Venus Transit 2024: ಧನುದಲ್ಲಿ ಶುಕ್ರ ಸಂಕ್ರಮಣ: ಈ ರಾಶಿಯವರು ಶ್ರೀಮಂತರಾಗುವುದು ಪಕ್ಕಾ... ಶೀಘ್ರದಲ್ಲೇ ಒಳ್ಳೆಯ ಸುದ್ದಿ!
ಸೌರವ್ಯೂಹದಲ್ಲಿ ಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಸಂಪತ್ತು, ಐಷಾರಾಮಿ ಜೀವನ ಮತ್ತು ಪ್ರೀತಿ ಕರುಣಿಸುವ ಶುಕ್ರ ಗ್ರಹ ಜಾತಕದಲ್ಲಿ ಬಲವಾಗಿದ್ದರೆ ಅಂಥವರು ಸಂತೋಷದ ಜೀವನ ನಡೆಸುತ್ತಾರೆ. ಆದರೆ ದುರ್ಬಲವಾಗಿದ್ದರೆ ಕೆಲ ಸಮಸ್ಯೆಗಳನ್ನು ಎದರಿಸಬೇಕಾಗುತ್ತದೆ.
ವೈದಿಕ ಜ್ಯೋತಿಷ್ಯದಲ್ಲಿ ಶುಕ್ರನನ್ನು ಪ್ರಮುಖ ಗ್ರಹಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಶುಕ್ರ ಗ್ರಹ ನವೆಂಬರ್ 7, 2024 ರಂದು ಬೆಳಿಗ್ಗೆ 3:29 ಕ್ಕೆ ಧನು ರಾಶಿಗೆ ಸಾಗಲಿದೆ. ಶುಕ್ರನ ಈ ಸಾಗಣೆಯು ಎಲ್ಲಾ ರಾಶಿಗಳ ಜನರ ಜೀವನದಲ್ಲಿ ಮೇಲೆ ಪರಿಣಾಮ ಬೀರಲಿದೆ. ಹಾಗಾದರೆ ಶುಕ್ರನ ಧನು ರಾಶಿ ಬದಲಾವಣೆ ಯಾವ ರಾಶಿಯ ಜನರಿಗೆ ವಿಶೇಷ ಲಾಭ ನೀಡಲಿದೆ ಎಂದು ತಿಳೀಯೋಣ.

ಮೇಷ ರಾಶಿ
ಪ್ರೀತಿಗೆ ಕಾರಣವಾದ ಶುಕ್ರ ಬುಧ ರಾಶಿಯಲ್ಲಿ ಸಂಚಾರ ಮಾಡುವುದರಿಂದ ಮೇಷ ರಾಶಿಯ ಜನರಿಗೆ ಉತ್ತಮವಾಗಿರುತ್ತದೆ. ಮೇಷ ರಾಶಿಯ ಜನರು ಇಂದಿನಿಂದ ಮುಂದಿನ ಮೂರು ದಿನಗಳ ಕಾಲ ಐಷಾರಾಮಿ ಜೀವನವನ್ನು ಆನಂದಿಸುತ್ತಾರೆ. ಸಾಂಸಾರಿಕ ಸುಖದ ಹೆಚ್ಚಳದ ಜೊತೆಗೆ ಆದಾಯವೂ ಹೆಚ್ಚುತ್ತದೆ. ಉದ್ಯೋಗದ ನಿರೀಕ್ಷೆಯಲ್ಲಿರುವವರು, ಅವರ ಹುಡುಕಾಟ ಶೀಘ್ರದಲ್ಲೇ ಕೊನೆಗೊಳ್ಳುತ್ತದೆ.
ಉದ್ಯಮಿಗಳು ಹಳೆಯ ಸಾಲಗಳಿಂದ ಮುಕ್ತರಾಗುತ್ತಾರೆ, ಇದು ಅವರಿಗೆ ಮಾನಸಿಕ ಶಾಂತಿಯನ್ನು ನೀಡುತ್ತದೆ. ಉದ್ಯೋಗದಲ್ಲಿ ನಿಮ್ಮನ್ನು ಪ್ರಶಂಸೆ ಮಾಡಲಾಗುತ್ತದೆ. ಮನೆಯಲ್ಲಿ ನಿಮ್ಮ ಕಾರ್ಯಗಳಿಗೆ ಸಹಕಾರ ಸಿಗಲಿದೆ. ಅಂದುಕೊಂಡ ಕಾರ್ಯಗಳು ಕೈ ಹಿಡಿಯಲಿದೆ.

ಸಿಂಹ ರಾಶಿ
ಇಂದಿನಿಂದ ಮೂರು ದಿನಗಳು ಸಿಂಹ ರಾಶಿಯವರಿಗೆ ಸ್ಮರಣೀಯವಾಗಿರುತ್ತದೆ. ಆರ್ಥಿಕ ಲಾಭದ ಕಾರಣ, ಉದ್ಯೋಗಿಗಳು ಸಾಲದ ಹಣವನ್ನು ಸುಲಭವಾಗಿ ಮರುಪಾವತಿ ಮಾಡುತ್ತಾರೆ. ಸ್ವಂತ ವ್ಯವಹಾರ ಹೊಂದಿರುವವರ ಕೆಲಸವೂ ವಿಸ್ತರಿಸುತ್ತದೆ. ಹೊಸ ವ್ಯಾಪಾರ ಒಪ್ಪಂದವನ್ನು ಪೂರ್ಣಗೊಳಿಸುವುದರಿಂದ ಗಣನೀಯ ಲಾಭವುಂಟಾಗುತ್ತದೆ. ಸಿಂಹ ರಾಶಿಯವರ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದ್ದರೆ ಅದರಲ್ಲಿಯೂ ಯಶಸ್ಸು ಸಿಗುವ ಸಾಧ್ಯತೆ ಇದೆ.
ಸಿಂಹ ರಾಶಿಯ ವಿದ್ಯಾರ್ಥಿಗಳು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ಸಣ್ಣ ಪುಟ್ಟ ಕಾರ್ಯಗಳು ಲಾಭ ತಂದು ಕೊಡಲಿದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಮನೆಯಲ್ಲಿ ಕುಟುಂಬಸ್ಥರ ಆರೋಗ್ಯ ಉತ್ತಮವಾಗಿರುತ್ತದೆ. ಅಂದುಕೊಂಡ ಎಲ್ಲಾ ಕಾರ್ಯಗಳು ಕೈ ಹಿಡಿದು ಲಾಭ ತಂದು ಕೊಡಲಿದೆ.

ಧನು ರಾಶಿ
ಶುಕ್ರ ದೇವರ ವಿಶೇಷ ಕೃಪೆಯಿಂದ ಧನು ರಾಶಿಯ ಉದ್ಯಮಿಗಳ ಬಾಕಿ ಇರುವ ಕೆಲಸಗಳು ಮುಂದಿನ ದಿನಗಳಲ್ಲಿ ಪೂರ್ಣಗೊಳ್ಳಲಿವೆ. ವಿಶೇಷವಾಗಿ ನ್ಯಾಯಾಲಯಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಪೂರ್ಣಗೊಳ್ಳುತ್ತವೆ. ಉದ್ಯೋಗಿಗಳ ಮುಖ್ಯಸ್ಥರು ಧನು ರಾಶಿಯವ ಕೆಲಸದಿಂದ ಸಂತೋಷವಾಗಿರುತ್ತಾರೆ.
ನಂತರ ಅವರು ತಮ್ಮ ಸಂಬಳವನ್ನು ಹೆಚ್ಚಿಸಬಹುದು. ಬಟ್ಟೆ ಅಥವಾ ಸ್ಟೀಲ್ ಸರಕುಗಳ ಅಂಗಡಿಗಳನ್ನು ಹೊಂದಿರುವವರ ಲಾಭದಲ್ಲಿ ಗಮನಾರ್ಹ ಏರಿಕೆ ಕಂಡುಬರುತ್ತದೆ. ವಯಸ್ಸಾದವರು ಆರೋಗ್ಯ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುವ ಸಾಧ್ಯತೆಯಿದೆ.












Click it and Unblock the Notifications