ್ತದೆ. ಫೆಬ್ರವರಿ 24 ಸೋಮವಾರ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.
ಮೇಷ ರಾಶಿ
ಫೆಬ್ರವರಿ 24 ಮೇಷ ರಾಶಿಯವರಿಗೆ ಬಹಳ ಶುಭ ದಿನವಾಗಿದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ಅಥವಾ ಸಂಬಳ ಹೆಚ್ಚಳದ ಒಳ್ಳೆಯ ಸುದ್ದಿ ಸಿಗಬಹುದು. ನೀವು ಹೊಸ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರೆ, ಅದರಲ್ಲಿ ಯಶಸ್ಸು ಪಡೆಯುವ ಸಾಧ್ಯತೆಗಳಿವೆ. ವ್ಯಾಪಾರ ಮಾಡುವವರಿಗೂ ಈ ದಿನ ಪ್ರಯೋಜನಕಾರಿಯಾಗಲಿದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳಬಹುದು.

ವೃಷಭ ರಾಶಿ
ವೃಷಭ ರಾಶಿಯವರಿಗೆ ಫೆಬ್ರವರಿ 24ರ ದಿನ ಉದ್ಯೋಗದಲ್ಲಿ ಲಾಭ ಸಿಗಲಿದೆ. ಶಿವನ ಆಶೀರ್ವಾದದಿಮದಾಗಿ ಸಕಲೈಶ್ವರ್ಯ ಪ್ರಾಪ್ತಿಯಾಗಲಿದೆ. ಇಷ್ಟಾರ್ಥಗಳು ನೆರವೇರುವ ಸಮಯ ಇದಾಗಿದೆ. ಹಳೆಯ ಸಾಲಗಳು ತೀರುತ್ತವೆ. ಈ ಸಮಯ ನಿಮಗೆ ಒಳ್ಳೆಯದಾಗಿದೆ. ಉದ್ಯೋಗ ಮತ್ತು ವ್ಯವಹಾರದಲ್ಲೂ ಪ್ರಗತಿಯ ಲಕ್ಷಣಗಳು ಕಂಡು ಬರುತ್ತವೆ. ನಿಮ್ಮ ಹತ್ತಿರದ ವ್ಯಕ್ತಿಯಿಂದ ಅಚ್ಚರಿಯ ಉಡುಗೊರೆ ಸಿಗುವ ಸಾಧ್ಯತೆಯೂ ಇದೆ.
ಮಿಥುನ ರಾಶಿ
ಈ ದಿನ ನಿಮಗೆ ಹೆಚ್ಚು ಓಡಾಡುವುದು ಇರುತ್ತದೆ. ಮಾಡಿದ ಪ್ರಯತ್ನಗಳು ಸಾರ್ಥಕವಾಗುತ್ತವೆ. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಸಂಬಂಧಗಳಲ್ಲಿ ಆತ್ಮೀಯತೆ ಇರುವುದು. ಶಿಕ್ಷಣ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ವಿರೋಧಿಗಳು ಸೋಲುತ್ತಾರೆ. ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ಆರ್ಥಿಕ ವಿಷಯಗಳಲ್ಲಿ ಪ್ರಗತಿ ಹೆಚ್ಚಾಗಲಿದೆ.
ಕರ್ಕಾಟಕ ರಾಶಿ
ವ್ಯಾಪಾರ ಪ್ರಯತ್ನಗಳು ಫಲಪ್ರದವಾಗುತ್ತವೆ. ಕೌಟುಂಬಿಕ ಸಮಸ್ಯೆ ಬಗೆಹರಿಯಲಿದೆ. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಈ ದಿನ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕುಟುಂಬದ ಜವಾಬ್ದಾರಿಗಳು ಪೂರ್ಣಗೊಳ್ಳುತ್ತವೆ. ಶಿಕ್ಷಣ ಕ್ಷೇತ್ರದಲ್ಲಿನ ಪ್ರಯತ್ನಗಳು ಫಲಪ್ರದವಾಗುತ್ತವೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ವೃತ್ತಿ ಮತ್ತು ವ್ಯವಹಾರದ ವಿಷಯದಲ್ಲಿ ಈ ದಿನ ತುಂಬಾ ಒಳ್ಳೆಯದಾಗಿರುತ್ತದೆ. ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಇದು ಸರಿಯಾದ ಸಮಯ. ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ, ಯಶಸ್ಸಿನ ಸಾಧ್ಯತೆಗಳು ಹೆಚ್ಚು. ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುವುದು. ಜನರು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ಸಮಾಜದಲ್ಲಿ ನಿಮ್ಮ ಗುರುತು ಹೆಚ್ಚಾಗುತ್ತದೆ ಮತ್ತು ನಿಮಗೆ ಗೌರವ ಸಿಗುತ್ತದೆ.
ಕನ್ಯಾ ರಾಶಿ
ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಬೆಳೆಯುವುದು. ಹಣ ಖರ್ಚು ಮಾಡುವ ಮುನ್ನ ಯೋಚಿಸಿ. ಸಂಬಂಧಿಕರಿಂದ ಒತ್ತಡ ಎದುರಾಗಬಹುದು. ಆಸ್ತಿ ವಿಷಯಗಳಲ್ಲಿ ಜಯ ನಿಮ್ಮದಾಗಿರುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಯಾವುದೇ ಕೆಲಸವನ್ನು ಪೂರ್ಣಗೊಳಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ.
ತುಲಾ ರಾಶಿ
ಸಂಗಾತಿಯೊಂದಿಗಿನ ಸಂಬಂಧಗಳಲ್ಲಿ ಆತ್ಮೀಯತೆ ಹೆಚ್ಚಾಗಲಿದೆ. ಹಣಕಾಸಿನ ವಿಷಯಗಳಲ್ಲಿ ನಷ್ಟ ಉಂಟಾಗಬಹುದು. ಸೃಜನಶೀಲ ಪ್ರಯತ್ನಗಳು ಫಲ ನೀಡುವುದಿಲ್ಲ. ನೀವು ಕೆಲಸದಲ್ಲಿ ಚಿಂತೆಗೀಡಾಗಬಹುದು. ಸಾಮಾಜಿಕವಾಗಿ ಪ್ರತಿಷ್ಠೆ ಕಡಿಮೆಯಾಗಬಹುದು. ಬೆಳಿಗ್ಗೆ ಶಿವನನ್ನು ಪೂಜಿಸಿ. ಪರಶಿವನ ಆಶೀರ್ವಾದ ಪಡೆಯಲ ದಾನ ಮಾಡಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ದಿನ ತುಂಬಾ ವಿಶೇಷವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುವುದು. ನಿಮ್ಮ ಪ್ರತಿಭೆಗೆ ಮೆಚ್ಚುಗೆ ದೊರೆಯುತ್ತದೆ. ನಿಮಗೆ ಕೆಲವು ದೊಡ್ಡ ಜವಾಬ್ದಾರಿಗಳು ಸಿಗಬಹುದು. ಅದು ನಿಮ್ಮ ವೃತ್ತಿಜೀವನವನ್ನು ಮತ್ತಷ್ಟು ಮುನ್ನಡೆಸಲು ಸಹಾಯ ಮಾಡುತ್ತದೆ. ನಿಮ್ಮ ಕೆಲಸವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ನಿಮಗೆ ಉತ್ತಮ ಅವಕಾಶ ಸಿಗಬಹುದು. ಕುಟುಂಬ ಜೀವನ ಆಹ್ಲಾದಕರವಾಗಿರುವುದು. ಕೆಲವು ಒಳ್ಳೆಯ ಸುದ್ದಿಗಳು ಮನೆಯಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತವೆ.
ಧನು ರಾಶಿ
ಗೃಹೋಪಯೋಗಿ ವಸ್ತುಗಳ ಖರೀದಿಯಲ್ಲಿ ಹೆಚ್ಚಳವಾಗುವುದು. ವೈಯಕ್ತಿಕ ಸಂತೋಷ ಹೆಚ್ಚಾಗಲಿದೆ. ಆರ್ಥಿಕ ವಿಷಯಗಳಲ್ಲಿ ಪ್ರಗತಿ ಕಂಡುಬರಲಿದೆ. ವ್ಯವಹಾರದ ಖ್ಯಾತಿ ಹೆಚ್ಚಾಗುತ್ತದೆ. ಪ್ರಯತ್ನಗಳು ಫಲಪ್ರದವಾಗುತ್ತವೆ. ಲಕ್ಷ್ಮೀ ದೇವಿಯ ಕೃಪೆಯಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹೀಗಾಗಿ ಇಂದು ಪರಶಿವನನ್ನು ಮೆಚ್ಚಿಸಲು ಉಪವಾಸವನ್ನು ಮಾಡಿ.
ಮಕರ ರಾಶಿ
ಮಕರ ರಾಶಿಯವರಿಗೆ ಫೆಬ್ರವರಿ 24 ಆರ್ಥಿಕವಾಗಿ ಪ್ರಯೋಜನಕಾರಿಯಾಗಿದೆ. ನೀವು ದೊಡ್ಡ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಇದು ಸರಿಯಾದ ಸಮಯವಾಗಿರುತ್ತದೆ. ಮನೆ ಮತ್ತು ಕುಟುಂಬದಲ್ಲಿ ಸಂತೋಷ ಹೆಚ್ಚಾಗುವುದು. ನಿಮ್ಮ ಪ್ರೀತಿಪಾತ್ರರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗಲಿದೆ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸಿನ ಸಾಧ್ಯತೆಗಳಿವೆ. ಅಧ್ಯಯನ ಮಾಡುತ್ತಿರುವವರಿಗೆ ಇದು ಒಳ್ಳೆಯ ದಿನವಾಗಿರುತ್ತದೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿನ ಸಾಧ್ಯತೆಯಿದೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ದಿನ ಅದ್ಭುತವಾಗಿದೆ. ವಿರೋಧಿಗಳು ಮಿತ್ರರಾಗುವ ಸಮಯ ಇದು. ನಿಮ್ಮ ಕುಟುಂಬ ಸದಸ್ಯರ ಆರೋಗ್ಯ ಸುಧಾರಿಸಲಿದೆ. ಸಂತೋಷ ಮನೆಯಲ್ಲಿ ತಾಂಡವ ಆಡಲಿದೆ. ದೀರ್ಘ ಪ್ರಯಾಣದ ಸಾಧ್ಯತೆಗಳಿವೆ. ಮನೆಯಲ್ಲಿ ಸಂತಸದ ವಾತಾವರಣದಿಂದಾಗಿ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ.
ಮೀನ ರಾಶಿ
ಮೀನ ರಾಶಿಯವರಿಗೆ ಈ ದಿನ ಮಾಡಿದ ಪ್ರಯಾಣ ಆಹ್ಲಾದಕರವಾಗಿರುತ್ತದೆ. ಸಂಪತ್ತು, ಖ್ಯಾತಿ ಹೆಚ್ಚಳಕ್ಕಾಗಿ ನಿತ್ಯಾ ಕುಬೇರನನ್ನು ಆರಾಧಿಸಿ. ದಾನ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ ಪರ ಶಿವನ ಮೆಚ್ಚುಗೆ ಪಡೆಯುವಿರಿ. ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗಲು ಹಸಿದವರಿಗೆ ಅನ್ನ ನೀಡಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications