Get Updates
Get notified of breaking news, exclusive insights, and must-see stories!

2016 ವರ್ಷ ಭವಿಷ್ಯ : ಮೇಷ ರಾಶಿಗೆ ಮೊದಲರ್ಧ ಸೂಪರ್

ಮೇಷ ರಾಶಿಯವರಿಗೆ ಹೊಸ ವರ್ಷ 2016ರ ಆತ್ಮೀಯ ಶುಭಾಶಯಗಳು. ಈ ವರ್ಷ ಮಹತ್ವದ ಬದಲಾವಣೆ ಈ ರಾಶಿಯವರಿಗೆ ಕಂಡು ಬರುತ್ತದೆ. ಏಕೆಂದರೆ ಹೊಸ ವರ್ಷಾರಂಭದಲ್ಲೇ ರಾಹು-ಕೇತು ತಮ್ಮ ಸ್ಥಾನ ಬದಲಿಸುತ್ತಿವೆ. ಹೀಗಾಗಿ ನಿಜವಾಗಲೂ ಹೊಸ ವರ್ಷವು ಬದಲಾವಣೆಯೊಂದಿಗೆ ಆರಂಭವಾಗುತ್ತಿರುವುದು ಇವರ ಸೌಭಾಗ್ಯ ಒಂದು ರೀತಿಯಲ್ಲಿ.

ಇನ್ನು ಒಟ್ಟಾರೆ ಇಡೀ ವರ್ಷದ ಫಲಾಫಲವನ್ನು ತಿಳಿದುಕೊಳ್ಳಬೇಕೆನ್ನುವವರಿಗೆ ಮುಂದಿನ ಆಗಸ್ಟ್ ವರೆಗೂ ಚಿಂತಿಸುವಂತಿಲ್ಲ. ಆ ನಂತರ ಯೋಚಿಸುವಂತಹ ಸಮಸ್ಯೆಗಳು ಬರುತ್ತವೆ. ಅಲ್ಲಿಯವರೆಗೂ ಆರಾಮಾಗಿ, ಬಿಂದಾಸ್ ಆಗಿ ಇರುವದು ಈ ರಾಶಿಯವರಿಗೆ ಸೂಕ್ತ ಸಲಹೆ.

ಯಾಕೆಂದರೆ ಮೊದಲೇ ಅಷ್ಟಮ ಶನಿಕಾಟದಿಂದ ಜರ್ಜರಿತರಾಗಿರುವ ಇವರಿಗೆ ಈಗಾಗಲೇ ಹಣಕಾಸಿನ ಅಡಚಣೆಯು ಆರಂಭವಾಗಿದೆ. ಇದನ್ನು ಹಲವರು ಅನುಭವಿಸುತ್ತಿದ್ದಾರೆ ಕೂಡ. ಮೊದಲೇ ಲೀಡರ್ಶಿಪ್ ಗುಣ ಹೊಂದಿರುವ ಇವರಿಗೆ ಯಾವ ಕೆಲಸ ಕೊಟ್ಟರೂ ಧೈರ್ಯದಿಂದ ಮಾಡಿ ಮುಗಿಸುವ ಛಲ ಇನ್ನು ಹೆಚ್ಚಿಸಿಕೊಳ್ಳಬೇಕಿದೆ. ಮಾತು ಕಮ್ಮಿ ಕೆಲಸ ಜಾಸ್ತಿ ಎನ್ನುವ ಈ ರಾಶಿಯವರು ತಮ್ಮ ಮುಖ್ಯವಾದ ಕೆಲಸಗಳನ್ನು ಕೇವಲ ರವಿವಾರ ಮತ್ತು ಮಂಗಳವಾರದಂದೇ ಇಟ್ಟುಕೊಳ್ಳುವುದು ತುಂಬಾ ಶುಭಕರ. [2016 ವರ್ಷ ಭವಿಷ್ಯ : ನಿಮ್ಮ ರಾಶಿಗೆ ಏನಿದೆ ಗೊತ್ತಾ?]

Astrology : Yearly horoscope 2016 for Aries Zodiac Sign

ಸದಾ ಚಂಚಲಚಿತ್ತರಾಗಿರುವ ಇವರು ಕೆಲಸಗಳಲ್ಲಿ ತಮ್ಮದೇ ಆದ ಹೊಸ ಶೈಲಿಯನ್ನು ಅಳವಡಿಸಿಕೊಳ್ಳಲು ಹೋಗಿ ಸಿಕ್ಕಿ ಹಾಕಿಕೊಳ್ಳುವುದೇ ಜಾಸ್ತಿ. ಹೀಗಾಗಿ ಏನೇ ಹೊಸದನ್ನು ಮಾಡಬೇಕೆಂದರೂ ಸಿಂಹ, ತುಲಾ ಮತ್ತು ಧನುಸ್ಸು ರಾಶಿಯವರ ಸಲಹೆ ಸೂಚನೆ ಕೇಳಿಕೊಳ್ಳುವುದು ತುಂಬಾ ಒಳ್ಳೆಯದು. ಏಕೆಂದರೆ ಈ ರಾಶಿಯವರು ಮೇಷ ರಾಶಿಯವರಿಗೆ ಮಿತ್ರರಂತಿರುತ್ತಾರೆ. ಆದರೆ, ಮಿಥುನ ಮತ್ತು ಕನ್ಯಾ ರಾಶಿಯವರು ಮಾತ್ರ ಇವರಿಗೆ ಒಳ್ಳೆಯದನ್ನು ಬಯಸುವುದು ಕಮ್ಮೀನೇ. ಹೀಗಾಗಿ ಈ ಹೊಸ ವರ್ಷದಲ್ಲಿ ಈ ವಿಷಯವನ್ನು ಮನದಲ್ಲಿಟ್ಟುಕೊಂಡು ಜೀವನ ನಡೆಸಿಕೊಂಡು ಹೋಗಬೇಕು.

ಅದೃಷ್ಟದ ದಿನಗಳು : ಆದಷ್ಟು ಪ್ರತಿ ತಿಂಗಳಿನ 9, 8 ಮತ್ತು 27ನೇ ತಾರೀಖಿನ ದಿನಗಳಲ್ಲಿ ನಿಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಬೇಕು. ಇನ್ನು ಸಂಖ್ಯೆಗಳ ವಿಷಯಕ್ಕೆ ಬಂದರೆ 6 ಮತ್ತು 9 ಲಕ್ ನೀಡುತ್ತವೆ. ಪ್ರತಿದಿನವಾಗಲಿ ಅಥವಾ ನಿಮಗೆ ಅನುಕೂಲವಾದ ಸಮಯದಲ್ಲಿ ಶಂಭೋಲಿಂಗನ ಮತ್ತು ಹನುಮನ ದರ್ಶನ ತಪ್ಪದೇ ಮಾಡುತ್ತಿರಬೇಕು. ಇವರೇ ಮೇಷ ರಾಶಿಯವರಿಗೆ ಅದೃಷ್ಟ ನೀಡುವ ದೇವರುಗಳು. [ಅಧಿಕ ಮಾಸದಲ್ಲಿ ಐದು ಹನುಮನ ದರ್ಶನ ಏಕೆ?]

ಪೂರ್ವ ದಿಕ್ಕಿಗೆ ಮುಖ ಮಾಡಿ ಕೆಲಸದಲ್ಲಿ ಕುಳಿತುಕೊಳ್ಳುವುದು ಅಥವಾ ಏನನ್ನೇ ಮಾಡಿದರೂ ಪೂರ್ವ ದಿಕ್ಕಿಗೆ ಹೊಂದುವಂತೆ ಮಾಡಿಕೊಳ್ಳುವುದು ಶುಭಕರ. ಏನೇ ವಸ್ತುಗಳಿದ್ದರೂ ಆದಷ್ಟು ಬಿಳಿ ಅಥವಾ ಕೆಂಪನೆಯ ಬಣ್ಣದ್ದಿರುವಂತೆ ನೋಡಿಕೊಳ್ಳುವುದು ಒಳ್ಳೆಯದು. ಅನುಕೂಲವಿದ್ದವರು ಹವಳವನ್ನು ಧರಿಸಿಕೊಂಡು ಸಮಾಧಾನದಿಂದಿರಬಹುದು. ಭಂಡ ಧೈರ್ಯ ಬಿಟ್ಟರೆ ಕೋಪವೂ ಕೂಡ ತನ್ನಿಂದ ತಾನೇ ಕಮ್ಮಿಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.

ಇನ್ನು ಈ ರಾಶಿಯವರ ಫಲಾಫಲ ಹೀಗಿದೆ : ಆಗಸ್ಟ್ ತಿಂಗಳಿನವರೆಗೂ ಗುರುಬಲವಿರುವುದರಿಂದ ಅಂದುಕೊಂಡ ಕಾರ್ಯಗಳನ್ನು ಛಲ ಬಿಡದೇ ಸಾಧಿಸಲು ಪ್ರಯತ್ನಿಸಬೇಕು. ಎಲ್ಲ ರೀತಿಯಿಂದಲೂ ಅನುಕೂಲ ಕಲ್ಪಿಸುವ ಗುರುವು ಕಂಕಣಕ್ಕಾಗಿ ಕಾಯುವವರಿಗೆ ಕಂಕಣ ಬಲ ನೀಡಿದರೆ, ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಹೊಸ ಉದ್ಯೋಗ ಸಿಗುವಂತೆ ನೋಡಿಕೊಳ್ಳುತ್ತಾನೆ. ಇನ್ನು ಉದ್ಯೋಗದಲ್ಲಿರುವವರಿಗೆ ಅದೃಷ್ಟದ ಬಾಗಿಲು ತೆರೆದಂತೆ ಭಾಸವಾಗುತ್ತದೆ. ಏಕೆಂದರೆ, ಅಷ್ಟೊಂದು ಗೌರವ ಮತ್ತು ಮರ್ಯಾದೆ ಹೆಚ್ಚಿಸಿಕೊಳ್ಳುವಂತಾಗುತ್ತದೆ ಉತ್ತಮ ಕೆಲಸ ಮಾಡಿದ್ದರೆ.

ಆದರೆ, ಆಗಸ್ಟ್ ನಿಂದ ಮಾತ್ರ ಗುರುವೇ ತಿರುಗಿ ಬೀಳುವುದರಿಂದ ಎಚ್ಚರಿಕೆಯಿಂದ ಇರಲು ಕಲಿತುಕೊಳ್ಳಬೇಕು ಈ ರಾಶಿಯವರು. ವರ್ಷದ ಕೊನೆಯ ನಾಲ್ಕು ತಿಂಗಳು ಮಾತ್ರ ಗಪ್ ಚುಪ್ ಆಗಿ ಇರಲು ಈಗಿನಿಂದಲೇ ಅಂದುಕೊಳ್ಳಬೇಕು. ಆ ಸಮಯಕ್ಕಾಗಿ ಹಣದ ಉಳಿತಾಯ ಈಗಿನಿಂದಲೇ ಆರಂಭಿಸಿಕೊಳ್ಳಿ. ಕುಟುಂಬದವರೊಂದಿಗೆ ಕಲಹಗಳು ಬರುವ ಸಂಭವವಿರುವುದರಿಂದ ಈಗಿರುವ ಅನ್ಯೋನ್ಯತೆಯನ್ನು ಹೆಚ್ಚಿಸಿಕೊಳ್ಳಿ. ದೇಹಾರೋಗ್ಯದಲ್ಲಿ ತೊಂದರೆ ಬರುವುದರಿಂದ ನಿತ್ಯದ ವ್ಯಾಯಾಮವನ್ನು ಈಗಲೇ ಆರಂಭಿಸಿಕೊಂಡು ವೈದ್ಯಕೀಯ ಖರ್ಚನ್ನು ಉಳಿಸಿಕೊಳ್ಳುವುದು ಉತ್ತಮರ ಲಕ್ಷಣ. ಇಲ್ಲವಾದರೆ ಚಿಕಿತ್ಸೆಗೆ ದುಡ್ಡು ಹೊಂದಿಸಲು ಹೆಚ್ಚಿನ ಕೆಲಸ ಮಾಡಬೇಕಾಗಿ ಬರಬಹುದು ಎಚ್ಚರಿಕೆ ಇರಲಿ.

ಅಹಂಕಾರಕ್ಕೆ ಎಳ್ಳುನೀರು ಬಿಡಿ : ಅಷ್ಟಮದಲ್ಲಿರುವ ಶನಿಯು ಅಷ್ಟೇನೂ ಅನುಕೂಲಕರವಾಗಿಲ್ಲವಾದ್ದರಿಂದ ಎಂದಿನಂತೆ ಜೀವನಶೈಲಿಯಲ್ಲಿರಲು ಪ್ರಯತ್ನಿಸಬೇಕು. ದಿಢೀರ್ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಹತ್ತಾರು ಬಾರಿ ಯೋಚಿಸಿ. ಮಿತ್ರರಾಶಿಯವರ ಸಲಹೆ ಸೂಚನೆ ಪಡೆದುಕೊಂಡೇ ಮುನ್ನುಗ್ಗಬೇಕು. ಸಂಬಂಧಿಕರಲ್ಲಿ ಉತ್ತಮ ಬಾಂಧವ್ಯವಿದ್ದರೆ ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ತಾಳ್ಮೆ, ಸಹನೆ ಹೆಚ್ಚಿಸಿಕೊಂಡು ಅಹಂಕಾರವಿದ್ದರೆ ಅದಕ್ಕೆ ಎಳ್ಳುನೀರು ಬಿಟ್ಟರೆ ಈ ವರ್ಷ ಸೂಪರ್ ಎನ್ನಬಹುದು.

ಮಂಗಳವಾರದಂದು ಇಷ್ಟದೇವತೆ ದರ್ಶನ ಮಾಡಿಕೊಳ್ಳುವುದು ಸೂಕ್ತ. ನಿತ್ಯ ಕನಿಷ್ಠ 2 ನಿಮಿಷ ಪೂಜೆ-ಪುನಸ್ಕಾರದಲ್ಲಿ ಮನಸ್ಸನ್ನು ತೊಡಗಿಸಲೇಬೇಕು.

ರಾಹು-ಕೇತುಗಳ ಸಂಚಾರದ ಫಲವನ್ನು ನೋಡಿದಾಗ, ಈ ರಾಶಿಯವರಿಗೆ ಹಣದ ವಿಷಯದಲ್ಲಿ ಹೆಚ್ಚಿನ ಅನುಕೂಲ ಬರಲಾರಂಭಿಸುತ್ತದೆ. ಆದರೆ ಹಣ ಗಳಿಸುವ ದಾರಿಯನ್ನು ಮೊದಲೇ ಗುರುತಿಸಿಕೊಂಡು ಅದರಲ್ಲಿ ಯಶಸ್ಸು ಪಡೆದು ಶ್ರೀಮಂತರಾಗಲು ಪ್ರಯತ್ನಿಸುವುದು ಈ ರಾಶಿಯವರಿಗೆ ಕಿವಿಮಾತು.

ಮುಂದಿನ ಲೇಖನದಲ್ಲಿ : ಮೇಷ ರಾಶಿಯವರಿಗೆ ಹೊಸ ವರ್ಷದ ತಿಂಗಳುಗಳ ಫಲ ಮತ್ತು ಪರಿಹಾರಗಳು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+