Daily Horoscope: ಈ ರಾಶಿಯವರ ಮೇಲಿರುವುದು ಲಕ್ಷ್ಮೀ ದೇವಿಯ ಆಶೀರ್ವಾದ, ವ್ಯಾಪಾರದಲ್ಲಿಯೂ ಲಾಭ, ಕೆಲಸಗಳಲ್ಲಿ ಯಶಸ್ಸು
Daily Horoscope August 22: ಇಂದು ಶುಕ್ಲ ಪಕ್ಷ ದಶಮಿ ತಿಥಿ. ಇಂದು ಮಧ್ಯಾಹ್ನ 2.49ರವರೆಗೆ ಜ್ಯೇಷ್ಠ ನಕ್ಷತ್ರ ಇರುವುದು. ಮಧ್ಯಾಹ್ನ 2.49ರಿಂದ ಮೂಲ ನಕ್ಷತ್ರ ಶುರುವಾಗುವುದು. ಇಂದಿನ ದಿನ ಯಾವ ರಾಶಿಯವರಿಗೆ ಅದೃಷ್ಟ ಯಾವ ರಾಶಿಗೆ ದುರಾದೃಷ್ಟ ಎನ್ನುವದನ್ನು ತಿಳಿಯೋಣ. ಎಲ್ಲಾ ಹನ್ನೆರಡು ರಾಶಿಯವರ ದಿನ ಭವಿಷ್ಯ ಹೇಗಿದೆ ನೋಡೋಣ.
ಮೇಷ ರಾಶಿ
ಕೆಲಸದ ಸ್ಥಳದಲ್ಲಿ ಒಳ್ಳೆಯ ವಾತಾವರಣ ಇರುವುದು. ಸಹೋದ್ಯೋಗಿಗಳೊಂದಿಗಿನ ಸಂಬಂಧ ಉತ್ತಮವಾಗಿರುವುದು. ಹೊಸ ಯೋಜನೆಗೆ ಕೈ ಹಾಕುವಿರಿ. ಅದರಲ್ಲಿ ಯಶಸ್ವಿಯೂ ಆಗುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಕೌಟುಂಬಿಕ ಸಮಸ್ಯೆ ಬಗೆಹರಿಯುವುದು.

ವೃಷಭ ರಾಶಿ
ಇಂದು ಅನುಕೂಲಕರ ದಿನವಾಗಿರುವುದು. ಕುಟುಂಬ ಜೀವನದಲ್ಲಿ ಸಂತೋಷ ಇರುವುದು. ಬಹಳ ಸಮಯದಿಂದ ಬಾಕಿ ಉಳಿದಿರುವ ಕೆಲಸ ಇವತ್ತು ಪೂರ್ಣವಾಗುವುದು. ಸಹೋದ್ಯೋಗಿಗಳ ಬೆಂಬಲ ಇರುವುದು. ಸ್ನೇಹಿತರೊಂದಿಗೆ ಸಂತೋಷದಿಂದ ದಿನವನ್ನು ಕಳೆಯುವಿರಿ.
ಮಿಥುನ ರಾಶಿ
ಇಂದು ದಿನ ಉತ್ತಮವಾಗಿರುವುದು. ವ್ಯವಹಾರದಲ್ಲಿ ಆರ್ಥಿಕ ಲಾಭವಾಗುವುದು. ಖರ್ಚು ವೆಚ್ಚಗಳು ಹೆಚ್ಚಾಗುವುದು. ನ್ಯಾಯಾಲಯದ ಪ್ರಕರಣಗಳಲ್ಲಿ ಪರಿಹಾರ ಸಿಗುವುದು. ಒಳ್ಳೆಯ ಕಂಪನಿಯಿಂದ ಕೆಲಸದ ಆಫರ್ ಸಿಗುವುದು.
ಕರ್ಕಾಟಕ ರಾಶಿ
ಈ ದಿನ ಸಂತೋಷದಿಂದ ಕೂಡಿರುವುದು. ಒಳ್ಳೆಯ ಸುದ್ದಿ ಸಿಗುವುದು. ಬಡ್ತಿಗಾಗಿ ಕಾಯುತ್ತಿದ್ದವರ ನಿರೀಕ್ಷೆ ಕೊನೆಯಾಗುವುದು. ಕೆಲಸದ ಒತ್ತಡ ಹೆಚ್ಚಾಗುವುದು. ಅತ್ಯಂತ ಎಚ್ಚರಿಕೆಯಿಂದ ಕೆಲಸ ಮಾಡುವಿರಿ. ಆರ್ಥಿಕ ಲಾಭಗಳು ಮುಂದುವರಿಯುವ ಸಾಧ್ಯತೆಯಿದೆ.
ಸಿಂಹ ರಾಶಿ
ಬೇರೆ ಬೇರೆ ಮೂಲಗಳಿಂದ ಹಣ ಹರಿದು ಬರುವುದು. ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳುವಿರಿ. ಉದ್ಯೋಗದಲ್ಲಿ ಯಶಸ್ಸು ಸಿಗುವ ಸಾಧ್ಯತೆಯಿದೆ. ಸಂಬಳವೂ ಹೆಚ್ಚಾಗಬಹುದು. ಆಸ್ತಿ ವಿಷಯಗಳಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು.
ಕನ್ಯಾ ರಾಶಿ
ಇಂದು ನಿಮ್ಮ ಪಾಲಿಗೆ ವಿಶೇಷ ದಿನವಾಗಿರುವುದು. ಕೆಲಸದಲ್ಲಿ ಹೊಸ ಅವಕಾಶ ಸಿಗುವುದು. ಕುಟುಂಬ ಜೀವನವು ಸಂತೋಷವಾಗಿರುವುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು.ಅನಗತ್ಯ ವಾದಗಳಿಂದ ದೂರವಿರಿ. ನಿಮ್ಮ ಕೆಲಸದ ಮೇಲೆ ಗಮನಹರಿಸಿ.
ತುಲಾ ರಾಶಿ
ಉತ್ಸಾಹದಿಂದಲೇ ಇಂದಿನ ದಿನ ಆರಂಭವಾಗುವುದು.ಆರಂಭಿಸುವ ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು. ಕುಟುಂಬ ಜೀವನವು ಸಂತೋಷದಿಂದ ಕೂಡಿರುವುದು. ಕೆಲಸದಲ್ಲಿ ಯಶಸ್ಸು ಸಿಗುವುದು. ಸಮಾಜದಲ್ಲಿ ಗೌರವ ಹೆಚ್ಚಾಗುವುದು.
ವೃಶ್ಚಿಕ ರಾಶಿ
ದಿನಚರಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವಿರಿ. ಇಂದು ಯಾವುದೇ ನಿರ್ಧಾರ ತೆಗೆದುಕೊಂಡರೂ ಎಚ್ಚರಿಕೆಯಿಂದ ಇರಿ. ವ್ಯವಹಾರದಲ್ಲಿ ಅಭಿವೃದ್ದಿಯಾಗುವುದು. ಆರ್ಥಿಕ ಪರಿಸ್ಥಿತಿ ಇಂದು ಉತ್ತಮವಾಗಿರುವುದು. ಹೊಸ ಅವಕಾಶಗಳು ದೊರೆಯುವುದು.
ಧನು ರಾಶಿ
ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುವುದು. ಆತ್ಮವಿಶ್ವಾಸ ಹೆಚ್ಚಾಗುವುದು. ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು. ಕುಟುಂಬದೊಂದಿಗೆ ನಿಮಗೆ ಇಷ್ಟವಾದ ಸ್ಥಳಗಳಿಗೆ ಭೇಟಿ ನೀಡುವಿರಿ. ಸಂಗಾತಿಯೊಂದಿಗಿನ ನಿಮ್ಮ ಬಾಂಧವ್ಯ ಉತ್ತಮವಾಗಿರುವುದು. ಸರ್ಕಾರಿ ಉದ್ಯೋಗಗಳಲ್ಲಿ ಕೆಲಸ ಮಾಡುವವರಿಗೆ ಬಡ್ತಿ ಸಿಗುವ ಸಾಧ್ಯತೆಯಿದೆ.
ಮಕರ ರಾಶಿ
ಎಲ್ಲಾ ಕೆಲಸಗಳಲ್ಲಿ ನೀವು ಹಾಕುವ ಪ್ರಯತ್ನದಿಂದ ಉತ್ತಮ ಯಶಸ್ಸು ಸಿಗುವುದು. ಹಠಾತ್ ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಕೆಲಸದ ಒತ್ತಡ ಹೆಚ್ಚಾಗಿರುವುದು. ಕೆಲಸ ಮತ್ತು ಕುಟುಂಬದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುವುದು.
ಕುಂಭ ರಾಶಿ
ಕೆಲಸ ಬದಲಾಯಿಸುವ ಪ್ರಯತ್ನಕ್ಕೆ ಯಶಸ್ಸು ಸಿಗುವುದು. ಸಂಬಳ ಹೆಚ್ಚಾಗುವುದು. ಆರ್ಥಿಕ ಪರಿಸ್ಥಿತಿ ಸಮತೋಲನದಲ್ಲಿರುವುದು. ಮನೆಯಲ್ಲಿ ಶಾಂತಿ ಮತ್ತು ಸಂತೋಷ ಇರುವುದು. ಮನೆಯ ಜವಾಬ್ದಾರಿಗಳನ್ನು ಪೂರೈಸುವಲ್ಲಿ ಸಂಗಾತಿಯ ಬೆಂಬಲ ಸಿಗುವುದು.
ಮೀನ ರಾಶಿ
ಇಂದು ನಿಮಗೆ ಶುಭ ದಿನವಾಗಿರುತ್ತದೆ. ನಿಮ್ಮ ಕೆಲಸದ ಮೇಲೆ ಗಮನ ಹರಿಸುವಿರಿ. ಉಳಿತಾಯ ಯೋಜನೆಗಳು ಯಶಸ್ವಿಯಾಗುವುದು. ಹೂಡಿಕೆ ಮಾಡಲು ಸುವರ್ಣ ಅವಕಾಶ ಸಿಗುವುದು. ಕುಟುಂಬದೊಂದಿಗೆ ತೀರ್ಥಯಾತ್ರೆಗೆ ಹೋಗುವ ಅವಕಾಶವಿದೆ.


Click it and Unblock the Notifications
