Daily Horoscope September 9: ಶಿವಯೋಗದಿಂದ ಈ 6 ರಾಶಿಯವರಿಗೆ ಯಶಸ್ಸಿನ ಭಾಗ್ಯ, ಹೊಸ ಕೆಲಸದ ಆರಂಭಕ್ಕೆ ಬೆಸ್ಟ್
Daily Horoscope September 9: ಇವತ್ತು ಕೃಷ್ಣ ಪಕ್ಷದ ತ್ರಯೋದಶಿ ತಿಥಿ ಬೆಳಿಗ್ಗೆ 8 ಗಂಟೆಯವರೆಗೆ ಇರುತ್ತದೆ. ನಂತರ ಚತುರ್ದಶಿ ತಿಥಿ ಪ್ರಾರಂಭವಾಗುತ್ತದೆ. ಆಶ್ಲೇಷ ನಕ್ಷತ್ರವು ಬೆಳಿಗ್ಗೆ 10.44ರವರೆಗೆ ಇರುವುದು. ನಂತರ ಮಾಘ ನಕ್ಷತ್ರವು ಪ್ರಾರಂಭವಾಗುತ್ತದೆ. ಶಿವ ಯೋಗ ಸಂಜೆ 5.22 ರವರೆಗೆ ಇರುತ್ತದೆ , ನಂತರ ಸಿದ್ಧ ಯೋಗ ಪ್ರಾರಂಭವಾಗುವುದು. ಶಿವಯೋಗದ ಪ್ರಭಾವದೊಂದಿಗೆ ಅನೇಕ ರಾಶಿಯವರಿಗೆ ಹೊಸ ವೃತ್ತಿ ಅವಕಾಶಗಳು ಸಿಗುವುದು. ಆರ್ಥಿಕ ಲಾಭವಾಗುವುದು. ವ್ಯವಹಾರ ವಿಸ್ತರಣೆ ಮತ್ತು ಸ್ಥಗಿತಗೊಂಡ ಯೋಜನೆಗಳು ಫಲ ನೀಡುವುದು.
ಮೇಷ ರಾಶಿ (Aries)
ಇಂದು ಯಾವುದೇ ಕೆಲಸವನ್ನು ಪ್ರಾರಂಭಿಸಿದರೂ, ಅದರಲ್ಲಿ ಯಶಸ್ಸಿನ ಸಾಧ್ಯತೆಗಳಿವೆ. ಸರ್ಕಾರಿ ನೌಕರರಿಗೆ ಒಳ್ಳೆಯ ದಿನವಾಗಿರುವುದು. ಬಡ್ತಿಗೆ ಇರುವ ಅಡೆತಡೆಗಳು ದೂರವಾಗಬಹುದು. ಹೊಸ ಉದ್ಯೋಗಗಳನ್ನು ಪ್ರಾರಂಭಿಸುವವರಿಗೆ ಸಹೋದ್ಯೋಗಿಗಳಿಂದ ಬೆಂಬಲ ಸಿಗುವುದು.

ವೃಷಭ ರಾಶಿ (Taurus)
ಇವತ್ತು ಹೊಸ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸಬಹುದು. ಪ್ರಗತಿಗೆ ಹೊಸ ಅವಕಾಶ ಸಿಗುವುದು. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಕಡಿಮೆ ಪ್ರಯತ್ನದಿಂದ ಹೆಚ್ಚಿನ ಫಲಿತಾಂಶಗಳನ್ನು ಸಾಧಿಸುವ ಸಾಧ್ಯತೆಗಳಿವೆ. ಕುಟುಂಬ ಸದಸ್ಯರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುವುದು.
ಮಿಥುನ ರಾಶಿ (Gemini)
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಎರಡು ಪಟ್ಟು ಹೆಚ್ಚು ಶ್ರಮಿಸಬೇಕಾಗುವುದು. ನವವಿವಾಹಿತರಿಗೆ ದಿನ ಅದ್ಭುತವಾಗಿರುವುದು. ಸಂಗಾತಿಯಿಂದ ಪ್ರೀತಿ ಮತ್ತು ಬೆಂಬಲ ಸಿಗುವುದು. ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ.
ಕರ್ಕಾಟಕ ರಾಶಿ (cancer)
ಉನ್ನತ ಶಿಕ್ಷಣಕ್ಕೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವುದು. ಶಿಕ್ಷಕರ ಬೆಂಬಲ ಸಿಗುವುದು. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರು ಸ್ವಲ್ಪ ಹೆಚ್ಚು ಸಮಯ ಕಾಯಬೇಕಾಗಬಹುದು. ಸ್ನೇಹಿತರೊಂದಿಗೆ ಅದ್ಭುತವಾದ ದಿನವನ್ನು ಕಳೆಯುವಿರಿ. ಯಾವುದೇ ಕೆಲಸವನ್ನು ಪೂರ್ಣಗೊಳಿಸಬಹುದು.
ಸಿಂಹ ರಾಶಿ (Leo)
ಯಾವುದೇ ಪ್ರಮುಖ ಯೋಜನೆಯನ್ನು ಪ್ರಾರಂಭಿಸುವ ಮೊದಲು ಸರಿಯಾಗಿ ಮಾಹಿತಿ ಪಡೆದುಕೊಳ್ಳಿ. ಆತುರದ ನಿರ್ಧಾರ ಬೇಡ. ಆತುರದ ನಿರ್ಧಾರದಿಂದ ಲಾಭ ಕಡಿಮೆಯಾಗಬಹುದು. ವ್ಯಾಪಾರ ವ್ಯವಹಾರ ಸಾಮಾನ್ಯವಾಗಿರುವುದು. ಕಚೇರಿ ಕೆಲಸದಲ್ಲಿ ಸಹೋದ್ಯೋಗಿಯಿಂದ ಬೆಂಬಲ ಸಿಗಬಹುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ .
ಕನ್ಯಾ ರಾಶಿ (Virgo)
ಹೊಸ ಸೃಜನಶೀಲ ವಿಚಾರಗಳು ನಿಮ್ಮ ಕೆಲಸವನ್ನು ಸುಧಾರಿಸಲು ಸಹಾಯ ಮಾಡುವುದು. ಕಚೇರಿಯಲ್ಲಿ ಎಲ್ಲರೂ ನಿಮ್ಮ ಕೆಲಸದಿಂದ ಸಂತೋಷಪಡುವರು. ಹಳೆಯ ಸ್ನೇಹಿತರ ಭೇಟಿಯಾಗುವಿರಿ. ಆರೋಗ್ಯದ ದೃಷ್ಟಿಯಿಂದ ದಿನವು ಉತ್ತಮವಾಗಿರುವುದು.
ತುಲಾ ರಾಶಿ (Libra)
ಯಾರನ್ನೂ ತಕ್ಷಣ ನಂಬಬೇಡಿ. ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ಮಹಿಳೆಯರು ಮನೆಯಿಂದಲೇ ವ್ಯವಹಾರ ಆರಂಭಿಸಲು ದಿನ ಉತ್ತಮವಾಗಿರುವುದು. ಖಾಸಗಿ ಉದ್ಯೋಗದಲ್ಲಿರುವವರಿಗೆ ದಿನ ಉತ್ತಮವಾಗಿರುವುದು. ಕುಟುಂಬದಿಂದ ಬೆಂಬಲ ಸಿಗುವುದು. ತಾಯಿಯ ಆರೋಗ್ಯದಲ್ಲಿ ಏರುಪೇರಾಗುವುದು.
ವೃಶ್ಚಿಕ ರಾಶಿ (Scorpio)
ಮನೆ ಬದಲಾಯಿಸಲು ಯೋಜಿಸುತ್ತಿದ್ದರೆ ಇಂದು ದಿನ ಸೂಕ್ತವಾಗಿದೆ. ನಿಮ್ಮ ಮಾತಿನ ಬಗ್ಗೆ ನಿಗಾ ಇರಲಿ. ಸಣ್ಣ ತಪ್ಪು ಕೂಡಾ ತೊಂದರೆಗೆ ಕಾರಣವಾಗಬಹುದು. ಸಂಬಂಧಿಕರ ಭೇಟಿಯಿಂದ ಕೆಲಸ ಹೆಚ್ಚಾಗುವುದು. ಆದರೂ ದಿನ ಸಂತೋಷದಿಂದ ಕಳೆಯುವುದು.
ಧನು ರಾಶಿ (Sagittarius)
ಬಹಳ ದಿನಗಳಿಂದ ಬಾಕಿ ಉಳಿದಿರುವ ಹಣ ವಾಪಸ್ ಸಿಗುವುದು. ಧಾರ್ಮಿಕ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುವುದು. ವಿಶೇಷ ಪೂಜೆಯಲ್ಲಿ ಭಾಗವಹಿಸಬಹುದು. ತಾಂತ್ರಿಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಕರ ಬೆಂಬಲ ಸಿಗುವುದು.
ಮಕರ ರಾಶಿ (Capricorn)
ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ತೊಡಗಿರುವ ವ್ಯವಹಾರಗಳು ಮೊದಲಿಗಿಂತ ಉತ್ತಮವಾಗಿ ನಡೆಯುವುದು. ವ್ಯವಹಾರವನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಅಥವಾ ಹೊಸ ಶಾಖೆಯನ್ನು ತೆರೆಯುವ ಬಗ್ಗೆ ಯೋಜಿಸಬಹುದು.ಯಶಸ್ಸಿಗೆ ಹೆಚ್ಚಿನ ಶ್ರಮ ಬೇಕಾಗಬಹುದು. ತಂದೆಯಿಂದ ಬೆಂಬಲ ಸಿಗುವುದು.
ಕುಂಭ ರಾಶಿ (aquarius)
ದೀರ್ಘಕಾಲದ ಯೋಜನೆ ಫಲ ನೀಡಬಹುದು. ಹೊಸ ಕೆಲಸ ಪ್ರಾರಂಭಿಸಲು ಈ ದಿನ ಪ್ರಯೋಜನಕಾರಿಯಾಗಲಿದೆ. ಕಲೆ ಮತ್ತು ಸಂಗೀತ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರಿಗೆ ಈ ದಿನ ಅನುಕೂಲಕರವಾಗಿರುವುದು. ಪ್ರಯತ್ನಗಳು ಯಶಸ್ವಿಯಾಗುವುದು. ವಾಹನ ಚಲಾಯಿಸುವಾಗ ಜಾಗೃತೆ ಅಗತ್ಯ.
ಮೀನ ರಾಶಿ (Pisces)
ನಿರ್ಧಾರ ತೆಗೆದುಕೊಳ್ಳುವಾಗ ಹುಷಾರಾಗಿರಿ. ಎಲ್ಲರೂ ನಿಮ್ಮ ಕೆಲಸವನ್ನು ಹೊಗಳಬಹುದು. ವಿದ್ಯಾರ್ಥಿಗಳ ಸಂಪೂರ್ಣ ಗಮನವು ಪರೀಕ್ಷಾ ಫಲಿತಾಂಶಗಳ ಮೇಲೆ ಇರುವುದು. ಮದುವೆ ಮಾತುಕತೆ ನಡೆಸಲು ಒಳ್ಳೆಯ ದಿನವಾಗಿರುವುದು. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ.


Click it and Unblock the Notifications
