ಇಂದಿನಿಂದ ಬದಲಾಗುವುದು ಈ ರಾಶಿಯವರ ಭವಿಷ್ಯ: ಒಲಿಯುವುದು ಅಷ್ಟೈಶ್ವರ್ಯ, ಸಾಲಗಳಿಂದ ಸಿಗುವುದು ಶಾಶ್ವತ ಮುಕ್ತಿ
ಇವತ್ತು ಗ್ರಹ ಸಂಚಾರದ ವಿಚಾರಕ್ಕೆ ಬಂದಾಗ ಬಹಳ ಮಹತ್ವದ್ದಾಗಿದೆ. ಯಾಕೆಂದರೆ ಸೆಪ್ಟೆಂಬರ್ 26 ಅಂದರೆ ಇಂದು ನವಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧ ಗ್ರಹ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುತ್ತಾನೆ. ಬುಧ ಗ್ರಹವು ತುಲಾ ರಾಶಿಗೆ ಪ್ರವೇಶ ಮಾಡುತ್ತಿರುವುದು ಜ್ಯೋತಿಷ್ಯದಲ್ಲಿ , ಬಹಳ ಮಹತ್ವದ್ದಾಗಿದೆ. ಬುಧನ ಈ ಸಂಚಾರ ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ತುಲಾ ರಾಶಿಯಲ್ಲಿ ಬುಧ ಸಂಚಾರ
ತುಲಾ ರಾಶಿಯ ಮೂಲಕ ಬುಧನ ಸಂಚಾರದ ಪ್ರಭಾವವು ಎಲ್ಲಾ ರಾಶಿಯವರ ಮೇಲೆ ಇರುವುದು ಸಹಜವೇ. ಆದರೆ, ಇದು ಕೆಲವು ರಾಶಿಯವರ ಜೀವನದ ಸುವರ್ಣ ಯುಗವಾಗಿರುತ್ತದೆ ಎಂದರೆ ತಪ್ಪಲ್ಲ. ಹಾಗಿದ್ದರೆ ಬುಧ ಸಂಚಾರದಿಂದ ಅದೃಷ್ಟ ಪಡೆಯುವ ಐದು ರಾಶಿಗಳು ಯಾವುವು ನೋಡೋಣ.

ಮಿಥುನ ರಾಶಿ (Gemini)
ಮಿಥುನ ರಾಶಿಯವರಿಗೆ ಬುಧ ಸಂಚಾರವು ವರದಾನವಾಗಿರಲಿದೆ. ಹೊಸ ಉದ್ಯೋಗ ಮತ್ತು ನೀವು ನಿರೀಕ್ಷೆ ಮಾಡುತ್ತಿರುವ ಬಡ್ತಿ ಇದೇ ಅವಧಿಯಲ್ಲಿ ಸಿಗುವುದು. ವ್ಯಾಪಾರ ವಹಿವಾಟುಗಳಲ್ಲಿ ಲಾಭವಾಗುವುದು. ಹೊರಗೆ ಉಳಿದಿರುವ ಹಣ ವಾಪಾಸಾಗುವುದು. ಈ ಮೂಲಕ ಹಣದ ಸಮಸ್ಯೆ ನೀಗುವುದು. ಸಾಲದಿಂದಲೂ ಮುಕ್ತಿ ಸಿಗುವುದು. ವ್ಯವಹಾರದಲ್ಲಿ ಲಾಭ ಹೆಚ್ಚಾಗುವುದು.
ಕನ್ಯಾರಾಶಿ (Virgo)
ಕನ್ಯಾ ರಾಶಿಯವರಿಗೆ ಬುಧನ ಸಂಚಾರ ಹೆಚ್ಚು ಪ್ರಯೋಜನಕಾರಿಯಾಗಿರುವುದು. ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಮಟ್ಟದ ಸುಧಾರಣೆ ಕಂಡುಬರುವುದು. ಸಂಬಳ ಹೆಚ್ಚಾಗುವುದು, ಬಡ್ತಿ ಸಿಗುವ ಸಾಧ್ಯತೆಯಿದೆ. ಮಕ್ಕಳಿಂದ ಸಂತೋಷದ ಸುದ್ದಿ ಕೇಳುವಿರಿ. ಜೀವನದಲ್ಲಿ ಸಂತೋಷ ಮತ್ತು ಶಾಂತಿ ನೆಲೆಯಾಗುವುದು. ನಿಮ್ಮ ಬುದ್ಧಿವಂತಿಕೆ ಮತ್ತು ತಾರ್ಕಿಕ ಸಾಮರ್ಥ್ಯವು ಹೆಚ್ಚಾಗುವುದು. ಇದರಿಂದ ಸಮಾಜ ಮತ್ತು ಕೆಲಸದ ಸ್ಥಳದಲ್ಲಿ ನಿಮ್ಮ ಮೌಲ್ಯ ಮತ್ತು ಗೌರವ ಕೂಡಾ ಹೆಚ್ಚುವುದು.
ತುಲಾ ರಾಶಿ (Libra)
ಬುಧ ಗ್ರಹವು ತುಲಾ ರಾಶಿಯನ್ನು ಪ್ರವೇಶಿಸುತ್ತದೆ. ಈ ಅವಧಿಯಲ್ಲಿ, ತುಲಾ ರಾಶಿಯವರ ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುವವರಿಗೆ ಲಾಭವಾಗುವುದು. ವ್ಯವಹಾರದಲ್ಲಿ ಹೆಚ್ಚಿನ ಆರ್ಥಿಕ ಲಾಭವನ್ನು ನಿರೀಕ್ಷಿಸಬಹುದು. ವಿದ್ಯಾರ್ಥಿಗಳಿಗೆ ಈ ಸಮಯ ಅನುಕೂಲಕರವಾಗಿರುವುದು. ಜೀವನದಲ್ಲಿ ಸಂತೋಷ ಮತ್ತು ಶಾಂತಿ ನೆಲೆಯಾಗುವುದು.
ಮಕರ ರಾಶಿ (Capricorn)
ಮಕರ ರಾಶಿಯವರಿಗೆ ಬುಧನ ಸಂಚಾರವು ಅನುಕೂಲಕರವಾಗಿರುವುದು. ಹಣಕಾಸಿನ ಲಾಭವಾಗುವುದು. ಕೆಲಸದಲ್ಲಿ ಮೇಲಧಿಕಾರಿಗಳು ಮತ್ತು ಉನ್ನತ ಅಧಿಕಾರಿಗಳಿಂದ ಸಂಪೂರ್ಣ ಬೆಂಬಲ ಸಿಗುವುದು. ಹೊಸ ವ್ಯವಹಾರ ಪ್ರಾರಂಭಿಸಬಹುದು. ಹೊಸ ಕೆಲಸ ಶುರು ಮಾಡುವ ಯೋಚನೆ ಇದ್ದರೂ ಈ ಅವಧಿ ಉತ್ತಮವಾಗಿದೆ. ಈ ಅವಧಿಯಲ್ಲಿ ಶುರು ಮಾಡುವ ಎಲ್ಲಾ ಕೆಲಸಗಳು ಫಲಪ್ರದವಾಗಿರುವುದು. ಆರ್ಥಿಕ ಸ್ಥಿತಿ ಸುಧಾರಿಸುವುದು.
ಕುಂಭ ರಾಶಿ (Aquarius)
ಕುಂಭ ರಾಶಿಯವರಿಗೆ ಈ ಅವಧಿಯು ಶುಭ ಸಮಯವಾಗಿರುವುದು. ವಿದೇಶ ಪ್ರಯಾಣಕ್ಕೆ ಅವಕಾಶಗಳು ಸಿಗುವುದು. ಹೊಸ ಕೆಲಸ ಸಿಗುವುದು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಯಶಸ್ಸು ಪಡೆಯುವರು. ಈ ಅವಧಿಯಲ್ಲಿ ನಿಮ್ಮ ಮನಸ್ಸಿನ ಶಾಂತಿ ಹೆಚ್ಚಾಗುವುದು. ಕಾನೂನು ವಿಷಯಗಳಲ್ಲಿ ಅಥವಾ ನ್ಯಾಯಾಲಯದ ಪ್ರಕರಣಗಳಲ್ಲಿ ಅನುಕೂಲಕರ ಫಲಿತಾಂಶ ಸಿಗುವುದು.
ಮೀನ ರಾಶಿ (Pisces)
ಬುಧನ ಸಂಚಾರವು ಮೀನ ರಾಶಿಯವರ ಜೀವನದಲ್ಲಿ ಪ್ರಗತಿಯನ್ನು ತರುವುದು. ಕಚೇರಿ ಕೆಲಸದಲ್ಲಿರುವವರಿಗೆ ಸಂಬಳ ಹೆಚ್ಚಳವಾಗುವುದು. ಬಡ್ತಿ ಸಿಗುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಆರೋಗ್ಯ ಸುಧಾರಿಸುವುದು. ಆರ್ಥಿಕ ಪರಿಸ್ಥಿತಿ ಸದೃಢವಾಗಿರುವುದು. ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳುವಿರಿ. ಮಕ್ಕಳ ಸಾಧನೆ ಖುಷಿ ತರುವುದು.


Click it and Unblock the Notifications
